ಭೂಸ್ವಾಧೀನ ವಿರುದ್ಧ ಹೋರಾಡೋಣ
Team Udayavani, Feb 6, 2023, 2:34 PM IST
ಮೈಸೂರು: ರೈತಾಪಿ ಕುಟುಂಬದಿಂದ ಬಂದಿರುವ ಜನಪ್ರತಿನಿಧಿಗಳೇ ಕೃಷಿಕರ ಕುಟುಂಬಗಳನ್ನು ಬೀದಿಪಾಲು ಮಾಡುತ್ತಿದ್ದಾರೆ. ಭೂಸ್ವಾಧೀನ ವಿರುದ್ಧ ದೊಡ್ಡಮಟ್ಟದ ಹೋರಾಟ ರೂಪುಗೊಳ್ಳಬೇಕಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.
ನಗರದ ಧ್ವನ್ಯಾಲೋಕದಲ್ಲಿ ಭಾನುವಾರ ಆಯೋಜಿಸಿದ್ದ ಕೃಷಿಯ ಸುತ್ತ ಒಂದು ಚರ್ಚೆ ಕಾರ್ಯಕ್ರಮದಲ್ಲಿ ನಮ್ಮೂರ ಭೂಮಿ ನಮಗಿರಲಿ; ಅನ್ಯರಿಗಲ್ಲ ಬಳಗದಿಂದ ಪ್ರಕಟಿಸಿರುವ ಭೂಸ್ವಾಧೀನ ಒಳಸುಳಿಗಳು ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು,ರೈತರ ಕೃಷಿ ಭೂಮಿ ಸ್ವಾಧೀನದಲ್ಲಿ ರಾಜಕಾರಣಿಗಳು, ಪುಡಿರಾಜಕಾರಣಿಗಳೇ ರಿಯಲ್ ಎಸ್ಟೇಟ್ ಏಜೆಂಟರು. ಇವರೆಲ್ಲ ಕೃಷಿಕರ ಬದುಕು ಕಿತ್ತುಕೊಳ್ಳುವ ದಲ್ಲಾಳಿಗಳು ಎಂದರು.
ಉದ್ದಿಮೆಗೆ 5 ಕೋಟಿ ರೂ. ಮಾರಾಟ: ರೈತರಿಂದ ಸರ್ಕಾರ ಸ್ವಾಧೀನ ಪಡೆಸಿಕೊಂಡ ಭೂಮಿಯನ್ನು ಶೇ.70ರಷ್ಟು ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತದೆ. 5 ವರ್ಷದಲ್ಲಿ ಉದ್ದೇಶಿತ ಕಾರ್ಯ ಜಾರಿಯಾಗದಿದ್ದರೆ ಭೂಮಿಯನ್ನು ರೈತರಿಗೆ ಮರಳಿಸಬೇಕು ಎಂಬ ಕಾಯ್ದೆ ಆಶಯವನ್ನೇ ಕೈಬಿಡಲಾಗಿದೆ. ಇದರಿಂದಾಗಿ ರೈತರಿಂದ ಪ್ರತಿ ಎಕರೆಗೆ 40 ಲಕ್ಷ ರೂಪಾಯಿಯಂತೆ ಖರೀದಿಸಿ, 5 ವರ್ಷದ ಬಳಿಕ ಅದೇಭೂಮಿಯನ್ನು ಇನ್ನೊಬ್ಬ ಉದ್ದಿಮೆಗೆ 5 ಕೋಟಿರೂ. ಮಾರಲಾಗುತ್ತಿದೆ. ಕೈಗಾರಿಕೋದ್ಯಮಿಗಳು ದುಡ್ಡು ಮಾಡಿಕೊಳ್ಳಲು ಸರ್ಕಾರವೇ ಅವಕಾಶ ನೀಡುತ್ತಿದೆ ಎಂದು ಆರೋಪಿಸಿದರು.
ಕೆಟ್ಟ ವ್ಯವಸ್ಥೆ ನಿರ್ಮಾಣ: ಕೆಐಎಡಿಬಿ ಬ್ರೋಕರ್ ಸಂಸ್ಥೆ: ವರುಣ ಬಳಿ ಕಂಪನಿಯೊಂದು ರೈತರಿಂದ ಪ್ರತಿ ಎಕರೆಗೆ 2 ಲಕ್ಷ ರೂ.ನಂತೆ ಭೂಮಿ ಖರೀದಿ ಮಾಡಿತ್ತು. ಅದೇ ಭೂಮಿ ಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ 47 ಲಕ್ಷ ರೂ. ಮಾರ ಲಾಗಿದೆ. ಇದೀಗಕೆಐಎಡಿಬಿ ರಿಯಲ್ ಎಸ್ಟೇಟ್‌ನ ಬ್ರೋಕರ್ ಸಂಸ್ಥೆಯಾಗಿದೆ. ಕೃಷಿ ಭೂಮಿ ಸ್ವಾಧೀನದಲ್ಲಿಶಾಸಕರು, ಸಂಸದರು ಸಹ ಕಮಿ ಷನ್ ಪಡೆಯುತ್ತಾರೆ. ಬ್ರಿಟಿಷರ ಕಾಲಕ್ಕಿಂತ ಕೆಟ್ಟ ವ್ಯವಸ್ಥೆ ನಿರ್ಮಾಣವಾಗಿದೆ ಎಂದು ಕಿಡಿಕಾರಿದರು.
