ಕಾನೂನು ಮೀರದಂತೆ ಮುಖಂಡರು ಎಚ್ಚರವಹಿಸಬೇಕು: ಎಸ್ ಪಿ ಆರ್.ಚೇತನ್

ಡಿ.7 ರಂದು ಹನುಮ ಜಯಂತಿ ಕಟ್ಟೆಚ್ಚರ ; ವಿವಿಧ ಸಮುದಾಯದ ಮುಖಂಡರ ಶಾಂತಿ ಸಭೆ

Team Udayavani, Nov 26, 2022, 10:49 PM IST

1——-fdsfdf

ಹುಣಸೂರು: ಡಿ.7 ರಂದು ನಡೆಯಲಿರುವ ಹನುಮ ಜಯಂತಿಯನ್ನು ಶಾಂತಿಯುತವಾಗಿ ಆಚರಿಸಲು ಎಲ್ಲ ಪಕ್ಷಗಳು, ಧರ್ಮ, ವಿವಿಧ ಸಮುದಾಯದ ಮುಖಂಡರು ಶಾಂತಿ ಸಭೆಯಲ್ಲಿ ಮನವಿ ಮಾಡಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಪೊಲೀಸ್ ಇಲಾಖೆವತಿಯಿಂದ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಹನುಮಜಯಂತಿ ಸಮಿತಿ ಅಧ್ಯಕ್ಷ ವಿ.ಎನ್.ದಾಸ್ ಹನುಮಜಯಂತಿಯ ಸಿದ್ದತೆಗಳ ಕುರಿತು ಮಾಹಿತಿ ನೀಡಿದರು. ಸಮಿತಿಯ ಕಾನೂನು ಸಲಹೆಗಾರ ವಕೀಲ ಯೋಗಾನಂದಕುಮಾರ್ ಸಮಿತಿವತಿಯಿಂದ ಜಯಂತಿ ಆಚರಿಸುತ್ತಿದ್ದು, ಇದು ಚುನಾವಣಾ ವರ್ಷವಾಗಿದ್ದು ಜಯಂತಿಯಲ್ಲಿ ಯಾವುದೇ ರಾಜಕೀಯ ಬೆರೆಸದಂತೆ ಮನವಿ ಮಾಡಿದರು.

