ನಾಳೆಯಿಂದ 10 ದಿನ ಜಿಲ್ಲೆ ಸಂಪೂರ್ಣ ಲಾಕ್‌


Team Udayavani, May 28, 2021, 5:09 PM IST

lockdown at mysore

ಮೈಸೂರು: ಜಿಲ್ಲೆಯಲ್ಲಿ ಕೋವಿಡ್‌ ಸೋಂಕುಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂದಿನ 10 ದಿನಗಳಅವಧಿಯಲ್ಲಿ (ಮೇ 29 ರಿಂದ ಜೂನ್‌ 7ರವರೆಗೆ)ವಾರದಲ್ಲಿ 2 ದಿನ ಮಾತ್ರ ವ್ಯಾಪಾರ ವಹಿವಾಟಿಗೆಅವಕಾಶ ನೀಡಿ ಉಳಿದ ದಿನಗಳಲ್ಲಿ ಸಂಪೂರ್ಣಲಾಕ್‌ಡೌನ್‌ ಮಾಡಿ ಜಿÇÉಾಧಿಕಾರಿ ರೋಹಿಣಿ ಸಿಂಧೂರಿ ಆದೇಶ ಹೊರಡಿಸಿದ್ದಾರೆ.

ಫೇಸ್‌ಬುಕ್‌ ಲೈವ್‌ನಲ್ಲಿ ಮಾತನಾಡಿದ ಅವರು,ಇದೂವರೆಗೆ ಪ್ರತಿನಿತ್ಯ ಬೆಳಗ್ಗೆ 6 ರಿಂದ 10 ರವರೆಗೆಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು.ಇನ್ನು ಮುಂದೆ ಪ್ರತಿ ಸೋಮವಾರ ಮತ್ತು ಗುರುವಾರ ಮಾತ್ರ ಬೆಳಗ್ಗೆ 6 ರಿಂದ ಮಧ್ಯಾಹ್ನ 12ರವರೆಗೆಅವಕಾಶ ನೀಡಲಾಗುವುದು. ಉಳಿದ ದಿನಗಳಲ್ಲಿಹಾಲಿನ ಬೂತ್‌ಗಳು, ವೈದ್ಯಕೀಯ ಸೇವೆಗಳು,ಹಾಪ್‌ಕಾಮ್ಸ್ ನಡಿ ಬರುವ ತರಕಾರಿ ಮತ್ತು ಹಣ್ಣಿನಅಂಗಡಿಗಳು, ನ್ಯಾಯ ಬೆಲೆ ಅಂಗಡಿಗಳನ್ನುಹೊರತು ಪಡಿಸಿ ಉಳಿದ ಎಲ್ಲ ರೀತಿಯ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

ಬ್ಯಾಂಕ್‌, ವಿಮಾ ಯೋಜನೆಯ ಕಂಪನಿಗಳಿಗೆ ಆದಿನಗಳಂದು ಬೆಳಗ್ಗೆ 8 ರಿಂದ ಮಧ್ಯಾಹ್ನ 12ರವರೆಗೆಕರ್ತವ್ಯ ನಿರ್ವಹಿಸಲು ಅವಕಾಶ ನೀಡಲಾಗಿದೆಎಂದು ತಿಳಿಸಿದರು.

ಜಿಲ್ಲೆಯಲ್ಲಿ ಸರ್ಕಾರ ಲಾಕ್‌ಡೌನ್‌ ಜಾರಿಗೊಳಿಸಿದರೂ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಈಹಿನ್ನೆಲೆ ಯಲ್ಲಿ ಮತ್ತೂಂದಷ್ಟು ಕಠಿಣ ನಿಯಮಗಳೊಂದಿಗೆ ಲಾಕ್‌ಡೌನ್‌ ಜಾರಿಗೊಳಿಸಲಾಗುತ್ತಿದೆ.ರಾಜ್ಯ ಸರ್ಕಾರದ ಮಾರ್ಗಸೂಚಿ ಪ್ರಕಾರ ಕೈಗಾರಿಕೆಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.ಹೀಗಾಗಿ ಈ ಅವಧಿಯಲ್ಲಿ ಕೈಗಾರಿಕೆಗಳ ಚಟು ವಟಿಕೆಗೆ ಅವಕಾಶ ನೀಡಲಾಗುವುದು. ಕೈಗಾರಿಕೆ ನಡೆಸುವುದು ಅತ್ಯಾವಶ್ಯಕವಿಲ್ಲದೇ ಇದ್ದರೆ ಕೈಗಾರಿಕೆ ಗಳನ್ನು10 ದಿನಗಳ ಅವಧಿವರೆಗೆ ಮುಚ್ಚಿ ಜಿÇÉಾಡ ಳಿತಕ್ಕೆಸಹಕಾರ ನೀಡಬೇಕೆಂದು ಮನವಿ ಮಾಡಿದರು.

