ಆಂತರಿಕ ಒಪ್ಪಂದ ಮಾಡಿಕೊಂಡು ಅಧಿಕಾರ ಹಿಡಿಯಿರಿ: ಮಾಜಿ ಶಾಸಕ ಮಂಜುನಾಥ್
ಚಾಮುಂಡೇಶ್ವರಿ, ಹುಣಸೂರು, ಪಿರಿಯಾಪಟ್ಟಣದಲ್ಲಿ ಪ್ರತಾಪಸಿಂಹ ಯಾರಿಗೆ ಮತ ಹಾಕಿಸಿದ್ದಾರೆ?
Team Udayavani, Jun 18, 2023, 10:21 PM IST
ಹುಣಸೂರು:ಶೀಘ್ರದಲ್ಲೇ ಗ್ರಾಮ ಪಂಚಾಯ್ತಿ ವರಿಷ್ಠರ ಚುನಾವಣೆ ಬರಲಿದ್ದು, ಯಾರೂ ಕೂಡ ಅನಾಗತ್ಯವಾಗಿ ಹಣ ಖರ್ಚುಮಾಡಿಕೊಳ್ಳದಂತೆ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಕಿವಿಮಾತು ಹೇಳಿದರು.
ನಗರದ ಸಾಯಿಬಾಬಾ ಮಂದಿರದ ಅವರಣದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಗ್ರಾ.ಪಂ.ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ನಿಗದಿಯಾಗಲಿದ್ದು, ಈಗಾಗಲೇ ಕೆಲವರು ಲಾಭಿಯಲ್ಲಿ ತೊಡಗಿರುವ ಬಗ್ಗೆ ಮಾಹಿತಿ ಬಂದಿದ್ದು, ಕಳೆದ ನಾಲ್ಕೈದು ಬಾರಿಯ ಮೀಸಲಾತಿಯನ್ನು ಪರಿಗಣಿಸಿ ಮುಂದಿನ ಅವಧಿಗೆ ಮೀಸಲಾತಿ ಪರಿಷ್ಕರಣೆಯಾಗಲಿದೆ. ಆದ್ದರಿಂದ ಆಮಿಷಕ್ಕೆ ಬಲಿಯಾಗಿ ಹಣ ಕಳೆದುಕೊಂಡು ಮುಂದೆ ಪರಿತಪಿಸುವ ಬದಲು ಒಡಂಬಡಿಕೆಯಿಂದ ವರಿಷ್ಠರನ್ನು ಆಯ್ಕೆಮಾಡಿಕೊಳ್ಳುವುದು ಒಳಿತೆಂದರು.
ತಾವೂ ಹಲವು ಮುಖಂಡರನ್ನು ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತಿ ಚುನಾವಣೆಗಳಲ್ಲಿ ಹಣ ಖರ್ಚು ಮಾಡಿ ಗೆಲ್ಲಿಸುವ ಮೂಲಕ ಅಧಿಕಾರ ಹಿಡಿಯಲಾಗದವರಿಗೂ ಅವಕಾಶ ಕಲ್ಪಿಸಿದ್ದೆ. ಆದರೆ ಹಣದ ಆಸೆಗೆ ಬಿದ್ದು ನನಗೆ ಹಾಗೂ ಪಕ್ಷಕ್ಕೂ ದ್ರೋಹ ಮಾಡಿದರು. ಚುನಾವಣೆ ವೇಳೆ ಮಾರಾಟವಾಗಿದ್ದವರೂ ಸಹ ನನ್ನ ಹುಟ್ಟುಹಬ್ಬಕ್ಕೆ ಶುಭಕೋರಲು ಮಧ್ಯರಾತ್ರಿಯಿಂದಲೇ ಪೋನಾಯಿಸುತ್ತಿದ್ದಾರೆಂದು ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.
ನನ್ನ ಅಧಿಕಾರ ಅವಧಿಯಲ್ಲಿ ದೇವಸ್ಥಾನಕ್ಕೆ ಹಣ ಕೊಟ್ಟಿರುವುದು, ರಸ್ತೆ ಮಾಡಿಸುವುದು ಹಾಗೂ ಸಾಗುವಳಿಗೆ ಹಕ್ಕುಪತ್ರ ಕೊಡಿಸಿರುವುದಕ್ಕೆ ಕೆಲವರು ಅವರ ಅಪ್ಪನ ಮನೆಯಿಂದ ಕೊಡುತ್ತಾನಾ ಎಂದು ಟೀಕಿಸುತ್ತಿದ್ದರು. ಯಾವ ರಾಜಕಾರಣಿಯು ಅವರ ಮನೆಯಿಂದ ಕೊಡುವುದಿಲ್ಲ, ಆದರೆ ಜನ ನೀಡಿದ ಅಧಿಕಾರದಿಂದ ಅದನ್ನು ಪುಣ್ಯದ ಕೆಲಸ ಎಂದು ಮಾಡಿದ್ದೇನಷ್ಟೆ. ಕಳೆದ ೧೫ವರ್ಷದಿಂದ ಕಷ್ಟದಲ್ಲಿದ್ದವರಿಗೆ ನನ್ನ ಮನೆಯ ಹಣವನ್ನು ನೀಡಿದ್ದೇನೆಂದರು.
