ರಾಜಕಾರಣಿಗಳಲ್ಲಿ ಮುತ್ಸದ್ಧಿಗಳ ಕೊರತೆ


Team Udayavani, Mar 13, 2018, 12:21 PM IST

m1rajakarani.jpg

ಮೈಸೂರು: ಅಲ್ಲೋಲ ಕಲ್ಲೋಲ ಪರ್ವದಲ್ಲಿ ಸಾಗುತ್ತಿರುವ ಈವತ್ತಿನ ಸಮಾಜದಲ್ಲಿ ಮಾರ್ಗದರ್ಶಕರಾಗಿ ಒಬ್ಬ ಮುತ್ಸದ್ಧಿಯೂ ಇಲ್ಲ. ನಮ್ಮಲ್ಲಿ ರಾಜಕಾರಣಿಗಳು ಯಥೇತ್ಛವಾಗಿದ್ದಾರೆ, ಆದರೆ ಮುತ್ಸದ್ಧಿಗಳ ಕೊರತೆಯಿದೆ ಎಂದು ನಿವೃತ್ತ ಲೋಕಾಯುಕ್ತ, ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ ಹೇಳಿದರು.

ಸೋಮವಾರ ನಡೆದ ಮೈಸೂರು ವಿಶ್ವವಿದ್ಯಾನಿಲಯದ 98ನೇ ವಾರ್ಷಿಕ ಘಟಿಕೋತ್ಸವದಲ್ಲಿ ಅವರು ಘಟಿಕೋತ್ಸವ ಭಾಷಣ ಮಾಡಿದ ಅವರು, ಇವತ್ತಿನ ಸಮಾಜ ಧರ್ಮ, ಜಾತಿ, ಶ್ರೀಮಂತಿಕೆ ಮತ್ತು ಬಡತನವೆಂಬ ದ್ವಂದ್ವಗಳಲ್ಲಿ ಸಿಲುಕಿಕೊಂಡಿದೆ. ಈ ರಾಷ್ಟ್ರದ ಭಾವಿ ರಕ್ಷಕರು ನೀವೆ. ಹಾಗಾಗಿ ರಾಷ್ಟ್ರದ ಸೂತ್ರ ಹಿಡಿಯಲು ನೀವೆಲ್ಲ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕಾಗಿದೆ. ಆ ಕಾರಣದಿಂದಲೇ ಮೌಲ್ಯಾಧಾರಿತ ನಾಗರಿಕರಾಗಲು ನೀವು ತರಬೇತಿ ಪಡೆಯಬೇಕು ಎಂದು ಹೇಳಿದರು.

ಮೌಲ್ಯ ಅರಿತುಕೊಳ್ಳಿ: ಅಮಾಯಕ, ಮುಗ್ಧಬಾಳಿನ ಅವಸ್ಥೆಯನ್ನು ದಾಟಿ ನೀವೆಲ್ಲ ಮುಂದೆ ಸಾಗಿದ್ದೀರಿ. ನಿಮ್ಮ ಹರೆಯದ ನಂತರ ನಿಮ್ಮ ಮನಸ್ಸಿನಲ್ಲಿ ದೃಢವಾದ ಇಷ್ಟಾನಿಷ್ಟಗಳು, ಪೂರ್ವಾಗ್ರಹಗಳು, ಕೆಲವು ಸಿದ್ಧಾಂತಗಳು ಮೂಡಿರಲಿಕ್ಕೆ ಸಾಕು. ಅವುಗಳನ್ನು ಎಚ್ಚರಿಕೆಯಿಂದ ತೂಕಮಾಡಿ ಅವುಗಳ ಮೌಲ್ಯವನ್ನು ಅರಿತುಕೊಳ್ಳಿ. ಏಕೆಂದರೆ ಮುಂದಿನ ದಿನಗಳಲ್ಲಿ ಸಮಾಜದಲ್ಲಿ ನಿಮ್ಮ ಪಾತ್ರವೇನು ಎಂಬುದನ್ನು ಅವು ನಿರ್ಧರಿಸುತ್ತವೆ ಎಂದರು.

