ಮೈಸೂರಿಗೆ ಆಗಮಿಸಿದ ಮಿಲಿಂದ್ ಸೋಮನ್
Team Udayavani, Dec 27, 2022, 1:41 PM IST
ಮೈಸೂರು: ಮಿಲಿಂದ್ ಸೋಮನ್ ಸೈಕಲ್ ಮತ್ತು ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಎಂಟು ದಿನಗಳ ಸುಸ್ಥಿರ ಪ್ರಯಾಣ ಕೈಗೊಂಡಿದ್ದಾರೆ. ಪರಿಸರ ಸ್ನೇಹಿ ಸಾರಿಗೆ, ಸುಸ್ಥಿರ ಜೀವನ ಶೈಲಿ ಮತ್ತು ಆರೋಗ್ಯ ಮತ್ತು ಫಿಟ್ನೆಸ್ ಮಹತ್ವವನ್ನು ಸಾರುವ 1,400 ಕಿ.ಮೀ. ದೂರದ ಗ್ರೀನ್ ರೈಡ್ ಅಭಿಯಾನದಡಿ ಮಿಲಿಂದ್ ಸೋಮನ್ ಮುಂಬೈಯಿಂದ ಪ್ರಯಾಣ ಆರಂಭಿಸಿದ್ದಾರೆ.
ಗ್ರೀನ್ ರೈಡ್‌ಗೆ ಮುಂಬೈಯಲ್ಲಿ ಡಿ.19ರಂದು ಚಾಲನೆ ನೀಡಲಾಗಿತ್ತು. ಅಭಿಯಾನದ ಭಾಗವಾಗಿ ಮೈಸೂರಿಗೆ ಆಗಮಿಸಿದ ಮಿಲಿಂದ್ ಸೋಮನ್, ಬ್ಯಾಂಕಿನ ಮೈಸೂರಿನ ಪ್ರಾದೇಶಿಕ ಕಚೇರಿಗೆ ಆಗಮಿಸಿ ಸಿಬ್ಬಂದಿ, ಗ್ರಾಹಕರು ಮತ್ತು ಅಭಿಮಾನಿಗಳೊಂದಿಗೆ ಮಾತುಕತೆ ನಡೆಸಿದರು.
ಸ್ವತ್ಛ ಪರಿಸರದ ಮಹತ್ವವನ್ನು ಒತ್ತಿ ಹೇಳಿದ ಅವರು ಸುಸ್ಥಿರ ಮತ್ತು ಪರಿಸರ ಸ್ನೇಹಿ ಸಾರಿಗೆ ಮಾದರಿಗಳನ್ನು ಅನುಸರಿಸಲು ಕೋರಿದರು. ದೈನಂದಿನ ಜೀವನದಲ್ಲಿ ಫಿಟ್ನೆಸ್ ಎಷ್ಟು ಅಗತ್ಯ ಎಂಬುದನ್ನು ತಿಳಿಸಿದರು.
ಇದೇ ಸಂದರ್ಭದಲ್ಲಿ ಬ್ಯಾಂಕ್ ಅಧಿಕಾರಿಗಳೊಂದಿಗೆ ಕಚೇರಿಯ ಆವರಣದಲ್ಲಿ ಗಿಡಗಳನ್ನು ನೆಟ್ಟರು.
