ಕೊಠಡಿಗಳ ಲಕ್ಷಾಂತರ ಮೌಲ್ಯದ ಜಂತಿಗಳೇ ಕಾಣುತ್ತಿಲ್ಲ!


Team Udayavani, Nov 23, 2019, 3:00 AM IST

kotadigala

ನಂಜನಗೂಡು: ಯವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಗೆ ಸೇರಿದ ಹಳೆಯ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. ಆದರೆ ನಾಲ್ಕು ಕೊಠಡಿಗಳಿಗೆ ಅಳವಡಿಸಿದ್ದ ಲಕ್ಷಾಂತರ ಮೌಲ್ಯ ಬಾಳುವ ತೇಗದ ಮರದ 130ಕ್ಕೂ ಹೆಚ್ಚು ಜಂತಿಗಳು ಕಾಣುತ್ತಿಲ್ಲ. ಜತೆಗೆ ಲಕ್ಷಾಂತರ ಮೌಲ್ಯದ ತೇಗದ ಜಂತಿಗಳನ್ನು ಅಕ್ರಮವಾಗಿ ಮಾರಿಕೊಳ್ಳಲಾಗಿದೆ ಎಂದು ವಲಯದಲ್ಲಿ ಕೇಳಿಬರುತ್ತಿವೆ.

ನಿಯಮದಂತೆ ಹರಾಜು ಹಾಕಬೇಕು: ಸರ್ಕಾರಿ ಕಟ್ಟಡಗಳನ್ನು ತೆರವುಗೊಳಿಸಿದರೆ, ಅದರ ಇಟ್ಟಿಗೆ, ಹಂಚು, ಕಲ್ಲು, ಮರಮುಟ್ಟುಗಳನ್ನು ನಿಯಮದಂತೆ ಹರಾಜು ಹಾಕಬೇಕು. ಆದರೆ ಸರ್ಕಾರಿ ಅಧಿಕಾರಿಗಳು ಈ ಎಲ್ಲ ನಿಯಮಾವಗಳಿಗಳನ್ನು ಗಾಳಿಗೆ ತೂರಿದ್ದು, ಹರಾಜು ಪ್ರಕ್ರಿಯೆ ನಡೆಸಿಲ್ಲ. ಅಲ್ಲದೆ ಕಟ್ಟಡದ ಸಾಮಗ್ರಿಗಳನ್ನು ಯಾರಿಗೂ ಗೊತ್ತಿಲ್ಲದಂತೆ ಇಲ್ಲಿಂದ ಸಾಗಿಸಿದ್ದಾರೆ ಎಂಬ ಆರೋಪವು ಕೇಳಿದೆ. ಹಾಗಾದರೆ ಶಿಕ್ಷಣ ಹಾಗೂ ಕ್ರೀಡಾ ಇಲಾಖೆ ಸುಪರ್ದಿಯಲ್ಲಿ ಇಲ್ಲದ ಲಕ್ಷಾಂತರ ಮೌಲ್ಯದ ಮರಮುಟ್ಟುಗಳು ಹೋಗಿದ್ದೇಲ್ಲಿಗೆ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ನಡೆದಿದೆ.

ನಮ್ಮಲ್ಲಿ ಮರದ ಜಂತಿಗಳಿಲ್ಲ: ಕ್ರೀಡಾ ಇಲಾಖೆಗೆ ಕೊಠಡಿಗಳು ಹಾಗೂ ಜಾಗವನ್ನು ವಹಿಸಿದ ಬಳಿಕ ಅಲ್ಲಿ ಕಬ್ಬಿಣದ ತಂತಿ ಬೇಲಿ ನಿರ್ಮಿಸಿಕೊಂಡಿದ್ದಾರೆ. ಈಗ ಅದು ನಮ್ಮ ಆಸ್ತಿಯಾಗಿಲ್ಲ. ಹೀಗಾಗಿ ನಾವು ಮರಮುಟ್ಟುಗಳನ್ನು ಇಟ್ಟುಕೊಳ್ಳುವ ಪ್ರಶ್ನೆಯೇ ಇಲ್ಲ. ಅವರ ಆಸ್ತಿಯನ್ನು ಅವರೇ ತೆರವುಗೊಳಿಸಿಕೊಂಡಿದ್ದಾರೆ. ನಮ್ಮಲ್ಲಿ ಲಕ್ಷಾಂತರ ಮೌಲ್ಯದ ಬೆಲೆ ಬಾಳುವ ಮರದ ಜಂತಿ (ತೊಲೆ) ಇಟ್ಟಿದ್ದರೆ, ಅದಕ್ಕೆ ಅವರು ಪುರಾವೆ ತೋರಿಸಲಿ ಎಂದು ಕಾಲೇಜಿನ ಪ್ರಾಚಾರ್ಯ ನವಿಲೂರು ಪ್ರಕಾಶ ಸವಾಲು ಹಾಕಿದರು.

