ನೆಂಟರನ್ನು ದೂರವಿಟ್ಟು, ಜನಸಾಮಾನ್ಯರ ದಸರಾ ಮಾಡಿ

Team Udayavani, Sep 13, 2019, 12:58 PM IST

mysuru-tdy-1

ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಧಿಕಾರಿಗಳೊಂದಿಗೆ ದಸರಾ ಸಿದ್ಧತಾ ಸಭೆ ನಡೆಸಿದರು.

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಾದ ಜಂಬೂಸವಾರಿ ಮೆರವಣಿಗೆ ಹಾಗೂ ಪಂಜಿನ ಕವಾಯತು ಕಾರ್ಯ ಕ್ರಮಗಳನ್ನು ಜನ ಸಾಮಾನ್ಯರು ಕಣ್ತುಂಬಿಕೊಳ್ಳಲು ಅವಕಾಶ ಮಾಡಿಕೊಡಿ, ಯಾವುದೇ ಕಾರಣಕ್ಕೂ ಅಧಿಕಾರಿಗಳ ದಸರಾ ಎನ್ನುವಂತೆ ವರ್ತಿಸಬೇಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸಲಹೆ ನೀಡಿದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಭಾಂಗಣದಲ್ಲಿ ಗುರುವಾರ ಅಧಿಕಾರಿಗಳೊಂದಿಗೆ ದಸರಾ ಸಿದ್ಧತಾ ಸಭೆ ನಡೆಸಿದ ಅವರು, ಜಂಬೂಸವಾರಿ ಸಂದರ್ಭದಲ್ಲಿ ಅರಮನೆ ಆವರಣದಲ್ಲಿ ಹಾಗೂ ಪಂಜಿನ ಕವಾಯತು ನಡೆಯುವ ಬನ್ನಿಮಂಟಪ ಮೈದಾನದಲ್ಲಿನ ಆಸನಗಳಲ್ಲಿ ಅಧಿಕಾರಿಗಳು, ಮತ್ತವರ ಸಂಬಂಧಿಕರೇ ತುಂಬಿದ್ದಾರೆ ಎಂಬ ಮಾತುಗಳು ಕೇಳಿ ಬರಬಾರದೇ ಜನರ ದಸರಾ ಎನ್ನುವ ಭಾವನೆ ಬರುವಂತೆ ನೋಡಿಕೊಳ್ಳಿ ಎಂದರು.

ಅ.7ರಂದು ಪಂಜಿನ ಕವಾಯತು ಪೂರ್ವ ತಾಲೀಮು ನಡೆಯಲಿದ್ದು, ಅಂದು ಅಧಿಕಾರಿವರ್ಗ ದವರು ತಮ್ಮ ಕುಟುಂಬದವರು, ಸಂಬಂಧಿಕರನ್ನೆಲ್ಲಾ ಕರೆತಂದು ಪ್ರದರ್ಶನ ತೋರಿಸಿ, ಆದರೆ, ಅ.8ರಂದು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಿ, ಮುಖ್ಯವಾಗಿ ದಸರಾ ಪಾಸ್‌ ವಿತರಣೆಯಲ್ಲಿ ಗೊಂದಲ ಇಲ್ಲದಂತೆ ನೋಡಿಕೊಳ್ಳಿ, ಕೆಲವು ಸಂದರ್ಭಗಳಲ್ಲಿ ವಿಐಪಿ ಪಾಸ್‌, ಗೋಲ್ಡ್ ಕಾರ್ಡ್‌ ಹೊಂದಿದ್ದರೂ ಅವರು ಕೂರಲು ಜಾಗವಿಲ್ಲದ ಪರಿಸ್ಥಿತಿ ನಿರ್ಮಾಣವಾಗದಂತೆ ಎಚ್ಚರವಹಿಸಿ, ದೇಶ-ವಿದೇಶ ಗಳಿಂದ ದಸರಾ ನೋಡಲು ಬರುವವರಿಗೆ ಮೊದಲು ಆದ್ಯತೆ ಕೊಡಿ ಎಂದರು.

