ವಕೀಲರು ಸಾಮಾಜಿಕ ಎಂಜಿನಿಯರ್‌ಗಳಂತೆ ದೇಶ ಕಟ್ಟಬೇಕು
Team Udayavani, Dec 15, 2019, 3:00 AM IST
ಮೈಸೂರು: ಜನರು ನೀಡಿದ ಅಧಿಕಾರವನ್ನು ಬಳಸಿ ಬಹುತ್ವದ ಭಾರತವನ್ನು ದಿವಾಳಿ ಮತ್ತು ಅರಾಜಕತೆಯತ್ತ ದೂಡಲಾಗುತ್ತಿದೆ ಎಂದು ಅಖೀಲ ಭಾರತ ವಕೀಲರ ಒಕ್ಕೂಟದ ಅಧ್ಯಕ್ಷ ಬಿಕಾಸ್ ರಂಜನ್ ಭಟ್ಟಾಚಾರ್ಯ ಆತಂಕ ವ್ಯಕ್ತಪಡಿಸಿದರು. ನಗರದಲ್ಲಿ ಏರ್ಪಡಿಸಿರುವ ಅಖೀಲ ಭಾರತ ವಕೀಲರ ಒಕ್ಕೂಟದ ಎಂಟನೇ ರಾಜ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ದೇಶ ಕಟ್ಟುವ ಕೆಲಸದಲ್ಲಿ ತೊಡಗಿ: ಭಾರತ ದೇಶವನ್ನು ಒಂದು ದೇಶ-ಒಂದು ಬಣ್ಣ, ಒಂದು ಧರ್ಮಕ್ಕೆ ಸೀಮಿತವಾಗಿಸಲು ದೇಶ ಕಟ್ಟಿದವರು ಬಿಟ್ಟಿಲ್ಲ. ನೂರಾರು ವರ್ಷಗಳ ಹಿಂದಿನಿಂದಲೂ ನಮ್ಮ ದೇಶದ ಸಂವಿಧಾನ ಸಾಮಾಜಿಕ, ರಾಜಕೀಯ, ಆರ್ಥಿಕ ನ್ಯಾಯ ನೀಡಿದೆ. ಹಿಂದೂ-ಹಿಂದಿ-ಹಿಂದೂಸ್ತಾನವನ್ನು ನಮ್ಮ ದೇಶದ ಜನರು ಎಂದೋ ತಿರಸ್ಕರಿಸಿದ್ದಾರೆ. ಯಾರೂ ಕೂಡ ಇದನ್ನು ಜಾರಿಗೆ ತರಲು ಸಾಧ್ಯವಿಲ್ಲ.
ಹೀಗಾಗಿ ವಕೀಲರು ಸಾಮಾಜಿಕ ಎಂಜಿನಿಯರ್‌ಗಳಂತೆ ದೇಶ ಕಟ್ಟುವ ಕೆಲಸದಲ್ಲಿ ತೊಡಗಬೇಕು ಎಂದರು. ಇಂದು ಭಾರತ ಜಾತಿಗಳ ಯುದ್ಧದಿಂದ ಕೂಡಿದೆ. ಅಂಬೇಡ್ಕರ್ ರಾಜಕೀಯ ಶಕ್ತಿಯಿಂದ ಅಭಿವೃದ್ಧಿ ಸಾಧ್ಯ ಎಂದಿದ್ದರು. ಆದರೆ ರಾಜ್ಯಾಧಿಕಾರ ಜಾತಿ ವ್ಯವಸ್ಥೆಯಲ್ಲಿ ಒಂದಾಗಿ ಹಳ್ಳ ಹಿಡಿಯತೊಡಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ: ಪ್ರಸ್ತುತ ದಿನಮಾನದಲ್ಲಿ ಜನರೇ ತೀರ್ಪು ನೀಡುವ ಮೂಲಕ ದೇಶವನ್ನು ದಿವಾಳಿ ಮತ್ತು ಅರಾಜಕತೆಯತ್ತ ದೂಡುತ್ತಿದ್ದಾರೆ. ಹೀಗಾಗಿ ಸಮಾಜದಲ್ಲಿ ಕೆಲವು ಬದಲಾವಣೆಯಾಗಬೇಕಾದರೆ ವಕೀಲರು ಶ್ರಮಪಡಬೇಕು. ನಮ್ಮಿಂದಲೇ ದೇಶದಲ್ಲಿ ಕೆಲವು ಬದಲಾವಣೆ ತರಲು ಸಾಧ್ಯ. ದೇಶದ ಅಭಿವೃದ್ಧಿಗಾಗಿ ಸಂವಿಧಾನದ ಆಶಯಗಳನ್ನು ಗಟ್ಟಿಗೊಳಿಸಬೇಕಾಗಿದೆ. ಭಾರತದಲ್ಲಿ 29 ಲಕ್ಷ ವಕೀಲರು ನ್ಯಾಯಾಂಗದಲ್ಲಿ ಅಭ್ಯಾಸ ಮಾಡುತ್ತಿದ್ದು, ಇವರೆಲ್ಲರೂ ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯವಾಗುತ್ತದೆ ಎಂದು ಹೇಳಿದರು.
ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಲ್ಲಿ ಮೌಲ್ಯಗಳ ಕುಸಿತ: ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಮಾತನಾಡಿ, ನ್ಯಾಯಾಂಗದ ನ್ಯೂನತೆಯಿಂದಾಗಿ ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಾಲ್ವರು ಅತ್ಯಾಚಾರ ಆರೋಪಿಗಳ ಎನ್‌ಕೌಂಟರ್ ನಡೆಯಿತು. ನ್ಯಾಯಾಂಗ ವ್ಯವಸ್ಥೆಯೆ ಪೊಲೀಸರ ಕೈಗೆ ಅನಾಯಸವಾಗಿ ಅಧಿಕಾರ ನೀಡಿದೆ. ಅಲ್ಲಿನ ಸರ್ಕಾರ 21 ದಿನಗಳಲ್ಲಿ ವಿಚಾರಣೆ ನಡೆಸಿ 22ನೇ ದಿನ ಸಾರ್ವಜನಿಕವಾಗಿ ಆರೋಪಿಗಳನ್ನು ಗಲ್ಲಿಗೇರಿಸುವ ಕಾಯ್ದೆ ಮಾಡುತ್ತಿದೆ.
ಇದು ನ್ಯಾಯವೇ? ನ್ಯಾಯಾಲಯ ಕೂಡ 21 ದಿನದಲ್ಲಿ ವಿಚಾರಣೆ ನಡೆಸಿ ತೀರ್ಪು ನೀಡಲು ಸಾಧ್ಯವಿಲ್ಲ. ನಮ್ಮ ನ್ಯೂನತೆಯಿಂದ ಪೊಲೀಸರಿಗೆ ಇಷ್ಟೊಂದು ಧೈರ್ಯ ಬಂದಿದೆ. ಸಾರ್ವಜನಿಕರೂ ಕೂಡ ಅವರಿಗೆ ಬೆಂಬಲ ನೀಡುತ್ತಿದ್ದಾರೆ ಎಂದರು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಲ್ಲಿ ಮೌಲ್ಯಗಳ ಕುಸಿತ ಕಂಡಿದೆ. ನಾಲ್ಕನೇ ಅಂಗವಾದ ಮಾಧ್ಯಮ ಕೂಡ ಮೌಲ್ಯ ಕಳೆದುಕೊಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಖೀಲ ಭಾರತ ವಕೀಲರ ಒಕ್ಕೂಟದ ರಾಜ್ಯಾಧ್ಯಕ್ಷ ಎಸ್.ಶಂಕರಪ್ಪ, ಹಿರಿಯ ವಕೀಲ ಸಿ.ಎಂ.ಜಗದೀಶ್, ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ಕೆ.ಬಿ.ನಾಯಕ್, ಉಪಾಧ್ಯಕ್ಷ ಬಿ.ವಿ.ಶ್ರೀನಿವಾಸ್, ಸದಸ್ಯರಾದ ಜೆ.ಎಂ. ಅನಿಲ್‌ಕುಮಾರ್, ಎಸ್.ಬಸವರಾಜು, ಆಸಿಫ್ ಅಲಿ ಶೇಕ್ ಹುಸೇನ್, ಎಚ್.ಎಲ್.ವಿಶಾಲ್ ರಘು, ಕೋಟೇಶ್ವರ್ ರಾವ್, ಶ್ರೀನಿವಾಸಕುಮಾರ್, ರಾಮಚಂದ್ರ ರೆಡ್ಡಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.