ನಮಗೆ ಗೊತ್ತೇ ಇಲ್ಲ – ಅರಣ್ಯಾಧಿಕಾರಿ ಲೋಕೇಶ ಮೂರ್ತಿ: ಕಟ್ಟಡ ತೆರವು ಮಾಡಿದವರು ಮರದ ಸಾಮಾನುಗಳು ಹಳೆಯದಾದರೂ ಆವರಣದಿಂದ ಹೊರಸಾಗಿಸಬೇಕಾದರೆ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಬೇಕು. ಅವರು ಅರ್ಜಿ ನೀಡಿದರೆ ನಾವು ಅಂತಹ ಪದಾರ್ಥಗಳನ್ನು ಅಳತೆ ಮಾಡಿ, ಹೊರಸಾಗಿಸಲು ಅನುಮತಿ ನೀಡುತ್ತೇವೆ. ಹಳೆಯದಾಗಿದ್ದರೂ ಮರದ ಸಾಮಾನುಗಳನ್ನು ಅನುಮತಿಯಿಲ್ಲದೆ ಹೊರ ಸಾಗಿಸುವಂತಿಲ್ಲ. ಈವರೆಗೂ ಕ್ರೀಡಾಂಗಣದಲ್ಲಿದ್ದ ಮರಗಳ ವಿಷಯದಲ್ಲಿ ಅರ್ಜಿ ಬಂದಿಲ್ಲ ಎಂದಿದ್ದಾರೆ.

ದಳವಾಯಿ ಶಾಲೆ ಮರದಂತಾಗದಿರಲಿ: ಕೊಟ್ಯಂತರ ರೂ.ಬೆಲೆ ಬಾಳುವ ಸರ್ಕಾರಿ ದಳವಾಯಿ ಶಾಲೆ, ಮಹರಾಜರ ಕಾಲದ ಅತ್ಯಂತ ಸುಂದರ ಕೆತ್ತನೆ ಮರದ ಬಾಗಿಲು ಹಾಗೂ ಸ್ಥಳಿಯ ಪ್ರವಾಸಿ ಮಂದಿರದ ಮರಗಳು, ಕಾಣೆಯಾದ ರೀತಿಯಲ್ಲೇ ಈಗ ಕ್ರೀಡಾಂಗಣದ ಮರಗಳು ಸದ್ದಿಲ್ಲದೆ ಮಾಯಾವಾಗಿವೆ. ತಕ್ಷಣವೇ ತಾಲೂಕು ದಂಡಾಧಿಕಾರಿಗಳು, ಇತ್ತ ಗಮನಹರಿಸಿ ಈ ಮರಮುಟ್ಟುಗಳು ಕುರಿತು ಪೊಲೀಸರಿಂದ ತನಿಖೆ ನಡೆಸಿ, ಸರ್ಕಾರಿ ಸ್ವತ್ತನ್ನು ಉಳಿಸಬೇಕು ಎಂದು ಕ್ರೀಡಾಪಟು ಪಿ.ಡಿ.ಮನೋಹರ್‌ ಒತ್ತಾಯಿಸಿದ್ದಾರೆ.