ನನ್ನ56ನೇ ಹುಟ್ಟುಹಬ್ಬದ ಅಂಗವಾಗಿ ಸ್ವತಃ ರಕ್ತದಾನ ಮಾಡುವ ಮೂಲಕ ನನ್ನ ತಂದೆ-ತಾಯಿಯ ಮಗನಾಗಿ ನನ್ನ ರಕ್ತವನ್ನು ದಾನ ಮಾಡಿ ನನ್ನ ವಿರುದ್ದ ಮಾತಾಡುವವರ ಋಣ ತೀರಿಸಿದ್ದೇನೆ.
ನಾನು ಕಳೆದ ೧೫ವರ್ಷದಿಂದ ಸಾರ್ವಜನಿಕರು. ಬಡವರಿಗಾಗಿ ನನ್ನ ಹುಟ್ಟು ಹಬ್ಬದಂದು ಆರೋಗ್ಯ ಶಿಬಿರವನ್ನು ನಡೆಸಿಕೊಂಡು ಬರುತ್ತಿದ್ದೇನೆ. ಇದು ಆನೇಕ ಬಡ ರೋಗಿಗಳಿಗೆ ಉಪಯೋಗವಾಗುವ ಕಾರ್ಯಕ್ರಮವಾಗಿದ್ದು. ಸಾಕಷ್ಟು ಬಡವರು ಇದರ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. ನಾನು ಈ ತಾಲೂಕಿನ ಮಗ, ನನ್ನ ಕೊನೆ ಉಸಿರಿರುವರೆಗೂ ಈ ತಾಲೂಕಿನ ಅಭಿವೃದ್ದಿಗೆ ಹಾಗೂ ಬಡವರ ಕಷ್ಟಗಳಿಗೆ ಶ್ರಮಿಸುತ್ತೇನೆ ಎಂದರು.
ಪ್ರತಾಪ್‌ಸಿಂಹ ಎಳಸು, ಮಂಜುನಾಥ್ ಟಾಂಗ್
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಂಸದ ಪ್ರತಾಪ್‌ಸಿಂಹರವರನ್ನು ಎಳಸು ಎಂದು ಹೇಳಿರುವುದನ್ನು ಸಮರ್ಥಿಸಿಕೊಂಡರು. ಸಿದ್ದರಾಮಯ್ಯ, ಬೊಮ್ಮಾಯಿ, ಡಿ.ಕೆ.ಶಿವಕುಮಾರ್, ಯಡಿಯೂರಪ್ಪ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಾಮಿಲಾಗಿದ್ದಾರೆ ಎಂದಿರುವುದು ಎಳಸುತನದ ಹೇಳಿಕೆ ಎಂದ ಮಂಜುನಾಥ್ ರವರು ಚಾಮುಂಡೇಶ್ವರಿ, ಹುಣಸೂರು, ಪಿರಿಯಾಪಟ್ಟಣದಲ್ಲಿ ಪ್ರತಾಪಸಿಂಹ ಯಾರಿಗೆ ಮತ ಹಾಕಿಸಿದ್ದಾರೆ ಎಂಬುದು ಅವರ ಪಕ್ಷದ ಮುಖಂಡರಿಗೂ, ಕ್ಷೇತ್ರದ ಜನರಿಗೂ ಗೊತ್ತಿದೆ. ಹುಣಸೂರಿನಲ್ಲಿ ಬಿಜೆಪಿಗೆ ಕೇವಲ 6ಸಾವಿರ ಮತ ಅಷ್ಟೇನಾ ಎಂದು ಪ್ರಶ್ನಿಸಿ ಪ್ರತಾಪ್‌ಸಿಂಹರವರ ಪಕ್ಷ ನಿಷ್ಠೆ ಇದೇನಾ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ತಾಲೂಕು ಕಾಂಗ್ರೆಸ್ ಕಾರ್ಯಾಧ್ಯಕ್ಷ ಪುಟ್ಟರಾಜು, ಮುಳ್ಳೂರು ಗ್ರಾ.ಪಂ.ಅಧ್ಯಕ್ಷೆ ಜಯಲಕ್ಷ್ಮೀ ಮತ್ತಿತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.