ಪ್ರವಾಸಿಗರು ದಿನಪೂರ್ತಿ ವಸ್ತು ಪ್ರದರ್ಶನ ವೀಕ್ಷಿಸುವಂತೆ ಯೋಜನೆ

ವಸ್ತು ಪ್ರದರ್ಶನವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸುವುದು ನನ್ನ ಗುರಿ

Team Udayavani, Dec 12, 2020, 3:53 PM IST

ಪ್ರವಾಸಿಗರು ದಿನಪೂರ್ತಿ ವಸ್ತು ಪ್ರದರ್ಶನ ವೀಕ್ಷಿಸುವಂತೆ ಯೋಜನೆ

ಮೈಸೂರು: 140 ವರ್ಷಗಳ ಸುದೀರ್ಘ‌ ಇತಿಹಾಸವಿರುವ ಹಾಗೂ ಚಾಮರಾಜ ಒಡೆಯರ್‌ ಕನಸಿನ ಕೂಸಾದ ಮೈಸೂರು ವಸ್ತು ಪ್ರದರ್ಶನವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡುಯ್ಯುವುದು ನನ್ನ ಹೆಬ್ಬಯಕೆ ಹಾಗೂ ಗುರಿಯಾಗಿದೆ.

ಇದು ಕರ್ನಾಟಕ ರಾಜ್ಯ ವಸ್ತು ಪ್ರದರ್ಶನ ಪ್ರಾಧಿಕಾರಕ್ಕೆ ಅಧ್ಯಕ್ಷರಾಗಿ ನೇಮಕವಾಗಿರುವ ಎ.ಹೇಮಂತ್‌ಕುಮಾರ್‌ ಗೌಡ ಅವರ ನುಡಿಗಳು. ವಸ್ತು ಪ್ರದರ್ಶನ ಪ್ರಾಧಿಕಾರದ ಕಾರ್ಯ ಯೋಜನೆಗಳ ಬಗ್ಗೆ ಉದಯವಾಣಿಗೆ ಸಂದರ್ಶನ ನೀಡಿದ ಅವರು, ಪ್ರಾಧಿಕಾರಕ್ಕೆ ಹೊಸ ಆಯಾಮ ನೀಡುವ ಮೂಲಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹೇಳಿದರು.

ಕರ್ನಾಟಕ ವಸ್ತು ಪ್ರದರ್ಶನದ ಪ್ರಾಧಿಕಾರ ನಿಮ್ಮ ಯೋಜನೆಗಳೇನು? :

ನಗರದ ದೊಡ್ಡಕೆರೆ ಮೈದಾನದ ಬಳಿ 80 ಎಕರೆ ವಿಶಾಲ ಪ್ರದೇಶದಲ್ಲಿ ಇರುವ ಮೈಸೂರು ವಸ್ತು ಪ್ರದರ್ಶನಹಲವಾರು ಕಟ್ಟಡಗಳು, ಸೌಲಭ್ಯಗಳು ನಿರುಪಯುಕ ವಾಗಿವೆ. ಮಳೆಗಾಲದಲ್ಲಿ ರಾಜಕಾಲುವೆ ತುಂಬಿ ಹರಿಯುವುದರಿಂದ ವಸ್ತುಪ್ರದರ್ಶನ ಆವರಣಕೆರೆಯಂತಾಗುತ್ತದೆ. ಇದಕ್ಕೆಲ್ಲ ಶಾಸ್ವತ ಪರಿಹಾರ ಕ್ರಮ ಕೈಗೊಳ್ಳುವುದು, ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಮಾಡುವುದುಸೇರಿದಂತೆ ಅನೇಕ ಕೆಲಸ ಕೈಗೊಳ್ಳಲು ಸರ್ಕಾರಕ್ಕೆ ಪತ್ರ ಬರೆದು ನೆರವು ನೀಡುವಂತೆ ಮನವಿ ಮಾಡಲಾಗುವುದು. ವಸ್ತು ಪ್ರದರ್ಶನ ಚಾಮರಾಜ ಒಡೆಯರ್‌ ಕನಸಿನ ಕೂಸಾಗಿದ್ದು, ಇಂದುಈ ಮಟ್ಟಕ್ಕೆಬೆಳೆದು ನಿಂತಿದೆ. ಇದನ್ನು ವಿಶ್ವವಿಖ್ಯಾತಗೊಳಿಸುವುದು ನಮ್ಮ ಗುರಿ.

