Minister Nirmala, ಪ್ರಧಾನಿ ಮೋದಿ ರಾಜೀನಾಮೆ ನೀಡುತ್ತಾರಾ?: ಸಿಎಂ ಸಿದ್ದರಾಮಯ್ಯ

ಮಾಧ್ಯಮದವರ ವಿರುದ್ಧ ಮುಖ್ಯಮಂತ್ರಿ ಗರಂ

Team Udayavani, Jul 11, 2024, 11:51 PM IST

Minister Nirmala, ಪ್ರಧಾನಿ ಮೋದಿ ರಾಜೀನಾಮೆ ನೀಡುತ್ತಾರಾ?: ಸಿಎಂ ಸಿದ್ದರಾಮಯ್ಯ

ಮೈಸೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಸಂಬಂಧ ಬ್ಯಾಂಕಿನಿಂದಲೇ ಹಣ ವರ್ಗಾವಣೆಯಾಗಿದ್ದು, ಇದಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮತ್ತು ಪ್ರಧಾನಿ ಮೋದಿ ಅವರು ರಾಜೀನಾಮೆ ನೀಡುತ್ತಾರಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.

ವಾಲ್ಮೀಕಿ ಹಗರಣದಲ್ಲಿ ಹಣಕಾಸು ಸಚಿವರಾಗಿರುವ ಸಿಎಂ ಸಿದ್ದರಾಮಯ್ಯ ಗಮನಕ್ಕೆ ಬಾರದೇ ಹಣ ವರ್ಗಾವಣೆಯಾಗಿದೆಯಾ? ಹಗರಣಕ್ಕೆ ಸಂಬಂಧಿಸಿದಂತೆ ಅವರು ರಾಜೀನಾಮೆ ಕೊಡಬೇಕೆಂಬ ಶಾಸಕ ಜಿ.ಟಿ. ದೇವೇಗೌಡರ ಹೇಳಿಕೆಗೆ ಮೈಸೂರಿನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

ಖಜಾನೆಯಿಂದ ಎಲ್ಲವೂ ನನ್ನ ಮೂಲಕವೇ ನಡೆಯುವುದಿಲ್ಲ. ಎಲ್ಲದಕ್ಕೂ ನಾನು ಸಹಿ ಹಾಕುವುದಿಲ್ಲ. ಅಧಿಕಾರಿಗಳೇ ನೋಡಿಕೊಳ್ಳುತ್ತಾರೆ. ಹಣ ವರ್ಗಾವಣೆ ಬ್ಯಾಂಕಿನಿಂದ ನಡೆದಿದೆ. ಹಾಗೆಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ಪ್ರಧಾನಿ ಮೋದಿ ಕಾರಣ ಎನ್ನಲಾದೀತೇ? ಅವರು ರಾಜೀನಾಮೆ ಕೊಡುತ್ತಾರಾ ಎಂದು ಪ್ರಶ್ನಿಸಿದರು.

ಗಬ್ಬೆದ್ದ ಮುಡಾವನ್ನು ಸ್ವಚ್ಛ ಮಾಡಬೇಕಾಗಿದೆ: ಸಿದ್ದು
ಮೈಸೂರು: ಮುಡಾದಿಂದ ಬದಲಿ ನಿವೇಶನ ನೀಡಿರುವುದು ಕಾನೂನು ಬದ್ಧವಾಗಿದೆ ಎನ್ನುವುದು ನಮ್ಮ ವಾದ. ಒಂದೊಮ್ಮೆ ಕಾನೂನು ಬಾಹಿರವಾಗಿ ಬದಲಿ ನಿವೇಶನ ನೀಡಲಾಗಿದೆ ಎನ್ನುವುದಾದರೆ ಬಿಜೆಪಿಯವರು ದಾಖಲೆ ತೋರಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲೆಸೆದರು.

