ಎಪಿಎಂಸಿ ಆದಾಯ ಶೇ.50 ಖೋತಾ; ಸಚಿವ ತಬ್ಬಿಬ್ಬು!
ಎಪಿಎಂಸಿಯಲ್ಲಿನ ಸೆಸ್ ಸಂಗ್ರಹ ಶೇ.50ರಷ್ಟು ಇಳಿಕೆ ! ಜಿಪಂ ಕೆಡಿಪಿ ಸಭೆಯಲ್ಲಿ ಕೃಷಿ ಮಾರುಕಟ್ಟೆ ಇಲಾಖೆ ಅಧಿಕಾರಿ ಮಾಹಿತಿ
Team Udayavani, Feb 9, 2021, 1:23 PM IST
ಮೈಸೂರು: ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದ ಬಳಿಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸೆಸ್ ಸಂಗ್ರಹ ಶೇ.50ರಷ್ಟು ಇಳಿಕೆಯಾಗಿರುವ ಬಗ್ಗೆ ಅಧಿಕಾರಿ ಮಾಹಿತಿ ನೀಡಿದ್ದು, ಸಚಿವರನ್ನೇ ತಬ್ಬಿಬ್ಟಾಗಿಸಿದ ಪ್ರಸಂಗ ಜಿಲ್ಲಾ ಪಂಚಾಯಿತಿ ತ್ತೈಮಾಸಿಕ ಕೆಡಿಪಿ ಸಭೆಯಲ್ಲಿ ನಡೆಯಿತು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅಧ್ಯಕ್ಷತೆಯಲ್ಲಿ ಸೋಮವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಈ ಸಂಬಂಧ ಕೃಷಿ ಮಾರುಕಟ್ಟೆ ಇಲಾಖೆ ಅಧಿಕಾರಿ ಸಂಗೀತಾ, ಇಲಾಖೆ ಪ್ರಗತಿ ಸಂಬಂಧ ಮಾಹಿತಿ ನೀಡುವಾಗ, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದ ಬಳಿಕ ಜಿಲ್ಲೆಯಲ್ಲಿರುವ ಎಪಿಎಂಸಿಗಳು ಸಂಗ್ರಹಿಸುತ್ತಿದ್ದ ಸೆಸ್ (ಸುಂಕ) ಶೇ.50 ರಷ್ಟು ಕಡಿಮೆಯಾಗಿದ್ದು, ಎಪಿಎಂಸಿಗಳ ನಿರ್ವಹಣೆಯೇ ಕಷ್ಟವಾಗುತ್ತಿದೆ.
ಮೈಸೂರು ತಾಲೂಕು ಎಪಿಎಂಸಿಯಲ್ಲಿ 2019- 20ನೇ ಸಾಲಿನಲ್ಲಿ 2.1 ಕೋಟಿ ರೂ. ಸಂಗ್ರಹವಾಗಿತ್ತು. ಈ ಬಾರಿ 1.48 ಕೋಟಿ ರೂ.ಗೆ ಇಳಿಕೆಯಾಗಿದೆ. ಇನ್ನು ಪಿರಿಯಾಪಟ್ಟಣ ತಾಲೂಕು ಎಪಿಎಂಸಿಯಲ್ಲಿ 2019-20ನೇ ಸಾಲಿನಲ್ಲಿ 1.8 ಕೋಟಿ ರೂ. ಸಂಗ್ರಹವಾಗಿತ್ತು. ಈ ಬಾರಿ ಕೇವಲ 50 ಲಕ್ಷ ರೂ. ಸಂಗ್ರಹವಾಗಿದೆ. ಇದೇ ಮಾದರಿಯಲ್ಲಿ ಎಲ್ಲ ಎಪಿಎಂಸಿಗಳಲ್ಲೂ ಸುಂಕ ಸಂಗ್ರಹ ಕಡಿಮೆ ಯಾಗಿದೆ ಎಂದು ಮಾಹಿತಿ
ನೀಡಿದರು. ಇದಕ್ಕೆ ತಬ್ಬಿಬ್ಟಾದ ಸಹಕಾರ ಸಚಿವರು ಸಚಿವರು, ಕಾಯ್ದೆಯಿಂದ ರೈತರಿಗೆ ಏನಾ ದರೂ ತೊಂದರೆ ಇದ್ದರೆ ಹೇಳಿ. ಅಧಿಕಾರಿಗಳಿಗೆ ಹಾಗೂ ಸಮಿತಿಗೆ ತೊಂದರೆಯಾದರೆ ಸರ್ಕಾರ ನೋಡಿಕೊಳು ತ್ತದೆ. ಎಪಿಎಂಸಿ ಸಿಬ್ಬಂದಿಗೆ ಸರ್ಕಾರ ಸಂಬಳ ನೀಡು ತ್ತಿದೆ. ಕಾಯಿದೆಯಿಂದ ರೈತರಿಗೆ ಸಮಸ್ಯೆ ಆಗಿದೆಯಾ ಎಂದು ಅಧಿಕಾರಿ ಯನ್ನು ಪ್ರಶ್ನಿಸಿದ ಅವರು, ರೈತರು ಇಷ್ಟು ದಿನ ಎಪಿಎಂಸಿ ಯಲ್ಲಿ ತಮ್ಮ ಉತ್ಪನ್ನ ಮಾರಾಟ ಮಾಡುತ್ತಿದ್ದರು. ಹೊಸ ಕಾಯ್ದೆಯಿಂದ ತಮಗಿಷ್ಟಬಂದಲ್ಲಿ ಮಾರುತ್ತಿದ್ದಾರೆ. ಇದರರ್ಥ ಅವ ರಿಗೆ ಅನುಕೂಲವಾಗಿದೆಯಂದಲ್ಲವೇ ಎಂದರು.
