![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, May 3, 2020, 6:25 PM IST
ನಂಜನಗೂಡು: ತಾಲೂಕಿನ ಗ್ರಾಮೀಣ ಪ್ರದೇಶಗಳಿಗೂ ವ್ಯಾಪಿಸಿದ ಕೋವಿಡ್ 19 ನಂಜನಗೂಡನ್ನು ಕೆಂಪು ವಲಯವನ್ನಾಗಿಸಿ ಎಲ್ಲರಲ್ಲೂ ಆತಂಕ ಉಂಟು ಮಾಡಿತ್ತು. ಇದೀಗ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಕೋವಿಡ್ 19 ಪಾಸಿಟಿವ್ ಬಂದಿದ್ದ ಗ್ರಾಮಗಳಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿದ್ದು, ಎಲ್ಲವೂ ನೆಗೆಟಿವ್ ಬಂದಿದ್ದ ರಿಂದ ತಾಲೂಕಿನ ಜನತೆ ನೆಮ್ಮದಿಯ ಉಸಿರು ಬಿಡುವಂತಾಗಿದೆ.
ಏ.27ರಿಂದ ಗ್ರಾಮಗಳಿಗೆ ತೆರಳಿದ ವೈದ್ಯಕೀಯ ತಂಡ ಅಲ್ಲಿನ ಪಾಸಿಟಿವ್ ಸಂಪರ್ಕಕ್ಕೆ ಬಂದವರ ಎಲ್ಲರ ಪರೀಕ್ಷೆ ಮುಗಿಸಿದ್ದು, ಶನಿವಾರ ತಾಂಡವಪುರ ಗ್ರಾಮದಲ್ಲೂ ಎಲ್ಲ ಸಂಪರ್ಕಿತರ ಪರೀಕ್ಷೆಯನ್ನು ಪೂರ್ಣಗೊಳಿಸಿದೆ. ತಾಲೂ ಕಿನ ಹೆಬ್ಯಾ, ಬ್ಯಾಳಾರು, ಕೂಗಲೂರು, ದೇವರಸನಹಳ್ಳಿ ಹಾಗೂ ತಾಂಡವಪುರದಲ್ಲಿ 430 ಮಂದಿಯ ವೈದ್ಯಕೀಯ ಪರೀಕ್ಷೆ ನಡೆದಿದೆ. ಇಲ್ಲಿ ಎಲ್ಲರಿಗೂ
ಕೋವಿಡ್ 19 ನೆಗೆಟಿವ್ ವರದಿ ಬಂದಿದ್ದರಿಂದ ತಾಲೂಕು ಆಡಳಿತ ಹಾಗೂ ಜನತೆ ನಿಟ್ಟುಸಿರು ಬಿಡುವಂತಾಗಿದೆ.ಜ್ಯುಬಿಲಿಯಂಟ್ ಸಂಪರ್ಕಿತರೆಲ್ಲರ ವೈದ್ಯಕೀಯ ಪರೀಕ್ಷೆ ಪೂರ್ಣಗೊಂಡಿದ್ದು, ತಾಲೂಕು ಹಸಿರು ವಲಯಕ್ಕೆ ಬರುವುದಕ್ಕಾಗಿ ಕಾಯಬೇಕಾಗಿದೆ. ತಾಲೂಕು ವೈದ್ಯಾಧಿಕಾರಿ ಕಲಾವತಿ, ಡಾ.ನಾಗೇಂದ್ರ, ಡಾ.ರವೀಂದ್ರ ವೈದ್ಯಕೀಯ ತಪಾಸಣೆ ಮಾಡಿದರು.
Hunsur: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು
Mob Attack: ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ: ಆರೋಪಿಯ ಅಂಗಡಿ ಸಿಬಂದಿ ದುಷ್ಕೃತ್ಯ ಶಂಕೆ
80 ಸಾವಿರ ಲಂಚ ಸ್ವೀಕರಿಸುವಾಗ ಸಬ್ ಇನ್ಸ್‌ಪೆಕ್ಟರ್ ಲೋಕ ಬಲೆಗೆ
Dr G. Parameshwar: ಉದಯಗಿರಿ ಪ್ರಕರಣ: “ಬುಲ್ಡೋಜರ್’ ಕ್ರಮ ಇಲ್ಲಿ ಅಗತ್ಯವಿಲ್ಲ; ಪರಂ
ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್
You seem to have an Ad Blocker on.
To continue reading, please turn it off or whitelist Udayavani.