ಸಮ್ಮೇಳನದಲ್ಲಿ ಬಾಯಿಚಪ್ಪರಿಸಿದ ಸಾಹಿತ್ಯಾಸಕ್ತರು
Team Udayavani, Nov 25, 2017, 12:19 PM IST
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುತ್ತಿರುವ ಅಕ್ಷರಜಾತ್ರೆ ಕನ್ನಡದ ಕಂಪು ಪಸರಿಸುವ ಜತೆಗೆ, 3 ದಿನಗಳ ಕಾಲ ರುಚಿಕರ ಆಹಾರ ಪದಾರ್ಥಗಳು ರಾಜ್ಯದ ವಿವಿಧೆಡೆಗಳಿಂದ ಬಂದಿರುವ ಪ್ರತಿನಿಧಿಗಳು, ಕನ್ನಡ ಅಭಿಮಾನಿಗಳ ಬಾಯಿ ಚಪ್ಪರಿಸುವಂತೆ ಮಾಡಿದೆ.
ನಗರದಲ್ಲಿ ಶುಕ್ರವಾರದಿಂದ ಆರಂಭಗೊಂಡಿರುವ 83ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಮೂರು ದಿನಗಳು ಅಂದಾಜು 6 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ. ಹೀಗಾಗಿ ಸಮ್ಮೇಳನಕ್ಕೆಂದು ಆಗಮಿಸುವ ಗಣ್ಯರು, ಅತಿಥಿಗಳು ಸೇರಿದಂತೆ ಪ್ರತಿಯೊಬ್ಬರಿಗೂ ರುಚಿ-ಶುಚಿಯಾದ ಊಟ, ತಿಂಡಿ ವ್ಯವಸ್ಥೆ ಮಾಡಲು ಸಮ್ಮೇಳನದ ಆಹಾರ ಸಮಿತಿ ಈಗಾಗಲೇ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ.
ಎಲ್ಲರಿಗೂ ಒಂದೇ ಮೆನು: ಬಹುತೇಕ ದೊಡ್ಡ ಸಮಾರಂಭಗಳಲ್ಲಿ ಗಣ್ಯರು, ಅತಿಥಿಗಳು, ಸಾರ್ವಜನಿಕರಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತವೆ. ಆದರೆ, ಇದಕ್ಕೆ ವಿರುದ್ಧವೆಂಬಂತೆ ಈ ಬಾರಿಯ ಅಕ್ಷರ ಜಾತ್ರೆಯಲ್ಲಿ ವಿವಿಧತೆಯಲ್ಲಿ ಏಕತೆ ಎಂಬಂತೆ ಎಲ್ಲರಿಗೂ ಒಂದೇ ಬಗೆಯ ಊಟ-ತಿಂಡಿ ವ್ಯವಸ್ಥೆ ಮಾಡಿರುವುದು ವಿಶೇಷ.
ಆದರೆ, ಊಟ-ತಿಂಡಿ ಹಂಚಿಕೆಯಲ್ಲಿ ಯಾವುದೇ ಗೊಂದಲಗಳು, ಪ್ರತಿಭಟನೆಗಳು ಆಗದಂತೆ ಮುನ್ನೆಚ್ಚರಿಕೆಯಾಗಿ 4 ಕಡೆ ವ್ಯವಸ್ಥೆ ಮಾಡಲಾಗಿದೆ. ಸಾಹಿತಿಗಳು, ಆಹ್ವಾನಿತರು, ಗಣ್ಯರು, ಮಾಧ್ಯಮದವರು, ನೋಂದಾಯಿತರು ಹಾಗೂ ಸಾರ್ವಜನಿಕರಿಗೆ ಬೇರೆ ಬೇರೆ ಕಡೆ ಆಹಾರ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಇದರ ನಿರ್ವಹಣೆಗಾಗಿ ಪ್ರತಿ ವಿಭಾಗಗಳಲ್ಲೂ ಅನೇಕ ಸ್ವಯಂ ಸೇವಕರನ್ನು ನಿಯೋಜಿಸಲಾಗಿದೆ.