ನಿಷೇಧಾಜ್ಞೆ ಅವಧಿಯಲ್ಲಿ ಸರಕು ಸಾಗಾಟವಾಹನ ಗಳನ್ನು ಹೊರತುಪಡಿಸಿ ಯಾವುದೇ ವಾಹನಸಂಚಾರ ಹಾಗೂ ವ್ಯಕ್ತಿಗಳ ಓಡಾಟ ಕಂಡು ಬಂದಲ್ಲಿವಿಪತ್ತು ನಿರ್ವಹಣಾ ಕಾಯ್ದೆಯಡಿ ಕಾನೂನು ಕ್ರಮಜರುಗಿಸಲಾಗುವುದು ಎಂದು ಎಚ್ಚರಿಸಿದರು.ಮೈಸೂರು: ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದರೂ ಕೂಡಲೆ ಹತ್ತಿರದ ಕೋವಿಡ್‌ ಮಿತ್ರಕ್ಕೆ ಭೇಟಿ ನೀಡಿ, ಚಿಕಿತ್ಸೆ ಪಡೆದುಕೊಳ್ಳಬೇಕು.ಇದರಿಂದ ಸಾವಿನ ಪ್ರಮಾಣವನ್ನು ತಗ್ಗಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು.

ಫೇಸ್‌ಬುಕ್‌ ಲೈವ್‌ನಲ್ಲಿ ಮಾತನಾಡಿದ ಅವರು, ಕೊರೊನಾದಿಂದಉಂಟಾಗುತ್ತಿರುವ ಮರಣ ಪ್ರಮಾಣ ಮತ್ತು ಬ್ಲ್ಯಾಕ್‌ ಫ‌ಂಗಸ್‌ಕಡಿಮೆಗೊಳಿಸುವ ಉದ್ದೇಶದಿಂದ ಈಗಾಗಲೇ ಮನೆ ಮನೆ ಸರ್ವೆಕಾರ್ಯ ನಡೆಯುತ್ತಿದೆ ಎಂದರು.ಜಿಲ್ಲೆಯಲ್ಲಿ 16,611 ಸಕ್ರಿಯ ಸೋಂಕಿತರಿದ್ದು, ರಾಜ್ಯದ ಪಾಸಿಟಿವಿಟಿಗೆ ಹೋಲಿಕೆ ಮಾಡಿದರೆ ಜಿಲ್ಲೆಯಲ್ಲಿ ಶೇ. 40 ರಿಂದ 41ರಷ್ಟಿದೆ.ಇದನ್ನು ಕಡಿಮೆಗೊಳಿಸಬೇಕು. ರಾಜ್ಯದಲ್ಲಿಯೇ ಅತಿ ಹೆಚ್ಚು ಮಂದಿಗೆನಮ್ಮಲ್ಲಿ ಲಸಿಕೆ ನೀಡಿರುವುದರಿಂದ ಸಾವಿನ ಪ್ರಮಾಣ ಕಡಿಮೆ ಇದೆ.ಜಿಲ್ಲೆಯಲ್ಲಿ ಶೇ.0.63 ಸಾವಿನ ಪ್ರಮಾಣ ದಾಖಲಾಗಿದೆ. ನಗರ ಮತ್ತುಗ್ರಾಮಾಂತರ ಪ್ರದೇಶದಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಮಂದಿಗೆಲಸಿಕೆ ಹಾಕಿದ ಹೆಗ್ಗಳಿಕೆಗೆ ಮೈಸೂರು ಜಿಲ್ಲೆಗಿದೆ ಎಂದು ಹೇಳಿದರು.ನಿತ್ಯ ಅಧಿಕಾರಿಗಳ ಸಭೆ ನಡೆಸುತ್ತಿದ್ದು, ಪ್ರತಿ ಸಾವಿನ ನಿಖರ ಕಾರಣದ ಕುರಿತು ವಿಶ್ಲೇಷಣೆ ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿನಮಗೆ ಕಂಡುಬಂದ ಪ್ರಮುಖ ಅಂಶವೆಂದರೆ ರೋಗಿಗಳು ಲಕ್ಷಣಕಾಣಿಸಿ ಕೊಂಡ ಹಲವು ದಿನಗಳ ಬಳಿಕ ಆಸ್ಪತ್ರೆಗೆ ದಾಖಲಾಗುತ್ತಿರುವುದು. ಕೋವಿಡ್‌ ಮಿತ್ರ ಮೂಲಕ 24 ಸಾವಿರ ಮಂದಿ ಸೌಲಭ್ಯಪಡೆದಿದ್ದಾರೆ ಎಂದು ಜಿಲ್ಲಾಧಿಕಾರಿ ಸಿಂಧೂರಿ ತಿಳಿಸಿದರು.

