ಸಾಲು ಸಾಲು ರಜೆ; ಶ್ರೀಕಂಠನ ಸನ್ನಿಧಿಯಲ್ಲಿ ಭಕ್ತಸಾಗರ
Team Udayavani, Apr 20, 2019, 3:00 AM IST
ನಂಜನಗೂಡು: ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಶ್ರೀಕಂಠೇಶ್ವರನ ಸನ್ನಿಧಿಯಲ್ಲಿ ಭಕ್ತಸಾಗರವೇ ಹರಿದು ಬಂದಿತ್ತು. ಶುಕ್ರವಾರ ಹುಣ್ಣಿಮೆ ದಿನವಾಗಿದ್ದು, ಸಹಸ್ರಾರು ಮಂದಿ ದೇವರ ದರ್ಶನ ಪಡೆದು ಧನ್ಯತೆ ಮೆರೆದರು.
ಬುಧವಾರ ಮಹಾವೀರ ಜಯಂತಿ, ಗುರುವಾರ ಮತದಾನ ಪ್ರಯುಕ್ತ ಸಾರ್ವತ್ರಿಕ ರಜೆ, ಶುಕ್ರವಾರ ಗುಡ್‌ಫ್ರೈಡೆ ಹಿನ್ನೆಲೆಯಲ್ಲಿ ಸಾಲು ಸಾಲು ರಜೆ ದೊರೆತ್ತಿತ್ತು. ಈ ಪ್ರಯುಕ್ತ ಪ್ರವಾಸಿ ತಾಣಗಳು, ದೇವಾಲಯಗಳಲ್ಲಿ ಪ್ರವಾಸಿಗರು ಸಂಖ್ಯೆ ಹೆಚ್ಚಾಗಿತ್ತು.
ಶುಕ್ರವಾರ ಹುಣ್ಣಿಮೆ ಪ್ರಯುಕ್ತ ಶ್ರೀ ಕಂಠೇಶ್ವರನ ಸನ್ನಿಧಿಯಲ್ಲಿ ಚಿಕ್ಕ ಜಾತ್ರೆಗಿಂತಲೂ ಹೆಚ್ಚು ಭಕ್ತರು ಸೇರಿದ್ದರು. ಗುರುವಾರ ಸಂಜೆಯಿಂದಲೇ ಇಲ್ಲಿನ ದೇವಾಲಯದಲ್ಲಿ ಭಕ್ತರ ಸಂಖ್ಯೆ ಹೆಚ್ಚತೊಡಗಿದ್ದು, ಶುಕ್ರವಾರ ಬೆಳಗಿನ ಜಾವದಿಂದಲೇ ಭಕ್ತರು ಕಪಿಲೆ ನದಿಯಲ್ಲಿ ಮಿಂದೆದ್ದು ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದರು. ಸುಮಾರು 50 ಸಾವಿರ ಭಕ್ತರು ದೇಗುಲಕ್ಕೆ ಆಗಮಿಸಿದ್ದರು.
ದೇವಾಲಯದಲ್ಲಿ ವಿಶೇಷ ದರ್ಶನಕ್ಕೆ 100 ರೂ.ನಿಗದಿಪಡಿಸಲಾಗಿತ್ತು. 100 ರೂ. ಹಾಗೂ 50 ರೂ. ವಿಶೇಷ ದರದಲ್ಲಿ ಸಹಸ್ರಾರು ಮಂದಿ ದರ್ಶನ ಪಡೆದರು. ಈ ಮೊತ್ತವೇ ಶುಕ್ರವಾರ ಸಂಜೆ ವೇಳೆಗೆ ಸುಮಾರು 10 ಲಕ್ಷ ರೂ. ದಾಟಿತ್ತು. ಸಂಜೆಯಾದರೂ ಸರತಿಯ ಸಾಲು ಮುಂದುವರಿದಿತ್ತು. ಭಕ್ತರು ಮುಡಿ ಸೇವೆ ಸೇರಿದಂತೆ ವಿವಿಧ ಹರಕೆ ತೀರಿಸಿ ಧನ್ಯತೆ ಮೆರೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manvi; ರಾಜಲಬಂಡ ಅಣೆಕಟ್ಟೆಯಲ್ಲಿ ಕಂಡು ಬಂದ ಭಾರಿ ಗಾತ್ರದ ಮೀನುಗಳು
Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ
Arvind Kejriwal ವಾಗ್ದಾಳಿ: ತನಿಖೆಗೆ ಆದೇಶದ ಬಳಿಕ ಬಿಜೆಪಿ-ಕಾಂಗ್ರೆಸ್ ವಿರುದ್ಧ ಆಕ್ರೋಶ
‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ
Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.