17ಕ್ಕೆ ಮೇಯರ್ ಚುನಾವಣೆ
Team Udayavani, Nov 9, 2018, 12:19 PM IST
ಮೈಸೂರು: ದೋಸ್ತಿ ಸರ್ಕಾರದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು, ಮೈಸೂರು ಮಹಾನಗರ ಪಾಲಿಕೆ ಮೇಯರ್-ಉಪ ಮೇಯರ್ ಚುನಾವಣೆಗೆ ಕಡೆಗೂ ಎರಡು ತಿಂಗಳ ಬಳಿಕ ನವೆಂಬರ್ 17ಕ್ಕೆ ಮುಹೂರ್ತ ನಿಗದಿಯಾಗಿದೆ. ವಿಧಾನಸೌಧದಲ್ಲಿ ದೋಸ್ತಿಯಾಗಿ ಅಧಿಕಾರ ಹಂಚಿಕೊಂಡಿರುವ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಮೈಸೂರು ಮಹಾ ನಗರಪಾಲಿಕೆಯ ಅಧಿಕಾರ ತಮಗೇ ಬೇಕು ಎನ್ನುತ್ತಿರುವುದರಿಂದ ಮೇಯರ್ ಚುನಾವಣೆ ವಿಳಂಬವಾಗಿದೆ.
65 ಸದಸ್ಯ ಬಲದ ಮೈಸೂರು ಮಹಾ ನಗರಪಾಲಿಕೆಯ ಅಧಿಕಾರ ಹಿಡಿಯಲು ಸರಳ ಬಹುಮತಕ್ಕೆ 33 ಸದಸ್ಯರ ಅವಶ್ಯಕತೆ ಇದೆ. ಆದರೆ, ಆ.31ರಂದು ನಡೆದ ಮಹಾ ನಗರಪಾಲಿಕೆ ಚುನಾವಣೆಯಲ್ಲಿ ಮೈಸೂರಿನ ಮತದಾರರು ಯಾವುದೇ ಪಕ್ಷಕ್ಕೆ ಬಹುಮತ ನೀಡಿಲ್ಲ. 22 ಸ್ಥಾನಗಳೊಂದಿಗೆ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಅಧಿಕಾರ ಹಿಡಿಯಲು ಬೇಕಾದ ಸಂಖ್ಯಾಬಲ ಇಲ್ಲ. ಕಾಂಗ್ರೆಸ್-19, ಜೆಡಿಎಸ್-18, ಬಿಎಸ್ಪಿ-1ಸ್ಥಾನ ಹೊಂದಿದ್ದು, ಐವರು ಪಕ್ಷೇತರರಿದ್ದಾರೆ.
ಬಿಜೆಪಿ ವಿರೋಧ ಪಕ್ಷದ ಸ್ಥಾನ: ಹಿಂದಿನ ಐದು ವರ್ಷ ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಂಡು ಅಧಿಕಾರ ನಡೆಸಿದ್ದವು. ಆದರೆ, ಈ ಬಾರಿ ರಾಜ್ಯಮಟ್ಟದಲ್ಲಿ ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿರುವುದರಿಂದ ಪಾಲಿಕೆಯಲ್ಲೂ ಹೊಂದಾಣಿಕೆಗೆ ಮುಂದಾಗಿರುವುದರಿಂದ ಬಿಜೆಪಿ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಬೇಕಿದೆ.
ಮೈಸೂರು ಪಾಲಿಕೆಯ ಮೇಯರ್ ಸ್ಥಾನ ಕಾಂಗ್ರೆಸ್ ಹಿಡಿಯಲಿದೆ ಎಂದು ಸಿದ್ದರಾಮಯ್ಯ ಈ ಹಿಂದೆಯೇ ಹೇಳಿಕೆ ನೀಡಿದ್ದಾರೆ. ಆದರೆ, ಪಾಲಿಕೆ ಅಧಿಕಾರ ಹಿಡಿಯುವುದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಜೆಡಿಎಸ್ ಮುಖಂಡರು ಬಿಬಿಎಂಪಿ ಮೇಯರ್ ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿರುವುದರಿಂದ ಮೈಸೂರು ಪಾಲಿಕೆಯ ಮೇಯರ್ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಡಬೇಕು ಎಂಬ ವಾದ ಮಂಡಿಸುತ್ತಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜ ಕ್ಷೇತ್ರದಲ್ಲಿ ತಮಗೆ ಟಿಕೆಟ್ ನೀಡದ ಕಾರಣಕ್ಕೆ ಜೆಡಿಎಸ್ ವಿರುದ್ಧ ಬಂಡೆದ್ದಿರುವ ಕೆ.ಹರೀಶ್‌ಗೌಡರ ಇಬ್ಬರು ಬೆಂಬಲಿಗರು ಪಾಲಿಕೆ ಸದಸ್ಯರು ಕಾಂಗ್ರೆಸ್ ಬೆಂಬಲಿಸುವುದು ಹಾಗೂ ಕಾಂಗ್ರೆಸ್ ಬಂಡಾಯ ಸದಸ್ಯ ಕೆ.ವಿ.ಶ್ರೀಧರ್ ಬೆಂಬಲದಿಂದ ಕಾಂಗ್ರೆಸ್‌ನ ಸಂಖ್ಯಾಬಲ 22ಕ್ಕೆ ಏರಿದೆ. ಹೀಗಾಗಿ ಸಂಖ್ಯಾಬಲದ ಆಧಾರದ ಮೇಲೆ ಮೇಯರ್ ಸ್ಥಾನಕ್ಕೆ ಹಕ್ಕು ಮಂಡಿಸಲು ಕಾಂಗ್ರೆಸ್ ಮುಂದಾಗಿದೆ.
