ಸಂಶೋಧನೆಗಳು ಭವಿಷ್ಯದ ಚಿಂತನೆಗೆ ದಾರಿದೀಪವಾಗಲಿ
Team Udayavani, Jun 16, 2019, 3:00 AM IST
ಮೈಸೂರು: ಸಂಶೋಧನೆಗಳು ಪೂರ್ವಗ್ರಹ ಪೀಡತವಾಗಿರದೇ ಭವಿಷ್ಯದ ಚಿಂತನೆಗಳಿಗೆ ದಾರಿದೀಪವಾಗಬೇಕು ಎಂದು ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಎಂ.ಎಸ್.ಶೇಖರ್ ಹೇಳಿದರು.
ನಗರದ ಮಾನಸಗಂಗೋತ್ರಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಭಾಷಾ ಪ್ರಯೋಗಾಲಯದಲ್ಲಿ ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಸಂಶೋಧನ ವಿದ್ಯಾರ್ಥಿ ವೇದಿಕೆ ಆಯೋಜಿಸಿದ್ದ ಪ್ರಬಂಧ ಮಂಡನೆ-ಸಂವಾದದಲ್ಲಿ ಮಾತನಾಡಿದರು.
ಜ್ಞಾನದ ವಿಸ್ತಾರ ಹಾಗೂ ಶೋಧಕ್ಕೆ ಭಿನ್ನಾಭಿಪ್ರಾಯಗಳು ಅಗತ್ಯವಾಗಿವೆ. ಆರೋಗ್ಯಕರ ಸಮಾಜ ಕಟ್ಟಲು ಇದು ಸಹಕಾರಿ ಎಂದರು. ಸಾಂಸ್ಕೃತಿಕ ಮೌಲಿಕ ಕಥನಗಳಲ್ಲೂ ಭಿನ್ನಾಭಿಪ್ರಾಯಗಳಿವೆ. ಸಂಶೋಧನೆಗಳು ಜೀವ ಸಂಕುಲಕ್ಕೆ ಪೂರಕವಾಗಿರಬೇಕು.
ಹೊಸತನ ಮತ್ತು ಸೃಜನಶೀಲತೆ ಕಟ್ಟಿಕೊಡುವ ಶೋಧಗಳು ಅನಿವಾರ್ಯ. ಭವಿಷ್ಯದ ಚಿಂತನೆಗಳಿಗೆ ದಾರಿದೀಪವಾಗಬೇಕು ಎಂದು ಹೇಳಿದರು. ಇತ್ತೀಚಿನ ಕಾವ್ಯದ ಒಲವುಗಳು ಕುರಿತು ಪ್ರಬಂಧ ಮಂಡನೆ ಮಾಡಿದ ಎಸ್.ಕೆ.ಮಂಜುನಾಥ್, ಇಂದಿನ ಕವಿತೆಗಳು ಮತ್ತೆ ಮತ್ತೆ ಗಾಯಗೊಳ್ಳುತ್ತಿವೆ ಅವುಗಳಿಗೆ ಮುಲಾಮು ಹಚ್ಚುವ ಕೆಲಸಗಳಾಗಬೇಕು.
ಇಂದಿನ ಕವಿಗಳು ಪ್ರಶಸ್ತಿ ಅವಸರಕ್ಕೆ ಬಿದ್ದು, ಬರವಣಿಗೆ ಸವಾಲಾಗಿ ನಿಂತಿವೆ. ಕಾವ್ಯದ ಹೊಸ ಸಾಧ್ಯತೆ ಕಟ್ಟುವ ಕೆಲಸವಾಗಬೇಕೆಂದರು. ಸಂಶೋಧಕರಾದ ಮೀನಾಕ್ಷಿ ಸ್ತ್ರೀಶಿಕ್ಷಣ ಕುರಿತು ಪ್ರಬಂಧ ಮಂಡಿಸಿದರು.
ಕಾರ್ಯಕ್ರಮದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎನ್.ಎಂ.ತಳವಾರ, ಡಾ.ಬಿ.ಕೆ.ರವೀಂದ್ರನಾಥ್, ಡಾ.ವಿಜಯಕುಮಾರಿ, ಸಂಶೋಧಕರಾದ ಜೆ.ರಾಜೇಂದ್ರ, ಬ್ಯಾಡಮೂಡ್ಲು ಚಿನ್ನಸ್ವಾಮಿ, ಮಹದೇವಮೂರ್ತಿ, ಎಂ.ಶ್ವೇತಾ, ಅಶೋಕ್‌ಕುಮಾರ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಗಂಭೀರಕಾಯಿಲೆಗಳಿಂದ ಮಕ್ಕಳಿಗೆ ರಕ್ಷಣೆ-ಬಾಲ್ಯಕಾಲದಲ್ಲಿ ಲಸಿಕೆಹಾಕಿಸಿಕೊಳ್ಳುವುದು ಯಾಕೆಮುಖ್ಯ
INDvAUS: ಅಬ್ಬರಿಸಿದ ಬುಮ್ರಾ-ಸಿರಾಜ್: ಕೊನೆಯಲ್ಲಿ ಕಾಡಿದ ಲಿಯಾನ್- ಬೊಲ್ಯಾಂಡ್
Diabetes ನಿರ್ವಹಣೆ; ನಿಮ್ಮ ಊಟದ ಬಟ್ಟಲು ಸಮತೋಲಿತವಾಗಿರಲಿ
Bengaluru ರಾತ್ರಿ 1 ಗಂಟೆವರೆಗೆ ಮಾತ್ರ ಹೊಸ ವರ್ಷಾಚರಣೆಗೆ ಅವಕಾಶ: ಪೊಲೀಸ್ ಆಯುಕ್ತ
Heart attack; ಹೃದಯಾಘಾತ: ಖಂಡಿತವಾಗಿಯೂ ನಿರ್ಲಕ್ಷ್ಯ ಬೇಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.