ಮಡಿವಾಳರಿಗೆ ರಾಜಕೀಯ ಸ್ಥಾನಮಾನ ನೀಡಲಿ

Team Udayavani, Feb 24, 2020, 3:00 AM IST

madivalarige

ಪಿರಿಯಾಪಟ್ಟಣ: ಸರ್ಕಾರ, ಮಡಿವಾಳ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಿ, ಸಾಮಾಜಿಕ ನ್ಯಾಯ ಹಾಗೂ ರಾಜಕೀಯ ಸ್ಥಾನಮಾನ ನೀಡಬೇಕು ಎಂದು ಮೈಸೂರು ಜಿಲ್ಲಾ ಬಿಜೆಪಿ ವಕ್ತಾರ ಕೌಟಿಲ್ಯ ಆರ್‌.ರಘು ಒತ್ತಾಯಿಸಿದರು. ತಾಲೂಕಿನ ರಾವಂದೂರಿನಲ್ಲಿ ವೀರ ಮಡಿವಾಳ ಮಾಚಿದೇವರ ಸಂಘದಿಂದ ಏರ್ಪಡಿಸಿದ್ದ ಮಡಿವಾಳ ಮಾಚಿದೇವರು ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

12ನೇ ಶತಮಾನದ ತತ್ವಾದರ್ಶ ಅರಿತವರು ಶಿವಮೂರ್ತಿ ಮುರುಘರಾಜೇಂದ್ರ ಶರಣರು. ಪ್ರತಿಯೊಂದು ಕಾಯಕ ಸಮಾಜಕ್ಕೂ ತಮ್ಮ ಕರ್ತವ್ಯ ಅರಿತು ಮಾರ್ಗದರ್ಶನ ನೀಡಲು ಪ್ರತಿಯೊಂದು ಸಮಾಜಕ್ಕೂ ಗುರುಗಳನ್ನು ಕೊಡುಗೆಯಾಗಿ ನೀಡಿದವರು. ಚಿತ್ರದುರ್ಗ ಶ್ರೀಗಳು 12ನೇ ಶತಮಾನದಲ್ಲಿ ನಡೆದ ಬಸವಣ್ಣನವರ ತತ್ವಾದರ್ಶಗಳನ್ನು ಕಲ್ಯಾಣದಲ್ಲಿ ನಡೆದ ಚರ್ಚೆಗಳನ್ನು ಪ್ರತಿಯೊಬ್ಬರಿಗೆ ಮಾದರಿಯಾಗಿದೆ ಎಂದು ತಿಳಿಸಿದರು.

ಮಡಿವಾಳ ಸಮಾಜದ ಕಡೆಗಣನೆ: ಮಡಿವಾಳ ಸಮಾಜ ಅತ್ಯಂತ ಹಿಂದುಳಿದಿದೆ. ಹಿಂದುಳಿದ ವರ್ಗಗಳ ಪಟ್ಟಿಯಲ್ಲಿದ್ದರೂ ಬಲಾಡ್ಯರ ನಡುವೆ ಹೋಟಾಟ ನಡೆಸಲಾರದೇ ಸೌಲಭ್ಯಗಳಿಂದ ವಂಚಿತಾಗಿದೆ. ಈ ಸಮಾಜಕ್ಕೆ ಸಿಗಬೇಕಾದ ಮೂಲ ಸೌಲಭ್ಯಗಳು ಉಳ್ಳವರ ಪಾಲಾಗುತ್ತಿವೆ. ರಾಜಕೀಯ ಲೆಕ್ಕಚಾರಗಳಲ್ಲಿಯೂ ಜನಾಂಗವನ್ನು ತೀರಾ ಹೀನಾಯ ಸ್ಥಿತಿಯಲ್ಲಿ ಕಡೆಗಣನೆ ಮಾಡಲಾಗುತ್ತಿದೆ. ಇನ್ನಾದರೂ ಈ ಸಮಾಜದವರು ಸಂಘಟಿತರಾಗುವ ಮೂಲಕ ರಾಜಕೀಯ ಸ್ಥಾನಮಾನ ಪಡೆಯಲು ಪಣ ತೊಡಬೇಕಿದೆ ಎಂದರು.

