ಕಾಡ್ಗಿಚ್ಚು ನಂದಿಸಲು ಶೀಘ್ರವೇ ಸೇನಾ ಹೆಲಿಕಾಪ್ಟರ್‌: ಸಿ.ಸಿ.ಪಾಟೀಲ್‌

Team Udayavani, Jan 2, 2020, 5:09 PM IST

WildFire-730

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Use

ಮೈಸೂರು: ಬಂಡೀಪುರ, ನಾಗರಹೊಳೆ ಸೇರಿದಂತೆ ಮೈಸೂರು ಭಾಗದ ಅರಣ್ಯ ಪ್ರದೇಶದಲ್ಲಿ ಉಂಟಾಗುವ ಕಾಡ್ಗಿಚ್ಚನ್ನು ನಂದಿಸಲು ಶೀಘ್ರವೇ ಸೇನಾ ಹೆಲಿಕಾಪ್ಟರ್‌ ನೀಡುವಂತೆ ರಕ್ಷಣಾ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ಅರಣ್ಯ ಸಚಿವ ಸಿ.ಸಿ.ಪಾಟೀಲ್‌ ಹೇಳಿದರು.

ಮೈಸೂರು ಮೃಗಾಲಯದಲ್ಲಿ ಜೋಡಿ ಹೂಲಾಕ್‌ ಗಿಬ್ಬನ್‌ ವಾನರ ಪ್ರಬೇಧ‌ವನ್ನು ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ ಸರಿಯಾದ ಕ್ರಮ ಕೈಗೊಳ್ಳದ ಪರಿಣಾಮ ಹಿಮವದ್‌ ಗೋಪಾಲಸ್ವಾಮಿ ಬೆಟ್ಟದಲ್ಲಿ 70 ಎಕರೆಯಷ್ಟು ಅರಣ್ಯ ನಾಶವಾಗಿತ್ತು.

ಈ ಹಿನ್ನೆಲೆಯಲ್ಲಿ ಸೇನಾ ಹೆಲೆಕಾಪ್ಟರ್‌ ಒದಗಿಸಲು ರಕ್ಷಣಾ ಸಚಿವರೊಂದಿಗೆ ಚರ್ಚಿಸಲಾಗಿದ್ದು, ಕಾಪ್ಟರ್‌ನ್ನು ನಿರ್ವಹಣೆ ಮಾಡಲು ಅದಕ್ಕೆ ತಗಲುವ ವೆಚ್ಚದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ನಿರ್ವಹಣೆಗೆ ಹೆಚ್ಚು ಖರ್ಚು ಆಗುವುದಿಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ, ಮೈಸೂರು ಏರ್‌ಬೇಸ್‌ಗೆ ಶಾಶ್ವತವಾಗಿ ಸೇನಾ ಹೆಲಿಕಾಪ್ಟರ್‌ ಒದಗಿಸುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಹಿಮವದ್‌ ಗೋಪಾಲಸ್ವಾಮಿ ಬೆಟ್ಟದಲ್ಲಿ ಕಳೆದ ವರ್ಷ ಪೈರ್‌ಲೈನ್‌ ಗುರುತಿಸಿರಲಿಲ್ಲ. ಇದರಿಂದ ಕಾಡ್ಗಿಚ್ಚಿನಿಂದ ಅಪಾರ ಹಾನಿಯಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಅಧಿಕಾರಿಗಳು ಈಗಾಗಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ರಸ್ತೆ ಬದಿಯಲ್ಲಿರುವ ಹುಲ್ಲಿಗೆ ಬೆಂಕಿ ಹೊತ್ತಿಕೊಂಡು ಇಡೀ ಅರಣ್ಯಕ್ಕೆ ವ್ಯಾಪಿಸಿತ್ತು.

ಹೀಗಾಗಿ, ಈ ಬಾರಿ ರಸ್ತೆ ಬದಿಯ ಹುಲ್ಲನ್ನು ಸುಟ್ಟು ಸ್ವಚ್ಛಗೊಳಿಸಲಾಗಿದೆ. ಕಾಡಂಚಿನ ಜನರು ಬೆಂಕಿ ನಂದಿಸಲು ಅರಣ್ಯ ಇಲಾಖೆಗೆ ಹೆಚ್ಚು ಸಹಾಯ ಮಾಡುತ್ತಾರೆ. ಅವರಿಗೆ ಸರಕಾರದಿಂದ ನೀಡಲಾಗುವ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದು ಹೇಳಿದರು.
ವನ್ಯ ಪ್ರಾಣಿ ಮತ್ತು ಮಾನವ ಸಂಘರ್ಷ, ಕಾಡಂಚಿನ ಗ್ರಾಮದಲ್ಲಿ ಬೆಳೆ ಹಾನಿ ತಡೆಯಲು ಆನೆ ಕಂದಕಗಳನ್ನು ಮಾಡಲಾಗುತ್ತದೆ. ಕೆಲವೆಡೆ ಸೋಲಾರ್‌ ಬೇಲಿ ಅಳವಡಿಸಲಾಗಿದೆ ಎಂದರು.

ಪೊಲೀಸ್‌ ಇಲಾಖೆಯಲ್ಲಿ ನೀಡಲಾಗುವ ಸಿಎಂ ಪದಕವನ್ನು ಅರಣ್ಯ ಇಲಾಖೆಯಲ್ಲಿ ನೀಡಬೇಕೆಂದು ಆರಂಭಿಸಿಲಾಗಿದ್ದ ಕಾರ್ಯಕ್ರಮ ನನೆಗುದಿಗೆ ಬಿದ್ದಿರುವುದು ಗಮನಕ್ಕೆ ಬಂದಿದೆ. ಶೀಘ್ರವಾಗಿ ಅರಣ್ಯ ಇಲಾಖೆಗೂ ಸಿಎಂ ಪದಕ ನೀಡಲಾಗುತ್ತದೆ.
– ಸಿ.ಸಿ.ಪಾಟೀಲ್‌, ಅರಣ್ಯ ಸಚಿವ.

ಟಾಪ್ ನ್ಯೂಸ್

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

ಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

Uddhav Thackeray’s bag inspection by election commission, controversy

Maha Election; ಚು.ಆಯೋಗದಿಂದ ಉದ್ಧವ್‌ ಠಾಕ್ರೆ ಬ್ಯಾಗ್‌ ಪರಿಶೀಲನೆ, ವಿವಾದ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ

Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

“40 ಪರ್ಸೆಂಟ್‌ ಸಿಎಂ’ಗೆ ಸಾಕ್ಷಿ ಕೊಟ್ಟಿದ್ರ್ಯಾ?: ಸಿಎಂಗೆ ಸಿ.ಟಿ. ರವಿ

Congress: “40 ಪರ್ಸೆಂಟ್‌ ಸಿಎಂ’ಗೆ ಸಾಕ್ಷಿ ಕೊಟ್ಟಿದ್ರ್ಯಾ?: ಸಿಎಂಗೆ ಸಿ.ಟಿ. ರವಿ

Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್‌

Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್‌

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ

Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.