ಕುರುಬೂರು ನೀರು ಬಳಕೆದಾರರ ಸಂಘಕ್ಕೆ ಆಯ್ಕೆ
Team Udayavani, Feb 5, 2019, 7:10 AM IST
ತಿ.ನರಸೀಪುರ: ತಾಲೂಕಿನ ಕುರುಬೂರು ನೀರು ಬಳಕೆ ದಾರರ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ.ಜಿ.ವೀರಣ್ಣ, ಉಪಾ ಧ್ಯಕ್ಷರಾಗಿ ಕೆ.ಜಿ.ನಿಜಲಿಂಗಸ್ವಾಮಿ ಅವಿರೋಧವಾಗಿ ಆಯ್ಕೆ ಗೊಂಡರು. ಗ್ರಾಮದ ಸಂಘದ ಕಚೇರಿಯಲ್ಲಿ ಇವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾದರು.
ನೂತನ ಅಧ್ಯಕ್ಷ ಕೆ.ಜಿ.ವೀರಣ್ಣ ಮಾತನಾಡಿ, ಸಂಘ ಅಸ್ತಿತ್ವಕ್ಕೆ ಬಂದು 10 ವರ್ಷ ಕಳೆದರೂ ಸ್ವಂತ ಕಟ್ಟಡವಿಲ್ಲ. ಪ್ರಸಕ್ತ ಸಂಘವು ಲಾಭದಲ್ಲಿ ನಡೆಯುತ್ತಿದ್ದು, ಸ್ವಂತ ಕಟ್ಟಡ ನಿರ್ಮಿ ಸಲು 12 ಲಕ್ಷ ರೂ. ಮಂಜೂರಾಗಿದೆ. ನಿವೇಶನ ದೊರಕಿದ ಕೂಡಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.
ಈ ಭಾಗದ ರೈತರ ಜಮೀನುಗಳಿಗೆ ಸಮರ್ಪಕ ವಾಗಿ ನೀರು ಒದಗಿಸುವುದು ಸಂಘದ ಮೂಲ ಉದ್ದೇಶವಾಗಿದ್ದು, ರೈತರಿಂದ ನೀರಿನ ಕಂದಾಯ ಸಂಗ್ರಸಿ ಇಲಾಖೆಗೆ ಪಾವತಿಸಲಾಗುವುದು. ರೈತರಿಗೆ ಉಚಿತವಾಗಿ ಬಿತ್ತನೆ ಬೀಜ, ವ್ಯವಸಾಯಕ್ಕೆ ಬೇಕಾಗುವ ಉಪಕರಣ ನೀಡಲಾಗುವುದು ಎಂದು ತಿಳಿಸಿದರು.
ಈ ವೇಳೆ ಸಹಕಾರ ಸಂಘದ ನಿರ್ದೇಶಕ ರಾದ ಕೆ.ಬಿ.ಬಸವರಾಜು, ಕೆ.ಸಿ.ವೀರೇಶ್, ಕೆ.ಎಂ.ಶಾಂತ ರಾಜು, ನಿಜಗುಣಸ್ವಾಮಿ, ಕೆ.ಬಿ.ಬೋರಪ್ಪ, ನೀಲಮ್ಮ, ಭಾಗ್ಯ, ಮಹದೇವಸ್ವಾಮಿ, ಕೆ.ಎಂ.ಬಸವರಾಜು, ಮುಖಂಡರಾದ ಕು.ಶಿ.ಭೃಂಗೀಶ್, ಕೆ.ಜಿ.ನಾಗರಾಜು, ಕೆ.ಬಿ.ರಾಜಶೇಖರಪ್ಪ, ಜಗಪತಿ, ಮಾಜಿ ಉಪಾಧ್ಯಕ್ಷ ಶಿವಕುಮಾರ್ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ
You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.