ಬ್ಲಾಕ್‌ ಅಧ್ಯಕ್ಷ ಡಿ.ಟಿ.ಸ್ವಾಮಿ ಮಾತನಾಡಿ, ಸಾಮಾಜಿಕ ಭದ್ರತೆಗಾಗಿವ ಹಗಲಿರುಳು ಈ ಸಮಾಜ ಹೋರಾಟ ಮಾಡುತ್ತಿದೆ. ತಾಲೂಕಿನಲ್ಲಿ ಈ ಸಮಾಜದ ಜನರು ಎಲ್ಲಾ ಸಮಾಜದವರೊಡನೆ ಸಹನೆ ಸಹಬಾಳ್ವೆಯಿಂದ ಬದುಕುದೂಡುತ್ತಿದೆ. ಪಟ್ಟಣದಲ್ಲಿ ವೀರ ಮಾಡಿವಾಳ ಮಾಚಿದೇವರ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಾಲಾಗುವುದು. ಅವರಿಗೆ ಸರ್ಕಾರದಿಂದ ಸೌಲಭ್ಯ ತಲುಪಿಸಲಾಗುವುದು ಎಂದರು.

ಜನಾಂಗದ ಮುಖಂಡ ಕೊಣಸೂರು ಮಹದೇವ್‌ ಮಾತನಾಡಿ, ಮಡಿವಾಳ ಸಮಾಜದ ಜನರು ಬಟ್ಟೆ ಶುದ್ಧ ಮಾಡುವ ಕಾಯಕ ಮಾಡುತ್ತಿದ್ದೇನೆ. ಅವರ ಕಾಯಕಕ್ಕೆ ಅನುಕೊಲವಾಗುವಂತೆ ಹೋಬಳಿ ಕೇಂದ್ರಗಳಲ್ಲಿ ದೊಂಬಿ ಘಾಟುಗಳನ್ನು ನಿರ್ಮಾಣ ಮಾಡಿಸಿಕೊಡಬೇಕು. ಸಮಜ ಕಲ್ಯಾಣ ಇಲಾಖೆಯಲ್ಲಿರುವ ಸವಲತ್ತುಗಳನ್ನು ನಮ್ಮ ಜನಾಂಗಕ್ಕೆ ಮೊದಲ ಆದ್ಯತೆ ನೀಡಬೇಕೆಂದು ಮನವಿ ಮಾಡಿದರು.

ಮುರುಘಾ ಮಠದ ಮೋಕ್ಷಪತಿ ಸ್ವಾಮೀಜಿ ಮಾತನಾಡಿ, ಸ್ವಾಭಿಮಾನದ ಬದುಕು ನಡೆಸಲು ಬೇರೆಯವರನ್ನು ಆಶ್ರಯಿಸದೇ ತಮ್ಮ ಬದುಕನ್ನು ತಾವೇ ಮುನ್ನಡೆಸಲು ಕಲಿಯಬೇಕು. ಮಡಿವಾಳ ಮಾಚಿದೇವರು ಸ್ವತ್ಛತೆಯ ಜೊತೆ ಅವರಲ್ಲಿರುವ ಅಂಧಕಾರ ಹೋಗಲಾಡಿಸುವ ಮಹಾನ್‌ ವ್ಯಕ್ತಿಯಾಗಿದ್ದರು ಎಂದರು. ಮೈಮುಲ್‌ ನಿರ್ದೇಶಕ ಪಿ.ಎಂ.ಪ್ರಸನ್ನ ಉಪನ್ಯಾಸಕ ಬಿ.ಎಂ.ಶಿವಸ್ವಾಮಿ, ವರ್ತಕರ ಸಂಘದ ಅಧ್ಯಕ್ಷ ಮಣಿ, ಮುಖಂಡರಾದ ಆರ್‌. ಮಹೇಶ್‌, ರಮೇಶ್‌ ನಾಯಕ್‌ ಮಾತನಾಡಿದರು.

