ಸೋಂಕಿನಿಂದ ಮಕ್ಕಳನ್ನು ರಕ್ಷಿಸಲು ಮಾಸ್ಟರ್ ಪ್ಲ್ಯಾನ್
Team Udayavani, May 23, 2021, 5:34 PM IST
ಮೈಸೂರು: ಇತ್ತೀಚೆಗೆ ಮಕ್ಕಳಲ್ಲಿಯೂ ಸೋಂಕುಕಾಣಿಸಿಕೊಳ್ಳುತ್ತಿದ್ದು, ಪರಿಸ್ಥಿತಿ ಕೈಮೀರಬಾರದೆಂಬಉದ್ದೇಶದಿಂದ ಮುಂಜಾಗ್ರತಾ ಕ್ರಮವಾಗಿನಗರಪಾಲಿಕೆ ವತಿಯಿಂದ ಅಡ್ವೆ„ಸರಿ ಗ್ರೂಪ್ ಫಾರ್‌ಪಿಡಿಯಾಟ್ರಿಕ್ ಕೋವಿಡ್ ಕೇರ್ ಮ್ಯಾನೇಜ್ಮೆಟ್‌ಆರಂಭಿಸಲಾಗಿದೆ ಎಂದು ನಗರಪಾಲಿಕೆಆಯುಕ್ತರಾದ ಶಿಲ್ಪಾ ನಾಗ್ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆಮಾತನಾಡಿದ ಅವರು, ಮೈಸೂರಿನಲ್ಲಿ ದಿನಕ್ಕೆನಾಲ್ಕೈದು ಮಕ್ಕಳಲ್ಲಿ ಕೊರೊನಾ ಸೋಂಕುಕಾಣಿಸಿಕೊಳ್ಳುತ್ತಿದೆ. ಮಕ್ಕಳಲ್ಲಿ ರೋಗನಿರೋಧಕ ಶಕ್ತಿಹೆಚ್ಚಾಗಿರುವ ಕಾರಣ ಅವರಿಗೆ ಸೋಂಕುತಗುಲಿದರೂ ಅಪಾಯದ ಮಟ್ಟ ತಲುಪಿಲ್ಲ.
ಹಾಗೆಂದು ನಾವು ಮುಂಜಾಗ್ರತೆ ತೆಗೆದುಕೊಳ್ಳದೆ ಇರುವಂತಿಲ್ಲ. ಏಕೆಂದರೆ ಸೋಂಕಿನ ತೀವ್ರತೆಯಲ್ಲಿಭಾರತಕ್ಕಿಂತ ಮುಂದೆ ಇರುವ ರಾಷ್ಟ್ರಗಳಲ್ಲಿ ಮಕ್ಕಳಿಗೂಕೊರೊನಾಸೋಂಕಿನಿಂದ ಅಪಾಯವಾಗುತ್ತಿರುವುದು ಕಂಡುಬಂದಿದೆ. ಆದ್ದರಿಂದ ಮಕ್ಕಳನ್ನು ಸೋಂಕಿನಿಂದಪಾರು ಮಾಡಲು ಈಗಿನಿಂದಲೇ ನಗರಪಾಲಿಕೆಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದುಹೇಳಿದರು.ಈ ಸಂಬಂಧ ರಾಜ್ಯ ಸರ್ಕಾರದೊಂದಿಗೂ ಚರ್ಚೆನಡೆಸಿದ್ದು, ಇನ್ನು ಕೆಲವೇ ದಿನಗಳಲ್ಲಿ ಮಕ್ಕಳಲ್ಲಿ ಕೊರೊನಾ ನಿರ್ವಹಣೆಯ ಬಗ್ಗೆ ಪ್ರತ್ಯೇಕಮಾರ್ಗಸೂಚಿ ಹೊರಡಿಸಲಿದೆ.
ಈಗಾಗಲೇನಗರಪಾಲಿಕೆ ವತಿಯಿಂದ ಅಡ್ವೆ„ಸರಿ ಗ್ರೂಪ್ ಫಾರ್‌ಪೀಡಿಯಾಟ್ರಿಕ್ ಕೋವಿಡ್ ಕೇರ್ ಮ್ಯಾನೇಜ್ಮೆಟ್‌ಎಂಬ ತಂಡ ರಚಿಸಲಾಗಿದೆ. ತಂಡದೊಂದಿಗೆ 2 ಬಾರಿಸಭೆ ನಡೆಸಿ ಮಕ್ಕಳಲ್ಲಿಕೊರೊನಾ ನಿರ್ವಹಣೆಯ ಬಗ್ಗೆ ಚರ್ಚೆ ನಡೆಸಲಾಗಿದೆ.ನಗರದಲ್ಲಿ ಮಕ್ಕಳಿಗೆ ಚಿಕಿತ್ಸೆ ನೀಡಲು ಇರುವಸೌಕರ್ಯಗಳನ್ನು ಪರಿಶೀಲಿಸಲಾಗುತ್ತಿದೆ. ನಮ್ಮವ್ಯಾಪ್ತಿಯಲ್ಲಿ 150 ಮಕ್ಕಳ ತಜ್ಞರು ಇದ್ದಾರೆ. ಜೊತೆಗೆಮಕ್ಕಳಿಗೆ ಬೇಕಾದ ಐಸಿಯು, ಉಪಕರಣಗಳು ಎಷ್ಟಿವೆಎಂಬಬಗ್ಗೆಮಾಹಿತಿ ಸಂಗ್ರಹಿಸುತ್ತಿದ್ದೇವೆ. ದೊಡ್ಡವರಿಗೆನೀಡುವಂತೆ ಮಾತ್ರೆಗಳನ್ನು ಮಕ್ಕಳಿಗೆ ನೀಡಲುಸಾಧ್ಯವಿಲ್ಲ. ಆದ್ದರಿಂದ ಮಾತ್ರೆಗಳ ಸಿರಪ್ ರೂಪವನ್ನುಮಕ್ಕಳಿಗೆ ಒದಗಿಸಿ ಪೀಡಿಯಾಟ್ರಿಕ್ ಮೆಡಿಕಲ್ ಕಿಟ್‌ತಯಾರು ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು,ಮಕ್ಕಳ ಜೀವವನ್ನು ಸುರಕ್ಷಿತವಾಗಿರಿಸಲು ಸನ್ನದ್ಧರಾಗುತ್ತಿದ್ದೇವೆ ಎಂದು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.