ಲೋಕ ಅದಾಲತ್: ಸಂಧಾನ ಮೂಲಕ 253 ಪ್ರಕರಣ ಇತ್ಯರ್ಥ
Team Udayavani, Nov 15, 2022, 2:17 PM IST
ಹುಣಸೂರು: ಹುಣಸೂರಿನ ವಿವಿಧ ಐದು ನ್ಯಾಯಾಲಯಗಳಲ್ಲಿ ನಡೆದ ಬೃಹತ್ ಲೋಕ ಅದಾಲತ್‌ನಲ್ಲಿ ಒಟ್ಟು 253 ಪ್ರಕ ರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿದ್ದು, ಒಂದು ಜೋಡಿ ವೈಮನಸ್ಸು ಮರೆತು ಒಂದಾದರು.
ಅದಾಲತ್‌ನಲ್ಲಿ 35 ಚೆಕ್ ಬೌನ್ಸ್ ಪ್ರಕ ರಣದಲ್ಲಿ 24,02,600 ರೂ., ಹತ್ತು ಅಕ್ರಮ ಮರಳು ಸಾಗಾಟ ಪ್ರಕರಣದಲ್ಲಿ 2.81 ಲಕ್ಷ, ಒಂದು ಹಣ ವಸೂಲಿ ಪ್ರಕರಣದಲ್ಲಿ 5 ಲಕ್ಷ ಇತ್ಯರ್ಥ ಸೇರಿದಂತೆ 19 ಆಸ್ತಿ ವಿಭಾಗ ಪ್ರಕರಣ ಸೇರಿದಂತೆ 253 ಅರ್ಜಿಗಳನ್ನು ಇತ್ಯರ್ಥ ಪಡಿಸಲಾಯಿತು. ಅದಾಲತ್‌ನಲ್ಲಿ ಎಂಟನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪಾಟೀಲ ಮೋಹನ್ ಕುಮಾರ್ ಭೀಮನ ಗೌಡ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಶಿರಿನ್ ಜಾವಿದ್ ಅನ್ಸಾರಿ, ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶೆ ಜೈ ಬುನ್ನಿಸಾ, ಪ್ರಧಾನ ಸಿವಿಲ್ ನ್ಯಾಯಾಧೀಶ ಮನು ಪಟೇಲ್ ಹಾಗೂ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಪೂಜಾ ಬೆಳಕೆರಿ ಅವರು ತಮ್ಮ ಅಧೀನ ನ್ಯಾಯಾಲಯಗಳಲ್ಲಿ ಕಕ್ಷಿದಾರರು ಹಾಗೂ ವಕೀಲರ ಸಮ್ಮುಖ ದಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿದರು.
ವರ್ಷದ ಬಳಿಕ ಮತ್ತೆ ಒಂದಾದ ಜೋಡಿ: ಸಂಸಾರದಲ್ಲಿನ ಸಣ್ಣ-ಪುಟ್ಟ ಸಮಸ್ಯೆಗಳಿಂದ ಬಿರುಕು ಮೂಡಿ ಪ್ರತ್ಯೇಕವಾಗಿದ್ದ ಅರಕಲಗೂಡಿನ ಲೋಕೇಶ್ ಮತ್ತು ಹುಣಸೂರಿನ ಪಲ್ಲವಿ ಸಂಸಾರವನ್ನು ಮನವೊಲಿಸಿ, ಒಗ್ಗೂಡಿಸುವಲ್ಲಿ ನ್ಯಾಯಾಧೀಶರು ಯಶಸ್ವಿಯಾದರು. ಪಲ್ಲವಿಯವರು 2021ರಲ್ಲಿ ತನ್ನ ಇಬ್ಬರು ಮಕ್ಕಳ ಪಾಲನೆಗೆ ಜೀವನಾಂಶ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶಿರಿನ್ ಜಾವಿದ್ ಅನ್ಸಾರಿ ಮತ್ತು 8ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಪಾಟೀಲ ಮೋಹನ್‌ಕುಮಾರ ಭೀಮನಗೌಡರು ದಂಪತಿಗೆ ಬುದ್ಧಿಮಾತು ಹೇಳಿ ಒಂದಾಗಿ ಬಾಳಲು ಮನವೊಲಿಸಿದರು. ದಂಪತಿ ಕೂಡ ಇದಕ್ಕೆ ಒಪ್ಪಿಕೊಂಡ ಪರಿಣಾಮ ನ್ಯಾಯಾಲಯದಲ್ಲೇ ಇಬ್ಬರಿಗೂ ಹೂವಿನ ಹಾರ ಬದಲಾಯಿಸಿಕೊಳ್ಳಲು ತಿಳಿಸಿ, ಶುಭಹಾರೈಸಿ ಸಿಹಿ ನೀಡಿದರು. ವಕೀಲರು ಸಹ ಸಾಕ್ಷಿಯಾದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.