ನಿರ್ಮಾಣ ಹಂತದಲ್ಲೇ ಕುಸಿಯುತ್ತಿದೆ ಅಂಬೇಡ್ಕರ್ ಭವನ!
10 ಲಕ್ಷ ರೂ.ವೆಚ್ಚದ ಕಾಮಗಾರಿ ಸಂಪೂರ್ಣ ಕಳಪೆ 2018ರಲ್ಲಿ ಭೂಮಿ ಪೂಜೆ ನೆರವೇರಿದ್ದ ಭವನ ಪೂರ್ಣಗೊಳಿಸಿ
Team Udayavani, Oct 6, 2021, 5:25 PM IST
ನಂಜನಗೂಡು: ತಾಲೂಕಿನ ಹಾದನೂರು ಒಡೆಯನಪುರದಲ್ಲಿ ನಿರ್ಮಾಣ ಹಂತದಲ್ಲಿರುವ ಅಂಬೇಡ್ಕರ್ ಭವನ ಕಳಪೆ ಕಾಮಗಾರಿಯಿಂದಕುಸಿಯಲು ಆರಂಭಿಸಿದ್ದು, ಗಿಡಗಂಟಿಗಳು ಬೆಳೆದಿರುವುದರಿಂದ ಪಾಳು ಬಿದ್ದಂತೆ ಕಾಣುತ್ತಿದೆ.
ನಗರದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಈ ಭವನ ಕಟ್ಟಡದ ಕಾಮಗಾರಿಯನ್ನು ಸರ್ಕಾರಿ ಸಾಮ್ಯದ ಭೂಸೇನಾ ನಿಗಮಕ್ಕೆ ವಹಿಸಿ ಹಣ ನೀಡಲಾಗಿತ್ತು. ಕೇವಲ ಅರೆಬರೆ ಕಾಮಗಾರಿಯನ್ನೇ ಮಾಡುತ್ತಿರುವ ನಿಗಮ ಇಲ್ಲಿಯೂ ಅದನ್ನೇ ಮಾಡಿದೆ. ತಾಲೂಕಿನ ಹಾದನೂರು ಒಡೆಯನಪುರದಲ್ಲಿ ಅಂಬೇಡ್ಕರ್ ಸಮುದಾಯ ಭವನದ ಕಟ್ಟಡ ನಿರ್ಮಾಣಕ್ಕೆ ಶಾಸಕ ಹರ್ಷವರ್ಧನ್ 2018ರಲ್ಲಿ ಭೂಮಿ ಪೂಜೆ ನೆರವೇರಿಸಿದ್ದರು.
ಇದನ್ನೂ ಓದಿ:– ಚಂದ್ರಗುತ್ತಿಯಲ್ಲಿ ನವರಾತ್ರಿ:14ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ:ಆರ್.ಶ್ರೀಧರ್ ಹುಲ್ತಿಕೊಪ್ಪ
ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕಿದ್ದ ಭೂಸೇನಾ ನಿಗಮವು ಕಟ್ಟಡವನ್ನು ಅರೆ ಬರೆ ನಿರ್ಮಿಸಿ ಅತ್ತ ತಲೆ ಹಾಕಲೇ ಇಲ್ಲ. ಈಗ ಕಟ್ಟಡ ಪೂರ್ಣಗೊಳ್ಳುವ ಮೊದಲೇ ಕಿಟಕಿಯ ಸಜ್ಜಾ ಕುಸಿದು ಬೀಳಲಾರಂಭಿಸಿದ್ದು, ಕಟ್ಟಡದ ಕಳಪೆ ಕಾಮಗಾರಿಯನ್ನು ಜಗಜಾjಹೀರುಗೊಳಿಸಿದೆ.
ಮೂರು ರ್ವಗಳ ಹಿಂದೆ ಆರಂಭವಾದ ಕಾಮಗಾರಿ ಮುಗಿದೇ ಇಲ್ಲ. ಆಗಲೇ ಕಟ್ಟಡದ ಒಳ ಹಾಗೂ ಹೊರಭಾಗದಲ್ಲಿ ಗಿಡಗಂಟಿಗಳು ಆಳೆತ್ತರಕ್ಕೆ ಬೆಳದು ನಿಂತಿವೆ. ಈಗ ನೋಡಿದರೆ ಕಿಟಕಿಯ ಸಜ್ಜಾ ಕಳಚಿ ಬೀಳುತ್ತಿದ್ದು, ಇದು ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ ಎನ್ನುತ್ತಾರೆ ಗ್ರಾಪಂ ಸದಸ್ಯ ಗ್ರಾಮದ ಬಂಗಾರ.
ತಕ್ಷಣ ಕಾಮಗಾರಿ ಪುನರಾರಂಭವಾಗಬೇಕು ಎಂದು ಅವರುಆಗ್ರಹಿಸಿದ್ದಾರೆ. ಕಾಮಗಾರಿ ವಹಿಸಿಕೊಂಡ ನಿರ್ಮಿತಿ ಕೇಂದ್ರ ತಾನು ಕಾಮಗಾರಿ ಮಾಡದೆ ಶೇಖಡಾವಾರು ಕಮಿಷನ್ ಮೇಲೆ ಕಾಮಗಾರಿಯನ್ನು ಖಾಸಗಿ ಗುತ್ತಿಗೆದಾರರಿಗೆ ವಹಿಸಿದರೆ ಇನ್ನೇನಾದೀತು ಎಂದು ಗ್ರಾಮದ ಜಿ. ನಾರಾಯಣ ಪ್ರಶ್ನಿಸಿ
ದ್ದಾರ. ಮುಂದುವರಿದ ಅವರು ಕಟ್ಟಡದಪಾಯತೆಗೆದು ಭರ್ತಿ ಮಾಡಿದ ಗುತ್ತಿಗೆ ದಾರರರೇ ಬೇರೆ ನಂತರ ಗೊಡೆ ಕಾಮಗಾರಿ ಮಾಡಿದವರೇ ಬೇರೆಯವರಾಗಿದ್ದಾರೆ. ಇನ್ನೇನು ಆರ್‌ಸಿಸಿ ಹಾಕಿ ಕಟ್ಟಡ ಪೂರ್ಣವಾಗುವ ಮೊದಲೇ ಕಿಟಕಿಯ ಸಜ್ಜಾ ಬೀಳಲಾರಂಭಿಸಿದ್ದು, ಈ ಭವನದ ಗುಣಮಟ್ಟ ಕಾಮಗಾರಿಗೆ ಸಾಕ್ಷಿಯಾಗಲಾರಂಭಿಸಿದೆ ಎಂದು ತಿಳಿಸಿದ್ದಾರೆ.
- ಶ್ರೀಧರ್ ಆರ್.ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ
ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
JDS: ಆಂತರಿಕ ಚುನಾವಣೆ ಮೂಲಕವೇ ರಾಜ್ಯಾಧ್ಯಕ್ಷರ ಆಯ್ಕೆ: ಎಚ್.ಡಿ.ಕುಮಾರಸ್ವಾಮಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.