ಈಜುಕೊಳ್ಳ, ಮಲ್ಟಿ ಜಿಮ್‌ ನಿರ್ಮಾಣ: ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸದ್ಯ ಸರ್ಕಾರಿ ಬಾಲಕರ ಕಿರಿಯ ಕಾಲೇಜಿನ ಸುಪರ್ದಿಯಲ್ಲಿದೆ. ಈ ಜಾಗದಲ್ಲಿರುವ ಕೊಠಡಿಗಳನ್ನು ತೆರವುಗೊಳಿಸಿ, ತಾಲೂಕಿನಲ್ಲಿ ಅತ್ಯಾಧುನಿಕ ಕ್ರೀಡಾಂಗಣ ನಿರ್ಮಿಸಲು ಈ ಕ್ರೀಡಾ ಇಲಾಖೆಗೆ ಅಂದಿನ ಸಚಿವರು ಶ್ರೀನಿವಾಸ್‌ ಪ್ರಸಾದರ ಅಣತಿಯಂತೆ ಹಸ್ತಾತಂರಿಸಲಾಗಿತ್ತು. ನಂತರ ಕ್ರೀಡಾಂಗಣ ನಿರ್ಮಿಸಲು ಹೊರಟ ಇಲಾಖೆ, ಈಗ ಆವರಣದಲ್ಲಿದ್ದ ಆ ನಾಲ್ಕೂ ಕೊಠಡಿಗಳನ್ನು ಉರುಳಿಸಿದೆ. ಆದರೆ ಲಕ್ಷಾಂತರ ಮರಮಟ್ಟುಗಳು ಏನಾದವು ಎಂಬುದು ಮಾತ್ರ ನಿಗೂಢವಾಗಿದೆ. ಹೀಗಾಗಿ ಸರ್ಕಾರಿ ಅಧಿಕಾರಿಗಳ ನಡೆ ಮೇಲೆ ಅಕ್ರಮದ ವಾಸನೆ ಕಾಣುತ್ತಿದೆ.

ಅತ್ಯಂತ ಬೆಲೆ ಬಾಳುವ ಈ ಮರದಜಂತಿ ಸೇರಿದಂತೆ ಸಾಮಗ್ರಿಗಳನ್ನು ಸರ್ಕಾರಿ ಬಾಲಕರ ಕಾಲೇಜಿನ ವಶದಲ್ಲಿ ಇರಿಸಲಾಗಿದೆ. ಈ ಜಾಗದಲ್ಲಿ ಅತ್ಯಾಧುನಿಕ ಒಳಂಗಣದ ಈಜುಕೊಳ (25 ಮೀಟರ್‌) ಮಲ್ಟಿ ಜೀಮ್‌, ಸೇರಿದಂತೆ ಒಳಾಂಗಣದ ಧ ಆಟಗಳಿಗಾಗಿ ಕ್ರೀಡಾಂಗಣ ಸಿದ್ಧಪಡಿಸುವ ಯೋಜನೆಗಾಗಿ ತೆರವು ಗೊಳಿಸಲಾಗಿದೆ. ಮರದ ಜಂತಿಗಳೆಲ್ಲ ಸುರಕ್ಷಿತವಾಗಿವೆ. ಎರಡ್ಮೂರು ದಿನಗಳಲ್ಲಿ ಪರಿಶೀಲನೆ ನಡೆಸುತ್ತೇವೆ.
-ಸುರೇಶ, ಯುವಜನ ಸಬಲೀಕರಣ ಇಲಾಖೆ ಅಧಿಕಾರಿ

* ಶ್ರೀಧರ್‌ ಆರ್‌. ಭಟ್‌

ಟಾಪ್ ನ್ಯೂಸ್

ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ: ರವಿ

CT Ravi: ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ

1-a-bb

Pro Kabaddi: ಬೆಂಗಳೂರು ಬುಲ್ಸ್‌ ಗೆ 18ನೇ ಸೋಲು

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

“ರವಿ ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

“CT Ravi ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

‌Mysore: ಮೊಬೈಲ್‌ ಜೂಜಾಟ; ನಾಲ್ವರ ಬಂಧನ

‌Mysore: ಮೊಬೈಲ್‌ ಜೂಜಾಟ; ನಾಲ್ವರ ಬಂಧನ

22-hunsur

Hunsur: ಒಂದೆಡೆ ಚಿರತೆ ಸೆರೆ, ಮತ್ತೊಂದೆಡೆ ಅಪಘಾತ

5-hunsur

Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು

MUDA Scam: ಕೇಸ್‌ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು

MUDA Scam: ಕೇಸ್‌ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

1-sq

Squash event: ಭಾರತದ ಅನಾಹತ್‌,ಮಲೇಷ್ಯಾದ ಚಂದರನ್‌ ಚಾಂಪಿಯನ್‌

ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ: ರವಿ

CT Ravi: ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.