ವಚನಸ್ಮತಿ ಮನುಷ್ಯನ ಭಾಗವಾಗಲಿ
Team Udayavani, Aug 6, 2019, 3:00 AM IST
ಮೈಸೂರು: ಮನುಸ್ಮತಿಗಿಂತ ವಚನಸ್ಮತಿ ಮನುಷ್ಯನ ಭಾಗವಾಗುವುದರ ಜೊತೆಗೆ ಭಾರತದ ಸಂವಿಧಾನ ಆಗಬೇಕು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಹೇಳಿದರು. ಸಹಮತ ವೇದಿಕೆ ಮೈಸೂರು ಮತ್ತೆ ಕಲ್ಯಾಣ ಕಾರ್ಯಕ್ರಮದ ಭಾಗವಾಗಿ ಸೋಮವಾರ ಕಲಾಮಂದಿರದ ಸುಚಿತ್ರಾ ಆರ್ಟ್ ಗ್ಯಾಲರಿಯಲ್ಲಿ ಏರ್ಪಡಿಸಿದ್ದ ವಚನ ಚಳವಳಿಯ ಸಂದರ್ಭ ಚಿತ್ರಗಳ ಪ್ರದರ್ಶನಕ್ಕೆ ಚಾಲನೆ ನೀಡಿ, ಕಿರುರಂಗಮಂದಿರದಲ್ಲಿ ನಡೆದ ವಚನ ಗಾಯನ, ವಚನ ವಾಚನದಲ್ಲಿ ಮಾತನಾಡಿದರು.
12ನೇ ಶತಮಾನದ ಶಿವಶರಣರ ವಚನಗಳು ಸರಳ ಹಾಗೂ ನೇರವಾಗಿ ಎದೆಗೆ ನಾಟುವಂತಹವು. ಇಂತಹ ವಚನಗಳನ್ನು ನಾವು ಶರಣರ ಮುಕ್ತ ಸಂವಿಧಾನದ ಬದುಕಿನ ನೀತಿ ಅಂಥ ಎಂದು ಕರೆಯುತ್ತೇವೆ. ಇಲ್ಲಿ ತತ್ವ ಪ್ರತಿಪಾದನೆ, ವಿಮರ್ಶೆ, ಟೀಕೆ ಟಿಪ್ಪಣಿಗಳಿವೆ. ಇಂತಹ ಮುಕ್ತ ಸಂವಿಧಾನ ಎಲ್ಲಿಯೂ ಸಿಗುವುದಿಲ್ಲ. ಆದ್ದರಿಂದ ವಚನ ಸಂವಿಧಾನವೇ ಭಾರತದ ಸಂವಿಧಾನ ಆಗಬೇಕು ಎಂದು ಬಯಸುವೆ. ಹೀಗಾದಾಗ ಮಾತ್ರ 12 ಶತಮಾನದಲ್ಲಿ ಸಾಕಾರಗೊಳ್ಳದ ಆಶಯ 21ನೇ ಶತಮಾನದಲ್ಲಿ ಸಾಕಾರಗೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಮತ್ತೆ ಕಲ್ಯಾಣ ಅಂದರೆ ಮೌಡ್ಯರಹಿತ ಬದುಕು, ಅಂತರ್ಜಾತಿ ವಿವಾಹದ ಬದುಕು, ಸ್ವ ವ್ಯಕ್ತಿತ್ವದ ಪ್ರತಿಷ್ಠಾನದ ಬದುಕು. ಹೀಗೆ ಪಟ್ಟಿ ಬೆಳೆಯುತ್ತ ಹೋಗುತ್ತದೆ. 12ನೇ ಶತಮಾನದಲ್ಲಿ ವಿಭೂತಿಗೆ ಬೆಂಕಿಯ ಗುಣ ಇತ್ತು. ರುದ್ರಾಕ್ಷಿ ಬರೀ ರುದ್ರಾಕ್ಷಿಯಾಗಿರಲಿಲ್ಲ. ಅದು ಸಮಾಜದ ಅಕ್ಷಿಯಾಗಿತ್ತು. ಶರಣರ ಬದುಕು ಒಂದು ನೀತಿಯಾಗಿತ್ತು ಎಂದು ಹೇಳಿದರು.
ವಚನ ಚಳವಳಿಯ ಚಿತ್ರ ಪ್ರದರ್ಶನದಲ್ಲಿ ದಂಡ ಹಿಡಿದು ಹಿಂದೆ ಮುಳ್ಳನ್ನು ಕಟ್ಟಿಕೊಂಡಿರುವ ನಾಗಿ ದೇವನ ಚಿತ್ರ ನೋಡಿದೆ. ಇದು ಪೂರ್ವದ ಬದುಕಿನ ನಿರ್ದಶನ. ಈ ಬದುಕು ಇಲ್ಲವಾಗಿಸಲು ಬಸವಣ್ಣ ಶ್ರಮಿಸಿದರು. ಪ್ರಸ್ತುತ ದಂಡ ಹೋಗಿ ಸೈಕಲ್ ಗಂಟೆ ಬಂದಿದೆ. ಅಂದಿಗೂ ಮತ್ತು ಇಂದಿಗೂ ಏನು ವ್ಯತ್ಯಾಸವಿಲ್ಲ. ಈ ವ್ಯತ್ಯಾಸವನ್ನು ನಿರ್ಮೂಲನೆಗೊಳಿಸಲು ಮತ್ತೆ ಕಲ್ಯಾಣ ಶ್ರಮಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು.
