ಅರಣ್ಯ-ವನ್ಯಜೀವಿಗಳನ್ನು ಕಾಪಾಡಿ


Team Udayavani, Oct 17, 2017, 12:57 PM IST

m5-forest.jpg

ಹುಣಸೂರು: ಇಂಗ್ಲೀಷ್‌ ಭಾಷೆ ಕಲಿತರೆ ಸಾಕು ಎನ್ನುವ ಬದಲಿಗೆ ವಿದ್ಯಾರ್ಥಿಗಳಿಗೆ ನಮ್ಮ ಸುತ್ತಮುತ್ತಲಿನ ಪರಿಸರ, ಜನರ ಬದುಕಿನ ಬಗ್ಗೆ ತಿಳಿಸಿಕೊಡಬೇಕಿದ್ದು ವನ್ಯಜೀವಿಗಳು ಉಳಿದರೆ ಮಾತ್ರ ನಾವು ಎಂಬುದನ್ನು ಮನವರಿಕೆ ಮಾಡಿಕೊಡಬೇಕೆಂದು ನೂತನ ಉಪ ವಿಭಾಗಾಧಿಕಾರಿ ನಿತೀಶ್‌ ಅಭಿಪ್ರಾಯಪಟ್ಟರು. 

ನಾಗರಹೊಳೆ ಹುಲಿಸಂರಕ್ಷಿತ ಪ್ರದೇಶದ ವತಿಯಿಂದ ನಗರದ ಅಂಬೇಡ್ಕರ್‌ ಭವನದಲ್ಲಿ ಆಯೋಜಿಸಿದ್ದ 63ನೇ ವನ್ಯಜೀವಿ ಸಪ್ತಾಹದ ಸಮಾರೋಪದಲ್ಲಿ ಭಾಗವಹಿಸಿ ಮಾತನಾಡಿದರು. ಸಾಕಷ್ಟು ಮಂದಿಗೆ ಅರಣ್ಯ ಮತ್ತು ವನ್ಯಜೀವಿ ಮಹತ್ವದ ಬಗ್ಗೆ ಸಾಕಷ್ಟು ಅರಿವಿರುವುದಿಲ್ಲ. ಹಿರಿಯರಿಗಿಂತ ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ವನ್ಯಜೀವಿ ಪ್ರೇಮ ಬೆಳೆಸುವುದು, ಪರಿಸರದ ಬಗ್ಗೆ ಜಾಗತಿ ಮೂಡಿಸುವುದು ಅತ್ಯವಶ್ಯ ಎಂದರು. 

ಹುಣಸೂರು ವನ್ಯಜೀವಿ ವಿಭಾಗದ ಎಸಿಎಫ್ ಪ್ರಸನ್ನಕುಮಾರ್‌ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಕುರಿತು ಮಾಹಿತಿ ನೀಡಿ, ದೇಶದ ಪ್ರತಿಷ್ಠಿತ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ನಾಗರಹೊಳೆ ಅತಿಪ್ರಮುಖವಾದುದು. ಪ್ರಪಂಚದ 7 ಜೀವವೈವಿಧ್ಯ ತಾಣಗಳಲ್ಲಿ ಒಂದಾಗಿರುವ ನೀಲಗಿರಿ ಜೀವ ವೈವಿಧ್ಯದ ನಾಗರಹೊಳೆ ಉತ್ತಮ ಅರಣ್ಯ ಸಂಪತ್ತನ್ನು ಹೊಂದಿದೆ ಎಂದು ಹೇಳಿದರು.