ವಿದ್ಯಾರ್ಥಿಗಳಿಂದ ಲಾಂಛನ: ಮುಖ್ಯಮಂತ್ರಿ ಕಪ್‌ ಸೇರಿದಂತೆ ದಸರಾ ಕ್ರೀಡಾಕೂಟಕ್ಕೆ ಬರುವ ಕ್ರೀಡಾ ಪಟುಗಳಿಗೆ ಯಾವುದೇ ತೊಂದರೆ ಎದುರಾಗದಂತೆ ಉತ್ತಮ ಸೌಲಭ್ಯಗಳನ್ನು ಕಲ್ಪಿಸಿ, ಇದೇ ವೇಳೆ ದಸರಾ ಕ್ರೀಡಾಕೂಟಕ್ಕೆ ಪ್ರತ್ಯೇಕ ಲಾಂಛನ ರೂಪಿಸುವ ಸಂಬಂಧ ಕ್ರೀಡಾ ಇಲಾಖೆ ಮಾಡಿದ ಮನವಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅಭಿರಾಮ್‌ ಜಿ. ಶಂಕರ್‌, ಕ್ರೀಡಾ ಲಾಂಛನ ಮಾಡಿಕೊಡುವ ಸ್ಪರ್ಧೆ ಏರ್ಪಡಿಸಿದರೆ ಸಾಕಷ್ಟು ಕಾಲೇಜು ವಿದ್ಯಾರ್ಥಿಗಳೇ ಮುಂದೆ ಬಂದು ಲೋಗೋ ಮಾಡಿಕೊಡುತ್ತಾರೆ. ನಮ್ಮ ವಿದ್ಯಾರ್ಥಿಗಳಲ್ಲಿಯೇ ಇರುವ ಪ್ರತಿಭೆಯನ್ನು ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.

ರೈತ ದಸರಾ: ಅ.1ರಿಂದ ಮೂರು ದಿನಗಳ ಕಾಲ ರೈತ ದಸರಾ ನಡೆಯಲಿದ್ದು, ಕೃಷಿ ಖಾತೆಯೂ ಮುಖ್ಯಮಂತ್ರಿಯವರ ಬಳಿಯೇ ಇರುವುದರಿಂದ ಎಲ್ಲ ಕಾರ್ಯಕ್ರಮಗಳಿಗೂ ಮುಖ್ಯಮಂತ್ರಿಯ ವರನ್ನೇ ಕರೆತರಲಾಗುವುದಿಲ್ಲ. ಹೀಗಾಗಿ ಸ್ಥಳೀಯ ಜನಪ್ರತಿನಿಧಿಗಳನ್ನು ಕಾರ್ಯಕ್ರಮಗಳಿಗೆ ಜೋಡಿಸಿಕೊಳ್ಳಿ, ಮಹಾ ನಗರಪಾಲಿಕೆಯವರು ಅವರ ಮಿತಿಯಲ್ಲಿ ದೀಪಾಲಂಕಾರ ಮಾಡುತ್ತಾರೆ. ದೀಪಾಲಂಕಾರ ಸಮಿತಿಯವರು ನಗರದ ವರ್ತುಲ ರಸ್ತೆ ಒಳಗಿನ ಎಲ್ಲಾ ವೃತ್ತಗಳಿಗೆ ದೀಪಾಲಂಕಾರ ಮಾಡಿಸಿ ಎಂದು ಹೇಳಿದರು.

ಮಹಿಳಾ, ಮಕ್ಕಳ ದಸರಾ: ಮಹಿಳಾ ಮತ್ತು ಮಕ್ಕಳ ದಸರಾ ಉದ್ಘಾಟನಾ ಸಮಾರಂಭಕ್ಕೆ ಸಚಿವೆ ಶಶಿಕಲಾ ಜೊಲ್ಲೆ ಅವರ ಜೊತೆಗೆ ನಟಿ ತಾರಾ ಕೂಡ ಆಗಮಿಸಲಿದ್ದಾರೆ. ಮತ್ಸ್ಯಮೇಳ ಉದ್ಘಾಟನೆಯನ್ನು ಮೀನುಗಾರಿಕೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರಿಂದ ಮಾಡಿಸಿ ಎಂದ ಸಚಿವರು, ಸಾಂಸ್ಕೃತಿಕ ದಸರಾ, ಲಲಿತ ಕಲೆ, ಸ್ತಬ್ಧಚಿತ್ರ ಉಪ ಸಮಿತಿ, ಯೋಗ ದಸರಾ ಸೇರಿದಂತೆ ಉತ್ತಮ ಕಾರ್ಯಕ್ರಮಗಳನ್ನು ಜೋಡಿಸಿ, ಶ್ರಮ ಹಾಕಿ ಕೆಲಸ ಮಾಡಿ, ನಿಮ್ಮೆಲ್ಲರ ಶ್ರಮಕ್ಕೆ ಜಂಬೂಸವಾರಿ-ಪಂಜಿನ ಕವಾಯತು ಮುಗಿದ ನಂತರ ಫ‌ಲ ಸಿಗಲಿದೆ. ಈ ಬಾರಿ ಯಶಸ್ವಿ ದಸರಾ ಆಚರಿಸುವ ಮೂಲಕ ರಾಷ್ಟ್ರಕ್ಕೆ ದಸರೆಯ ಹೊಸ ಸಂದೇಶ ಹೋಗುವಂತೆ ನೋಡಿಕೊಳ್ಳಿ ಎಂದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕಲ್ಪನಾ, ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌, ನಗರ ಪೊಲೀಸ್‌ ಆಯುಕ್ತ ಕೆ.ಟಿ. ಬಾಲಕೃಷ್ಣ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಿಶ್ಶಂತ್‌, ಡಿಸಿಎಫ್ ಪ್ರಸನ್ನ ಕುಮಾರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್‌. ಪೂರ್ಣಿಮಾ, ಮುಡಾ ಆಯುಕ್ತ ಕಾಂತರಾಜು ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಟಾಪ್ ನ್ಯೂಸ್

