ಮಕ್ಕಳಿಗೆ ಕೃಷ್ಣ-ರುಕ್ಮಿಣಿಯ ಛದ್ಮವೇಷ
Team Udayavani, Aug 15, 2017, 11:32 AM IST
ಬನ್ನೂರು: ಪಟ್ಟಣದ ಸಮೀಪದ ತುರಗನೂರು ಗ್ರಾಮದಲ್ಲಿನ ಎನ್‌ಸಿಆರ್ ಇಂಟರ್ ನ್ಯಾಷನಲ್ ವಿದ್ಯಾ ಸಂಸ್ಥೆಯಲ್ಲಿ ಕೃಷ್ಣ ಜನ್ಮಷ್ಟಮಿಯ ಅಂಗವಾಗಿ ಕೃಷ್ಣ ರುಕ್ಮಿಣಿ ವೇಷಧಾರಿಯ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ನೂರಾರು ಮಕ್ಕಳು ಕೃಷ್ಣ-ರುಕ್ಮಿಣಿ ವೇಷಧರಿಸಿ, ಬಾಲಕೃಷ್ಣನಾಗಿ ಸಾರ್ವಜನಿಕರ ಗಮನ ಸೆಳೆದರು.
ಕಾರ್ಯಕ್ರಮವನ್ನು ಎನ್‌ಸಿಆರ್ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ರಾಜೇಶ್ ಉದ್ಘಾಟಿಸಿ ಮಾತನಾಡಿ, ಮಕ್ಕಳು ದೇವರಿಗೆ ಸಮಾನ, ಮಕ್ಕಳು ಬಾಲ್ಯದಲ್ಲಿದ್ದಾಗ ಅವರಾಡುವ ತುಂಟಾಟ ನೋಡುವುದೇ ಆನಂದ. ನಮ್ಮ ಸಂಸ್ಥೆಯಲ್ಲಿ ಕೃಷ್ಮಾಷ್ಟಮಿಯನ್ನು ಸಂಭ್ರಮದಿಂದ ಆಯೋಜನೆ ಮಾಡಿದ್ದು, ಪೋಷಕರು ತಮ್ಮ ಮಕ್ಕಳನ್ನು ಒಬ್ಬರಿಗಿಂತ ಒಬ್ಬರು ಉತ್ತಮವಾಗಿ ತಮ್ಮ ಮಕ್ಕಳಿಗೆ ಕೃಷ್ಣ-ರುಕ್ಮಿಣಿಯ ವೇಷಧರಿಸಿ ಕರೆದುಕೊಂಡು ಬಂದಿರುವುದು ಸಂತಸದ ವಿಷಯ ಎಂದರು.
ಮಕ್ಕಳಲ್ಲಿ ನಮ್ಮ ಸಂಸ್ಕೃತಿಯನ್ನು ಬೆಳೆಸುವ ಕೆಲಸ ಮಾಡಬೇಕು. ನಮ್ಮ ಸಂಸ್ಕೃತಿಯನ್ನು ಗೌರವಿಸುವ ಬಗ್ಗೆ ಹೇಳಬೇಕು ಎಂದು ತಿಳಿಸಿದರು. ಉತ್ತಮ ವೇಷಧಾರಿಯಾದ ಕೃಷ್ಣ-ರುಕ್ಮಿàಣಿಯ ಛದ್ಮವೇಷಧಾರಿ ಮಕ್ಕಳಿಗೆ ಬಹುಮಾನವನ್ನು ವಿತರಣೆ ಮಾಡಲಾಯಿತು.
ಪ್ರೇಮಕುಮಾರಿ, ಎನ್‌ಸಿಆರ್ ಇಂಟರ್ ನ್ಯಾಷನಲ್ ಸ್ಕೂಲಿನ ಅಧ್ಯಕ್ಷ ಟಿ.ಎನ್.ಚನ್ನಯ್ಯ, ಮುಖ್ಯಶಿಕ್ಷಕಿ ಭವ್ಯ, ಲತಾ, ಮಾರ್ತಮಾಗ್ಧಲಿನಾ, ಶ್ವೇತಾ ಜಾಯ್, ಯಮುನಾ, ದಿವ್ಯ, ಸರಸ್ವತಿ, ಶೋಭಾ, ಪುನೀತ್ ಕುಮಾರ್, ಪೂರ್ಣಿಮಾ, ಹರ್ಷಿತಾ, ಶಾಲಿನಿ, ಮಂಜುಳ, ರೂಹಿ ತಬಸ್ಸುಂ, ರೂಪ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್
Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
MUST WATCH
ಹೊಸ ಸೇರ್ಪಡೆ
Revenue Officers: ನಿಮಗೆ ಸಲಾಂ ಹೊಡೀಬೇಕಾ?: ತಹಶೀಲ್ದಾರ್‌ಗೆ ಕಂದಾಯ ಸಚಿವ ತರಾಟೆ
Congress Government: ಈ ಸರ್ಕಾರದಲ್ಲಿ ಸಹಿ ಮಾತ್ರವಲ್ಲ, ಕ್ಷಣವೂ ಮಾರಾಟಕ್ಕಿದೆ: ಎಚ್‌ಡಿಕೆ
Cyber Crime : ರೂಪ ಬದಲಾಯಿತು ಗಾಳ ದೊಡ್ಡದಾಯಿತು
ಬಿಜೆಪಿ ಸಭೆಯಲ್ಲಿ ಭಿನ್ನರ ವಿರುದ್ಧ ಕಿಡಿ; ಯತ್ನಾಳ್ ಬಣದ ವಿರುದ್ಧ ಮಾಜಿ ಶಾಸಕರು ಅಸಮಾಧಾನ
Naxal Surrender: ನಕ್ಸಲ್ ಶರಣಾಗತಿ ಪೂರ್ವಯೋಜಿತ ಸ್ಟೇಜ್ ಶೋ ಅಲ್ಲವೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.