ಚಿಂತಕ ಕೆ.ಪಿ.ಸುರೇಶ್ ಮಾತನಾಡಿ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಹಲ್ಲು ಇಲ್ಲದ ಹಾವಿನಂತಾಗಿದೆ. ಭೂಸ್ವಾಧೀನದಲ್ಲಿ ಪಾಲನೆಯಾಗಬೇಕಿದ್ದ ಸಾಮಾಜಿಕ ಉದ್ದೇಶವನ್ನೇಹಾಳುಗೇಡವಲಾಗಿದೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಯೋಜನೆಗಳು ಸರ್ಕಾರದಿಂದ ಖಾಸಗಿಯವರಿಗೆ ಮಾಡುವ ಅನುಕೂಲಕರ ಯೋಜನೆಯಾಗಿದೆ. ಕಾನೂನಗಳನ್ನೇ ಅಸಹಾಯಕತೆಯ ಸ್ಥಿತಿ ತಂದು ನಿಲ್ಲಿಸಿ, ರೈತರಿಗೆನೆರವು ಸಿಗದಂತೆ ಮಾಡಲಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ್ ಕಮ್ಮರಡಿ,ಕೃತಿಯ ಲೇಖಕಿ ಗಾಯಿತ್ರಿ, ಚಿಂತಕರಾದಯತಿರಾಜ್, ಸಂತೋಷ್ ಕೌಜಲಗಿ, ಜಲ ತಜ್ಞರವಿಕುಮಾರ್, ರೈತ ಮುಖಂಡ ಹೊಸಕೋಟೆಬಸವರಾಜು, ಕಾರ್ಯಕ್ರಮದ ಸಂಯೋಜಕ ಟಿ.ಜಿ.ಎಸ್.ಅವಿನಾಶ್ ಇನ್ನಿತರರು ಇದ್ದರು.
ಹೆದ್ದಾರಿಗಳು ಅಸಮಾನತೆ ಸೃಷ್ಟಿಸುವ ರಹದಾರಿ :
ಕೃಷಿ ಭೂಮಿ ಸ್ವಾಧೀನ ಪಡೆಸಿಕೊಂಡು ನಿರ್ಮಾಣವಾಗುವ ರಾಷ್ಟ್ರೀಯ ಹೆದ್ದಾರಿಗಳುಅಸಮಾನತೆ ಸೃಷ್ಟಿಸುವ ರಹದಾರಿ ಆಗಿದೆ. ಸಾಮಾಜಿಕ ತಾರತಮ್ಯವನ್ನು ಇನ್ನಷ್ಟು ಹೆಚ್ಚಿಸುತ್ತಿದೆ. ಬಂಡವಾಳದಾರರಿಗೆ ಕೈಗಾರಿಕೆ ಸ್ಥಾಪಿಸಲು ಭೂಮಿ, ನೀರು, ತೆರಿಗೆಯಲ್ಲಿ ರಿಯಾಯಿತಿಯಷ್ಟೇ ನೀಡುತ್ತಿಲ್ಲ. ಅವರಿಗೆ ಮೂಲ ಸೌಕರ್ಯ ಕಲ್ಪಿಸಲು ಸಹ ಭೂಮಿಯನ್ನು ಕಿತ್ತುಕೊಳ್ಳಲಾಗುತ್ತಿದೆ.
ಅವರಿಗಾಗಿ ರಸ್ತೆ, ವಿಮಾನನಿಲ್ದಾಣ ನಿರ್ಮಿಸುವುದೇ ಅಭಿವೃದ್ಧಿಯಾಗಿದೆ ಎಂದು ಬಡಗಲಪುರ ನಾಗೇಂದ್ರ ಹೇಳಿ ದರು. ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತಂದಿರುವುದು ಅಪಾಯಕಾರಿಯಾಗಿದೆ. ಆಹಾರ ಭದ್ರತೆ ಧಕ್ಕೆಯಾಗಲಿದೆ. ಇದೊಂದು ಭೂ ಕಬಳಿಕೆ ಕಾಯ್ದೆಯಾಗಿ ಪರಿವರ್ತನೆಯಾಗಿದೆ. ಸ್ವಾಧೀನದಿಂದ ಉಂಟಾಗುವ ಪರಿಸರ, ಸಾಮಾಜಿಕ ಪರಿಣಾಮಗಳು, ಭೂಮಿಕಳೆದುಕೊಂಡವರಿಗೆ ಪುನರ್ ವಸತಿ ಅಂಶಗಳೆಲ್ಲ ಕೈಬಿಡಲಾಗಿದೆ. ನರಭಕ್ಷಕ ವ್ಯವಸ್ಥೆ ರೂಪಗೊಳ್ಳುತ್ತಿದೆ. ಇದಕ್ಕೆ ಎಲ್ಲ ಪಕ್ಷದವರು ಬೆಂಬಲವಾಗಿ ನಿಂತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.