17ಕ್ಕೆ ಚುನಾವಣೆ: ಚುನಾವಣಾಧಿಕಾರಿಗಳಾದ ಮೈಸೂರು ಪ್ರಾದೇಶಿಕ ಆಯುಕ್ತರು ಪ್ರಕಟಿಸಿರುವ ಚುನಾವಣಾ ವೇಳಾಪಟ್ಟಿಯಂತೆ ಅಂದು ಬೆಳಗ್ಗೆ 9ಗಂಟೆ ವರೆಗೆ ಮೇಯರ್-ಉಪಮೇಯರ್, ಐದು ಸ್ಥಾಯಿ ಸಮಿತಿಯ ಏಳು ಸದಸ್ಯ ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆ ನಡೆಯಲಿದೆ. 11 ಗಂಟೆಗೆ ಪಾಲಿಕೆಯ ವಿಶೇಷ ಕೌನ್ಸಿಲ್ ಸಭೆ ನಡೆಯಲಿದ್ದು, ನೂತನವಾಗಿ ಆಯ್ಕೆಯಾದ 65 ಸದಸ್ಯರು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಇದಾದ ಬಳಿಕ ಮೇಯರ್, ಉಪ ಮೇಯರ್ ಹಾಗೂ ಸ್ಥಾಯಿ ಸಮಿತಿ ಸದಸ್ಯರ ಸ್ಥಾನಳಿಗೆ ಚುನಾವಣೆ ನಡೆಯಲಿದೆ.
ಆಕಾಂಕ್ಷಿಗಳು: ಸಾಮಾನ್ಯ ವರ್ಗಕ್ಕೆ ಮೇಯರ್, ಹಿಂದುಳಿದ ವರ್ಗಕ್ಕೆ ಉಪ ಮೇಯರ್ ಸ್ಥಾನ ಮೀಸಲಾಗಿದ್ದು, ಆಕಾಂಕ್ಷಿಗಳು ಈಗ ಮೇಯರ್, ಉಪ ಮೇಯರ್ ಸ್ಥಾನಕ್ಕಾಗಿ ಪ್ರಯತ್ನ ಆರಂಭಿಸಿದ್ದಾರೆ. ಮೇಯರ್ ಸ್ಥಾನಕ್ಕೆ ಜೆಡಿಎಸ್‌ನಿಂದ ಪಾಲಿಕೆ ಮಾಜಿ ಸದಸ್ಯ ಅವ್ವಮಾದೇಶ್ ಪತ್ನಿ ಭಾಗ್ಯ, ರುಕ್ಮಿಣಿ ಮಾದೇಗೌಡ, ಅಶ್ವಿನಿ ಅನಂತು, ಕಾಂಗ್ರೆಸ್‌ನಿಂದ ಮಾಜಿ ಉಪಮೇಯರ್ ಪುಷ್ಪಲತಾ ಜಗನ್ನಾಥ್, ಶೋಭಾ ಸುನೀಲ್ ಆಕಾಂಕ್ಷಿಗಳಾಗಿದ್ದಾರೆ. ಉಪ ಮೇಯರ್ ಸ್ಥಾನಕ್ಕೆ ಜೆಡಿಎಸ್‌ನಿಂದ ರಮಣಿ, ಕಾಂಗ್ರೆಸ್‌ನಿಂದ ಗೋಪಿ ಇನ್ನಿತರರು ಆಕಾಂಕ್ಷಿಗಳಾಗಿದ್ದರೂ ಮೇಯರ್ ಸ್ಥಾನ ಯಾವ ಪಕ್ಷಕ್ಕೆ ಸೇರಲಿದೆ ಎನ್ನುವುದರ ಮೇಲೆ ಉಪಮೇಯರ್ ಪಟ್ಟ ನಿರ್ಧಾರವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್
Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.