ಕೋಟಿ ಹಿಂದುಳಿದ, ಶೋಷಿತರ ದನಿಯಾಗಿದ್ದರು


Team Udayavani, Nov 29, 2017, 12:35 PM IST

m2-koti.jpg

ಕೆ.ಆರ್‌.ನಗರ: ಪತ್ರಕರ್ತರಾದ ದಿ.ರಾಜಶೇಖರ್‌ ಕೋಟಿ ಅವರು ಹಿಂದುಳಿದ ಮತ್ತು ಶೋಷಿತರ ಧ್ವನಿಯಾಗಿದ್ದರು ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಕೆ.ಟಿ.ರಮೇಶ್‌ ತಿಳಿಸಿದರು.

ಪಟ್ಟಣದಲ್ಲಿರುವ ತಾಲೂಕು ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಆಂದೋಲನ ದಿನಪತ್ರಿಕೆಯ ಸಂಸ್ಥಾಪಕ ಸಂಪಾದಕರಾದ ದಿ.ರಾಜಶೇಖರ್‌ ಕೋಟಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿ, ಶೈಕ್ಷಣಿಕ, ಕ್ರೀಡೆ, ಸಂಘ ಸಂಸ್ಥೆಗಳನ್ನು ಕೋಟಿಯವರು ಪೋ›ತ್ಸಾಹಿಸುವ ಮೂಲಕ ತಮ್ಮ ಕಳಕಳಿಯನ್ನು ಪ್ರದರ್ಶಿಸುತ್ತಿದ್ದರು ಎಂದು ಹೇಳಿದರು.

ಮಾಜಿ ಅಧ್ಯಕ್ಷ ಹಾಗೂ ಆಂದೋಲನ ಪತ್ರಿಕೆಯ ವರದಿಗಾರ ಡಿ.ಸಿ.ಮಂಜುನಾಥ್‌ ಮಾತನಾಡಿ, ನಮ್ಮಂತಹ ಎಷ್ಟೋ ವರದಿಗಾರರಿಗೆ ಆಂದೋಲನವು ಕಾರ್ಖಾನೆಯಂತಿದ್ದು, ಅಲ್ಲಿಂದ ಅನೇಕ ವರದಿಗಾರರು ಹೊರಹೊಮ್ಮಿದ್ದಾರೆ. ಅಲ್ಲದೆ ಅವರ ಜೀವನ ನಿರ್ವಹಣೆಗೂ ಸಹ ಆಂದೋಲನ ದಿನ ಪತ್ರಿಕೆ ಪರೋಕ್ಷವಾಗಿ ಸಹಕಾರಿಯಾಗಿದೆ ಎಂದರು.

ತಮ್ಮ ಪತ್ರಿಕೆಯ ಬರವಣಿಗೆಯೊಂದಿಗೆ ಸಮಾಜದಲ್ಲಿನ ಅನೇಕ ಅಂಕು ಡೊಂಕುಗಳನ್ನು ತಿದ್ದುವ ಮೂಲಕ ಇತರೆ ಪತ್ರಿಕೆಗೆ ಮಾದರಿಯಾಗಿದ್ದರು. ಅಲ್ಲದೇ ಜಿಲ್ಲಾದ್ಯಂತ ಹಲವಾರು ಭಾಗಗಳಲ್ಲಿ ಆಂದೋಲನ ಪತ್ರಿಕೆಯ ನಾಮಾಂಕಿತದೊಂದಿಗೆ ಬಸ್‌ ತಂಗುದಾಣಗಳನ್ನು ನಿರ್ಮಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದರು ಎಂದರು.