ಸಮಾಜದಲ್ಲಿ ವೃತ್ತಿ ಪರತೆಯ ಶಿಸ್ತು ಸಡಿಲವಾಗುತ್ತಿದೆ. ವೈದ್ಯರಿರಲಿ, ವಕೀಲರಿರಲಿ, ಎಂಜಿನಿಯರ್‌ಗಳೇ ಇರಲಿ ಅಥವಾ ಬೇರೆ ಯಾವುದೇ ವೃತ್ತಿಪರರಿರಲಿ ಈ ಮಾತು ಸಾರಾಸಗಟಾಗಿ ಎಲ್ಲರಿಗೂ ಅನ್ವಯವಾಗುತ್ತದೆ. ಧನದಾಹ ಸರ್ವವ್ಯಾಪಿಯಾಗಿ ಎಲ್ಲರನ್ನೂ ಮುಕ್ಕುತ್ತಿದೆ. ಈ ಓಟದಲ್ಲಿ ಯಾವ ನಿಯಮವೂ ಇಲ್ಲ. ಮಾರ್ಗದ ಗೊಡವೆ ಯಾರಿಗೂ ಇಲ್ಲ, ಗುರಿಯಷ್ಟೇ ಮುಖ್ಯವಾಗಿದೆ. ಅಧಿಕಾರಶಾಹಿ ಹಾಗೂ ರಾಜಕೀಯ ವಲಯಗಳಲ್ಲಿ ಮಾತ್ರ ಭ್ರಷ್ಟಾಚಾರವಿದೆ ಎಂದು ಹೇಳಿದರೆ ಅದು ಸುಳ್ಳಾಗುತ್ತದೆ. ಎಲ್ಲ ವೃತ್ತಿಗಳಲ್ಲೂ ಇದು ಇದೆ, ಪ್ರಮಾಣದಲ್ಲಿ ಸ್ವಲ್ಪ ವ್ಯತ್ಯಾಸವಿರಬಹುದು ಅಷ್ಟೇ ಎಂದರು.

ಅನ್ಯಾಯದ ವಿವೇಚನೆ ಇಲ್ಲ: ಬಹುತೇಕ ಎಲ್ಲ ವೃತ್ತಿವಲಯಗಳಲ್ಲೂ ತಮ್ಮ ತಮ್ಮ ಸದಸ್ಯರ ಚಟುವಟಿಕೆಗಳ ಮೇಲೆ ನಿಯಂತ್ರಣವಿಡುವಂಥ ಶೃಂಗಮಂಡಳಿಗಳಿವೆ. ಆದರೆ, ಈ ಮಂಡಳಿಗಳು ಕೇವಲ ಚುನಾವಣಾ ಕಾಲಗಳಲ್ಲಿ ಮಾತ್ರ ಚಟುವಟಿಕೆಯಿಂದ ಕೂಡಿರುತ್ತವೆ. ತಮ್ಮ ಸದಸ್ಯರ ವಿರುದ್ಧದ ಅಹವಾಲುಗಳನ್ನು ಪರಿಶೀಲಿಸಲು ಅವಕ್ಕೆ ವ್ಯವಧಾನವೇ ಇರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ದೇಶದಲ್ಲಿ ಭ್ರಷ್ಟಾಚಾರ ಈ ಪ್ರಮಾಣದಲ್ಲಿ ಬೆಳೆಯಲು ಭ್ರಷ್ಟಾಚಾರದ ಬಗ್ಗೆ ಸಮಾಜ ಹೊಂದಿರುವ ಧೋರಣೆಯೇ ಕಾರಣ. ಈವತ್ತಿನ ಸಮಾಜಕ್ಕೆ ನ್ಯಾಯಯುತವಾದ ಸಂಪತ್ತು ಯಾವುದು, ಅನ್ಯಾಯದ ದ್ರವ್ಯ ಯಾವುದು ಎಂಬ ವಿವೇಚನೆಯೇ ಇಲ್ಲದಂತಾಗಿದೆ. ಸಿರಿವಂತಿಕೆಯೆಂಬುದು ಯಶಸ್ಸಿನ ದ್ಯೋತಕ ಎಂದು ಈವತ್ತಿನ ಸಮಾಜ ಪುರಸ್ಕರಿಸುತ್ತದೆ. ಸಿರಿವಂತಿಕೆ ಪ್ರಾಪ್ತವಾದದ್ದು ಹೇಗೆ ಎಂಬುದರ ಬಗ್ಗೆ ಅದು ತಲೆಕೆಡಿಸಿಕೊಳ್ಳುವುದಿಲ್ಲ.