ವಸ್ತು ಪ್ರದರ್ಶನ ಅಭಿವೃದ್ಧಿಗೆ ಪ್ರೇರಣೆಯಾವುದು?  :

ನಾನು ಪ್ರವಾಸಿ ಪ್ರಿಯ, ಅದರಂತೆ ಅಭಿರುಚಿಗೆ ತಕ್ಕಂತೆ ಈ ಅಧಿಕಾರ ಸಿಕ್ಕಿದೆ. ಈಗಾಗಲೇ20ಕ್ಕೂ ಹೆಚ್ಚು ದೇಶಗಳಿಗೆ ಪ್ರವಾಸಮಾಡಿ,ಆದೇಶಗಳಲ್ಲಿರುವವಸ್ತುಪ್ರದರ್ಶನವನ್ನು ಗಮನಿಸಿದ್ದೇನೆ. ಅಲ್ಲಿಯಂತೆಯೇ ಮೈಸೂರಿನಲ್ಲೂ ವಸ್ತುಪ್ರದರ್ಶನವನ್ನು ಮೇಲ್ದರ್ಜೆಗೇರಿಸಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವುದು ನನ್ನ ಗುರಿ. ಹಾಂಕಾಂಗ್‌ ನಲ್ಲಿರುವಂತೆ ಇಲ್ಲಿಯೂ ಬೆಳಗ್ಗೆ ವಸ್ತು ಪ್ರದರ್ಶನಕ್ಕೆಕಾಲಿಟ್ಟವರು ಸಂಜೆವರೆಗೂಸುತ್ತಾಡುವಂತೆಮಾಡುವುದು ನನ್ನ ಕನಸು.ಇದಕ್ಕೆಸ್ಥಳೀಯ ಶಾಸಕರು,ಜನಪ್ರತಿನಿಧಿಗಳು, ಅಧಿಕಾರಿಗಳು ಬೆಂಬಲ ನೀಡುತ್ತದೆ ಎಂಬ ವಿಶ್ವಾಸವಿದೆ.

ರಾಜ್ಯದ ಇತರೆ ವಸ್ತು ಪ್ರದರ್ಶನಗಳ ಅಭಿವೃದ್ಧಿಗೆ ಕ್ರಮ ವಹಿಸಿದ್ದೀರ?

ಸದ್ಯಕ್ಕೆ ನಮ್ಮ ರಾಜ್ಯದ ಎಂಟು ಜಿಲ್ಲೆಗಳಲ್ಲಿ ವಸ್ತು ಪ್ರದರ್ಶನಗಳಿವೆ. ಅವುಗಳಲ್ಲಿ ಮೈಸೂರು ವಸ್ತು ಪ್ರದರ್ಶನ ಪ್ರಮುಖವಾದದ್ದು. ನಂತರ ಮಂಗಳೂರು, ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿರುವುದು ಸ್ವಲ್ಪ ದೊಡ್ಡದಿವೆ.ಇವುಗಳ ವಿಸ್ತರಣೆಗೆ ಮತ್ತು ಅಭಿವೃದ್ಧಿಗೆ ಸ್ಥಳೀಯ ಸಂಸ್ಥೆ ಹಾಗೂ ಅಲ್ಲಿನ ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳ ಜೊತೆಗೆ ಸಭೆ ನಡೆಸಲು ಚಿಂತನೆ ನಡೆಸಲಾಗಿದೆ.

ಆರ್ಥಿಕ ಸುಧಾರಣೆಗೆಕಾರ್ಯಕ್ರಮಗಳೇನು:

