ಇ-ಟೆಂಡರ್‌ ಮೂಲಕ ನಾಟಾ ಹರಾಜು


Team Udayavani, Feb 11, 2017, 12:09 PM IST

mys3.jpg

ಹುಣಸೂರು: ದೇಶಾದ್ಯಂತ ತಂತ್ರಜ್ಞಾನ ಬಳಸಿ ವ್ಯವಹಾರ ನಡೆಸುತ್ತಿರುವ ಸಂದರ್ಭದಲ್ಲೇ ಹುಣಸೂರು ಪ್ರಾದೇಶಿಕ ಅರಣ್ಯ ವಿಭಾಗವು ಸಹ ಇ-ಟೆಂಡರ್‌ ಮೂಲಕ ಮರಗಳ ನಾಟಾ ಹರಾಜು ಮಾಡಲಾರಂಭಿಸಿದೆ.ರಾಜ್ಯದಲ್ಲೇ ಮೊಟ್ಟಮೊದಲ ಬಾರಿಗೆ ಕಲ್ಲಬೆಟ್ಟ ಅರಣ್ಯ ನಾಟಾ ಸಂಗ್ರಹಾಲಯದಲ್ಲಿ ಮರಗಳನ್ನು ಇ-ಟೆಂಡರ್‌ ಮೂಲಕ ಹರಾಜು ಹಾಕಲಾಯಿತು.

ಹುಣಸೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಬಾಲ ಚಂದ್ರ ನೇತೃತ್ವದಲ್ಲಿ ನಡೆದ ಹರಾಜು ಪ್ರಕ್ರಿಯೆ ಯಲ್ಲಿ ತೇಗ, ಅಕೇಶಿಯಾ, ನೀಲಗಿರಿ ಸೇರಿ ವಿವಿಧ ಜಾತಿಯ 1393 ಲಾಟ್‌ಗಳ ಪೈಕಿ 277 ಲಾಟ್‌ ಮರಗಳು ಹರಾಜಾಗಿದ್ದು, 39.61 ಲಕ್ಷ ರೂ. ಸಂಗ್ರಹ ವಾಗಿದೆ.ಆರಂಭದಲ್ಲಿ ಖರೀದಿದಾರರಿಗೆ ಇ-ಟೆಂಡರ್‌ ಪದ್ಧತಿ ಹೊಸ ವ್ಯವಸ್ಥೆಯಾಗಿದ್ದರಿಂದ ತಾಂತ್ರಿಕ ಸಮಸ್ಯೆ ಎದುರಾದರೂ ಬಳಿಕ ಸುಗಮವಾಗಿ ನಡೆಯಿತು.

ಸರ್ಕಾರ ನಿಗದಿಪಡಿಸಿದ ಬೆಲೆಗಿಂತ ಕಡಿಮೆ ನಮೂದಿಸಿದ್ದರಿಂದ 1,116 ಲಾಟ್‌ನ ಮರಗಳು ಹರಾಜಾಗಲಿಲ್ಲ, ಈ ಮರಗಳ ಲಾಟನ್ನು ಬರುವ ಮಾರ್ಚ್‌ನಲ್ಲಿ ಮತ್ತೆ ಇ-ಟೆಂಡರ್‌ ಮೂಲಕ ಹರಾಜು ಹಾಕಲಾಗುತ್ತದೆ. ಹರಾಜು ಪ್ರಕ್ರಿಯೆಯಲ್ಲಿ ಸಹಕರಿಸಿದ ರಾಷ್ಟ್ರೀಯ ಇ-ಮಾರುಕಟ್ಟೆಯ ನೋಡೆಲ್‌ ಅಧಿಕಾರಿ ವಿನಾಯಕ ಕೋಟಿಕರ್‌ ಮಾತನಾಡಿ, ಹಿಂದೆ ಪ್ರಾಯೋಗಿಕವಾಗಿ ಮರ ಹರಾಜನ್ನು ಬೆಳಗಾವಿ, ದಾಂಡೇಲಿ, ಕುಶಾಲನಗರದಲ್ಲಿ ಇ-ಮಾರುಕಟ್ಟೆ ಮೂಲಕ ನಡೆಸಲಾಗಿತ್ತು.