ವ್ಯವಸ್ಥೆ ಉತ್ತಮವಾಗಿತ್ತು: ಸಮ್ಮೇಳನದ ಮೊದಲ ದಿನವಾದ ಶುಕ್ರವಾರದ ಊಟ-ತಿಂಡಿ ಹಂಚಿಕೆಯಲ್ಲಿ ಯಾವುದೇ ಗೊಂದಲಗಳು ಕಂಡುಬರಲಿಲ್ಲ. ಪ್ರಥಮ ದಿನದಂದು 8 ಸಾವಿರ ಮಂದಿ ಬೆಳಗಿನ ಉಪಹಾರ ಸೇವಿಸಿದರೆ. ಮಧ್ಯಾಹ್ನದ ಊಟದಲ್ಲಿ 10 ಸಾವಿರ ಹಾಗೂ ರಾತ್ರಿ ಊಟಕ್ಕೆ ಅಂದಾಜು 9 ಸಾವಿರ ಮಂದಿ ಭಾಗವಹಿಸಿದ್ದರು.
ಈ ಬಾರಿಯ ಆಹಾರ ನಿರ್ವಹಣೆಯನ್ನು ಬೆಂಗಳೂರಿನ ಉದಯ್ ಕೆಟರರ್ ವಹಿಸಿಕೊಂಡಿದ್ದು, ಅಡುಗೆ ವಿಭಾಗದಲ್ಲಿ 60 ಮಂದಿ, ಸರ್ವಿಸ್ ಮಾಡಲು 150 ಹಾಗೂ ಸ್ವತ್ಛತಾ ಕೆಲಸ ನಿರ್ವಹಿಸಲು 50 ಮಂದಿಯನ್ನು ನಿಯೋಜಿಸಲಾಗಿದೆ. ಹೀಗಾಗಿ ದಿನದ 3 ಹೊತ್ತು ಊಟ-ತಿಂಡಿ ಸೇವಿಸಿದ ಸಾರ್ವಜನಿಕರು, ಹೊರ ಜಿಲ್ಲೆಗಳ ಪ್ರತಿನಿಧಿಗಳು ಆಹಾರ ವ್ಯವಸ್ಥೆ ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪೊಂಗಲ್ ಸೂಪರ್, ವೆಜ್ ಬಿರಿಯಾನಿ, ಅಕ್ಕಿ ಪಾಯಸ ಬೊಂಬಾಟ್: ಸಮ್ಮೇಳನದ ಮೊದಲ ದಿನದಂದು ಬೆಳಗಿನ ಉಪಹಾರದಲ್ಲಿ ಸಿಹಿ ಪೊಂಗಲ್, ಖಾರ ಪೊಂಗಲ್, ಟೀ-ಕಾಫಿ ನೀಡಲಾಯಿತು. ಮಧ್ಯಾಹ್ನದ ಊಟಕ್ಕೆ ಪೂರಿ ಸಾಗು, ಕಜಾjಯ, ಮೆಂತ್ಯ ಸೊಪ್ಪಿನ ಬಾತ್, ಅನ್ನ ಸಂಬಾರ್, ಮೊಸರನ್ನ ಹಾಗೂ ಉಪ್ಪಿನಕಾಯಿ ನೀಡಿದರೆ, ರಾತ್ರಿ ಊಟಕ್ಕೆ ವೆಜ್ ಬಿರಿಯಾನಿ, ಅಕ್ಕಿ ಪಾಯಸ, ಅನ್ನ, ತಿಳಿಸಾರು, ಮೊಸರನ್ನ ಹಾಗೂ ಉಪ್ಪಿನಕಾಯಿ ನೀಡಲಾಯಿತು.
ಇಂದಿನ ಹೊಟ್ಟೆಪಾಡು: 2ನೇ ದಿನವಾದ ನ.25ರಂದು ಬೆಳಗ್ಗಿನ ಉಪಹಾರದಲ್ಲಿ ಉಪ್ಪಿಟ್ಟು, ಕೇಸರಿಬಾತ್, ಮಸಾಲ ವಡೆ, ಟೀ-ಕಾಫಿ. ಮಧ್ಯಾಹ್ನದ ಊಟಕ್ಕೆ ಅಕ್ಕಿರೊಟ್ಟಿ, ಕಳ್ಳೆಹುಳಿ, ಹೋಳಿಗೆ, ತುಪ್ಪ, ಮೇಲುಕೋಟೆ ಪುಳಿಯೊಗರೆ, ಅನ್ನಸಾಂಬರ್, ಮೊಸರನ್ನ, ಹಪ್ಪಳ, ಉಪ್ಪಿನಕಾಯಿ ಹಾಗೂ ರಾತ್ರಿ ಊಟದಲ್ಲಿ ಬಾದ್ ಶಾ, ವೆಜ್‌ಪಲಾವ್, ಅನ್ನ, ತಿಳಿಸಾರು, ಮೊಸರನ್ನ, ಉಪ್ಪಿನಕಾಯಿ ಇರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.