ಶ್ರಮದಿಂದ ದುಡಿದು ನ್ಯಾಯಯುತವಾಗಿ ಶ್ರೀಮಂತರಾದವರೂ ಒಂದೇ, ಅಡ್ಡದಾರಿ ಹಿಡಿದು ಹಣ ಸಂಪಾದಿಸಿದವರೂ ಒಂದೇ. ಈ ರೀತಿ ಸಮಾಜದಲ್ಲಿ ವಿವೇಚನೆ ಗೈರು ಹಾಜರಾಗಿರುವುದರಿಂದ ಜನರು ಹೆಚ್ಚು ಹೆಚ್ಚು ಭ್ರಷ್ಟಾಚಾರದ ಕಡೆ ವಾಲುತ್ತಿದ್ದಾರೆ, ಏಕೆಂದರೆ ಸಮಾಜದಲ್ಲಿ ಯಾರೊಬ್ಬರೂ ಭ್ರಷ್ಟಾಚಾರ ಒಂದು ಕೇಡು ಎಂದು ಬಗೆಯುವುದೇ ಇಲ್ಲ. ಎಲ್ಲಿಯವರೆಗೆ ಸಮಾಜ ನ್ಯಾಯಯುತ ಸಂಪತ್ತು ಮತ್ತು ನ್ಯಾಯಬಾಹಿರ ಸಂಪತ್ತಿನ ನಡುವಿನ ವ್ಯತ್ಯಾಸವನ್ನು ಗುರುತಿಸುವುದಿಲ್ಲವೋ ಅಲ್ಲಿಯವರೆಗೆ ನಾವು ಭ್ರಷ್ಟಾಚಾರದ ವಿರುದ್ಧದ ನಮ್ಮ ಸಮಯದಲ್ಲಿ ಜಯಶಾಲಿಗಳಾಗುವುದಿಲ್ಲ ಎಂದರು.

ಈ ಎಲ್ಲ ಕೇಡುಗಳನ್ನು ಸದೆಬಡಿಯಬೇಕಾದರೆ ನೀವು ಮೌಲ್ಯಾಧಾರಿತ ಸಮಾಜವನ್ನು ನಿರ್ಮಾಣಮಾಡಬೇಕು. ನಮ್ಮ ಹಿರೀಕರು ಹೋರಾಡಿದ ಮೌಲ್ಯಗಳಿಗಾಗಿ ನಾವು ಹೋರಾಡಬೇಕು. ನಮ್ಮ ಸಂವಿಧಾನದಲ್ಲಿ ಕೊಡಮಾಡಿರುವಂಥ ಮೌಲ್ಯಗಳವು. ಭಾರತದ ಸಂವಿಧಾನ ಕೇವಲ ಹಕ್ಕುಗಳ ಮಸೂದೆಯಲ್ಲ. ಅದೊಂದು ಪವಿತ್ರವಾದ ದಸ್ತಾವೇಜು. ಯಾವುದೇ ಧರ್ಮಗ್ರಂಥದಷ್ಟೇ ಪವಿತ್ರ ಅದು ಎಂದರು.

ಸಂಪತ್ತಿನ ಮೂಲ ಅರಿಯುವಲ್ಲಿ ವಿಫ‌ಲ: ಪ್ರಸ್ತುತ ಪೀಳಿಗೆ, ನನ್ನ ತಲೆಮಾರಿನಂತೆಯೇ, ಸಂಪತ್ತಿನ ಮೂಲವನ್ನು ಅರಿಯುವ ಗೊಡವೆಗೇ ಹೋಗದೆ ದ್ರವ್ಯವನ್ನು ಆರಾಧಿಸುತ್ತಿದೆ. ಹಾಗಾಗಿಯೇ ಯಾವ ಮಾರ್ಗದಿಂದಲಾದರೂ ಧನ ಸಂಗ್ರಹಿಸಬೇಕೆಂದು ಮುಗಿಬೀಳುತ್ತಿದೆ. ಹಾಗಾಗಿ, ಪ್ರಾಮಾಣಿಕ ರಾಷ್ಟ್ರಗಳ ಪೈಕಿ ಭಾರತದ ಸ್ಥಾನ ಚಿಂತಾಜನಕ ಸ್ಥಿತಿಯಲ್ಲಿದೆ. ನಮ್ಮ ಅಭಿವೃದ್ಧಿಯೆಲ್ಲ ಜನಸಂಖ್ಯೆಯ ಪ್ರಮಾಣದಲ್ಲಿ ಭ್ರಷ್ಟಾಚಾರದ ಅಗಾಧತೆಯಲ್ಲಿ ಕಣ್ಮರೆಯಾಗಿದೆ.