ತಾಲೂಕು ಜೆಡಿಎಸ್ ಅಧ್ಯಕ್ಷ ದೇವರಹಳ್ಳಿಸೋಮಶೇಖರ್, ಬಿಜೆಪಿ ತಾಲೂಕು ಅಧ್ಯಕ್ಷ ನಾಗಣ್ಣಗೌಡ, ನಗರಸಭಾ ಸದಸ್ಯ ಸೈಯದ್‌ಯೂನಸ್, ಮಾಜಿ ಸದಸ್ಯ ಮಜಾಜ್ ಅಹಮದ್, ಕಾಂಗ್ರೆಸ್ ಮುಖಂಡ ರಾಘುರವರು ಮಾತನಾಡಿ ಯಾವುದೇ ಹಬ್ಬವನ್ನು ಹಬ್ಬದಂತೆ ಆಚರಿಸಬೇಕು. ಯಾವುದೇ ಗೊಂದಲ ಬೇಡವೆಂದರೆ, ದಸಂಸದ ನಿಂಗರಾಜಮಲ್ಲಾಡಿ, ಡಿ.ಕುಮಾರ್‌ರವರು ಹಬ್ಬವನ್ನು ಜಾತ್ಯಾತೀತ, ಪಕ್ಷಾತೀತ, ಧರ್ಮಾತೀತವಾಗಿ ಆಚರಿಸಬೇಕು. ಪ್ರಚೋದನಾಕಾರಿ ಭಾಷಣಕ್ಕೆ ಅವಕಾಶ ನೀಡದೆ. ಶಾಂತಿ ಸೌಹಾರ್ದತೆಯನ್ನು ಕಾಪಾಡಬೇಕೆಂದು ಅಭಿಪ್ರಾಯಪಟ್ಟು, ಎಲ್ಲ ಧರ್ಮಗಳ ಮುಖಂಡರು ಮುಂದೆನಿಂತು ಯುವಕರನ್ನು ನಿಯಂತ್ರಿಸುವ ಕೆಲಸ ಮಾಡಬೇಕೆಂದು ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಪಿ.ಮಂಜುನಾಥ್ ವಕೀಲ ಯೋಗಾನಂದಕುಮಾರ್‌ರ ಸಲಹೆಯಂತೆ ಎಲ್ಲ ರಾಜಕೀಯ ಪಕ್ಷಗಳು ದೂರವಿದ್ದು, ಸಮಿತಿಯೇ ಮುಂದೆನಿಂತು ಜಯಂತಿ ಮೆರವಣಿಗೆ ನಡೆಸಬೇಕು. ಇದೊಂದು ಗಾಂಭೀರ್ಯ, ಭಾತೃತ್ವದ ಜಯಂತಿ ಆಗಲಿ, ಸಾಮಾಜಿಕ ಜಾಲತಾಣಗಳ ಬಗ್ಗೆ ಎಚ್ಚರವಹಿಸಬೇಕೆಂದು ಆಶಿಸಿದರು.ಉಪವಿಭಾಗಾಧಿಕಾರಿ ರುಚಿಬಿಂದಿಯಾ ಶಾಂತಿಯುತವಾಗಿ ಆಚರಿಸಲು ಎಲ್ಲರ ಸಹಕಾರ ಅತ್ಯಗತ್ಯವೆಂದರು.

ಎಸ್ಪಿ ಆರ್.ಚೇತನ್ ಮಾತನಾಡಿ, ಹಿಂದಿನ ಘಟನೆಗಳನ್ನು ಆಧರಿಸಿ ಪೊಲೀಸ್‌ಇಲಾಖೆ ಸಾಕಷ್ಟು ಮುಂಜಾಗ್ರತಾ ಕ್ರಮವಹಿಸಲಿದೆ. ಎಲ್ಲವನ್ನು ಅನುಮತಿ ಪಡೆದೇ ಆಚರಿಸಬೇಕು. ಬದಲಾವಣೆಗಾಗಿ 24 ಗಂಟೆ ಮೊದಲು ಅನುಮತಿ ಕಡ್ಡಾಯ, ಶಾಂತಿ ಸುವ್ಯವಸ್ಥೆ ಕದಡುವವರ ಮೇಲೆ ಇಲಾಖೆ ನಿಗಾವಹಿಸಿದೆ. ನ್ಯಾಯಾಲಯದ ನಿರ್ದೇಶನದಂತೆ ಶಬ್ದಮಾಲಿನ್ಯ ಸೇರಿದಂತೆ ಎಲ್ಲದರ ಮೇಲೂ ನಿಯಂತ್ರಣಕ್ಕೆ ಕ್ರಮವಹಿಸಲಾಗುವುದು. ಸಾಮಾಜಿಕ ಜಾಲತಾಣದ ಬಗ್ಗೆ ಇಲಾಖೆ ನಿಗಾಇಟ್ಟಿದ್ದು, ಶಾಂತಿ ಕದಡುವ ಯಾವುದೇ ಪೋಸ್ಟ್ ಹಾಕಿದರೂ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು, ನಗರ ಪ್ರವೇಶಿಸುವ ಎಲ್ಲಾ ರಸ್ತೆಗಳಲ್ಲೂ ಚೆಕ್‌ಪೋಸ್ಟ್ ನಿರ್ಮಿಸಲಾಗುವುದು, ನಗರದ ಮೆರವಣಿಗೆ ತೆರಳುವ ರಸ್ತೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗುತ್ತಿದೆ ಎಲ್ಲರೂ ಪೊಲೀಸರಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು.

