ಚುನಾವಣೆಯ ನೆಪ ಮಾಜಿ ಶಾಸಕರಿಂದ ಪೊಳ್ಳು ಆರೋಪ: ಕೆ.ಮಹದೇವ್
Team Udayavani, Dec 28, 2021, 7:25 PM IST
ಪಿರಿಯಾಪಟ್ಟಣ: ಸೋತು ಸುಣ್ಣವಾಗಿ ಬಿಲದಲ್ಲಿ ಹಡಗಿದ್ದ ಮಾಜಿ ಶಾಸಕ ಕೆ.ವೆಂಕಟೇಶ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಚುನಾವಣೆ ಸಮೀಪಿಸುತ್ತಿದೆ ಎಂಬ ಕಾರಣಕ್ಕೆ ಬಾಲ ಚಿಚ್ಚಲು ಆರಂಭಿಸಿದ್ದಾರೆ ಇವರ ಪೊಳ್ಳು ಆರೋಪಗಳಿಗೆ ನಮ್ಮ ಕಾರ್ಯಕರ್ತರು ಕಿವಿಗೊಡಬಾರದು ಎಂದು ಎಂದು ಶಾಸಕ ಕೆ.ಮಹದೇವ್ ಲೇವಡಿ ಮಾಡಿದರು.
ತಾಲ್ಲೂಕಿನ ಗುಡಿಭದ್ರನ ಹೊಸಳ್ಳಿ, ಕೋಟಯ್ಯನ ಕೊಪ್ಪಲು, ಚಾಮರಾಯನ ಕೋಟೆ, ಚಿಕ್ಕ ಕಮರವಳ್ಳಿ, ಹಾರನಹಳ್ಳಿ, ಚಿಕ್ಕ ನೇರಳೆ, ಸಂಗರಶೆಟ್ಟಿಹಳ್ಳಿ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಮಂಗಳವಾರ ಚಾಲನೆ ನೀಡಿ ಕಣಗಾಲು ಗ್ರಾಮದಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಅಧಿಕಾರದಲ್ಲಿದ್ದಾಗ ಗ್ರಾಮೀಣ ಪ್ರದೇಶಕ್ಕೆ ಕಾಲಿಡದೆ ನಗರ ಪ್ರದೇಶದಲ್ಲಿ ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡುತ್ತ ಐಶಾರಾಮಿ ಜೀವನದಲ್ಲಿ ತೇಲಾಡುತ್ತಿದ್ದ ಮಾಜಿ ಶಾಸಕರು, “ಊರು ಹೋಗು ಕಾಡು ಬಾ ಕಾಲದಲ್ಲಿ”ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತ ಜನರ ಕಿವಿಗೆ ಹೂ ಮಡಿಸಲು ಹವಣಿಸುತ್ತಿದ್ದಾರೆ, ಕಳೆದ 2008 ಮತ್ತು 2013 ರ ಚುನಾವಣೆಯಲ್ಲಿ ತನ್ನ ಬಾಡಿಗೆ ಕಾರ್ಯಕರ್ತರಿಂದ ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದ ಕಾರಣ ನಾನು ಸೋಲಬೇಕಾಯಿತು, ಆದರೆ ಎರಡು ಬಾರಿ ಸೋತ ನನಗೆ ತಾಲ್ಲೂಕಿನ ಜನತೆ ಅಧಿಕಾರ ನೀಡಿದ್ದಾರೆ. ಹೀಗಿರುವಾಗ ತಾಲ್ಲೂಕಿಗೆ ಅಗತ್ಯವಾದ ಕೆಲಸಗಳನ್ನು ಮಾಡುತ್ತಿದ್ದದೇನೆ ಆದರೆ ಇದನ್ನು ಸಹಿಸದ ಮಾಜಿ ಶಾಸಕರು ನಾನು ತಂದಿದ್ದ ಅನುದಾನದಿಂದಲೇ ಇಂದಿಗೂ ಗುದ್ದಲಿಪೂಜೆ ಮಾಡುತ್ತಿದ್ದಾರೆ ಎಂದು ಅಭಿವೃದ್ಧಿ ಕೆಲಸಗಳನ್ನು ಸಹಿಸದೆ ನಮ್ಮ ಪಕ್ಷದ ಕಾರ್ಯಕರ್ತರ ಬಳಿ ಇಲ್ಲಸಲ್ಲದ ಸುಳ್ಳು ಹೇಳಿ ಓಲೈಕೆ ಮಾಡಲು ಹೊರಟಿದ್ದಾರೆ ಇಂಥ ಪೊಳ್ಳು ಮಾತಿಗೆ ನಮ್ಮ ಕಾರ್ಯಕರ್ತರು ಕಿವಿ ಗೊಡಬಾರದು ನಾನು ಶಾಸಕನಾದ ಮೂರುವರೆ ವರ್ಷದ ಅವದಿಯಲ್ಲಿ ನಡೆದಿರುವ ಅಭಿವೃದ್ದಿ ಕಾರ್ಯಗಳನ್ನು 30 ವರ್ಷ ಶಾಸಕರಾದರೂ ಮಾಡಲು ಸಾಧ್ಯವಾಗಿಲ್ಲ ಹಾಗೇನಾದರೂ ಇದ್ದರೆ ಬಹಿರಂಗ ಚರ್ಚೆಗೆ ಬನ್ನಿ ಎಂದರು.
ನಾನು ಶಾಸಕನಾದ ಆರಂಭದಲ್ಲಿ ಕಣಗಾಲು ಗ್ರಾಮದ ಅಭಿವೃದ್ಧಿಗೆ ರೂ.1 ಅನುದಾನ ನೀಡಿದ್ದು, ಈ ಬಾರಿಯೂ ರೂ.1 ಕೋಟಿ ಅನುದಾನ ಬಿಡುಗಡೆಯಾಗಿದ್ದು ಗ್ರಾಮದಲ್ಲಿ ಹಾಳಾಗಿರುವ ರಸ್ತೆಗಳ ಅಭಿವೃದ್ಧಿ ಹಾಗೂ ಚರಂಡಿಗಳ ನಿರ್ಮಾಣಗಳಿಗೆ ಬಳಸುವಂತೆ ಸೂಚಿಸಿದ್ದೇನೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಗ್ರಾಪಂ ಅಧ್ಯಕ್ಷೆ ಚಂದ್ರಮ್ಮ, ಉಪಾಧ್ಯಕ್ಷ ಕುಮಾರಶೆಟ್ಟಿ, ಸದಸ್ಯರಾದ ಹನುಮಂತು, ಮುಖಂಡರಾದ ಸಿ.ಎನ್.ರವಿ, ರಘುನಾಥ್, ಮಹದೇವ್, ಕೃಷಿ ಇಲಾಖೆ ಸಹಾಯಕ ನಿರ್ದೆಶಕ ಪ್ರಸಾದ್, ಬಿಇಒ ವೈ.ಕೆ.ತಿಮ್ಮೆಗೌಡ, ಪಶುಪಾಲನಾ ಇಲಾಖೆ ಸಹಾಯಕ ನಿರ್ದೆಶಕ ಡಾ.ಸೋಮಯ್ಯ, ಪಶು ವೈದ್ಯಾಧಿಕಾರಿ ಡಾ.ಚಾಮರಾಜು, ಸಿಡಿಪಿಒ ಕುಮಾರ್, ಸಮಾಜ ಕಲ್ಯಾಣಾಧಿಕಾರಿ ಸಿದ್ದೇಗೌಡ ಸೇರಿದಂತೆ ಮತ್ತಿತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.