ಪತ್ರಿಕಾರಂಗಕ್ಕೆ ಹೊಸದಾಗಿ ಪಾದಾರ್ಪಣೆ ಮಾಡುತ್ತಿದ್ದ ಯುವ ವರದಿಗಾರರಿಗೆ ಬೆನ್ನುತಟ್ಟಿ ಪೋ›ತ್ಸಾಹಿಸುತ್ತಿದ್ದರು. ಅವರ ಕೆಲವೊಂದು ಆದರ್ಶಗಳನ್ನು ಇಂದಿನ ವರದಿಗಾರರು ಸಹ ಮೈಗೂಡಿಸಿಕೊಳ್ಳಬೇಕು. ಇದುವರೆಗೂ ಉಪ ಸಂಪಾದಕರಾಗಿದ್ದ ರವಿಕೋಟಿ ಅವರ ಜವಬ್ದಾರಿ ಈಗ ಹೆಚ್ಚಾಗಿದೆ. ಅದನ್ನು ನಿಬಾಯಿಸುವ ಶಕ್ತಿಯನ್ನು ಭಗವಂತನು ಅವರಿಗೆ ಕರುಣಿಸಲಿ ಎಂದು ಹೇಳಿದರು.

ಪತ್ರಕರ್ತ ಸುರೇಶ್‌ ಮಾತನಾಡಿ, ನಾನು ಕೆ.ಆರ್‌.ನಗರ ಪಟ್ಟಣದಲ್ಲಿ ಸೃಜನ ಲೇಖಕರ ಬಳಗದ ವತಿಯಿಂದ ಕಾರ್ಯಕ್ರಮವೊಂದನ್ನು ಸುಮಾರು 15 ವರ್ಷಗಳ ಹಿಂದೆಯೇ ನಡೆಸಿದ್ದಾಗ ಕೋಟಿಯವರು ಆಗಮಿಸಿ ನಮಗೆ ಬೆನ್ನು ತಟ್ಟಿ ಪೋ›ತ್ಸಾಹಿಸಿದ್ದರು. ಇದರ ಪರಿಣಾಮ ಆ ಕಾರ್ಯಕ್ರಮವನ್ನು ಈಗಲು ಸಹ ಪ್ರತಿ ವರ್ಷ ಆಯೋಜಿಸುತ್ತಾ ಬಂದಿದ್ದೇನೆ. ಇದಕ್ಕೆ ದಿ.ಕೋಟಿಯವರ ಪ್ರೇರಣೆಯೇ ಕಾರಣ ಎಂದು ಅಭಿಪ್ರಾಯಪಟ್ಟರು.

ಪತ್ರಕರ್ತ ಬೇರ್ಯ ಮಹೇಶ್‌ ಮಾತನಾಡಿದರು. ಇದೇ ಸಂದರ್ಭದಲ್ಲಿ ದಿ.ರಾಜಶೇಖರ್‌ ಕೋಟಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಶಿಲ್ಪ ಶ್ರೀನಿವಾಸ್‌, ಚೈತನ್ಯ, ರಾಮಕೃಷ್ಣೇಗೌಡ, ಪಂಡಿತ್‌ ನಾಟಿಕರ್‌, ಕೆ.ಸಿ.ಮಹದೇವ್‌, ಡಿ.ಮಂಜುನಾಥ್‌, ಎಂ.ಎಸ್‌.ರವಿಕುಮಾರ್‌, ಈ ವಾಹಿನಿ ಸುರೇಶ್‌, ಸ್ಪಿನ್‌ ಕೃಷ್ಣ ಹಾಜರಿದ್ದರು.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-hunsur

Hunsur: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು

Mys-Udgiri-1

Mob Attack: ಉದಯಗಿರಿ ಪೊಲೀಸ್‌ ಠಾಣೆ ಮೇಲೆ ದಾಳಿ: ಆರೋಪಿಯ ಅಂಗಡಿ ಸಿಬಂದಿ ದುಷ್ಕೃತ್ಯ ಶಂಕೆ

24

80 ಸಾವಿರ ಲಂಚ ಸ್ವೀಕರಿಸುವಾಗ ಸಬ್‌ ಇನ್ಸ್‌ಪೆಕ್ಟರ್‌ ಲೋಕ ಬಲೆಗೆ

11

Dr G. Parameshwar: ಉದಯಗಿರಿ ಪ್ರಕರಣ: “ಬುಲ್ಡೋಜರ್‌’ ಕ್ರಮ ಇಲ್ಲಿ ಅಗತ್ಯವಿಲ್ಲ; ಪರಂ

ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್‌

ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.