ಜಿಲ್ಲೆಯಲ್ಲಿ ತುಸು ತಗ್ಗಿದ ಮಳೆಯ ಪ್ರಮಾಣ
Team Udayavani, Aug 9, 2020, 11:07 AM IST
ಮೈಸೂರು: ಕೇರಳದ ವೈನಾಡು ಸೇರಿದಂತೆ ಜಿಲ್ಲೆಯಲ್ಲಿ ಶನಿವಾರ ಮಳೆಯ ಪ್ರಮಾಣ ಸ್ವಲ್ಪಮಟ್ಟಿಗೆ ತಗ್ಗಿದ್ದು, ಕಬಿನಿ, ನುಗು, ತಾರಕ ಜಲಾಶಯಗಳಿಗೆ ಒಳಹರಿವಿನ ಪ್ರಮಾಣ ಕಡಿಮೆಯಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಭಾನುವಾರ ಕಪಿಲಾ ನದಿಯ ಹೊರ ಹರಿವಿನ ಪ್ರಮಾಣ ಇಳಿಕೆಯಾಗುವ ಸಾಧ್ಯತೆ ಇದೆ.
ಕೇರಳದಲ್ಲಿ ಕಳೆದೊಂದು ವಾರದಿಂದ ಮಳೆಯಾದ ಹಿನ್ನೆಲೆಯಲ್ಲಿ ಕಬಿನಿ ಜಲಾಶಯ ನೀರಿನ ಮಟ್ಟ ಏರಿಕೆ ಕಂಡಿದ್ದು, ಜಲಾಶಯದಿಂದ 70 ಸಾವಿರ ಕ್ಯೂಸೆಕ್ ನೀರನ್ನು ಕಪಿಲಾ ನದಿಗೆ ಹರಿ ಬಿಡಲಾಗಿದೆ. ಪರಿಣಾಮ ಮೈಸೂರು- ನಂಜನ ಗೂಡು ರಸ್ತೆ ಬಂದ್ ಆಗಿದೆ. ಅಪಾಯದ ಮಟ್ಟ ಮೀರಿ ಕಪಿಲಾ ನದಿ ಹರಿಯುತ್ತಿದ್ದು, ಮೈಸೂರು-ಊಟಿ ಹೆದ್ದಾರಿಗೆ ಕಪಿಲಾ ನದಿ ನೀರು ನುಗ್ಗಿದೆ. ಪರಿಣಾಮ ರಸ್ತೆ ಮೇಲೆ ಉಕ್ಕಿಹರಿಯುವ ನೀರಿನಲ್ಲೇ ವಾಹನಗಳು ಸಂಚರಿಸು ತ್ತಿವೆ. ನಂಜನಗೂಡು ತಾಲೂಕು ಮಲ್ಲನ ಮೂಲೆ ಮಠದ ಬಳಿ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ದ್ವಿಚಕ್ರ ವಾಹನಗಳು, ಕಾರು ಸೇರಿದಂತೆ ಎಲ್ಲಾ ವಾಹನ ಗಳು ಅಪಾಯದಲ್ಲಿಯೇ ಸಂಚರಿಸುವಂತಾಗಿದೆ.
ದೇಗುಲ ಜಲಾವೃತ: ನಂಜನಗೂಡಿನ ಮಲ್ಲನಮೂಲೆ ಮಠದ ಬಳಿಯ ಬಸವೇಶ್ವರ ದೇವಾ ಲಯ ಜಲಾವೃತವಾಗಿದ್ದು, ಕಬಿನಿ ಜಲಾಶಯದಿಂದ ಮತ್ತಷ್ಟು ನೀರನ್ನು ಬಿಟ್ಟರೆ ಹೆದ್ದಾರಿ ಸಂಪೂರ್ಣ ಮುಳುಗಡೆಯಾಗುವ ಸಾಧ್ಯತೆ ಇದೆ. ಈಗಾಗಲೆ ಮಲ್ಲನಮೂಲೆ ಮಠದಲ್ಲಿರುವವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.
