ಪ್ರತಿಯೊಬ್ಬರಿಗೂ ಕಾನೂನು ನೆರವು
Team Udayavani, Nov 18, 2017, 12:47 PM IST
ಎಚ್.ಡಿ.ಕೋಟೆ: ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದುಳಿದ ಜನ ಸಾಮಾನ್ಯರಿಗೆ ಉಚಿತ ಕಾನೂನು ನೆರವು ಅರಿವು ನೀಡಲು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು ಸದ್ಬಳಕೆ ಮಾಡಿಕೊಳ್ಳಬೇಕೆಂದು ಎಚ್.ಡಿ.ಕೋಟೆ ಕಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಸರ್ಪರಾಜ್ ಹುಸೇನ್ ಕಿತ್ತೂರು ತಿಳಿಸಿದರು.
ಪಟ್ಟಣದ ಮಿನಿ ವಿಧಾನಸೌಧದಲ್ಲಿ ನೂತನ ಉಚಿತ ಕಾನೂನು ಸಲಹಾ ಕೇಂದ್ರ ಉದ್ಘಾಟಿಸಿ ಮಾತನಾಡಿದರು. ಸಾಮಾನ್ಯರಿಗೂ ಉಚಿತ ಕಾನೂನು ಅರಿವು ನೀಡಲು ಉತ್ಛನ್ಯಾಯಾಲಯ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಡಿ ರಾಜ್ಯ, ಜಿಲ್ಲಾ, ತಾಲೂಕು ಸಮಿತಿಗಳನ್ನು ರಚನೆ ಮಾಡಿದೆ ಎಂದು ಹೇಳಿದರು.
ತಾಲೂಕು ವಕೀಲರ ಸಂಘದ ಸಹಕಾರದೊಂದಿಗೆ ತಾಲೂಕು ಕೇಂದ್ರ ಸೇರಿದಂತೆ ಆಯ್ದಾ ಗ್ರಾಪಂಗಳಲ್ಲಿ ಉಚಿತ ಕಾನೂನು ಸಲಹಾ ಕೇಂದ್ರದ ಕಚೇರಿಗಳನ್ನು ತೆರೆಯುತ್ತಿದ್ದೇವೆ. ಅಲ್ಲಿಗೆ ವಕೀಲರೊಬ್ಬರನ್ನು ನೇಮಿಸಿದ್ದು, ಪ್ರತಿಯೊಬ್ಬರೂ ಉಚಿತವಾಗಿ ಕಾಯ್ದೆಗಳ ಪ್ರಯೋಜನ ತಿಳಿಯುವುದರ ಜೊತೆಗೆ ಕಾನೂನು ನೆರವು ಪಡೆಯಬಹುದು ಎಂದು ಹೇಳಿದರು.
ತಹಶೀಲ್ದಾರ್ ಎಂ.ನಂಜುಂಡಯ್ಯ, ತಾಲೂಕಿನಲ್ಲಿ ಪ.ಜಾತಿ, ಪ.ಪಂಗಡ ಜನರು ಹೆಚ್ಚಾಗಿ ವಾಸಿಸುತ್ತಿದ್ದು, ಅದರಲ್ಲೂ ಗಿರಿಜನರು ಸೇರಿದಂತೆ ತಾಲೂಕಿನಲ್ಲಿ ಕಡುಬಡವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಉಚಿತ ಕಾನೂನು ಸೇವಾ ಕೇಂದ್ರಗಳು ಅತ್ಯಂತ ಉಪಯುಕ್ತವಾಗಿದ್ದು ಪ್ರತಿಯೊಬ್ಬರು ಸದುಪಯೋಗಪಡಿಸಿಕೊಳ್ಳಬೇಕು ಎಂದು ನುಡಿದರು.
ಕಾಯ್ದೆ ಕಾನೂನುಗಳ ಬಗ್ಗೆ ಅರಿವು ಮೂಡಿಸುವ ದಿಸೆಯಲ್ಲಿ ಗುರುವಾರ ಪಟ್ಟಣದ ಮಿನಿವಿಧಾನಸೌಧದಿಂದ ಪಟ್ಟಣದ ನ್ಯಾಯಾಲಯದವರೆಗೆ ವಿಶೇಷ ಜಾಥಾ ನಡೆಯಿತು. ಜಾಥಾದಲ್ಲಿ ಪಟ್ಟಣ ನ್ಯಾಯಾಲಯದ ನ್ಯಾಯಾಧೀಶರು ಕಾಲ್ನಡಿಗೆಯಲ್ಲಿ ಸಾಗಿ ಜಾಥಾಗೆ ಮೆರಗು ತಂದರು.
ಪಟ್ಟಣ ನ್ಯಾಯಾಲಯದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಕೆ.ಕೇಶವ, ವಕೀಲರ ಸಂಘದ ಅಧ್ಯಕ್ಷ ಬಿ.ಎಸ್.ಸಂಗಮೇಶ್ವರ್, ಸರ್ಕಾರಿ ಅಭಿಯೋಜಕ ಎ.ಎನ್.ಮಧು, ತಹಶೀಲ್ದಾರ್ ಎಂ.ನಂಜುಂಡಯ್ಯ, ಉಪತಹಶೀಲ್ದಾರ್ ಆನಂದ್, ವಕೀಲರಾದ ಡಿ.ಸಿ.ತಿಮ್ಮೇಗೌಡ, ಜಿ.ಎನ್.ನಾರಾಯಣಗೌಡ, ಕೆ.ಸಿ.ಚಂದ್ರಶೇಖರ್, ಸರಸ್ವತಿ, ಶಾಂತಾ, ಚೌಡಳ್ಳಿ ಜವರಯ್ಯ, ಕೃಷ್ಣೇಗೌಡ, ಡಿ.ಆರ್.ಮಹೇಶ್, ರಾಮನಾಯ್ಕ, ಎಂ.ಬಿ.ಶ್ರೀನಿವಾಸ್, ಪುಟ್ಟಸ್ವಾಮಿ, ಕಿರಣ್ ಮತ್ತಿತರರಿದ್ದರು.
ತಾಲೂಕು ಕಾನೂನು ಸೇವಾ ಸಮಿತಿ ಜೊತೆಗೂಡಿ ಕಳೆದ ನ.9 ರಿಂದ ಪ್ಯಾನೇಲ್ ವಕೀಲರು 10 ದಿನಗಳ ಕಾಲ ಹಳ್ಳಿಗಳ ಮನೆ ಮನೆಗೆ ತೆರಳಿ ಉಚಿತ ಕಾನೂನು ನೆರವಿನ ಬಗ್ಗೆ ತಿಳಿಸಲಾಗುತ್ತಿದೆ. ಜೊತೆಗೆ ಸುಮಾರು 120 ರೂ., ಬೆಲೆಯ ಪುಸ್ತಕವನ್ನು ಕೇವಲ 20 ರೂ.,ಗೆ ನೀಡಲಾಗುತ್ತಿದೆ. ಈ ಪುಸ್ತಕ ಬಹಳ ಉಪಯುಕ್ತವಾಗಿದೆ.
-ಬಿ.ಎಸ್.ಸಂಗಮೇಶ್ವರ್, ಹಿರಿಯ ನೋಟರಿ ವಕೀಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್
Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.