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!

Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!

Maharashtra: ಕಾಂಗ್ರೆಸ್‌ ಬಂಡಾಯ ಸ್ಪರ್ಧಿಗಳು 6 ವರ್ಷ ಅಮಾನತು

Maharashtra: ಕಾಂಗ್ರೆಸ್‌ ಬಂಡಾಯ ಸ್ಪರ್ಧಿಗಳು 6 ವರ್ಷ ಅಮಾನತು

Aranthodu: ಕಾನೂನು ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Aranthodu: ಕಾನೂನು ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Karkala ಸಿಸ್ಟರ್‌ ಡೋನಾಲ್ಡಾ ಪಾಯಸ್‌ ನಿಧನ

Karkala: ಅರುಣೋದಯ ವಿಶೇಷ ಶಾಲೆ ಮುಖ್ಯಸ್ಥೆ ಸಿಸ್ಟರ್‌ ಡೋನಾಲ್ಡಾ ಪಾಯಸ್‌ ನಿಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಸರೆಗೆ ವೈಭವದ ತೆರೆ; 10 ದಿನ ದೀಪಾಲಂಕಾರ ವಿಸ್ತರಣೆಗೆ ಸರಕಾರ ನಿರ್ಧಾರ

ದಸರೆಗೆ ವೈಭವದ ತೆರೆ; 10 ದಿನ ದೀಪಾಲಂಕಾರ ವಿಸ್ತರಣೆಗೆ ಸರಕಾರ ನಿರ್ಧಾರ

13

ನಾಳೆ ನಾಡಹಬ್ಬದ ಜಂಬೂ ಸವಾರಿ

ವೈದ್ಯಕೀಯ ವಸ್ತುಪ್ರದರ್ಶನ ಉದ್ಘಾಟಿಸಿದ ಸಚಿವ ಕೆ.ಸುಧಾಕರ್

ಮೈಸೂರು: ವೈದ್ಯಕೀಯ ವಸ್ತು ಪ್ರದರ್ಶನ ಉದ್ಘಾಟಿಸಿದ ಸಚಿವ ಕೆ.ಸುಧಾಕರ್

ಖಾಸಗಿ ದರ್ಬಾರ್‌ ಆರಂಭ; 8ನೇ ಬಾರಿಗೆ ಖಾಸಗಿ ಯದುವೀರ್‌ ದರ್ಬಾರ್‌

ಖಾಸಗಿ ದರ್ಬಾರ್‌ ಆರಂಭ; 8ನೇ ಬಾರಿಗೆ ಖಾಸಗಿ ಯದುವೀರ್‌ ದರ್ಬಾರ್‌

ದಸರಾ ಸಡಗರಕ್ಕೆ ದ್ರೌಪದಿ ಸಾಕ್ಷಿ; ನವದಿನಗಳ ನಾಡಹಬ್ಬಕ್ಕೆ ರಾಷ್ಟ್ರಪತಿ ಇಂದು ಚಾಲನೆ

ದಸರಾ ಸಡಗರಕ್ಕೆ ದ್ರೌಪದಿ ಸಾಕ್ಷಿ; ನವದಿನಗಳ ನಾಡಹಬ್ಬಕ್ಕೆ ರಾಷ್ಟ್ರಪತಿ ಇಂದು ಚಾಲನೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Dinesh-gundurao

Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್‌

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!

Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.