Mysore; ಸೋಮಶೇಖರ್-ಹೆಬ್ಬಾರ್ ಗೆ ಎಷ್ಟು ಹಣ ಕೊಟ್ರಿ: ಸಿಎಂಗೆ ಈಶ್ವರಪ್ಪ ಪ್ರಶ್ನೆ

Team Udayavani, Mar 2, 2024, 2:07 PM IST

Mysore; ಸೋಮಶೇಖರ್-ಹೆಬ್ಬಾರ್ ಗೆ ಎಷ್ಟು ಹಣ ಕೊಟ್ರಿ: ಸಿಎಂಗೆ ಈಶ್ವರಪ್ಪ ಪ್ರಶ್ನೆ

ಮೈಸೂರು: ಕಾಂಗ್ರೆಸ್ ಶಾಸಕರಿಗೆ 50 ಕೋಟಿ ಆಫರ್ ಬಗ್ಗೆ ಹೇಳಿರುವ ಸಿಎಂ ಸಿದ್ದರಾಮಯ್ಯ ಅವರು ಆಫರ್ ಕೊಟ್ಟಿದ್ದು ಯಾರು ಎಂದು ಹೇಳಲಿ. 50 ಕೋಟಿ ಆಫರ್ ಕೊಟ್ಟವರನ್ನು ಮೊದಲು ಜೈಲಿಗೆ ಕಲುಹಿಸಲಿ. ಇಲ್ಲದಿದ್ದರೆ ಯಾವು ರಾಜಕೀಯಕ್ಕಾಗಿ ಸುಳ್ಳು ಹೇಳಿದ್ದೇನೆ ಎಂದು ಜನರ ಕ್ಷಮೆ ಕೇಳಲಿ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಸಿಎಂ ಬಾಯಲಿ ಈ ರೀತಿಯ ಮಾತು ಬರಬಾರದು. ಮಾತು ಬಂದ ಮೇಲೆ ಅದಕ್ಕೆ ಸಾಕ್ಷಿ ಕೊಡಬೇಕು. ಗುಪ್ತಚರ ಇಲಾಖೆಯ ಅವರ ಕೈಯಲ್ಲೇ ಇದೆ. ನಿಮ್ಮ ಶಾಸಕರಿಗೆ ಆಫರ್ ಕೊಟ್ಟಿದ್ದು ಯಾರೆಂದು ಜನರ ಮುಂದೆ ನೇರವಾಗಿ ಹೇಳಿ. ವೂಟ್ ಹಾಕಿಸಿಕೊಳ್ಳಲು ಎಸ್.ಟಿ ಸೋಮಶೇಖರ್ ಗೆ ಎಷ್ಟು ನೂರು ಕೋಟಿ ಕೊಟ್ಟಿದ್ದಿರಿ? ಶಿವರಾಂ ಹೆಬ್ಬಾರ್ ವೋಟ್ ಹಾಕದಂತೆ ತಡೆಯಲು ಎಷ್ಟು ಹಣ ಕೊಟ್ಟಿದ್ರಿ. ಮೊದಲು ಅದನ್ನು ಹೇಳಿ ಎಂದು ಆಗ್ರಹಿಸಿದರು.

ಡಿಕೆಶಿ ಉಗ್ರರ ಪರ: ಮೊದಲು ಡಿ.ಕೆ ಶಿವಕುಮಾರ್ ಬಾಯಿಗೆ ಬೀಗ ಹಾಕಿ. ಡಿ.ಕೆ‌ ಶಿವಕುಮಾರ್ ಬಾಯಿಗೆ ಬಂದಂತೆ ಹೇಳಿಕೆ‌ ಕೊಡುತ್ತಿದ್ದಾರೆ. ಮೊದಲು ಅದನೆಲ್ಲಾ ನಿಲ್ಲಿಸಿ. ಡಿ.ಕೆ ಭಯೋತ್ಪಾದಕರ ಪರ ಎಂಬುದು ನಮಗೆ ಗೊತ್ತಾಗಿದೆ. ಅವರ ಮೇಲೆ ನಮಗೆ ಯಾವ ನಂಬಿಕೆಗಳು ಉಳಿದಿಲ್ಲ. ಅವರು ಹೇಳಿದನ್ನು ಜನ ಕೇಳಬೇಕು ಅಂಥ ಏನು ಇಲ್ಲ ಎಂದರು.