ಪ್ರತಿ ವರ್ಷ ದಸರಾದಲ್ಲಿ 3 ತಿಂಗಳು ವಸ್ತು ಪ್ರದರ್ಶನ ನಡೆಯುತ್ತಿತ್ತು. ಈ ವೇಳೆ12ರಿಂದ 13 ಲಕ್ಷ ಜನರು ಭೇಟಿನೀಡುತ್ತಿದ್ದರು. ವರ್ಷಕ್ಕೆ 8ರಿಂದ10ಕೋಟಿ ಆದಾಯವೂ ಬರುತ್ತಿತ್ತು. ಆದರೆ, ಕೊರೊನಾ ಹಿನ್ನೆಲೆಈಬಾರಿ ವಸ್ತುಪ್ರದರ್ಶನ ಆಯೋಜಿಸಿಲ್ಲ. ಮುಂದಿನ ವರ್ಷ ಮೈಸೂರು ಹಬ್ಬ ನಡೆದರೆ, ವಸ್ತು ಪ್ರದರ್ಶನ ಆರಂಭಿಸುವ ಚಿಂತನೆ ಇದೆ. ಜಿಲ್ಲಾ ಮಂತ್ರಿ, ಸಂಸದರು, ಶಾಸಕರು, ಅಧಿಕಾರಿಗಳ ಜೊತೆ ಸಭೆ ನಡೆಸಿ ಯೋಜನೆ ರೂಪಿಸಲಾಗುವುದು.

ಅರಮನೆ,ಬೆಟ್ಟದ ರೀತಿ ಇಲ್ಲಿಗೂಬರುವಂತೆ ಮಾಡಬೇಕಿದೆ :

ಪ್ರವಾಸಿಗರನ್ನು ಆಕರ್ಷಿಸಲುಕಾರ್ಯಯೋಜನೆ ರೂಪಿಸಿದ್ದೀರಾ?

ಮೈಸೂರಿಗೆ ಬರುವ ಪ್ರವಾಸಿಗರು ಅರಮನೆ, ಮೃಗಾಲಯ, ಚಾಮುಂಡಿ ಬೆಟ್ಟಕ್ಕೆ ಹೋಗಬೇಕು ಎಂಬ ಭಾವನೆ ಹೇಗೆ ಮೂಡುತ್ತದೆಯೋ ಹಾಗೆ ವಸ್ತು ಪ್ರದರ್ಶನಕ್ಕೂ ಭೇಟಿ ನೀಡಬೇಕು ಎಂದು ಹೇಳುವಂತಾಗಬೇಕು. ಅದಕ್ಕಾಗಿ ವರ್ಷವಿಡೀ ಇಲ್ಲಿ ಕರಕುಶಲ ಮೇಳ, ವಸ್ತು ಪ್ರದರ್ಶನ ಸೇರಿದಂತೆ ಮಕ್ಕಳ ಮನರಂಜನೆ ಸಂಬಂಧಿತ ಕಾರ್ಯಕ್ರಮಗಳು ನಡೆಯುವಂತೆ ಯೋಜನೆ ರೂಪಿಸಲಾಗುವುದು. ವಸ್ತು ಪ್ರದರ್ಶನಕ್ಕೆ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಸಮಗ್ರ ನೀಲನಕ್ಷೆ ರೂಪಿಸಿ ಹಂತ ಹಂತವಾಗಿ ಅಭಿವೃದ್ಧಿಪಡಿಸುವ ಯೋಜನೆ ರೂಪಿಸುವುದಲ್ಲದೇ, ಇಲ್ಲಿರುವ ಸಮಸ್ಯೆಗಳಿಗೆ ಶಾಶ್ವತಪರಿಹಾರಕಂಡುಕೊಳ್ಳಲುಮೊದಲ ಆದ್ಯತೆ ನೀಡುತ್ತೇನೆ.ಜೊತೆಗೆ ಸ್ವತ್ಛತೆ, ಹಸರೀಕರಣಕ್ಕೆ ಒತ್ತು ನೀಡಲಾಗುವುದು ಎಂದು ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಎ.ಹೇಮಂತ್‌ಕುಮಾರ್‌ ಗೌಡ ತಿಳಿಸಿದ್ದಾರೆ.

