ಪ್ರವಾಸಿಗರಿಗೆ ಕೆಎಸ್ಸಾರ್ಟಿಸಿ ಪ್ಯಾಕೇಜ್ ಪ್ರವಾಸ
Team Udayavani, Sep 15, 2017, 12:10 PM IST
ಮೈಸೂರು: ನಾಡಹಬ್ಬ ಮೈಸೂರು ದಸರಾ ಅಂಗವಾಗಿ ಗ್ರಾಮಾಂತರ ಬಸ್ ನಿಲ್ದಾಣದಿಂದ ವಿವಿಧ ಪ್ರೇಕ್ಷಣೀಯ ಸ್ಥಳಗಳಿಗೆ ಪ್ಯಾಕೇಜ್ ಟೂರ್ (ದರ್ಶಿನಿ) ಆಯೋಜಿಸಲಾಗಿದೆ. ಸೆ.25 ರಿಂದ ಅ.5ರವರೆಗೆ ಈ ಪ್ಯಾಕೇಜ್ ಟೂರ್ ಲಭ್ಯವಿದ್ದು, ಮುಂಗಡ ಟಿಕೆಟ್ ಮೂಲಕ ಆಸನಗಳನ್ನು ಕಾಯ್ದಿರಿಸಲು ನಿಗಮದ ವೆಬ್ಸೈಟ್ www.ksrtc.in ನಲ್ಲಿ ಕಾಯ್ದಿರಿಸಬಹುದು.
ಗಿರಿದರ್ಶಿನಿ: ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ನಂಜನಗೂಡು ಮತ್ತು ಚಾಮುಂಡಿ ಬೆಟ್ಟ. 325 ಕಿ.ಮೀ ಕ್ರಮಿಸುವ ಈ ಬಸ್ ಬೆಳಗ್ಗೆ 6.30ಕ್ಕೆ ಹೊರಡಲಿದೆ. ವಯಸ್ಕರಿಗೆ 350 ರೂ. ಮಕ್ಕಳಿಗೆ 175 ರೂ. ದರ ನಿಗದಿಪಡಿಸಲಾಗಿದೆ.
ಜಲದರ್ಶಿನಿ: ಬೈಲುಕುಪ್ಪೆಗೋಲ್ಡನ್ ಟೆಂಪಲ್, ದುಬಾರೆ ಆನೆ ಶಿಬಿರ, ನಿಸರ್ಗಧಾಮ, ಅಬ್ಬಿ ಜಲಪಾತ, ರಾಜಾಸೀಟ್, ಹಾರಂಗಿ ಜಲಾಶಯ ಮತ್ತು ಬೃಂದಾವನ ಉದ್ಯಾನ ವೀಕ್ಷಣೆಯ ಈ ಬಸ್ 350 ಕಿ.ಮೀ ಕ್ರಮಿಸಲಿದೆ. ಬೆಳಗ್ಗೆ 6.30ಕ್ಕೆ ಹೊರಡಲಿದೆ. ವಯಸ್ಕರಿಗೆ 375ರೂ. ಮಕ್ಕಳಿಗೆ 190 ರೂ. ದರ.
ದೇವದರ್ಶಿನಿ: ನಂಜನಗೂಡು, ತಲಕಾಡು, ಬ್ಲಿಫ್, ಮುಡುಕುತೊರೆ, ಸೋಮನಾಥಪುರ, ಶ್ರೀರಂಗಪಟ್ಟಣ ಮತ್ತು ಕೆಆರ್ಎಸ್ಗೆ ಕರೆದೊಯ್ಯುವ ಈ ಬಸ್ 250 ಕಿ.ಮೀ ಕ್ರಮಿಸಲಿದ್ದು, ಬೆಳಗ್ಗೆ 6.30ಕ್ಕೆ ಹೊರಡಲಿದೆ. ವಯಸ್ಕರಿಗೆ 275 ರೂ., ಮಕ್ಕಳಿಗೆ 140 ರೂ. ದರ ನಿಗದಿಪಡಿಸಿದೆ.
ವಿಶೇಷ ಬಸ್ ವ್ಯವಸ್ಥೆ: ನಾಡಹಬ್ಬ ಮೈಸೂರು ದಸರಾ ಹಿನ್ನೆಲೆಯಲ್ಲಿ ಮೈಸೂರಿಗೆ ಆಗಮಿಸುವ ಪ್ರವಾಸಿಗರಿಗೆ ಕೆಎಸ್ಆರ್ಟಿಸಿ ಯಿಂದ ವಿಶೇಷ ಮಲ್ಟಿ ಆಕ್ಸೆಲ್ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.
ದಸರಾ ಪ್ರವಾಸಿಗರ ಅನುಕೂಲಕ್ಕಾಗಿ ಮೈಸೂರು ಗ್ರಾಮಾಂತರ ಘಟಕದಿಂದ 8 ಮಲ್ಟಿ ಆಕ್ಸೆಲ್ ಬಸ್ಗಳಿಗೆ ಗುರುವಾರ ಚಾಲನೆ ನೀಡಲಾಯಿತು. ಮೈಸೂರಿನಿಂದ ಹೈದರಾಬಾದ್,ಪಣಜಿ, ಪುಣೆ, ತಿರುಪತಿ, ಕೊಯಂಬತ್ತೂರ್, ತ್ರಿಶ್ಶೂರ್ ಸೇರಿದಂತೆ ಹಲವು ಕಡೆಗಳಿಗೆ ಈ ಬಸ್ಗಳು ಸಂಚರಿಸಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.