![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Apr 19, 2020, 4:31 PM IST
ಮೈಸೂರು: ಜಿಲ್ಲೆಯಲ್ಲಿ ಕೋವಿಡ್ 19 ಹಟ್ಟಹಾಸ ಮುಂದುವರಿದಿದ್ದು, ಕಳೆದ ನಾಲ್ಕು ದಿನಗಳಿಂದ ವಿದೇಶ ಪ್ರವಾಸ ಹೋಗಿರದ ಮತ್ತು ವಿದೇಶ ಪ್ರವಾಸ ಮಾಡಿರದ ಮಂದಿಯ ಸಂಪರ್ಕವೇ ಇಲ್ಲದ ಜನರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿರುವುದು ಜಿಲ್ಲೆಯಲ್ಲಿ ಕೋವಿಡ್ 19 ಮೂರನೇ ಹಂತಕ್ಕೆ ಕಾಲಿರಿಸಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.
ಈವರೆಗೆ ವಿದೇಶದಿಂದ ಬಂದವರು, ದೆಹಲಿಯ ತಬ್ಲಿಘಿ ಧಾರ್ಮಿಕ ಸಭೆಗೆ ಹೋಗಿ ಬಂದವರು, ಜ್ಯುಬಿಲಿಯಂಟ್‌ಕಾರ್ಖಾನೆ ಸಂಬಂಧಪಟ್ಟವರಿಗೆ ಮಾತ್ರ ಕೋವಿಡ್ 19 ದೃಢಪಟ್ಟಿತ್ತು. ಆದರೆ ಇವರಾರ ಸಂಪರ್ಕದಲ್ಲಿ ಇಲ್ಲದವರಲ್ಲಿಯೂ ಕೋವಿಡ್ 19 ಕಾಣಿಕೊಂಡಿರುವುದು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದ್ದು, ಮೈಸೂರು ಮೂರನೇ ಹಂತಕ್ಕೆ ತಲುಪಿತೆ ಎಂದು ಭಯಪಡುವಂತಾಗಿದೆ.
ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದ ಸೋಂಕು ಇದೀಗ ಗ್ರಾಮೀಣ ಭಾಗಕ್ಕೂ ವಿಸ್ತರಿಸಿದೆ. ಶನಿವಾರ ಏಳು ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದ್ದು, ಜನರಲ್ಲಿ ಭಯ ಹೆಚ್ಚಿಸಿದೆ. ಇದರಿಂದ ಸೋಂಕಿತರ ಸಂಖ್ಯೆ 80ರ ಗಡಿ ಮುಟ್ಟಿದ್ದು, ಇನ್ನಷ್ಟು ಏರಿಕೆಯಾಗಲಿದೆಯೇ ಎನ್ನುವ ಆತಂಕ ಮನೆ ಮಾಡಿದೆ. ತೀವ್ರ ಉಸಿರಾಟದ ಸಮಸ್ಯೆಯಲ್ಲಿ ಬಳಲುತ್ತಿದ್ದ ಮತ್ತೂಬ್ಬ ವೃದ್ಧರಿಗೆ ಸೋಂಕು ಆಗಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಇದರೊಂದಿಗೆ ತೀವ್ರ ಉಸಿರಾಟದ ಸಮಸ್ಯೆಯಿಂದ ಇಬ್ಬರು ವೃದ್ಧರಿಗೆ ಸೋಂಕು ತಗುಲಿದಂತಾಗಿದೆ.