ಟಾಪ್ ನ್ಯೂಸ್

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Mangaluru: ಪದ್ಮಶ್ರೀ ಬೇಳೇರಿ ಸಂರಕ್ಷಿತ ಭತ್ತದ 10 ತಳಿ ಸಂವರ್ಧನೆ

Mangaluru: ಪದ್ಮಶ್ರೀ ಬೇಳೇರಿ ಸಂರಕ್ಷಿತ ಭತ್ತದ 10 ತಳಿ ಸಂವರ್ಧನೆ

1-pro

Pro Kabaddi: ಜೈಪುರ್‌ ಮೇಲೆ ಪಾಟ್ನಾ ಸವಾರಿ

ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ ಪ್ರಕರಣ: ಪೊಲೀಸ್‌ ಕ್ರಮಕ್ಕೆ ಕೇರಳ ಸಿಎಂ ಸೂಚನೆ

ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ ಪ್ರಕರಣ: ಪೊಲೀಸ್‌ ಕ್ರಮಕ್ಕೆ ಕೇರಳ ಸಿಎಂ ಸೂಚನೆ

Mangaluru: ಡಿ.14ರಂದು ರಾಷ್ಟ್ರೀಯ ಲೋಕ ಅದಾಲತ್‌

Mangaluru: ಡಿ.14ರಂದು ರಾಷ್ಟ್ರೀಯ ಲೋಕ ಅದಾಲತ್‌

Sullia: ಸ್ಕೂಟಿಗೆ ಢಿಕ್ಕಿಯಾದ ಬಸ್‌: ವಿದ್ಯಾರ್ಥಿನಿ ಸಾವು

Sullia: ಸ್ಕೂಟಿಗೆ ಢಿಕ್ಕಿಯಾದ ಬಸ್‌: ವಿದ್ಯಾರ್ಥಿನಿ ಸಾವು

Uppinangady ದಾರಿ ವಿವಾದ: ಸಂಬಂಧಿಯನ್ನೇ ಕಡಿದು ಕೊ*ಲೆ

Uppinangady ದಾರಿ ವಿವಾದ: ಸಂಬಂಧಿಯನ್ನೇ ಕಡಿದು ಕೊ*ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಡಾ ನಿವೇಶನ 50:50 ಹಂಚಿಕೆ ರದ್ದು ತೀರ್ಮಾನ

MUDA; 50:50 ಹಂಚಿಕೆ ರದ್ದು ತೀರ್ಮಾನ; ನ್ಯಾ| ದೇಸಾಯಿ ಆಯೋಗದ ವರದಿ ಬಳಿಕ ನಿವೇಶನ ವಾಪಸ್‌

Loka-SP-Udesh–CM

MUDA Case: ಉತ್ತರ ತಾಳೆಯಾಗದೆ ಇದ್ದರೆ ಮತ್ತೆ ಸಿಎಂ ವಿಚಾರಣೆ: ಲೋಕಾಯುಕ್ತ ಎಸ್ಪಿ ಉದೇಶ್‌

CM-siddu

MUDA Case: ಲೋಕಾಯುಕ್ತ ಪೊಲೀಸರು ಮತ್ತೆ ವಿಚಾರಣೆಗೆ ಬರಲು ಹೇಳಿಲ್ಲ: ಸಿಎಂ ಸಿದ್ದರಾಮಯ್ಯ

2-hunsur

Hunsur: ಗೃಹಿಣಿ ನಾಪತ್ತೆ :ದೂರು ದಾಖಲು; ಪತ್ತೆಗಾಗಿ ಮನವಿ

CM-Siddu-High-Court

MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Mangaluru: ಪದ್ಮಶ್ರೀ ಬೇಳೇರಿ ಸಂರಕ್ಷಿತ ಭತ್ತದ 10 ತಳಿ ಸಂವರ್ಧನೆ

Mangaluru: ಪದ್ಮಶ್ರೀ ಬೇಳೇರಿ ಸಂರಕ್ಷಿತ ಭತ್ತದ 10 ತಳಿ ಸಂವರ್ಧನೆ

1-pro

Pro Kabaddi: ಜೈಪುರ್‌ ಮೇಲೆ ಪಾಟ್ನಾ ಸವಾರಿ

KVK: ಸಾಂಪ್ರದಾಯಿಕ ಭತ್ತ ತಳಿಗಳ ಕ್ಷೇತ್ರೋತ್ಸವ

KVK: ಸಾಂಪ್ರದಾಯಿಕ ಭತ್ತ ತಳಿಗಳ ಕ್ಷೇತ್ರೋತ್ಸವ

1-ewewq

ODI; ಹ್ಯಾರಿಸ್‌ ರೌಫ್ ಗೆ ಹೆದರಿದ ಆಸೀಸ್‌ : 9 ವಿಕೆಟ್‌ಗಳಿಂದ ಗೆದ್ದ ಪಾಕಿಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.