ಸುದ್ದಿಗಾರರ ಜತೆ ಮಾತನಾಡಿ, ಮುಡಾ ಮೊದಲಿನಿಂದಲೂ ಗಬ್ಬೆದ್ದು ಹೋಗಿದ್ದು, ಅದನ್ನು ಸ್ವಚ್ಛ ಮಾಡಬೇಕಾಗಿದೆ. ನಮ್ಮ ಪ್ರಕರಣ ಹಗರಣವಲ್ಲ, ನಮ್ಮ ಜಮೀನು ಬಳಕೆ ಮಾಡಿದ್ದಾರೆ. ಪ್ರಕರಣದಲ್ಲಿ ಭೂಮಿ ಕಳೆದುಕೊಂಡವರು 50:50 ಅನುಪಾನದಲ್ಲಿ ಜಮೀನು ಕೊಟ್ಟಿದ್ದಾರೆ. ನಾವು ಹಾಗೇ ಕೊಟ್ಟಿದ್ದೇವೆಯೇ? ಎಂಬ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಬೇಕು. ನಿವೇಶನ ಮಾಡಿದರೆ ಮೊದಲು 60:40 ಅನುಪಾತವಿತ್ತು. ಈಗ 50: 50 ಮಾಡಿದ್ದಾರೆ ಇದನ್ನು ಯಾರು ಮಾಡಿದ್ದು ಎಂದ ಅವರು, ಮುಡಾ ಹಗರಣದ ತನಿಖೆ ನಡೆಸಿ ಸರಿಪಡಿಸುತ್ತೇವೆ ಎಂದು ಹೇಳಿದರು. ನನ್ನ ವಿರುದ್ಧ ಚುನಾವಣ ಆಯೋಗಕ್ಕೆ ದೂರು ನೀಡಿದ್ದರೆ ಆಯೋಗ ನೋಟಿಸ್‌ ನೀಡಲಿ, ಕಾನೂನು ಪ್ರಕಾರವೇ ಉತ್ತರಿಸುವೆ ಎಂದರು.

ಬಿಜೆಪಿಗೆ ಹೊಟ್ಟೆಯುರಿ
ಮುಡಾ ಪ್ರಕರಣ ಮುಂದಿಟ್ಟುಕೊಂಡು ಬಿಜೆಪಿ ನಾಯಕರು ರಾಜಕೀಯ ಕಾರಣಕ್ಕೆ ವೃಥಾ ಆರೋಪ ಮಾಡುತ್ತಿದ್ದಾರೆ. ಹಿಂದುಳಿದ ವರ್ಗಕ್ಕೆ ಸೇರಿದ ಸಿದ್ದರಾಮಯ್ಯ 2ನೇ ಬಾರಿ ಮುಖ್ಯಮಂತ್ರಿಯಾಗಿದ್ದು ಬಿಜೆಪಿಯ ಎಲ್ಲರಿಗೂ ಹೊಟ್ಟೆಯುರಿ. ಅದಕ್ಕಾಗಿ ಕುತಂತ್ರ ಮಾಡುತ್ತಿದ್ದಾ ರೆ. ಇಂತಹ ಷಡ್ಯಂತ್ರಕ್ಕೆಲ್ಲ ನಾನು ಹೆದರುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಬಿಜೆಪಿ ಸರಕಾರದ ಅವಧಿಯಲ್ಲಿ ಮುಡಾ ತಪ್ಪು ಮಾಡಿದ್ದರೆ ಯಾರು ಜವಾಬ್ದಾರರು? ಸಿದ್ದರಾಮಯ್ಯ ಜವಾಬ್ದಾರರೇ? ಒಂದು ವೇಳೆ ಇದನ್ನು ರದ್ದು ಮಾಡಿದರೆ, ಭೂ ಸ್ವಾಧೀನ ಕಾಯ್ದೆ ಪ್ರಕಾರ ಪರಿಹಾರ ನೀಡಬೇಕು. ಅದರ ಪ್ರಕಾರ 57 ಕೋಟಿಯಾದರೆ ಬಡ್ಡಿ ಸೇರಿಸಿ 62 ಕೋಟಿಯಾಗಲಿದ್ದು, ಮುಡಾದವರು 62 ಕೋಟಿ ಕೊಡಬೇಕಾಗುತ್ತದೆ. 2021ರಲ್ಲಿ ನಾನು ವಿಪಕ್ಷದ ನಾಯಕನಿದ್ದೆ , ಆಗ ನಾನು ಹೇಳಿದ್ದನ್ನು ಕೇಳಿ ಮಾಡುತ್ತಿದ್ದರೆ? ಎಂದು ಕಿಡಿಕಾರಿದರು.

ಟಾಪ್ ನ್ಯೂಸ್

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 10ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 10ನೇ ರೀಲ್ಸ್ ಪ್ರಸಾರ

akhilesh

Akhilesh Yadav ಗಂಭೀರ ಆರೋಪ: ಅಯೋಧ್ಯೆಯಲ್ಲಿ ಭಾರೀ ಭೂ ಹಗರಣ

1-sadsadasd

Ganesh festival; ಡೋಲು-ತಾಸೆಯವರ ಸಂಖ್ಯೆಗೆ NGT ನಿರ್ಬಂಧಕ್ಕೆ ಸುಪ್ರೀಂ ತಡೆ

Jawan‌ Movie: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ಶಾರುಖ್‌ – ಅಟ್ಲಿ ʼಜವಾನ್‌ʼ