ವಿದ್ವಾಂಸ ಒ.ಎಲ್.ನಾಗಭೂಷಣಸ್ವಾಮಿ ಮಾತನಾಡಿ, ಮತ್ತೆ ಕಲ್ಯಾಣ ಕನ್ನಡ ನೆಲದ ಹುಟ್ಟಿನ ಚಿಂತನೆಗಳ ಮೂಲಕ ಹೊಸ ಸಮಾಜ ಸೃಷ್ಟಿಸುವ ಆಶಯದ ಕಾರ್ಯ. ಪ್ರಾಮಾಣಿಕವಾಗಿ ಬದುಕಿ ಮಾತನಾಡಿದ ವಚನಗಳನ್ನು ಯುವಕರಿಗೆ ಮುಟ್ಟಿಸುವ ಸದಾಶಯದಿಂದ ರೂಪುಗೊಂಡಿರುವುದಾಗಿದೆ ಎಂದು ಹೇಳಿದರು.
ಜಗದೀಶ್ ಮನೋವಾರ್ತೆ, ಡಾ.ವಿಜಯಕುಮಾರಿ ಕರಿಕಲ್, ಡಾ.ಎನ್.ಕೆ.ಲೋಲಾಕ್ಷಿ, ಪ್ರೊ.ಸಿ.ನಾಗಣ್ಣ, ಪ್ರೊ.ಚ.ಸರ್ವಮಂಗಳ, ಪ್ರೊ.ಒ.ಎಲ್.ನಾಗಭೂಷಣಸ್ವಾಮಿ, ಡಾ.ಸಂತೋಷಕುಮಾರ್ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಜೇಡರ ದಾಸಿಮಯ್ಯ ಅವರ ವಚನಗಳನ್ನು ವಾಚಿಸಿದರು. ಎಚ್.ಜನಾರ್ದನ್ (ಜನ್ನಿ), ನಿತಿನ್ ರಾಜರಾಂ ಶಾಸ್ತ್ರಿ, ದೇವಾನಂದ ವರಪ್ರಸಾದ್, ಪ್ರಭುರಾವ್ ಸೊನ್ನ, ಶರಧಿ ಪಾಟೀಲ್ ವಚನ ಗಾಯನ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ವಿಚಾರವಾದಿ ಹಿರಿಯ ಕಲಾವಿದ ಎಲ್. ಶಿವಲಿಂಗಪ್ಪ, ಕೆ.ಎಸ್. ಭಗವಾನ್, ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ. ಶಿವರಾಂ, ಕಸಾಪ ಮಾಜಿ ಅಧ್ಯಕ್ಷ ಚಂದ್ರಶೇಖರ್ ಇತರರಿದ್ದರು.
ಜಿಲ್ಲೆಯ 72 ಕಾಲೇಜಿಗಳಿಗೆ ಭೇಟಿ: ರಂಗಾಯಣದ ಮಾಜಿ ನಿರ್ದೇಶಕ ಎಚ್.ಜನಾರ್ದನ್ (ಜನ್ನಿ) ಮಾತನಾಡಿ, ವ್ಯವಸ್ಥೆಯ ದುರುದ್ದೇಶವೇ ವ್ಯವಧಾನ ಕಳೆಯೋದು. ವ್ಯವಧಾನ ಮರುಸೃಷ್ಟಿಸುವುದೇ ಮತ್ತೆ ಕಲ್ಯಾಣದ ಆಶಯ. ವಚನ ಓದು ನಮ್ಮ ಮನವರಿಕೆ ಮಾಡುತ್ತದೆ. ವಾಸ್ತವತೆಯ ಅರಿವೇ ವಚನಗಳಾಗಿವೆ ಎಂದರು. 12ನೇ ಶತಮಾನದ ಕಲ್ಯಾಣದ ಆಶಯವನ್ನು ಮರು ನೆನಪಿಗೆ ತರಲು ಆರಂಭವಾಗಿದ್ದು ಮತ್ತೆ ಕಲ್ಯಾಣ. ಜಿಲ್ಲೆಯ 8 ತಾಲೂಕುಗಳ 72 ಕಾಲೇಜಿಗಳಿಗೆ ಭೇಟಿ ನೀಡಿ ವಚನ ಚಳವಳಿಯ ದರ್ಶನ ಮಾಡಿಸಲಾಗಿದೆ. ವಚನ ಗಾಯನ, ಚಿತ್ರ ರಚನೆ ನಡೆದಿದೆ ಎಂದು ಹೇಳಿದರು.
ವಚನಗಳಿಗೆ ಚಿತ್ರ ರೂಪ: ಮೈಸೂರಿನ ಹಿರಿಯ ಕಲಾವಿದ ಎಲ್. ಶಿವಲಿಂಗಪ್ಪ ಅವರು ಮತ್ತೆ ಕಲ್ಯಾಣ ಕಾರ್ಯಕ್ರಮ ಹಿನ್ನೆಲೆ ವಚನ ಸಾಹಿತ್ಯವನ್ನು ಚಿತ್ರ ರೂಪಕ್ಕೆ ಇಳಿಸುವ ಮೂಲಕ ಎಲ್ಲರ ಗಮನ ಸೆಳೆದರು. ವಚನ ಕ್ರಾಂತಿ, ಕಾಯಕ ತತ್ವ, ದಲಿತೋದ್ಧಾರ, ಅನ್ನ-ಅಕ್ಷರ ದಾಸೋಹ, ಸಮಾನತೆ, ಸ್ವಾತಂತ್ರ್ಯ ಮುಂತಾದ ವಿಚಾರಗಳನ್ನೊಳಗೊಂಡ ಹಲವಾರು ಚಿತ್ರಗಳನ್ನು ರಚಿಸಿ ಪ್ರದರ್ಶನಕ್ಕೆ ಇರಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.