17 ಸಾವಿರ ವಾರಿಯರ್ಗೆ ಲಸಿಕೆ: ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 36 ಸಾವಿರ ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಲಸಿಕೆ ನೀಡಲು ಗುರಿ ಹೊಂದಲಾಗಿತ್ತು. ಈ ಪೈಕಿ 22 ಸಾವಿರ ಜನರಿಗೆ ಲಸಿಕೆ ನೀಡಿದ್ದೇವೆ. ಉಳಿದ 14 ಸಾವಿರ ಜನ ಲಸಿಕೆ ಪಡೆಯಲು ಭಾಗಿಯಾಗಿಲ್ಲ. ಸೋಮವಾರದಿಂದ ಮೊದಲ ಸಾಲಿನ ವಾರಿಯರ್ಸ್ ಗಳಾದ ನಗರ ಪಾಲಿಕೆ ಹಾಗೂ ಪೊಲೀಸ್ ಇಲಾಖೆಯ 17 ಸಾವಿರ ಸಿಬ್ಬಂದಿಗೆ ಲಸಿಕೆ ನೀಡುವ ಕಾರ್ಯ ಆರಂಭಿಸಿದ್ದೇವೆ. ದಿನಕ್ಕೆ 6 ಸಾವಿರದಂತೆ ಮೂರು ದಿನಗಳಲ್ಲಿ ಲಸಿಕೆ ನೀಡಲು ಗುರಿ ಹೊಂದಿದ್ದೇವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಮರ್‌ನಾಥ್ ಸಭೆಗೆ ಮಾಹಿತಿ ನೀಡಿದರು.
ಕಂದಾಯ ಕಟ್ಟಿಸಿ, ಸೌಲಭ್ಯ ಏಕೆ ನೀಡುತ್ತಿಲ್ಲ: ನಗರದ ಹತ್ತಕ್ಕೂ ಹೆಚ್ಚು ಬಡಾವಣೆಗಳು ಮುಡಾ ವ್ಯಾಪ್ತಿಯ ಲ್ಲಿದ್ದು, ಕಂದಾಯವನ್ನು ನೀವೇ ಕಟ್ಟಿಸಿಕೊಳ್ಳುತ್ತಿದ್ದೀರಿ. ಆದರೆ, ಕುಡಿಯುವ ನೀರು ಮತ್ತು ಬೀದಿ ದೀಪ ಸೌಲಭ್ಯವನ್ನು ನೀಡುತ್ತಿಲ್ಲ. ಕೇಳಿದರೆ ಪಾಲಿಕೆಯತ್ತ ಬೊಟ್ಟು ಮಾಡುತ್ತೀರಿ ಎಂದು ಮುಡಾ ಆಯುಕ್ತರ ವಿರುದ್ಧ ಶಾಸಕ ಜಿ.ಟಿ. ದೇವೇಗೌಡ ಹರಿಹಾಯ್ದರು. ಸ್ಥಳೀಯರಿಗೆ ಟೆಂಡರ್ ನೀಡಿ: ಜಿಲ್ಲಾ ಮತ್ತು ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಊಟ ಹಾಗೂ ಸ್ವತ್ಛತೆಗೆ ಟೆಂಡರ್ ನೀಡಲಾಗುತ್ತಿದೆ. ಆದರೆ, ಬಹಳಷ್ಟು ಕಡೆ ಹೊರ ರಾಜ್ಯ ಮತ್ತು ಜಿಲ್ಲೆಯವರು ಟೆಂಡರ್ ಪಡೆದು, ಬಳಿಕ ಕಡಿಮೆ ಬೆಲೆಗೆ ಸ್ಥಳೀಯರಿಗೆ ಉಪ ಟೆಂಡರ್ ನೀಡುತ್ತಿದ್ದಾರೆ. ಇದರಿಂದ ರೋಗಿಗಳಿಗೆ ಗುಣ ಮಟ್ಟದ ಆಹಾರ ಸಿಗುತ್ತಿಲ್ಲ. ಅಲ್ಲದೇ ಸ್ವತ್ಛತಾ ಸಿಬ್ಬಂ ದಿಗೆ ಸಮರ್ಪಕವಾಗಿ ಸಂಬಳ ಪಾವತಿಸುತ್ತಿಲ್ಲ. ಆದ್ದ ರಿಂದ ಸ್ಥಳೀಯರಿಗೆ ಟೆಂಡರ್ ನೀಡುವಂತೆ ಶಾಸಕ ಎಚ್. ಪಿ.ಮಂಜುನಾಥ್ ಆರೋಗ್ಯಾಧಿಕಾರಿಗೆ ಹೇಳಿದರು.
