ಕುಕ್ಕರಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿ ಕೈಬಿಡಲು ಆಗ್ರಹ
Team Udayavani, Mar 1, 2017, 1:01 PM IST
ಮೈಸೂರು: ಪರಿಸರದ ಜತೆಗೆ ಪಕ್ಷಿಗಳು ಹಾಗೂ ಜೀವವೈವಿಧ್ಯತೆಗೆ ಅಪಾಯ ಉಂಟಾಗುವ ಹಿನ್ನೆಲೆಯಲ್ಲಿ ಕುಕ್ಕರಹಳ್ಳಿ ಕೆರೆಯಲ್ಲಿ ನಡೆಯು ತ್ತಿರುವ ಅಭಿವೃದ್ಧಿ ಕಾಮಗಾರಿಯನ್ನು ಕೈಬಿಡ ಬೇಕೆಂದು ಒತ್ತಾಯಿಸಿ ಕುಕ್ಕರಹಳ್ಳಿ ಕೆರೆ ಉಳಿಸಿ ಸಮಿತಿ ಸದಸ್ಯರು ಹಾಗೂ ಪರಿಸರ ಪ್ರೇಮಿಗಳು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ಕುಕ್ಕರಹಳ್ಳಿ ಕೆರೆ ಪಕ್ಷಿಗಳು ಹಾಗೂ ಜೀವವೈವಿಧ್ಯತೆಗಳ ಆಶ್ರಯ ತಾಣ ಮಾತ್ರವಲ್ಲ. ಅನೇಕರ ಪಾಲಿಗೆ ಇದು ಭಾವನಾತ್ಮಕ ತಾಣ ವಾಗಿದೆ. ಆದರೆ ಅಭಿವೃದ್ಧಿ ಹೆಸರಿನಲ್ಲಿ ಇತ್ತೀಚೆಗೆ ಕೆರೆಯಲ್ಲಿ ನಡೆಸಲಾಗುತ್ತಿರುವ ಕಾಮಗಾರಿ ಪರಿಸರ ಪ್ರೇಮಿಗಳಿಗೆ ಆಘಾತವನ್ನುಂಟು ಮಾಡಿದೆ. ಕುಕ್ಕರಹಳ್ಳಿ ಕೆರೆಯನ್ನು ಮಾನವ ಕೇಂದ್ರಿತವಾದ ಮನರಂಜನಾ ಸ್ಥಳವಾಗಿ ವಾಣಿಜ್ಯೀಕರಣಗೊಳಿಸುತ್ತಿರುವ ಪರಿಣಾಮ ಕುಕ್ಕರಹಳ್ಳಿ ಕೆರೆ ಹಾಗೂ ಇಲ್ಲಿರುವ ಅನೇಕ ಪ್ರಭೇದಗಳ ಜೀವಸಂಕುಲಕ್ಕೆ ಹಾನಿಯಾಗಲಿದೆ. ಹೀಗಾಗಿ ಕುಕ್ಕರಹಳ್ಳಿ ಅಭಿವೃದ್ಧಿ ಕಾಮಗಾರಿಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ಕೆರೆ ಅಭಿವೃದ್ಧಿಯಿಂದ ಇಲ್ಲಿರುವ ಸಸ್ತನಿಗಳು, ಬಾವಲಿಗಳು (ಹಾರುವ ಸಸ್ತನಿ), ಉಭಯ ಚರಿಗಳು, ಸರೀಸೃಪಗಳು ಒಳಗೊಂಡಂತೆ 85 ವಿಧದ ಚಿಟ್ಟೆಗಳು, ಜೇಡಗಳಿಗೆ ತೊಂದರೆ ಯಾಗಲಿದೆ. ಹೀಗಾಗಿ ಕುಕ್ಕರಹಳ್ಳಿ ಕೆರೆಯನ್ನು ಪರಿಸರ ಸೂಕ್ಷ್ಮವಲಯವೆಂದು ಪರಿಗಣಿಸಿ ನೈಸರ್ಗಿಕ ಪರಿಸರ ಅಧ್ಯಯನ ಪ್ರಯೋ ಗಾಲಯವಾಗಿ ಬಳಸಿಕೊಳ್ಳುವುದು. ಆ ಮೂಲಕ ಅಲ್ಲಿರುವ ವಿಧದ ಜೀವರಾಶಿಗಳ ಮಾಹಿತಿ ಕಲೆಹಾಕಿ, ಕೆರೆಗೆ ನೀರನ್ನು ಪೂರಣ ಮಾಡುವ ಮೂಲವನ್ನು ಗುರುತಿಸಬೇಕು.
ಶಾಶ್ವತ ನೀರಿನ ಮೂಲವನ್ನು ಕುರಿತಾದ ಯೋಜನೆಯನ್ನು ರೂಪಿಸಬೇಕಿದ್ದು, ಪ್ರತಿಷ್ಠಿತ ಐಐಎಸ್‌ಸಿ ಮಾದರಿಯ ಸಂಸ್ಥೆಗಳಲ್ಲಿ ಅಳವಡಿಸಿರುವಂತೆ ವಿಶ್ವವಿದ್ಯಾಲಯವು ತ್ಯಾಜ್ಯ ನೀರಿನ ಸದುಪಯೋಗ ಯೋಜನೆಯನ್ನು ರೂಪಿಸಬೇಕು. ನೀರಿನಲ್ಲಿ ಆಮ್ಲಜನಕದ ಕೊರತೆಯುಂಟಾಗದಂತೆ ಮಾಡಲು ಡಿಪ್ಯೂಸ್ಡ್ ಎರೇಟರ್ ಸಿಸ್ಟಮ್ ಬಳಸುವುದೂ ಸೇರಿದಂತೆ ವಿವಿಧ ಕ್ರಮಗಳನ್ನು ಕೆರೆಯ ಅಭಿವೃದ್ಧಿಗೆ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಕುಕ್ಕರಹಳ್ಳಿ ಕೆರೆಯಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಸ್ಥಗಿತ ಗೊಳಿಸುವಂತೆ ಕೆರೆ ಆವರಣಕ್ಕೆ ವಾಯು ವಿಹಾರಕ್ಕೆಂದು ಬರುವವರು ಹಾಗೂ ಇತರೆ ಸಾರ್ವಜನಿಕರು 3500 ಸಹಿ ಜತೆಗೆ ಅಂದಾಜು 1767 ನಾಗರಿಕರು ಅಂತಜಾಲದ ಮನವಿಗೆ ಸ್ಪಂದಿಸಿರುವ ಪ್ರತಿಯನ್ನು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರದೊಂದಿಗೆ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮೈಸೂರು ಗ್ರಾಹಕ ಪರಿಷತ್ತಿನ ಮೇಜರ್ ಒಂಬತೆರೆ, ರವಿಕುಮಾರ್, ಬಾಪು ಸತ್ಯನಾರಾಯಣ, ಪರಶಿವಮೂರ್ತಿ, ವಾಸ್ತುಶಿಲ್ಪಿ ಭೂಷಣ್, ಸಾಹಿತಿ ರಾಘವೇಂದ್ರ, ವಿ-ಲೀಡ್‌ನ ಬಾಲಸುಬ್ರಹ್ಮಣ್ಯ, ಪಕ್ಷಿ ವೀಕ್ಷಕರಾದ ಗುರುಪ್ರಸಾದ್, ತನುಜ, ಕಿರಣ್ ಬಾಗಡೆ, ಎನ್.ಆರ್.ಹರ್ಷ, ಎಂ. ಸಹನಾ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.