ಸಭೆಯಲ್ಲಿ ತಹಸೀಲ್ದಾರ್ ಡಾ.ಅಶೋಕ್, ಡಿವೈಎಸ್‌ಪಿ ರವಿಪ್ರಸಾದ್, ನಗರಸಭೆ ಅಧ್ಯಕ್ಷೆ ಗೀತಾ, ಉಪಾಧ್ಯಕ್ಷೆ ಆಶಾ, ಸ್ಥಾಯಿಸಮಿತಿ ಅಧ್ಯಕ್ಷೆ ಶ್ವೇತಾ, ಹುಡಾ ಅಧ್ಯಕ್ಷ ಗಣೇಶ್‌ಕುಮಾರಸ್ವಾಮಿ, ಪೌರಾಯುಕ್ತೆ ಮಾನಸ, ಇನ್ಸ್ಪೆಕ್ಟರ್‌ಗಳಾದ ಶ್ರೀನಿವಾಸ್, ರವಿ, ಜಯಂತಿ ಸಮಿತಿಯ ಎಚ್.ವೈ.ಮಹದೇವ್, ಚಂದ್ರಮೌಳಿ, ಅನಿಲ್, ಗಿರೀಶ್, ವಿವಿಧ ಸಂಘಸಂಸ್ಥೆ ಗಳ ಪ್ರತಿನಿಧಿಗಳು, ವಿವಿಧ ಧರ್ಮಗಳ ಮುಖಂಡರು ಸೇರಿದಂತೆ ಅನೇಕರು ಭಾಗವಹಿಸಿದ್ದರು.

ವಾಹನ ಏರುವಂತಿಲ್ಲ
ಮೆರವಣಿಗೆಯಲ್ಲಿ ಯಾವುದೇ ಸಮಿತಿ, ಮುಖಂಡರು ವಾಹನ ಏರಿ ಬರುವಂತಿಲ್ಲ, ನ್ಯಾಯಾಲಯದ ಆದೇಶದಂತೆ ಡೆಸಿಬಲ್ ಆಧರಿಸಿ ಮೈಕ್, ಸೌಂಡ್ ಬಾಕ್ಸ್ ಗಳಿಗೆ ಮಾತ್ರ ಅವಕಾಶ ನೀಡಲಾಗುವುದುದೆಂದು ಸಭೆಯ ನಂತರ ಎಸ್ ಪಿ ಆರ್.ಚೇತನ್ ಉದಯವಾಣಿಗೆ ತಿಳಿಸಿದರು.

ಟಾಪ್ ನ್ಯೂಸ್

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

101

Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ

No support for liquor bandh: Tourism Hotel Owners Association

Liquor: ಮದ್ಯ ಬಂದ್‌ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ

: ಸಿಎಂ ಸಿದ್ದರಾಮಯ್ಯ

Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Shimoga; Omini caught fire while filling with petrol

Shimoga; ಪೆಟ್ರೋಲ್ ಹಾಕುವಾಗ ಹೊತ್ತಿ ಉರಿದ ಓಮಿನಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

2-hunsur

Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ

1-amudaa

MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ‌ 9 ಗಂಟೆ ವಿಚಾರಣೆ

ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷ‌ಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷ‌ಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರMUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ

MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

101

Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ

No support for liquor bandh: Tourism Hotel Owners Association

Liquor: ಮದ್ಯ ಬಂದ್‌ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ

ರಿಲೀಸ್‌ ಅಖಾಡಕ್ಕೆ ಚಿಕ್ಕಣ್ಣನ ʼಫಾರೆಸ್ಟ್ʼ

Forest: ರಿಲೀಸ್‌ ಅಖಾಡಕ್ಕೆ ಚಿಕ್ಕಣ್ಣನ ʼಫಾರೆಸ್ಟ್ʼ

3(1)

Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.