20 ಕೋಟಿ ಸೆಸ್ ಬಾಕಿ: ಮಹಾನಗರ ಪಾಲಿಕೆಗೆ ತೆರಿಗೆದಾರರಿಂದ ಸಂಗ್ರಹಿಸುವ ಗ್ರಂಥಾಲಯ ಸುಂಕವನ್ನು ಗ್ರಂಥಾಲಯ ಇಲಾಖೆ ಪಾವತಿಸಿಲ್ಲ. ಸುಮಾರು 20 ಕೋಟಿ ರೂ. ಸೆಸ್‌ನ್ನು (ಕರ) ಮೈಸೂರು ಮಹಾನಗರ ಪಾಲಿಕೆಯಿಂದ ನಮಗೆ ಬರಬೇಕಿದೆ ಎಂದು ಸಾರ್ವಜನಿಕ ಗ್ರಂಥಾಲಯ ಅಧಿಕಾರಿ ಸಭೆಯ ಗಮನಕ್ಕೆ ತಂದರು. ಇದಕ್ಕೆ ಆಯುಕ್ತರ ಬಳಿ ಉತ್ತರ ಕೇಳಿದ ಸಚಿವರು, ಶೀಘ್ರವೇ ಗ್ರಂಥಾಲಯ ಸೆಸ್ ಪಾವತಿಸಲು ಕ್ರಮವಹಿಸಿ ಎಂದು ತಾಕೀತು ಮಾಡಿದರು.
ಇದನ್ನೂ ಓದಿ :ಮದ್ಯ ಖಜಾನೆ ಧಣಿ,ಮನೆಯನ್ನೇ ಕಚೇರಿ ಮಾಡಿದ್ದ BBMP ಅಧಿಕಾರಿ ದೇವೇಂದ್ರಪ್ಪ ಸೇವೆಯಿಂದ ಅಮಾನತು!
ಸಭೆಯಲ್ಲಿ ವಿವಿಧ ಇಲಾಖೆಗಳ ತ್ತೈಮಾಸಿಕ ಪ್ರಗತಿ ಹಾಗೂ ಅನುಪಾಲನ ವರದಿಯನ್ನು ಸಭೆಯ ಗಮನಕ್ಕೆ ತಂದರು. ಸಫಾಯಿ ಮಿತ್ರ ಸುರಕ್ಷ: ಇದಕ್ಕೂ ಮುನ್ನಾ ಮೈಸೂರು ಮಹಾನಗರ ಪಾಲಿಕೆ ರೂಪಿಸಿರುವ ಒಳ ಚರಂಡಿ ದೂರುಗಳ ಸಹಾಯವಾಣಿಯಾದ ಸಫಾಯಿ ಮಿತ್ರ ಸುರಕ್ಷ ಸವಾಲು ದೂರವಾಣಿ ಸಂಖ್ಯೆ 14420ಯನ್ನು ಸಚಿವರು ಹಾಗೂ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ. ಶಿವಣ್ಣ ಬಿಡುಡೆ ಮಾಡಿದರು. ಇದು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ.
ಸಭೆಯಲ್ಲಿ ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಂ, ಶಾಸಕರಾದ ಡಾ. ಯತೀಂದ್ರ ಸಿದ್ದರಾಮಯ್ಯ, ಅನಿಲ್ ಚಿಕ್ಕಮಾದು, ಅಶ್ವಿನ್ ಕುಮಾರ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಜಿಪಂ ಸಿಇಒ ಪರಮೇಶ್, ಎಸ್ಪಿ ರಿಷ್ಯಂತ್, ಡಿಸಿಪಿ ಗೀತಾ ಪ್ರಸನ್ನ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.