ಹುಲಿ ಜೊತೆಗೆ ಆನೆ, ಚಿರತೆ, ಕರಡಿ, ಕಾಡುನಾಯಿ, ಕಾಡೆಮ್ಮೆ, ಜಿಂಕೆ, ಕಡವೆ, ನವಿಲು, ಸಾರಂಗ, ಕಾಡುಕುರಿ ಸೇರಿದಂತೆ ಅನೇಕ ಅಪರೂಪದ ಪ್ರಾಣಿಗಳಿವೆ. ಇಲ್ಲಿ ಅಂದಾಜು 1200 ಆನೆ, 91 ಹುಲಿಗಳನ್ನು ಗಣತಿಯಲ್ಲಿ ಗುರುತಿಸಲಾಗಿದೆ. ತೇಗ, ಬೀಟೆ, ಹೊನ್ನೆ, ಮತ್ತಿ, ನಂದಿ, ಶ್ರೀಗಂಧ ಸೇರಿದಂತೆ ಅನೇಕ ಜಾತಿಯ ಮರಗಳು, ಪಕ್ಷಿಸಂಕುಲಗಳು ಇಲ್ಲಿವೆ ಎಂದು ಹೇಳಿದರು. ವಿದ್ಯಾರ್ಥಿಗಳಲ್ಲಿ ಅರಣ್ಯ ಪ್ರೇಮ ಬೆಳೆಸಲು ಚಿಣ್ಣರ ವನ ದರ್ಶನವೆಂಬ ಕಾರ್ಯಕ್ರಮ ರೂಪಿಸಲಾಗಿದ್ದು ಅರಣ್ಯ ಮತ್ತು ವನ್ಯಜೀವಿ ರಕ್ಷಣೆಗೆ ಎಲ್ಲರ ಸಹಕಾರ ಅತ್ಯಗತ್ಯವೆಂದರು.

ಅರಣ್ಯ ಸಿಬ್ಬಂದಿಗೆ ಸನ್ಮಾನ: ನಾಗರಹೊಳೆ ಉದ್ಯಾನ ಹಾಗೂ ವನ್ಯಜೀವಿ ಸಂರಕ್ಷಣೆಯಲ್ಲಿ ಅನುಪಮ ಸೇವೆಸಲ್ಲಿಸುತ್ತಿರುವ  ವಿವಿಧ ವಲಯಗಳ ಅರಣ್ಯ ರಕ್ಷಕರಾದ ಆನಂದ್‌ ಈಶ್ವರ ಕಬಾಡಗಿ, ಗೋಪಾಲ ಲಮಾಣಿ, ಸಂತೋಷಕುಮಾರ್‌, ಜವರಯ್ಯ, ಗಿಡ್ಡರೇಗೌಡ, ಎಂ.ಕೆ.ಸ್ವಾಮಿ, ಅರಣ್ಯ ವೀಕ್ಷಕರಾದ ಶಿವರಾಜು, ನವೀನ್‌, ಶಿವಣ್ಣ, ಪುಟ್ಟಬಸವ, ಭದ್ರ, ವಾಹನ ಚಾಲಕ ಗಣೇಶ, ದಿನಗೂಲಿ ನೌಕರ ಸುರೇಶ ಜೆ.ಟಿ, ಕೇರ್‌ ಟೇಕರ್‌ ಮಹದೇವರನ್ನು ಸನ್ಮಾನಿಸಿದರು.

ತಾಪಂ ಉಪಾಧ್ಯಕ್ಷ ಪ್ರೇಮ್‌ಕುಮಾರ್‌, ಮಹಿಳಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಪುಟ್ಟಶೆಟ್ಟಿ, ವಿಶ್ವನಾಥ್‌, ಎಸಿಎಫ್ ಪೌಲ್‌ ಅಂಟೋನಿ, ಆರ್‌ಎಫ್ಒ ಗಳಾದ ಸುರೇಂದ್ರ, ಶಿವರಾಂ, ವನ್ಯಜೀವಿ ಪರಿಪಾಲಕಿ ಡಾ.ಕೃತಿಕಾ ಮಾತನಾಡಿದರು. ಆರ್‌ಎಫ್ಒ ಗಳಾದ ಮಧುಸೂದನ್‌, ಕಿರಣ್‌ಕುಮಾರ್‌, ಅರವಿಂದ್‌, ರುದ್ರೇಶ್‌, ಎಆರ್‌ಎಫ್ಒ, ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಅರಣ್ಯವನ್ನು ಬೇಸಿಗೆ ಕಾಲದಲ್ಲಿ ಬೆಂಕಿ ತಡೆಗಟ್ಟಲು ಸಾಕಷ್ಟು ವೀಕ್ಷಣಾ ಗೋಪುರಗಳು, ಬೆಂಕಿ ರೇಖೆ ಹಾಗೂ ಬೆಂಕಿ ಕಾವಲುಗಾರರಿಂದ ಅರಣ್ಯವನ್ನು ಸಂರಕ್ಷಿಸಲಾಗುತ್ತಿದೆ. ಬೇಸಿಗೆಯಲ್ಲಿ ನೀರಿನ ಸಮಸ್ಯೆ ನೀಗಿಸಲು 19 ಸೋಲಾರ್‌ ಪಂಪ್‌ಸೆಟ್‌ ನಿರ್ಮಿಸಿ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಮಾನವ-ವನ್ಯಜೀವಿ ಸಂಘರ್ಷ ತಪ್ಪಿಸಲು ಆನೆ ಕಂದಕ, ರೈಲ್ವೆ ಹಳಿ ಬಳಸಿ ತಡೆಗೋಡೆ ನಿರ್ಮಿಸಲಾಗಿದೆ. 
-ಪ್ರಸನ್ನಕುಮಾರ್‌, ಹುಣಸೂರು ವನ್ಯಜೀವಿ ವಿಭಾಗದ ಎಸಿಎಫ್ 