ಸಮಾರಂಭಕ್ಕೂ ಮೊದಲು ವೀರಮಡಿವಾಳ ಮಾಚಿದೇವರ ಮತ್ತು ಮೋಕ್ಷಪತಿ ಸ್ವಾಮೀಜಿಯವರನ್ನು ವಿಶೇಷ ಅಲಕಾಂರದಿಂದ ಕಂಗೊಳಿಸುತ್ತಿದ್ದ ಬೆಳ್ಳಿ ರಥದಲ್ಲಿ ಪೂರ್ಣ ಕುಂಭದೊಂದಿಗೆ ಹಾಗೂ ವಿವಿಧ ರಾವಂದೂರು ಮತ್ತು ಎಸ್‌. ಕೊಪ್ಪಲು ಗ್ರಾಮಗಳ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಗ್ರಾಪಂ ಸದಸ್ಯೆ ಹೇಮಾವತಿ, ಆರ್‌.ವಿ.ನಂದಿಶ್‌, ಉಪ ತಹಶೀಲ್ದಾರ್‌ ಕೇಚಪ್ಪ, ಆರ್‌.ಡಿ. ದಶರಥ, ನಂಜಶೆಟ್ಟಿ, ಪದ್ಮನಾಭ, ಮಹದೇವ, ಆರ್‌.ಜೆ. ಸುರೇಶ್‌, ಬಸವಣ್ಣ, ಮಂಜುನಾಥ, ಆರ್‌.ಎಸ್‌. ಪ್ರಕಾಶ್‌, ಇಂಡೇನ್‌ ಗ್ಯಾಸ್‌ ವಿತರಕ ಆರ್‌.ಎಸ್‌.ವಿಜಯ ಕುಮಾರ್‌, ಉಪನ್ಯಾಸಕ ಲಕ್ಷ್ಮೀಕಾಂತ್‌ ಹಾಗೂ ಜನಾಂಗದ ಮುಖಂಡರು ಯುವಕರು, ಮಹಿಳೆಯರು ಹಾಜರಿದ್ದರು.

ಟಾಪ್ ನ್ಯೂಸ್

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

121

Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ

CM-Siddu-High-Court

MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ

Trump–Kamala

US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?

ಮಂಗಳೂರಿಗೆ ವಾಟರ್‌ ವೆುಟ್ರೋ; ಎಂಡಬ್ಲ್ಯುಎಂಪಿ ನಿರ್ಮಾಣಕ್ಕೆ ಮುಂದಾಗಿರುವ ಕೆಎಂಬಿ

ಮಂಗಳೂರಿಗೆ ವಾಟರ್‌ ವೆುಟ್ರೋ; ಎಂಡಬ್ಲ್ಯುಎಂಪಿ ನಿರ್ಮಾಣಕ್ಕೆ ಮುಂದಾಗಿರುವ ಕೆಎಂಬಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CM-Siddu-High-Court

MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ

Waqf

Waqf Issue: ಶ್ರೀರಂಗಪಟ್ಟಣದ ಸರಕಾರಿ ಶಾಲೆ ಮೇಲೂ ವಕ್ಫ್ ವಕ್ರದೃಷ್ಟಿ!

4

Hunsur: ಆಟೋ-ಬೈಕ್ ಡಿಕ್ಕಿ; ಸವಾರ ಸಾವು

ED-Raid

MUDA Case: ಜಾರಿ ನಿರ್ದೇಶನಾಲಯದಿಂದ ನೂರಾರು ಪುಟಗಳ ದಾಖಲೆ ವಶ

JDS

By Election: ಜೆಡಿಎಸ್‌ ಸ್ಟಾರ್‌ ಪ್ರಚಾರಕರ ಪಟ್ಟಿ: ಜಿಟಿಡಿ ಹೆಸರು ಔಟ್‌, ಪುತ್ರ ಎಂಟ್ರಿ 

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

121

Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ

CM-Siddu-High-Court

MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.