ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಮರಿತಿಬ್ಬೇಗೌಡ ಪುನರಾಯ್ಕೆ


Team Udayavani, Jun 13, 2018, 1:44 PM IST

m6-dakhshina.jpg

ಮೈಸೂರು: ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್‌ ಪ್ರಾಬಲ್ಯ ಮೆರೆದಿದ್ದು, ಮೇಲ್ಮನೆ ಉಪ ಸಭಾಪತಿಯು ಆಗಿರುವ ಮರಿತಿಬ್ಬೇಗೌಡ ಸತತ ನಾಲ್ಕನೇ ಬಾರಿಗೆ ಗೆಲುವಿನ ನಗೆ ಬೀರಿದ್ದಾರೆ.

ಪ್ರಥಮ ಪ್ರಾಶಸ್ತ್ಯದ ಮತಗಳಲ್ಲಿ 7933 ಮತಗಳ ನಿಗದಿತ ಕೋಟಾ ತಲುಪದಿದ್ದರು, ಅಲ್ಪ ಮುನ್ನಡೆ ಕಾಯ್ದುಕೊಂಡಿದ್ದ ಮರಿತಿಬ್ಬೇಗೌಡ, ದ್ವಿತೀಯ ಪ್ರಾಶಸ್ತ್ಯದ ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಕಾಂಗ್ರೆಸ್‌ ಅಭ್ಯರ್ಥಿ ಎಂ.ಲಕ್ಷ್ಮಣ ಎರಡನೇ ಸ್ಥಾನ, ಬಿಜೆಪಿ ಅಭ್ಯರ್ಥಿ ಬಿ.ನಿರಂಜನಮೂರ್ತಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

ಏಕಕಾಲಕ್ಕೆ ಮತ ಎಣಿಕೆ: ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಜಿಲ್ಲೆಗಳನ್ನೊಳಗೊಂಡ  ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ನ ಒಂದು ಸ್ಥಾನಕ್ಕೆ  ಜೂ.8ರಂದು ಮತದಾನ ನಡೆದಿತ್ತು. ಮೈಸೂರಿನ ಪಡುವಾರಹಳ್ಳಿಯಲ್ಲಿರುವ  ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಮಂಗಳವಾರ ಮತ ಎಣಿಕೆ ನಡೆಯಿತು.

ಮೊದಲಿಗೆ ಅಂಚೆ ಮತಪತ್ರಗಳನ್ನು ಎಣಿಸಲಾಯಿತು.  ಕ್ಷೇತ್ರದ 20677 ಮತದಾರರ ಪೈಕಿ  ಮತದಾನವಾಗಿದ್ದ 16696 ಮತಗಳನ್ನು ಮಿಶ್ರಣ ಮಾಡಿ 25 ಮತಪತ್ರಗಳ ಪ್ರತ್ಯೇಕ ಬಂಡಲ್‌ಗ‌ಳನ್ನು ಮಾಡಿ 14 ಟೇಬಲ್‌ಗ‌ಳಲ್ಲಿ  ಏಕಕಾಲಕ್ಕೆ  ಮತ ಎಣಿಕೆ ಆರಂಭಿಸಲಾಯಿತು.

ಮೊದಲ ಸುತ್ತಿನಲ್ಲಿ  ಜೆಡಿಎಸ್‌ನ  ಮರಿತಿಬ್ಬೇಗೌಡ 2605, ಕಾಂಗ್ರೆಸ್‌ಅಭ್ಯರ್ಥಿ ಎಂ.ಲಕ್ಷ್ಮಣ 2137, ಬಿಜೆಪಿಯ ಬಿ.ನಿರಂಜನಮೂರ್ತಿ 1757ಮತಗಳನ್ನು ಪಡೆದಿದ್ದರಿಂದ ಮರಿತಿಬ್ಬೇಗೌಡ 468ಮತಗಳ ಅಂತರವನ್ನು ಕಾಯ್ದುಕೊಂಡರು. 

ತೀವ್ರ ಪೈಪೋಟಿ: ಮತ ಎಣಿಕೆ ಆರಂಭದಿಂದ ಕೊನೆಯವರೆಗೂ ಮರಿತಿಬ್ಬೇಗೌಡ  ಹಾಗೂ ಎಂ.ಲಕ್ಷ್ಮಣ ನಡುವೆ ತೀವ್ರ ಪೈಪೋಟಿ ಕಂಡುಬಂದರೂ ಅಂತಿಮವಾಗಿ 489 ಮತಗಳ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಮರಿತಿಬ್ಬೇಗೌಡ ಸಫ‌ಲವಾದರು. ಉಳಿದಂತೆ ಪಕ್ಷೇತರರಾದ ಎ.ಎಚ್‌.ಗೋಪಾಲಕೃಷ್ಣ-7, ಡಿ.ಕೆ.ತುಳಸಪ್ಪ-2, ಡಾ.ಎಸ್‌.ಬಿ.ಎಂ.ಪ್ರಸನ್ನ-102, ಡಾ.ಮಹದೇವ್‌-295, ಎಂ.ಎನ್‌.ರವಿಶಂಕರ್‌-4, ಪಿ.ಎ.ಶರತ್‌ರಾಜು-6 ಮತಗಳನ್ನು ಪಡೆದರೆ, 13ಮತಗಳು ನೋಟಾ ಪಾಲಾಗಿತ್ತು.