ಶನಿವಾರ ಏಳು ಮಂದಿಯಲ್ಲಿ ಸೋಂಕು: ಜಿಲ್ಲೆಯಲ್ಲಿ ಇದುವರೆಗೂ 22 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, 58 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ ಹೊಸದಾಗಿ ಕಾಣಿಸಿಕೊಂಡ 7 ಸೋಂಕಿತರ ಪೈಕಿ 6 ಮಂದಿ ನಂಜನಗೂಡು ತಾಲೂಕಿನ ಜ್ಯುಬಿಲಿಯಂಟ್ ಔಷಧ ಕಾರ್ಖಾನೆ ಸಂಬಂಧಿಸಿದವರಾಗಿದ್ದಾರೆ. ಮೊದಲ ಸೋಂಕು ಕಾಣಿಸಿಕೊಂಡ ನಂಜನಗೂಡು ಕಾರ್ಖಾನೆಯ 52ನೇ ಸೋಂಕಿತನ ದ್ವಿತೀಯ ಸಂಪರ್ಕದಿಂದ ಒಬ್ಬಳು ಮಹಿಳೆ ಹಾಗೂ 5 ಪುರುಷರಿಗೆ ಸೋಂಕು ಹರಡಿದೆ. 26 ವರ್ಷದ ಮಹಿಳೆ, 28 ವರ್ಷದ ಯುವಕ, 30 ವರ್ಷದ ಇಬ್ಬರಿಗೆ, 36 ವರ್ಷ ಹಾಗೂ 50 ವರ್ಷದ ಕಾರ್ಖಾನೆ ಸಂಬಂಧಿಸಿದ ವ್ಯಕ್ತಿಗಳಿಗೆ ಸೋಂಕು ಹರಡಿದೆ. ತೀವ್ರ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ ಮೈಸೂರು ತಾಲೂಕಿನ ಮೊಸಂಬಾಯನಹಳ್ಳಿಯ 65 ವರ್ಷದ ವೃದ್ಧನಿಗೂ ಕರೊನಾ ಸೋಂಕು ಬಂದಿದೆ. ಆದರೆ, ಈ ವೃದ್ಧನಿಗೆ ಹೇಗೆ ಸೋಂಕು ಬಂದಿದೆ ಎಂದು ಜಿಲ್ಲಾಡಳಿತ ತನಿಖೆ ನಡೆಸುತ್ತಿದೆ.
ಹಳ್ಳಿಗೂ ಹರಡಿದ ಸೋಂಕು : ಮೈಸೂರು ತಾಲೂಕಿನ ಮೊಸಂಬಾಯನಹಳ್ಳಿಯ 65 ವರ್ಷದ ವೃದ್ಧನಿಗೂ ಸೋಂಕು ಕಾಣಿಸಿಕೊಳ್ಳುವ ಮೂಲಕ ಹಳ್ಳಿಗಳಿಗೂ ಕೋವಿಡ್ 19 ಹರಡಿರುವದು ದೃಢಪಟ್ಟಿದೆ. ಇದು ಮೂರನೇ ಹಂತದ ಲಕ್ಷಣ ಎನ್ನುವ ಆತಂಕ ಮನೆ ಮೂಡಿದೆ. ಈ ಹಿನ್ನೆಲೆಯಲ್ಲಿ ಮೊಸಂಬಾ ಯನಹಳ್ಳಿಯ ರಸ್ತೆಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಇಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಜನರ ಓಡಾಟವನ್ನು ನಿರ್ಬಂಧಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವನ ಜತೆ ಸಂಪರ್ಕದಲ್ಲಿದ್ದವರನ್ನು ಹೋಂ ಕ್ವಾರಂಟೈನ್‌ನಲ್ಲಿ ಇರಿಸುವ ಕೆಲಸ ನಡೆಯುತ್ತಿದೆ. ಅಲ್ಲದೆ, ವೃದ್ಧ ವಾಸವಿದ್ದ ಮನೆ ಸೇರಿದಂತೆ ಅಕ್ಕಪಕ್ಕ ಮನೆಗಳಿಗೂ ಕೋವಿಡ್ 19 ನಿವಾರಕ ಔಷಧ ಸಿಂಪಡಣೆ ಮಾಡಲಾಗಿದೆ.ಇದು ತೀವ್ರ ಉಸಿರಾಟದ ಸಮಸ್ಯೆಯಿಂದ ಲಿಂಕ್ ಇಲ್ಲದೆ ವೃದ್ಧರಲ್ಲಿ ಕಾಣಿಸಿ ಕೊಂಡ ಎರಡನೇ ಪ್ರಕಟಣವಾಗಿದೆ. ಇತ್ತೀಚೆಗೆ 72 ವರ್ಷದ ವೃದ್ಧರೊಬ್ಬರಿಗೆ (ರೋಗಿ ಸಂಖ್ಯೆ 273) ಕರೊನಾ ಸೋಂಕು ತಗುಲಿತ್ತು. ರೋಗ ಹೇಗೆ ತಗಲಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ.
Hunsur: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು
Mob Attack: ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ: ಆರೋಪಿಯ ಅಂಗಡಿ ಸಿಬಂದಿ ದುಷ್ಕೃತ್ಯ ಶಂಕೆ
80 ಸಾವಿರ ಲಂಚ ಸ್ವೀಕರಿಸುವಾಗ ಸಬ್ ಇನ್ಸ್‌ಪೆಕ್ಟರ್ ಲೋಕ ಬಲೆಗೆ
Dr G. Parameshwar: ಉದಯಗಿರಿ ಪ್ರಕರಣ: “ಬುಲ್ಡೋಜರ್’ ಕ್ರಮ ಇಲ್ಲಿ ಅಗತ್ಯವಿಲ್ಲ; ಪರಂ
ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.