ಮಾರ್ಗ ಬದಲಾವಣೆ: ಕಪಿಲಾ ನದ ಉಕ್ಕಿ ಹರಿ ಯುತ್ತಿರುವ ಪರಿಣಾಮ ಮೈಸೂರು-ಸುತ್ತೂರು ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿದೆ. ಸುತ್ತೂರಿನಿಂದ ಮೈಸೂರು ಸೇರಿದಂತೆ ವಿವಿಧೆಡೆ ಪ್ರಯಾಣಿಸುವ ಪ್ರಯಾಣಿಕರಿಗೆ ತಾಯೂರು ಮಾರ್ಗದಿಂದ ಕುಪ್ಪೇಗಾಲ ಸೇತುವೆ ಮೂಲಕ ಸಾಗುವಂತೆ ತಿಳಿಸಲಾಗಿದೆ. ಜೊತೆಗೆ ಈಗಾಗಲೇ ನಂಜನಗೂಡು ಶ್ರೀಕಂಠೇಶ್ವರ ದೇವಾಲಯದ ಮುಡಿಕಟ್ಟೆ ಅರ್ಧಭಾಗ, ಹೆಜ್ಜಿಗೆ ಸೇತುವೆ, ಸೋಪಾನಕಟ್ಟೆ, ಹದಿನಾರು ಕಾಲು ಕಂಬ ಸೇರಿ ದಂತೆ ದೇಗುಲ ಸಮೀಪದ ಕೆಲ ಬಡಾವಣೆಗಳು ಮುಳುಗಡೆಯಾಗಿವೆ.
ಹಳ್ಳಿಗಳ ಸಂಪರ್ಕ ಕಡಿತ: ಹುಣಸೂರು ತಾಲೂಕಿನಲ್ಲಿ ಲಕ್ಷ್ಮಣ ತೀರ್ಥ ನದಿ ಉಕ್ಕಿಹರಿಯುತ್ತಿದ್ದು, ತಾಲೂಕಿನ ಹುಣಸೂರು- ಹನಗೋಡು, ಹನಗೋಡು – ಕೊಳುವಿಗೆ, ಕೊಳುವಿಗೆ-ಕೋಣನಹೊಸ ಹಳ್ಳಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಪರಿಣಾಮ 30ಕ್ಕೂ ಹೆಚ್ಚು ಹಳ್ಳಿಗಳ ಸಂಪರ್ಕ ಕಡಿತ ಗೊಂಡಿದ್ದು, ನೆರೆ ಹಾವಳಿ ಪ್ರದೇಶದ ಜನ- ಜಾನುವಾರುಗಳನ್ನು ಸುರಕ್ಷಿತ ಪ್ರದೇಶಗಳಿಗೆ ಕರೆತರಲಾಗಿದೆ.
ರಸ್ತೆ ಸಂಪರ್ಕ ಬಂದ್: ಪಿರಿಯಾಪಟ್ಟಣ ತಾಲೂಕಿನಲ್ಲಿ ಮಳೆ ತುಸು ಕಡಿಮೆಯಾಗಿದ್ದರೂ, ಕಾವೇರಿ ನದಿ ಆರ್ಭಟ ಮುಂದುವರಿದಿದೆ. ತಾಲೂಕಿನ ಆವರ್ತಿ-ಕೊಪ್ಪ, ದಿಂಡಗಾಡು-ಮುತ್ತಿನಮುಳು ಸೋಗೆ, ಕೊಪ್ಪ-ರಾಣಿಗೇಟ್ ಮಾರ್ಗದ ಸೇತುವೆಗಳು ಮುಳುಗಡೆಯಾಗಿದ್ದು, ರಸ್ತೆ ಸಂಪರ್ಕ ಬಂದ್ ಆಗಿದೆ. ಜೊತೆಗೆ ಕಾವೇರಿ ನದಿ ಪಾತ್ರದಲ್ಲಿದ್ದ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದ್ದು, 30ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ.
ಕೇರಳ ವೈನಾಡಿನಲ್ಲಿ ಮಳೆಯ ಪ್ರಮಾಣ ತಗ್ಗಿದ್ದು, ಕಬಿನಿ ಜಲಾ ಶಯಕ್ಕೆ ಒಳ ಹರಿವು ಸ್ವಲ್ಪ ಮಟ್ಟಿಗೆ ತಗ್ಗಿದೆ ಎಚ್.ಡಿ. ಕೋಟೆ ತಾಲೂಕಿ ನಲ್ಲಿ ಕಪಿಲಾ ನದಿ ತುಂಬಿ ಹರಿಯುತ್ತಿದ್ದು, ಬಿದರಹಳ್ಳಿ ಸರ್ಕಲ್- ಎನ್. ಬೇಗೂರು, ಮಾದಪುರ- ಕೆ.ಬೆಳ ತೂರು ಸಂಪರ್ಕ ರಸ್ತೆ ಬಂದ್ ಆಗಿದ್ದು, 25ಕ್ಕೂ ಅಧಿಕ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.