ಜಿಲ್ಲೆಯಲ್ಲಿ ಲಾಕ್‌ಡೌನ್ ಸ್ವಲ್ಪ ಸಡಿಲಿಕೆ; ಡಿಸಿ ಎಚ್ಚರಿಕೆ
Team Udayavani, May 4, 2020, 6:25 PM IST
ಮೈಸೂರು: ಜಿಲ್ಲೆಯಲ್ಲಿ ಸ್ವಲ್ಪಮಟ್ಟಿಗೆ ಲಾಕ್ ಡೌನ್ ಸಡಿಲಗೊಳಿಸಲಾಗಿದ್ದು, ಸಾರ್ವಜನಿಕರು ಎಂದಿನಂತೆ ಎಚ್ಚರಿಕೆಯಿಂದ ಹಾಗೂ ಅಗತ್ಯವಿದ್ದರೆ ಮಾತ್ರ ಹೊರಗೆ ಬಂದು ವ್ಯವಹರಿಸಬೇಕು ಎಂದು ಡೀಸಿ ಅಭಿರಾಮ್ ಜಿ. ಶಂಕರ್ ಹೇಳಿದರು.
ಏ. 4 ರಿಂದ ಈಗ ಇರುವ ಅಗತ್ಯ ವಸ್ತುಗಳ ಸೇವೆ ಜೊತೆಗೆ ಹೆಚ್ಚುವರಿ ನಗರ ವ್ಯಾಪ್ತಿಯಲ್ಲಿನ ಕೈಗಾರಿಕಾ ಪ್ರದೇಶದಲ್ಲಿ ಅಗತ್ಯ ವಸ್ತು ಉತ್ಪಾದಿಸುವ ಕೈಗಾರಿಕೆ ಆರಂಭಿಸಬಹುದು. ನಂಜನಗೂಡಿನ ಜ್ಯುಬಿಲಿಯಂಟ್ ಲೇಔಟ್, ದೇವಿರಮ್ಮನಹಳ್ಳಿ ಬಡವಾಣೆ, ಪ್ರಭಾಕರ ಲೇಔಟ್, ರಾಮಸ್ವಾಮಿ ಲೇಔಟ್ ಮುಂತಾದ ಕಡೆಯಿಂದ ಬರುವ ಕಾರ್ಮಿಕರನ್ನು ಹೊರತುಪಡಿಸಿ ಬೇರೆ ಕಾರ್ಮಿಕರನ್ನು ಬಳಸಿಕೊಳ್ಳಬಹುದು. ಈ ಎಲ್ಲಾ ಕಾರ್ಖಾನೆಯಲ್ಲಿಯೂ 3ನೇ ಒಂದರಷ್ಟು ಕಾರ್ಮಿಕರು ಮಾತ್ರ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಕಲ್ಲು, ಜಲ್ಲಿ, ಕಬ್ಬಿಣ ಮಾರಾಟಕ್ಕೆ ಅವಕಾಶ ಕೊಡಲಾಗಿದೆ. ನಗರ ಪ್ರದೇಶದಲ್ಲಿ ಮಾರುಕಟ್ಟೆ ಅಥವಾ ಕಾಂಪ್ಲೆಕ್ಸ್ ನಂತಹ ಮಳಿಗೆಯಲ್ಲಿ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶವಿದೆ. ಉಳಿದಂತೆ ಇತರೆ ಬಡಾವಣೆ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಎಲ್ಲಾ ರೀತಿಯ ಅಂಗಡಿ ತೆರೆಯಬಹುದು. ಮದುವೆ ಮಾಡುವವರು 50 ಮಂದಿ ಮೀರದಂತೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಅಂತ್ಯಕ್ರಿಯೆಯಲ್ಲಿ 20ಕ್ಕಿಂತ ಹೆಚ್ಚು ಮಂದಿ ಸೇರಬಾರದು. ಫೇಸ್ ಮಾಸ್ಕ್ ಬಳಸುವುದು ಕಡ್ಡಾಯೆ. ಗ್ರಾಮಾಂತರ ಪ್ರದೇಶದಲ್ಲಿ ಪಿಡಿಒ, ನಗರ ಪ್ರದೇಶದಲ್ಲಿ ಪೊಲೀಸರಿಗೆ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಅಂತವರನ್ನು ಪರಿಶೀಲಿಸಿ 2 ವಾರ ಕ್ವಾರಂಟೈನ್ ನಲ್ಲಿ ಕಡ್ಡಾಯವಾಗಿ ಇರಿಸಲಾಗುತ್ತದೆ ಎಂದರು.
ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ನಗರದಲ್ಲಿ 91 ರಸ್ತೆಗಳನ್ನು ವಾಣಿಜ್ಯ ರಸ್ತೆ ಎಂದು ಗುರುತಿಸಲಾಗಿದ್ದು, ಅಗತ್ಯ ವಸ್ತು ಹೊರತುಪಡಿಸಿ ಬೇರೆ ಯಾವ ಮಳಿಗೆ ತೆರೆಯಲು ಅವಕಾಶವಿಲ್ಲ ಎಂದು ತಿಳಿಸಿದರು. ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, 24 ಗಂಟೆ ಅವಧಿಯನ್ನು 3 ಹಂತದಲ್ಲಿ ವಿಭಾಗಿಸಲಾಗಿದೆ. ಬೆಳಗ್ಗೆ 7 ರಿಂದ 12 ರವರೆಗೆ ಸಾಧ್ಯವಾದಷ್ಟು 2 ಕಿ.ಮೀ. ವ್ಯಾಪ್ತಿಯಲ್ಲಿಯೇ ಅಗತ್ಯ ವಸ್ತು ಖರೀದಿಸಬೇಕು. ಲಾಕ್ ಡೌನ್ ಸಡಿಲ ಎಂದು ನಿರ್ಲಕ್ಷ್ಯ ಬೇಡ ಎಂದರು. ಗುಂಪು ಗೂಡಿದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಬೇರೆ ಜಿಲ್ಲೆಗೆ ತೆರಳುವವರಿಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಮಾಹಿತಿ ಕಲೆಹಾಕಿ ಡಿಸಿ ಕಚೇರಿ ಮೂಲಕ ಪಾಸ್ ನೀಡುತ್ತಾರೆ. ಬೇರೆ ರಾಜ್ಯಕ್ಕೆ ಹೋಗುವುದಿದ್ದರೆ ಆನ್ ಲೈನ್ ಅಪ್ಲೇ ಮಾಡಬೇಕಾಗುತ್ತದೆ. ಗುಂಡ್ಲು ಪೇಟೆಯಿಂದ ಬರಬೇಕಾದರೆ, ಚಾಮರಾಜನಗರ, ಸಂತೆ ಮರಹಳ್ಳಿ, ಮೂಗೂರು ಕಡೆಯಿಂದ ಮೈಸೂರಿಗೆ ಬರಬೇಕು. ಅಲ್ಲಿ ಪರೀಕ್ಷಿಸಿ ಕ್ವಾರಂಟೈನ್ ಮಾಡಲಾಗುತ್ತದೆ. ಮಡಿಕೇರಿ, ಕುಟ್ಟ, ವಿರಾಜಪೇಟೆ, ನಾಪೋಕ್ಲು ಸೂಳ್ಯ ಕಡೆಯಿಂದ ಬರುವವರು ಕೊಪ್ಪ ಮಾರ್ಗ ದಲ್ಲಿಯೇ ಬರಬೇಕು. ಹಾಸನದವರು ದೊಡ್ಡಹಳ್ಳಿ ಮಾರ್ಗದಲ್ಲಿಯೇ ಬರಬೇಕು ಎಂದು ಸೂಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru: ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ ಭಕ್ತರಿಗೆ 2 ಲಕ್ಷ ಲಡ್ಡು ವಿತರಣೆ
Mysuru: ಕೆಆರ್‌ಎಸ್ ರಸ್ತೆಗೆ “ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ನಿಶ್ಚಿತ: ಲಕ್ಷ್ಮಣ್
Sandalwood: ಪ್ರತಿಭೆ ಪ್ರದರ್ಶಿಸಲು ಕಲಾವಿದರಿಗೆ ಸೂಕ್ತ ವೇದಿಕೆ ಅಗತ್ಯ: ನಟ ಡಾಲಿ ಧನಂಜಯ
Hunsur: ಹುತಾತ್ಮ ಧಿವಿನ್ ಅಂತಿಮ ದರ್ಶನ ಪಡೆದ ಗ್ರಾಮಸ್ಥರು
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ
Kundapura: ಗ್ರಾಮ ಸಹಾಯಕಿಗೆ ಕಿರುಕುಳ; ಆರೋಪಿಗಳಿಗೆ ನಿರೀಕ್ಷಣ ಜಾಮೀನು
Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ; ಇಂದು ಶಿಕ್ಷೆ ಪ್ರಮಾಣ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.