ಬದಲಾವಣೆ ಏನಿದ್ದರೂ ಅದು ಮುಖ್ಯಮಂತ್ರಿಗಳ ತೀರ್ಮಾನ: ಎಸ್.ಟಿ.ಸೋಮಶೇಖರ್
Team Udayavani, Apr 7, 2022, 1:57 PM IST
ಮೈಸೂರು: ಸಂಪುಟ ಪುನರ್ ರಚನೆ, ಸಂಪುಟ ವಿಸ್ತರಣೆ ವಿಚಾರವೋ ನನಗೆ ಗೊತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳೇ ಎಲ್ಲವನ್ನೂ ತಿಳಿಸಬೇಕು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ಉಸ್ತುವಾರಿಗೆ ಪೈಪೋಟಿ ಹೆಚ್ಚಾಗಿದ್ದರೆ ಸಂತೋಷ. ನಾನೇ ಇಲ್ಲಿ ಸದಾ ಇರಬೇಕೆಂದು ಬಯಸಿಲ್ಲ. ನನಗೆ ಮಾತ್ರ ಉಸ್ತುವಾರಿ ಸ್ಥಾನ ಇರಬೇಕೆಂದು ಪಟ್ಟು ಕೂಡ ಹಿಡಿದಿಲ್ಲ. ಬೇರೆಯವರಿಗೆ ಈ ಸ್ಥಾನ ಕೊಟ್ಟರು ಸಂತೋಷ ಎಂದರು.
ಇದನ್ನೂ ಓದಿ:ಚುನಾವಣೆಯ ಗೆಲುವು ಬಿಜೆಪಿಗೆ ಲೂಟಿಗೆ ಸಿಕ್ಕ ಪರವಾನಿಗೆ: ಅಜಯ್ ಮಾಕೆನ್
ಯಡಿಯೂರಪ್ಪ ಅವರು ನನಗೆ ಮೈಸೂರು ಉಸ್ತುವಾರಿ ಸ್ಥಾನ ಕೊಟ್ಟಿದ್ದರು. ಈಗ ಬಸವರಾಜ ಬೊಮ್ಮಾಯಿ ಅವರು ಕೂಡ ಮುಂದುವರಿಸಿದ್ದಾರೆ. ಕೊಟ್ಟ ಜವಾಬ್ದಾರಿ ನಿರ್ವಹಿಸಿದ್ದೇನೆ. ಬದಲಾವಣೆ ಏನಿದ್ದರು ಅದು ಸಿಎಂ ತೀರ್ಮಾನ ಎಂದು ಸೋಮಶೇಖರ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.