 

ಟಾಪ್ ನ್ಯೂಸ್

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

aatishi

Delhi CM;5 ಸಚಿವರೊಂದಿಗೆ ನಾಳೆ ಆತಿಷಿ ಪ್ರಮಾಣ ವಚನ ಸ್ವೀಕಾರ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mysore Dasara: ಮರದ ಅಂಬಾರಿ ಹೊತ್ತು ಅಭಿಮನ್ಯು ತಾಲೀಮು

Mysore Dasara: ಮರದ ಅಂಬಾರಿ ಹೊತ್ತು ಅಭಿಮನ್ಯು ತಾಲೀಮು

Hunasur: ಸಾವಿನಲ್ಲೂ ಒಂದಾದ ಅಕ್ಕ- ತಮ್ಮ

Hunasur: ಸಾವಿನಲ್ಲೂ ಒಂದಾದ ಅಕ್ಕ- ತಮ್ಮ

Mysuru; ಟಿಕೆಟ್‌ ಆಕಾಂಕ್ಷಿಗಳು ಸಕ್ರಿಯವಾಗಿರಬೇಕು: ಸಾ.ರಾ

Mysuru; ಟಿಕೆಟ್‌ ಆಕಾಂಕ್ಷಿಗಳು ಸಕ್ರಿಯವಾಗಿರಬೇಕು: ಸಾ.ರಾ ಮಹೇಶ್‌

Mysuru: ಮುನಿರತ್ನ ಪರ ಬಿಜೆಪಿ ಬ್ಯಾಟಿಂಗ್‌ ಸಲ್ಲದು: ಎಂಎಲ್‌ಸಿ ವಿಶ್ವನಾಥ್‌

Mysuru: ಮುನಿರತ್ನ ಪರ ಬಿಜೆಪಿ ಬ್ಯಾಟಿಂಗ್‌ ಸಲ್ಲದು: ಎಂಎಲ್‌ಸಿ ವಿಶ್ವನಾಥ್‌

22-hunsur-1

Hunsur: ಕಾರು ಪಲ್ಟಿಯಾಗಿ ಎಳನೀರು ವ್ಯಾಪಾರಿ ಸಾವು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

aatishi

Delhi CM;5 ಸಚಿವರೊಂದಿಗೆ ನಾಳೆ ಆತಿಷಿ ಪ್ರಮಾಣ ವಚನ ಸ್ವೀಕಾರ

kangana-2

Emergency ಚಿತ್ರ; 25ರೊಳಗೆ ಬಿಡುಗಡೆ ನಿರ್ಧರಿಸಿ: ಕೋರ್ಟ್‌

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

Pannu Singh

Khalistani; ಭಾರತದ ವಿರುದ್ಧ ಅಮೆರಿಕ ಕೋರ್ಟ್‌ಗೆ ಪನ್ನು ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.