ಕಡಿಮೆ ಜನಸಂಖ್ಯೆಯಿದ್ದು, ಕಡಿಮೆ ಭ್ರಷ್ಟಾಚಾರವಿದ್ದಿದ್ದರೆ ಬಡತನ ಕಡಿಮೆ ಇರುತ್ತಿತ್ತು. ಭಾರತೀಯರ ಕಣ್ಣೀರಿನ ಪ್ರಮಾಣವೂ ಕಡಿಮೆ ಇರುತ್ತಿತ್ತು ಎಂದು ಹೇಳಿದರು. ಇಂಥ ತಾರತಮ್ಯವುಳ್ಳ ಸಮಾಜದ ಅಸಮಾನತೆಗಳನ್ನು ತೊಡದುಹಾಕಿ, ಹಸಿವು ಮತ್ತು ಕಣ್ಣೀರನ್ನು ಹೋಗಲಾಡಿಸುವ ದಿಸೆಯಲ್ಲಿ ನೀವು ಕಂಕಣಬದ್ಧರಾಗಬೇಕಿದೆ ಎಂದು ಕಿವಿಮಾತು ಹೇಳಿದರು. ಪ್ರಭಾರ ಕುಲಪತಿ ಪೊ›. ಸಿ.ಬಸವರಾಜು, ಕುಲಸಚಿವರುಗಳಾದ ಡಿ.ಭಾರತಿ, ಪೊ›.ಜಿ.ಸೋಮಶೇಖರ್‌ ಉಪಸ್ಥಿತರಿದ್ದರು.

ಕುಲಾಧಿಪತಿ ಗೈರು: ಮೈಸೂರು ವಿಶ್ವವಿದ್ಯಾನಿಲಯದ 98ನೇ ವಾರ್ಷಿಕ ಘಟಿಕೋತ್ಸವಕ್ಕೆ ವಿಶ್ವವಿದ್ಯಾನಿಲಯಗಳ ಕುಲಾಧಿಪತಿಗಳಾದ ರಾಜ್ಯಪಾಲ ವಜುಭಾಯ್‌ ವಾಲಾ, ಸಮ ಕುಲಾಧಿಪತಿಗಳಾದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಗೈರು ಹಾಜರಾಗಿದ್ದರು. ಜತೆಗೆ ಈ ಬಾರಿ ಯಾರೊಬ್ಬರಿಗೂ ಗೌರವ ಡಾಕ್ಟರೇಟ್‌ ನೀಡಲಾಗಲಿಲ್ಲ.

ಮಹಿಳೆಯರದ್ದೇ ಮೇಲುಗೈ: 98ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪದವಿ ಪಡೆದವರಲ್ಲಿ ಮಹಿಳೆಯರದ್ದೇ ಮೇಲುಗೈ. 27502 ಅಭ್ಯರ್ಥಿಗಳಿಗೆ ವಿವಿಧ ಪದವಿಗಳನ್ನು ಪ್ರದಾನ ಮಾಡಲಾಯಿತು. ಈ ಪೈಕಿ 17122 ಮಹಿಳೆಯರು ಮತ್ತು 10380 ಪುರುಷರು ಪದವಿ ಪಡೆದರು.

263 ಮಹಿಳೆಯರು ಮತ್ತು 312 ಪುರುಷರು ಸೇರಿದಂತೆ 575 ಅಭ್ಯರ್ಥಿಗಳಿಗೆ ಪಿಎಚ್‌.ಡಿ, 207 ಅಭ್ಯರ್ಥಿಗಳಿಗೆ 348 ಪದಕಗಳು ಮತ್ತು 168 ಬಹುಮಾನಗಳು, 7576 ಅಭ್ಯರ್ಥಿಗಳಿಗೆ ಸ್ನಾತಕೋತ್ತರ ಪದವಿ ಹಾಗೂ 19361 ಅಭ್ಯರ್ಥಿಗಳಿಗೆ ಸ್ನಾತಕ ಪದವಿ ಪ್ರದಾನ ಮಾಡಲಾಯಿತು. ಇವರಲ್ಲೂ ಕ್ರಮವಾಗಿ 4213 ಹಾಗೂ 12646 ಮಹಿಳೆಯರಿದ್ದಾರೆ.

ಟಾಪ್ ನ್ಯೂಸ್

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

6-hunsur

Hunsur: ರಾಜ್ಯದ ವಿವಿಧೆಡೆ ಕಳ್ಳತನ ಮಾಡಿದ್ದ ಆರೋಪಿ ಬಂಧನ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

Yathindra Siddaramaiah: ಹಿಂದೂ ರಾಷ್ಟ್ರ ಮಾಡಲು ಬಿಡಬಾರದು

Yathindra Siddaramaiah: ಹಿಂದೂ ರಾಷ್ಟ್ರ ಮಾಡಲು ಬಿಡಬಾರದು

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.