ಇನ್ನು ಮುಂದೆ ಇ-ಟೆಂಡರ್‌ ಮೂಲಕವೇ ನಡೆಸಲು ಇಲಾಖೆ ಉದ್ದೇಶಿಸಿದ್ದು, ಪ್ರಥಮ ಬಾರಿಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದು ಮಾಹಿತಿ ನೀಡಿದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸೋಮಪ್ಪ, ಕಲ್ಲಬೆಟ್ಟ ಸರಕಾರಿ ನಾಟಾ ಸಂಗ್ರಹಾಲಯದ ವಲಯ ಅರಣ್ಯಾಧಿಕಾರಿ ಧನಲಕ್ಷ್ಮೀ, ರೆವ್ಸ್‌ನ ಎಲ್ಲಪ್ಪ ಕಾಡಗೋಳ, ರೈತರು, ಮರದ ವ್ಯಾಪಾರಿಗಳು ಹಾಜರಿದ್ದರು.

* ಸಂಪತ್‌ಕುಮಾರ್‌

ಟಾಪ್ ನ್ಯೂಸ್

Kota-poojary

Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ

SSLLC

leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ

1-horoscope

Daily Horoscope: ಅನವಶ್ಯ ಮಾತುಗಳಿಂದ ದೂರವಿರಿ, ಉದ್ಯೋಗಸ್ಥರ ಸಮಸ್ಯೆ ನಿವಾರಣೆ

Text-Bokk

KSOU: ಪರೀಕ್ಷೆ ಸಮೀಪಿಸುತ್ತಿದ್ದರೂ ಮುದ್ರಿತ ಪಠ್ಯ ಸಿಗಲಿಲ್ಲ

1-hejb

Israel ಸರ್ಜಿಕಲ್‌ ಸ್ಟ್ರೈಕ್‌: ಹೆಜ್ಬುಲ್ಲಾ ಮುಖ್ಯಸ್ಥನ ಅಂತ್ಯಕ್ಕೆ 80 ಟನ್‌ ಬಾಂಬ್‌!

bjp-congress

BJP vs Congress ; ಕೇಸ್‌ ಮೇಲೆ ಕೇಸ್‌

isrel netanyahu

India ವರ, ಇರಾಕ್‌, ಇರಾನ್‌ ಶಾಪ: ವಿಶ್ವಸಂಸ್ಥೆಯಲ್ಲಿ ಇಸ್ರೇಲ್‌ ಪ್ರಧಾನಿ ನೆತನ್ಯಾಹು 


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

crime (2)

Hunsur: ಹಂದಿಫಾರ್ಮ್ ನಲ್ಲಿ ಕಾರ್ಮಿಕನಿಂದ ಮ್ಯಾನೇಜರ್ ಬರ್ಬರ ಹ*ತ್ಯೆ

Mysuru-Simhasana

Mysuru Dasara: ಖಾಸಗಿ ದರ್ಬಾರ್‌ಗೆ ಸ್ವರ್ಣ ಖಚಿತ ಸಿಂಹಾಸನ ಜೋಡಣೆ

Mysore-Sidda

MUDA Case: ನ್ಯಾಯ ನನ್ನ ಪರವಿದೆ, ರಾಜಕೀಯ ಪ್ರೇರಿತ ಕೇಸ್‌ ಎದುರಿಸಿ ಗೆಲ್ಲುವೆ: ಸಿಎಂ

CM-Mysore1

MUDA Scam: ಇಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ ಎಫ್ಐಆರ್‌ ಸಾಧ್ಯತೆ

Mysuru-Dasara

Mysuru Dasara: ಎದೆ ಝಲ್‌ ಎನ್ನಿಸಿದ ಶಬ್ದಕ್ಕೂ ಜಗ್ಗದ ಗಜಪಡೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Kota-poojary

Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ

SSLLC

leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ

1-horoscope

Daily Horoscope: ಅನವಶ್ಯ ಮಾತುಗಳಿಂದ ದೂರವಿರಿ, ಉದ್ಯೋಗಸ್ಥರ ಸಮಸ್ಯೆ ನಿವಾರಣೆ

Text-Bokk

KSOU: ಪರೀಕ್ಷೆ ಸಮೀಪಿಸುತ್ತಿದ್ದರೂ ಮುದ್ರಿತ ಪಠ್ಯ ಸಿಗಲಿಲ್ಲ

1-hejb

Israel ಸರ್ಜಿಕಲ್‌ ಸ್ಟ್ರೈಕ್‌: ಹೆಜ್ಬುಲ್ಲಾ ಮುಖ್ಯಸ್ಥನ ಅಂತ್ಯಕ್ಕೆ 80 ಟನ್‌ ಬಾಂಬ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.