ಚಲಾವಣೆಯಾಗಿದ್ದ  16696 ಮತಗಳಲ್ಲಿ 15,864 ಮತಗಳು  ಕ್ರಮಬದ್ಧವಾಗಿದ್ದು,  882 ಮತಗಳು  ತಿರಸ್ಕೃತಗೊಂಡಿದ್ದವು. ಎರಡನೇ ಪ್ರಾಶಸ್ತದ ಮತಗಳ ಎಣಿಕೆ ಜೊತೆಗೆ ಎಲಿಮಿನೇಷನ್‌ ಪ್ರಕ್ರಿಯೆ ಮೂಲಕ ಮತಗಳನ್ನು ವರ್ಗಾಯಿಸಿದಾಗ ಮರಿತಿಬ್ಬೇಗೌಡ ಅವರಿಗೆ 7170 ಮತಗಳು, ಎಂ.ಲಕ್ಷ್ಮಣ ಅವರಿಗೆ  6805 ಮತಗಳು ದೊರೆಯಿತು.

ಮೊದಲಿನಿಂದಲೂ ತೀವ್ರ ಪೈಪೋಟಿ ನೀಡುತ್ತಲೇ ಬಂದ ಎಂ.ಲಕ್ಷ್ಮಣ ಅವರಿಗಿಂತ  ಮರಿತಿಬ್ಬೇಗೌಡ 365ಮತಗಳ ಮುನ್ನೆಡೆ ಕಾಯ್ದುಕೊಂಡರು. ಆದರೆ, ಗೆಲುವಿಗೆ ನಿಗದಿಪಡಿಸಿದ್ದ  7933 ಮತಗಳ ಕೋಟಾ ತಲುಪಲು ಇನ್ನೂ 763 ಮತಗಳ ಕೊರತೆ ಬಂದಿದ್ದರಿಂದ ಎಂ.ಲಕ್ಷ್ಮಣ ಮತಗಳನ್ನೇ ದ್ವಿತೀಯ ಪ್ರಾಶಸ್Âದ ಮತಗಳನ್ನಾಗಿ ವರ್ಗಾಯಿಸಲಾಯಿತು. ಅಂತಿಮವಾಗಿ 11022 ಮತಗಳೊಂದಿಗೆ ಮರಿತಿಬ್ಬೇಗೌಡ ಗೆಲುವಿನ ನಗೆ ಬೀರಿದರು.

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mysore Dasara: ಮರದ ಅಂಬಾರಿ ಹೊತ್ತು ಅಭಿಮನ್ಯು ತಾಲೀಮು

Mysore Dasara: ಮರದ ಅಂಬಾರಿ ಹೊತ್ತು ಅಭಿಮನ್ಯು ತಾಲೀಮು

Hunasur: ಸಾವಿನಲ್ಲೂ ಒಂದಾದ ಅಕ್ಕ- ತಮ್ಮ

Hunasur: ಸಾವಿನಲ್ಲೂ ಒಂದಾದ ಅಕ್ಕ- ತಮ್ಮ

Mysuru; ಟಿಕೆಟ್‌ ಆಕಾಂಕ್ಷಿಗಳು ಸಕ್ರಿಯವಾಗಿರಬೇಕು: ಸಾ.ರಾ

Mysuru; ಟಿಕೆಟ್‌ ಆಕಾಂಕ್ಷಿಗಳು ಸಕ್ರಿಯವಾಗಿರಬೇಕು: ಸಾ.ರಾ ಮಹೇಶ್‌

Mysuru: ಮುನಿರತ್ನ ಪರ ಬಿಜೆಪಿ ಬ್ಯಾಟಿಂಗ್‌ ಸಲ್ಲದು: ಎಂಎಲ್‌ಸಿ ವಿಶ್ವನಾಥ್‌

Mysuru: ಮುನಿರತ್ನ ಪರ ಬಿಜೆಪಿ ಬ್ಯಾಟಿಂಗ್‌ ಸಲ್ಲದು: ಎಂಎಲ್‌ಸಿ ವಿಶ್ವನಾಥ್‌

22-hunsur-1

Hunsur: ಕಾರು ಪಲ್ಟಿಯಾಗಿ ಎಳನೀರು ವ್ಯಾಪಾರಿ ಸಾವು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.