Jawan‌ Movie: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ಸೂಪರ್‌ ಹಿಟ್ ʼಜವಾನ್‌ʼ

Good News: ಶೀಘ್ರದಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆ ಸಾಧ್ಯತೆ? ಪಂಕಜ್‌ ಜೈನ್

Good News: ಶೀಘ್ರದಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆ ಸಾಧ್ಯತೆ? ಪಂಕಜ್‌ ಜೈನ್

1-ffsdf

Chikkaballapur ನಗರಸಭೆ ಕೋಲಾಹಲ; ಡಾ.ಸುಧಾಕರ್ ಮೇಲುಗೈ: ಸವಾಲು ಹಾಕಿದ ಪ್ರದೀಪ್ ಈಶ್ವರ್!

HDK

Nagamangala Riots: ಗಲಭೆಗೆ ಕಾಂಗ್ರೆಸ್‌ ಸರಕಾರದ ತುಷ್ಟೀಕರಣ ನೀತಿಯೇ ಕಾರಣ: ಎಚ್‌ಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hunsur: ಮಹಿಳೆಯನ್ನು ನಂಬಿಸಿ ಅತ್ಯಾಚಾರವೆಸಗಿದ್ದ ಅನ್ಯಧರ್ಮಿಯನ ಬಂಧನ

Hunsur: ಮಹಿಳೆಯನ್ನು ನಂಬಿಸಿ ಅತ್ಯಾಚಾರವೆಸಗಿದ್ದ ಅನ್ಯಧರ್ಮಿಯನ ಬಂಧನ

6

Mysore Dasara: 15ರ ಬಳಿಕ ಗಜಪಡೆಗೆ ಮರದ ಅಂಬಾರಿ ತಾಲೀಮು

K R Nagara: ಕಲುಷಿತ ನೀರು ಸೇವಿಸಿ ಓರ್ವ ವೃದ್ಧ ಸಾವು: 45 ಮಂದಿ ಅಸ್ವಸ್ಥ

K R Nagara: ಕಲುಷಿತ ನೀರು ಸೇವಿಸಿ ಓರ್ವ ವೃದ್ಧ ಸಾವು: 45 ಮಂದಿ ಅಸ್ವಸ್ಥ

Karnataka ರಾಜ್ಯದ 17 ನದಿಗಳು ಕಲುಷಿತ: ತಜ್ಞರ ಸಮಿತಿ

Karnataka ರಾಜ್ಯದ 17 ನದಿಗಳು ಕಲುಷಿತ: ತಜ್ಞರ ಸಮಿತಿ

MUDA ಆಯುಕ್ತರ ನಿವಾಸದಲ್ಲಿದ್ದ ಸಿಸಿ ಕೆಮರಾ, ಡಿವಿಆರ್‌ ಕಾಣೆ

MUDA ಆಯುಕ್ತರ ನಿವಾಸದಲ್ಲಿದ್ದ ಸಿಸಿ ಕೆಮರಾ, ಡಿವಿಆರ್‌ ಕಾಣೆ

MUST WATCH

udayavani youtube

ಕೃಷ್ಣ ಮಠದ ಗಣಪತಿ ವಿಸರ್ಜನೆ ವೇಳೆ ತಾಸೆಯ ಪೆಟ್ಟಿಗೆ ಕುಣಿದು ಕುಪ್ಪಳಿಸಿದ ಭಕ್ತರು|

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

ಹೊಸ ಸೇರ್ಪಡೆ

1-baghi

Hombale Films ಬಹು ನಿರೀಕ್ಷಿತ ಬಘೀರ ಚಿತ್ರದ ರಿಲೀಸ್ ಡೇಟ್ ಘೋಷಣೆ

Road Mishap: ಸ್ಕೂಟಿಗೆ ಬೈಕ್‌ ಡಿಕ್ಕಿ; ಬೈಕ್ ಸವಾರ ಮೃತ್ಯು

Road Mishap: ಸ್ಕೂಟಿಗೆ ಬೈಕ್‌ ಡಿಕ್ಕಿ; ಬೈಕ್ ಸವಾರ ಮೃತ್ಯು

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 10ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 10ನೇ ರೀಲ್ಸ್ ಪ್ರಸಾರ

Ronny actress Samikshaa

Ronny ಗೆಲ್ಲುವ ಸಿನಿಮಾ: ನಟಿ ಸಮೀಕ್ಷಾ

akhilesh

Akhilesh Yadav ಗಂಭೀರ ಆರೋಪ: ಅಯೋಧ್ಯೆಯಲ್ಲಿ ಭಾರೀ ಭೂ ಹಗರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.