ಜನತೆಗೆ ಸೌಕರ್ಯ ಕಲ್ಪಿಸಲು ಸಚಿವರು ವಿಫಲ: ಪುಟ್ಟಸ್ವಾಮಿ
Team Udayavani, Aug 29, 2017, 12:12 PM IST
ತಿ.ನರಸೀಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರಿಬ್ಬರೂ ಶಾಸಕರಾಗಿ ಪ್ರತಿನಿಧಿಸುವ ಪಟ್ಟಣಕ್ಕೆ ಸಮರ್ಪಕವಾಗಿ ಮೂಲಭೂತ ಸೌಕರ್ಯ ಕಲ್ಪಿಸದೆ ತಾಲೂಕು ಆಡಳಿತವನ್ನು ದುರ್ಬಲ ಸ್ಥಿತಿಯಲ್ಲಿಟ್ಟಿದ್ದಾರೆಂದು ಬಿಎಸ್ಪಿ ಹಿರಿಯ ಮುಖಂಡ ಹಾಗೂ ಕ್ಷೇತ್ರ ಉಸ್ತುವಾರಿ ಬಿ.ಆರ್.ಪುಟ್ಟಸ್ವಾಮಿ ದೂರಿದರು. ಪಟ್ಟಣದ ಜೋಡಿ ರಸ್ತೆಯ ಬಹುಜನ ಸಮಾಜ ಪಕ್ಷದ ಕಚೇರಿಯಲ್ಲಿ ಸೋಮವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಪರಿವರ್ತಿತ ಪುರಸಭೆಯಲ್ಲಿ ವಿಲೀನಗೊಂಡ ಬಹುತೇಕ ಪಟ್ಟಣ ಪ್ರದೇಶಗಳ ನಿವಾಸಿಗಳಿಗೆ ಮೂಲಭೂತ ಸೌಕರ್ಯವನ್ನೇ ಕಲ್ಪಿಸಿಲ್ಲ. ಮಳೆ ನೀರು ಸರಾಗವಾಗಿ ಹರಿದು ಹೋಗಲಾರದಂತೆ ಅವೈಜಾnನಿಕವಾಗಿ ಮಿನಿ ವಿಧಾನಸೌಧ ನಿರ್ಮಾಣ ಮಾಡಲಾಗಿದ್ದು ತಹಶೀಲ್ದಾರ್ ಬಿ.ಶಂಕರಯ್ಯ ಆತ್ಮಹತ್ಯೆ ಪ್ರಕರಣದ ಸತ್ಯಾಂಶವನ್ನು ಜನರಿಗೆ ತಿಳಿಸಬೇಕೆಂದರು.
ರಾಜ್ಯಮಟ್ಟದ ಅಭಿವೃದ್ಧಿಗಳ ಯೋಜನೆ ಈ ಭಾಗಕ್ಕೆ ಅಪ್ರಸ್ತುತವಾಗಿದ್ದು, ಕಾಯಂ ತಹಶೀಲ್ದಾರ್‌ರನ್ನು ನಿಯೋಜಿಸದ್ದರಿಂದ ತಾಲೂಕು ಕಚೇರಿಯಲ್ಲಿ ಸಾರ್ವಜನಿಕರ ಯಾವೊಂದು ಕೆಲಸ ಕಾರ್ಯಗಳು ಶೀಘ್ರವಾಗಿ ಆಗುತ್ತಿಲ್ಲ. ಆರ್‌ಟಿಸಿ ಮತ್ತು ಆಧಾರ್ ನೊಂದಣಿಗೆ ದಿನಗಟ್ಟಲೆ ಕಾಯಬೇಕು. ಪಡಿತರ ಚೀಟಿ ವಿತರಣೆಯಂತೂ ಆಗಿಲ್ಲ ಎಂದು ಹೇಳಿದರು.
ಆಧುನೀಕರಣಗೊಂಡ ಸಾರ್ವಜನಿಕ ಆಸ್ಪತ್ರೆಯಲ್ಲಿ ಸರ್ಕಾರಿ ವೈದ್ಯಕೀಯ ಸೇವೆ ಮರೀಚಿಕೆಯಾಗಿದೆ. ಖಾತೆ ಮಾಡಲಿಕ್ಕೆ ಅಧಿಕ ದರದ ಶುಲ್ಕ ಹಾಗೂ ಲಂಚ ಪಡೆಯುವ ಪುರಸಭೆ ಅಧಿಕಾರಿಗಳು ಜನರಿಗೆ ಕುಡಿಯುವ ನೀರನ್ನೇ ಕೊಡುತ್ತಿಲ್ಲ. ಇಂತಹ ಸ್ಥಳೀಯ ಸಮಸ್ಯೆಗಳನ್ನು ಸಿಎಂ, ಸಚಿವರು ಪರಿಹರಿಸಬೇಕು. ಇಲ್ಲದಿದ್ದರೆ ಬಿಎಸ್ಪಿ ಹೋರಾಟಕ್ಕಿಳಿಯಲಿದೆ ಎಂದು ಎಚ್ಚರಿಸಿದರು.
ರೈತರಿಗೆ ಪರಿಹಾರ ಕೊಡಿ: ಬಿಎಸ್ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎನ್.ಪ್ರಭುಸ್ವಾಮಿ, ಸುಪ್ರೀಂ ಕೋರ್ಟ್‌ನ ನೆಪದಲ್ಲಿ ರಾಜ್ಯ ಅಣೆಕಟ್ಟೆಗಳ ನೀರನ್ನು ತಮಿಳುನಾಡಿಗೆ ರಾಜ್ಯ ಸರ್ಕಾರ ಸರಾಗವಾಗಿ ಹರಿಯಲು ಬಿಟ್ಟಿದೆ. ಶೇ.5 ರಷ್ಟು ಫಸಲನ್ನು ಬೆಳೆಯಲಾಗದೆ ಕೈ ಚೆಲ್ಲಿ ಕುಳಿತಿರುವ ನಾಡಿನ ರೈತರಿಗೆ ಎಕರೆಗೆ ಕನಿಷ್ಠ 25 ಸಾವಿರ ರೂ., ಪರಿಹಾರ ನೀಡಬೇಕೆಂದರು.
ಸುದ್ದಿಗೋಷ್ಠಿಯಲ್ಲಿ ಬಿಎಸ್ಪಿ ಕ್ಷೇತ್ರಾಧ್ಯಕ್ಷ ಬಿ.ಸೀಹಳ್ಳಿ ಕೆ.ರಾಜೂಗೌಡ, ಜಿಲ್ಲಾ ಕಾರ್ಯದರ್ಶಿ ಬಿ.ಮಹದೇವಸ್ವಾಮಿ, ತಾಪಂ ಮಾಜಿ ಸದಸ್ಯ ಕುಕ್ಕೂರು ಪುಟ್ಟಣ್ಣ, ಮುಖಂಡರಾದ ಪಿ.ನಾಗರಾಜು, ಚೆನ್ನಪ್ಪ, ಚೌಹಳ್ಳಿ ಶಿವಮೂರ್ತಿ, ಶಾಂತರಾಜು, ಅಂಕನಹಳ್ಳಿ ಪುಟ್ಟರಾಜು, ಗೋವಿಂದ್, ಮಹದೇವಾಚಾರ್ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.