ಗ್ರೀನ್ ರೈಡ್ 2.0 ಉಪಕ್ರಮದ ಕುರಿತು ಮಾತನಾಡಿದ ಬ್ಯಾಂಕ್ ಆಫ್ ಬರೋಡದ ವಲಯ ಮುಖ್ಯಸ್ಥ ಮತ್ತು ಜನರಲ್ ಮ್ಯಾನೇಜರ್ ಸುಧಾಕರ ಡಿ. ನಾಯಕ್ ಅವರು, ಪರಿಸರ ಸಂರಕ್ಷಣೆ ದೇಶದ ಪ್ರತಿಯೊಬ್ಬ ಪ್ರಜೆಯೂ ದೇಶಕ್ಕಾಗಿ ಮಾಡಬೇಕಾದ ಕರ್ತವ್ಯ. ಈ ನಿಟ್ಟಿನಲ್ಲಿ ಇಡುವ ಪ್ರತಿಯೊಂದು ಸಣ್ಣ ಹೆಜ್ಜೆಯೂ ಸುಸ್ಥಿರ ಜೀವನ ಶೈಲಿಯತ್ತ ಕೊಂಡೊಯ್ದು, ಪರಿಸರ ಸಂರಕ್ಷಣೆಗೆ ದೊಡ್ಡ ಕೊಡುಗೆ ನೀಡಬಲ್ಲದು. ಈ ಕುರಿತು ಅರಿವು ಮೂಡಿಸಲು ಹಮ್ಮಿಕೊಂಡಿರುವ ಗ್ರೀನ್ ರೈಡ್ ಉಪಕ್ರಮದೊಂದಿಗೆ ಗುರುತಿಸಿಕೊಳ್ಳಲು ಬ್ಯಾಂಕ್ ಆಫ್ ಬರೋಡ ಹೆಮ್ಮೆ ಪಡುತ್ತದೆ. ಎಲ್ಲ ಭಾರತೀಯರೂ ಈ ನಿಟ್ಟಿನಲ್ಲಿ ಸಂಘಟಿತ ಕ್ರಮಗಳನ್ನು ಕೈಗೊಳ್ಳಬೇಕೆಂದು ಬ್ಯಾಂಕ್ ಆಶಿಸುತ್ತದೆ ಎಂದರು.
ಮಿಲಿಂದ್ ಸೋಮನ್ ಮಾತನಾಡಿ, ಒಂದು ಆಹ್ಲಾದಕರ ಮತ್ತು ಮಾಲಿನ್ಯ ಮುಕ್ತ ನಗರವಾಗಿ ಮೈಸೂರು ನನಗೆ ನೆನಪಿದೆ. ಆದರೆ ವರ್ಷದಿಂದ ವರ್ಷಕ್ಕೆ ಮಾಲಿನ್ಯ ಹೆಚ್ಚುತ್ತಿದೆ. ಮೈಸೂರಿನ ಜನರಿಗೆ ನನ್ನ ಸಂದೇಶವೇನೆಂದರೆ, ಉಸಿರಾಡಲು ಸ್ವತ್ಛ ವಾಯು ದೊರೆಯದಿದ್ದರೆ ನಗರ ಸಾಧಿಸುವ ಯಾವುದೇ ಅಭಿವೃದ್ಧಿ, ಬೆಳವಣಿಗೆಯೂ ನಿರರ್ಥಕ. ನಮ್ಮ ದೈನಂದಿನ ಜೀವನದಲ್ಲಿ ಒಂದು ಸಣ್ಣ ಬದಲಾವಣೆ ತಂದರೂ, ಉದಾಹರಣೆಗೆ ಸಣ್ಣ ದೂರದ ಪ್ರಯಾಣಕ್ಕೆ ಡ್ರೈವ್ ಮಾಡದೇ ನಡೆದುಕೊಂಡು ಹೋಗಿಯೋ ಅಥವಾ ಸೈಕ್ಲಿಂಗ್ ಮಾಡಿಯೋ, ಅಥವಾ ಎಲೆಕ್ಟ್ರಿಕ್ ವಾಹನಗಳನ್ನು ಬಳಸಿದರೆ, ಪರಿಸರದಲ್ಲಿ ದೊಡ್ಡ ಬದಲಾವಣೆಗಳನ್ನು ನಾವು ತರಬಹುದು. ಹಳೆಯ ಮೈಸೂರಿನ ವಾತಾವರಣವನ್ನು ಖುಷಿಯಿಂದ ಅನುಭವಿಸಬಹುದು ಎಂದರು.
ಬ್ಯಾಂಕ್ ಆಫ್ ಬರೋಡದ ಉಪ ಪ್ರಾದೇಶಿಕ ವ್ಯವಸ್ಥಾಪಕ ಲೋಕೇಶ್, ಬ್ಯಾಂಕ್ ಆಫ್ ಬರೋಡದ ಪ್ರಾದೇಶಿಕ ವ್ಯವಸ್ಥಾಪಕ ಅನುಜ್ ಅವಸ್ಥಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ
ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ
MUST WATCH
ಹೊಸ ಸೇರ್ಪಡೆ
Belagavi: ಕಾರಿನಲ್ಲಿ ಹೋಗುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಗುಂಡಿನ ದಾಳಿ
Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್ ರಗಳೆ
German Shepherd: ಕೋಳಿ ತಿಂದಿದ್ದಕ್ಕೆ ಜರ್ಮನ್ ಶೆಫರ್ಡ್ ನಾಯಿ ಕೊಂದ!
Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ
Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.