ಮಿನಿ ವಿಧಾನಸೌಧದ ಮಂದೆಯೇ ಮಿನಿ ಕೆರೆ ಸೃಷ್ಟಿ
Team Udayavani, Aug 18, 2017, 11:51 AM IST
ತಿ.ನರಸೀಪುರ: ಇತ್ತಿಚೆಗೆ ಸುರಿದ ಮಳೆಯಿಂದ ಪಟ್ಟಣದ ತಾಲೂಕು ಆಡಳಿತ ಕಚೇರಿ ಮಿನಿ ವಿಧಾನಸೌಧದ ಮುಂಭಾಗದಲ್ಲಿ ನೀರು ನಿಂತು ಮಿನಿ ಕರೆಸೃಷ್ಟಿಯಾದಂತೆ ಕಾಣುತ್ತಿದೆ. ನೀರು ಸರಾಗವಾಗಿ ಹರಿಯಲು ಸರಿಯಾದ ವ್ಯವಸ್ಥೆ ಕೊರತೆ ಸೇರಿದಂತೆ ವಿವಿಧ ಮೂಲ ಭೂತ ಸೌಕರ್ಯಗಳ ಸಮಸ್ಯೆ ಎದ್ದು ಕಾಣುತ್ತಿದೆ.
ಹಳೇ ತಾಲೂಕು ಕಚೇರಿ ಹಿಂಭಾಗದಲ್ಲಿ 12 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿರುವ ಮಿನಿ ವಿಧಾನಸೌಧ ಆಸು ಪಾಸು ಮಳೆ ನೀರು ಹೋಗಲು ಸೂಕ್ತ ಸೌಲಭ್ಯವಿಲ್ಲ. ಇದರಿಂದ ಜೋರಾಗಿ ಮಳೆ ಸುರಿದರೆ ಕಟ್ಟಡದ ಮುಂದೆಯೂ ನೀರು ನಿಂತರ ಜನರಿಗೆ ಸಂಚಾರ ದುಸ್ತರವಾಗುತ್ತಿದೆ. ಜತೆಗೆ ಸಾರ್ವಜನಿಕರಿಗೆ ಶೌಚಾಲಯ ಸೌಲಭ್ಯವೂ ಇಲ್ಲ.
ಬಯಲೇ ಶೌಚಾಲಯ: ಕಂದಾಯ ಇಲಾಖೆಯ ಕೆಲಸ ಕಾರ್ಯಗಳಿಗೆ ಹಾಗೂ ಇನ್ನಿತರ ಸಾರ್ವಜನಿಕ ಕೆಲಸಗಳಿಗೆ ಬರುವ ಜನರು ಗಂಟೆಗಟ್ಟಲೇ ಕಾಯಬೇಕಾದ ಪರಿಸ್ಥಿತಿ ಇದೆ. ಈ ವೇಳೆ ಶೌಚಾಲಯವಿಲ್ಲದ ಕಾರಣ ಜನರು ಬಯಲಿನತ್ತ ತೆರಳುತ್ತಾರೆ. ಕಟ್ಟಡದ ಸೆಲ್ಲಾರ್(ಕೆಳಹಂತ)ನಲ್ಲೂ ಜೋರು ಮಳೆ ಬಂದರೆ ನೀರು ನಿಲ್ಲುವ ಸಾಧ್ಯತೆ ಹೆಚ್ಚಾಗಿದೆ.
ಸ್ಥಳಾಂತರ: ತಾಲೂಕು ಕಚೇರಿ ಹೊಸ ಕಟ್ಟಡಕ್ಕೆ ಸ್ಥಳಾಂತರವಾದರೂ ಹಳೇ ಕಚೇರಿಯ ಕಟ್ಟಡದ ತೆರವು ಕಾರ್ಯ ಪೂರ್ಣಗೊಂಡಿಲ್ಲ. ಪ್ರತಿ ವರ್ಷ ಕಚೇರಿಯ ಮುಂಭಾಗದಲ್ಲೂ ನಾಡ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಹಾಗೂ ಶಾಲಾ ಮಕ್ಕಳ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತವೆ. ಆದರೆ ಇತ್ತಿಚೆಗೆ ಸುರಿದ ಮಳೆಯಿಂದಾಗಿ ಮೈದಾನ ಪೂರ್ತಿ ನೀರಿನಿಂದ ಭರ್ತಿಯಾಗಿದ್ದ ಹಿನ್ನಲೆಯಲ್ಲಿ ಗುರುಭವನದಲ್ಲಿ ತಕ್ಷಣವೇ ಬದಲಾಯಿಸಲಾಯಿತು.
ತಾಲೂಕು ಆಡಳಿತದ ಎಲ್ಲಾ ಕಚೇರಿಗಳು ಇಲ್ಲಿಗೆ ಸ್ಥಳಾಂತರಗೊಳ್ಳಬೇಕೆಂಬ ಉದ್ದೇಶದಿಂದ ನಿರ್ಮಿಸಿದ್ದರೂ ಅನೇಕ ಇಲಾಖೆಗಳು ಇನ್ನೂ ಈ ಕಟ್ಟಡಕ್ಕೆ ಸ್ಥಳಾಂತರವಾಗದೇ ಜನರು ನಿಗದಿತ ಕಚೇರಿಗಳಿಗೆ ತೆರಳಿ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಬೇಕಾದ ಅನಿವಾರ್ಯ ಎದುರಾಗಿದೆ.
ಮಳೆ ಬಂದರೆ ನೀರು ಆವರಣದ ಆಸು ಪಾಸು ನೀರು ನಿಲ್ಲುವುದರಿಂದ ಜನರು ಹಾಗೂ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗಿದ್ದು, ಜತೆಗೆ ಇಲ್ಲಿ ಬರುವ ಜನರಿಗೆ ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಲಭ್ಯವಿಲ್ಲ. ಈ ಬಗ್ಗೆ ಅಧಿಕಾರಿಗಳು ತುರ್ತು ಗಮಮನಹರಿಸಬೇಕು.
-ಸಾರ್ವಜನಿಕರು, ತಿ.ನರಸೀಪುರ
ಮಿನಿ ವಿಧಾನಸೌಧದ ಹೊರ ಭಾಗದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಜತೆಗೆ ಮಳೆ ನೀರು ಬಂದರೆ ಸುಗಮ ಸಂಚಾರಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ.
-ಬಿ.ಎಸ್. ರಾಜು, ತಾಪಂ ಇಒ
* ಎಸ್. ಬಿ.ಪ್ರಕಾಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Love Reddy: ತೆರೆಗೆ ಬಂತು ʼಲವ್ ರೆಡ್ಡಿʼ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.