ಟಾಪ್ ನ್ಯೂಸ್

5-ullala

Kinya: ಬಾಡಿಗೆ ಮನೆಯಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಜೋಡಿ ಬಂಧನ

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

3-raj-b-shetty

Kannada: ಬೆಳೆ ಕನ್ನಡ : ಸರಣಿ-1 ಕನ್ನಡ ಚಿತ್ರರಂಗ; ಬದಲಾದ ಬದುಕೇ ಸಿನೆಮಾ ಭಾಷೆಗೂ ಕುತ್ತು

9

Kannada Rajyotsava: ಮುಖ್ಯಮಂತ್ರಿಗಳು ಇವ ನಮ್ಮವ ಎಂದಿದ್ದರು!

Kharge–Siddu

Unity lesson: ರಾಜ್ಯ ಸರ್ಕಾರ ಫೇಲಾಗ್ಬಾರ್ದು, ಒಗ್ಗಟ್ಟಾಗಿರಿ: ಎಐಸಿಸಿ ಅಧ್ಯಕ್ಷ ಖರ್ಗೆ ಪಾಠ

Waqf

Waqf Property: ಉತ್ತರ ಕರ್ನಾಟಕದ ಆರು ಜಿಲ್ಲೆಗಳ ಮುಸ್ಲಿಮರಿಗೂ ವಕ್ಫ್ ನೋಟಿಸ್‌ ಬಿಸಿ!

Katapady-kambala

New Policy: ಜಾನಪದ ಕ್ರೀಡೆ ಕಂಬಳಕ್ಕೆ ಅಂತಿಮ ನಿಯಮಾವಳಿ ಸಿದ್ಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Hunsur: ಆಟೋ-ಬೈಕ್ ಡಿಕ್ಕಿ; ಸವಾರ ಸಾವು

ED-Raid

MUDA Case: ಜಾರಿ ನಿರ್ದೇಶನಾಲಯದಿಂದ ನೂರಾರು ಪುಟಗಳ ದಾಖಲೆ ವಶ

JDS

By Election: ಜೆಡಿಎಸ್‌ ಸ್ಟಾರ್‌ ಪ್ರಚಾರಕರ ಪಟ್ಟಿ: ಜಿಟಿಡಿ ಹೆಸರು ಔಟ್‌, ಪುತ್ರ ಎಂಟ್ರಿ 

Hunasuru-Women

Hunasur: ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ತಿಪಟೂರಿನ ಮಹಿಳೆ!

Prathap-Simha

Waqf Property: ವಕ್ಫ್ ಆಸ್ತಿ ಅಕ್ಬರ್, ಔರಂಗಜೇಬ್‌ ಬಿಟ್ಟುಹೋದ ಆಸ್ತಿಯಾ?: ಪ್ರತಾಪ್‌ ಸಿಂಹ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

5-ullala

Kinya: ಬಾಡಿಗೆ ಮನೆಯಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಜೋಡಿ ಬಂಧನ

4-editorial

Editorial: ಸುವರ್ಣ ಕರ್ನಾಟಕ: ವಿಕಾಸಕ್ಕೆ ಕಾರ್ಯಸೂಚಿ ಅಗತ್ಯ

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

3-raj-b-shetty

Kannada: ಬೆಳೆ ಕನ್ನಡ : ಸರಣಿ-1 ಕನ್ನಡ ಚಿತ್ರರಂಗ; ಬದಲಾದ ಬದುಕೇ ಸಿನೆಮಾ ಭಾಷೆಗೂ ಕುತ್ತು

9

New Delhi: ಹುಸಿ ಬಾಂಬ್‌ ಕರೆ ಪತ್ತೆಗೆ ಇಂಟರ್‌ಪೋಲ್‌ ಮೊರೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.