ಬಾಂಬ್ ಸ್ಪೋಟ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಇದು ಭಯೋತ್ಪಾದಕರ ಕೃತ್ಯವಲ್ಲದೆ ಮತ್ತೇನು? ಹೋಟೆಲ್ ನಲ್ಲಿ ಯಾರೋ ಮಕ್ಕಳು ಪಾಟಕಿ ಹೊಡೆದಿದ್ದಾರಾ? ಅಥವಾ ಬಲೂನ್ ಹೊಡೆದಿದ್ದಾರಾ? ಅಲ್ಲಿ ಆಗಿರುವುದು ಬಾಂಬ್ ಸ್ಪೋಟ. ಇದು ಭಯೋತ್ಪಾದಕರ ಕೃತ್ಯ. ಇದು ಗುಪ್ತಚರ ಇಲಾಖೆಯ ವೈಫಲ್ಯ. ಈ ವೈಫಲವ್ಯವನ್ನು ಸಿಎಂ ಮೊದಲು ಒಪ್ಪಿಕೊಳ್ಳಬೇಕು. ಭಯೋತ್ಪಾದಕರನ್ನ ಮೊದಲು ಪತ್ತೆ ಹಚ್ಚಬೇಕು ಎಂದರು.

ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ವಿಚಾರಕ್ಕೆ ಮಾತನಾಡಿ, ಮೊದಲು ಎಫ್ಎಸ್ಎಲ್ ವರದಿ ಬಹಿರಂಗ ಮಾಡಿ. ನೀವು ತಡ ಮಾಡಿದಷ್ಟು ನೀವು ವರದಿ ತಿರುಚುತ್ತಿದ್ದಾರೆ ಎಂಬ ಅನುಮಾನ ಜಾಸ್ತಿಯಾಗುತ್ತದೆ. ವರದಿ ಬರುವ ಮುನ್ನವೇ ಕೆಲ ಸಚಿವರು ಅಂತಹ ಘಟನೆ ನಡೆದೇ ಇಲ್ಲ ಎಂದಿದ್ದಾರೆ. ಹೀಗಾಗಿ ವರದಿಗೆ ಏನು ಬೆಲೆ? ನಮ್ಮ ಪ್ರಕಾರ ಎಫ್ಎಸ್ಎಲ್ ವರದಿ ಬಂದಿದೆ. ಸರ್ಕಾರ ಅದನ್ನ ಮುಚ್ಚಿಡುವ ಯತ್ನ ಮಾಡುತ್ತಿದೆ. ಜನ ನಿಮ್ಮ ವರದಿ ಬಿಡುಗಡೆಗೆ ಕಾಯುತ್ತಿದ್ದಾರೆ. ನೀವು ಮುಸ್ಲಿಮರ ಪರವಾಗಿಯೇ ಇರಿ. ಆದರೆ ಭಯೋತ್ಪಾದಕ ಚಟುವಟಿಕೆ ನಡೆಸುವವರನ್ನ ದೇಶ ದ್ರೋಹಿಗಳನ್ನು ರಕ್ಷಿಸಬೇಡಿ ಎಂದರು.

ಸಂಪುಟದಲ್ಲಿಡಲಿ: ಸಿಎಂಗೆ ತಾಕತ್ ಇದ್ದರೆ ಜಾತಿಗಣತಿಯನ್ನು ಸಂಪುಟದಲ್ಲಿ ಇಡಲಿ. ವಿಧಾನಸೌಧದಲ್ಲಿ ಚರ್ಚೆಗೆ ಇಡಲಿ. ಕಾಂಗ್ರೆಸ್ ನವರೇ ಪರಸ್ಪರ ಹೊಡೆದಾಡಿಕೊಳ್ಳದಿದ್ದರೆ ನೋಡಿ. ಜಾತಿ ಜಾತಿಗಳ ನಡುವೆ ಸಿದ್ದರಾಮಯ್ಯ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ‌. ಹಿಂದುಳಿದ ವರ್ಗಗಳ ಚಾಂಪಿಯನ್ ಎನ್ನಿಸಿಕೊಳ್ಳಲು ಹಿಂದು ಸಮಾಜವನ್ನು ಜಾತಿ ಹೆಸರಿನಲ್ಲಿ ಹೊಡೆಯುತ್ತಿದ್ದಾರೆ. ನೀವು ಮುಸ್ಲಿಮರ ಪರ ಇರಿ. ಬಿಜೆಪಿ ಹಿಂದೂಗಳ ಪರ ಇರುತ್ತದೆ ಎಂದು ಕೆ.ಎಸ್ ಈಶ್ವರಪ್ಪ ಹೇಳಿದರು.

ಟಾಪ್ ನ್ಯೂಸ್

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಪಿಕ್ಸ್

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಫಿಕ್ಸ್

1-wewrewre

The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

101

Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ

Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ

No support for liquor bandh: Tourism Hotel Owners Association

Liquor: ಮದ್ಯ ಬಂದ್‌ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ

: ಸಿಎಂ ಸಿದ್ದರಾಮಯ್ಯ

Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಪಿಕ್ಸ್

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಫಿಕ್ಸ್

1-wewrewre

The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ

Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ

Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ

3

Mangaluru: ಅನಧಿಕೃತ ಫ್ಲೆಕ್ಸ್‌ , ಬ್ಯಾನರ್‌ ತೆರವು ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.