ಅನಿಲ ಪೈಪ್‌ಲೈನ್ ಯೋಜನೆ ಆಗಬೇಕು,ಇದರಿಂದ ಬಡಜನರಿಗೆ ಅನುಕೂಲವಾಗಲಿದೆ: ಎಚ್.ವಿಶ್ವನಾಥ್


Team Udayavani, Jan 30, 2022, 7:01 PM IST

ಅನಿಲ ಪೈಪ್‌ಲೈನ್ ಯೋಜನೆ ಆಗಬೇಕು,ಇದರಿಂದ ಬಡಜನರಿಗೆ ಅನುಕೂಲವಾಗಲಿದೆ: ಎಚ್.ವಿಶ್ವನಾಥ್

ಹುಣಸೂರು:  ಕ್ಷೇತ್ರದ ಕೆಲಸ ಆಗದಿದ್ದಲ್ಲಿ, ಅಧಿಕಾರಿಗಳು ಸ್ಪಂದಿಸದಿದ್ದಲ್ಲಿ  ಕಚೇರಿ ಮುಂದೆ ಧರಣಿ ನಡೆಸುವುದು ತರವಲ್ಲಾ, ಶಾಸಕರು ಸದನದಲ್ಲಿ ಗುಟುರು ಹಾಕಬೇಕು, ಅಭಿವೃದ್ದಿಯಾಗದಿದ್ದಲ್ಲಿ ಪ್ರತಿಭಟನೆಗೆ ನಿಮ್ಮೊಂದಿಗೆ ನಾನು ಸಹ ಕೈಜೋಡಿಸುವೆನೆಂದು  ವಿಧಾನಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಶಾಸಕ ಎಚ್.ಪಿ.ಮಂಜುನಾಥರು ಲೋಕೋಪಯೋಗಿ ಇಲಾಖೆ ಇ.ಇ.ಕಚೇರಿ ಎದುರು ಧರಣಿ ನಡೆಸಿರುವುದು ಸರಿಯಲ್ಲ. ಕಾರ್ಯಪಾಲಕ ಇಂಜಿನಿಯರ್ ಅನುಷ್ಟಾನಗೊಳಿಸುವ ಅಧಿಕಾರಿಯಷ್ಟೆ, ಅನುದಾನ ಬರದಿದ್ದಲ್ಲಿ ಅವರೇನು ಮಾಡುತ್ತಾರೆ. ಕೊರೊನಾದಿಂದಾಗಿ ಸರಕಾರದ ಅನುದಾನ ತಡವಾಗುತ್ತಿದೆ. ಈ ಬಗ್ಗೆ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿ ಸರಕಾರಕ್ಕೆ ಚುರುಕು ಮುಟ್ಟಿಸಬೇಕು. ನಾನು ಸಹ ತಾಲೂಕಿನ ಪರವಾಗಿರುವವನು, ಈತಾಲೂಕಿನ ಜನರ ಋಣ ನನ್ನ ಮೇಲಿದೆ. ತಾವು ರಾಜಿನಾಮೆ ನೀಡಿದ್ದರಿಂದಾಗಿ ಶಾಸಕರಾಗಿದ್ದೀರಾ. ಶಾಸಕರು ಜನಹಿತಕ್ಕಾಗಿ ದುಡಿಯಬೇಕು. ಅದುಬಿಟ್ಟು ಧರಣಿ ನಡೆಸುವುದು ಸರಿಯಲ್ಲ.  ಅನ್ಯಾಯವಾಗಿದ್ದಲ್ಲಿ ಇಬ್ಬರೂ ಸೇರಿ ಪ್ರತಿಭಟನೆ ಮಾಡೋಣ, ಕ್ಷೇತ್ರದ ಅಭಿವೃದ್ದಿಗೆ ಶಾಸಕರು, ತಾವು ಸಂಸದರು ಒಟ್ಟಾಗಿ ಸೇರಿ ಅಭಿವೃದ್ದಿ ಪಡಿಸೋಣವೆಂದು ಸಲಹೆ ನೀಡಿದರು.

ಚತುಷ್ಪತ ರಸ್ತೆ ನನ್ನ ಅವಧಿಯದ್ದು:

ತಾವು ಸಂಸದರಾಗಿದ್ದ ವೇಳೆ ಬೆಂಗಳೂರು-ಮೈಸೂರು ಹಾಗೂ  ಮೈಸೂರು-ಮಡಿಕೇರಿ ಹೆದ್ದಾರಿಯನ್ನು ಪ್ರಧಾನಿ ಮನಮೋಹನ್‌ಸಿಂಗ್‌ರ ಅವಧಿಯಲ್ಲಿ ಭೂಸಾರಿಗೆ ಸಚಿವರಾಗಿದ್ದ ಆಸ್ಕರ್ ಫರ್ನಾಂಡಿಸ್ ಅವಧಿಯಲ್ಲಿ 3 ಸಾವಿರ ಕೋಟಿರೂ ವೆಚ್ಚದ ಚತುಷ್ಪತ ರಸ್ತೆಯ ಯೋಜನೆಯನ್ನು ಮಂಜೂರು ಮಾಡಿಸಿದ್ದೆ. ಜೆಡಿಎಸ್ ಶಾಸಕನಾಗಿದ್ದ ಅವಧಿಯಲ್ಲಿ ಮೈಸೂರು ಹೆದ್ದಾರಿಯ ಚಿಕ್ಕಾಡಿಗನಹಳ್ಳಿಯಿಂದ ಹುಣಸೂರು ನಗರಕ್ಕೆ ಸಮೀಪದ ಹಾಳಗೆರೆವರೆಗೆ 22 ಕೋಟಿರೂ ವೆಚ್ಚದ ರಸ್ತೆ ಅಭಿವೃದ್ದಿ ಮತ್ತು 27 ಕೋಟಿ ವೆಚ್ಚದಲ್ಲಿ ಹುಣಸೂರು ನಗರದ ಲಕ್ಷ್ಮಣ ತೀರ್ಥ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಿಸುವ ಯೋಜನೆ ಮಂಜೂರು ಮಾಡಿಸಿದ್ದೆ. ಬದಲಾದ ಸರಕಾರ, ತಾಂತ್ರಿಕ ಕಾರಣದಿಂದಾಗಿ ತಡವಾಗಿದೆಯಷ್ಟೆ. ಆದರೆ ಇವೆಲ್ಲವನ್ನೂ ನಾನೇ ಮಾಡಿಸಿದ್ದು ಎಂಬಂತೆ ಸಂಸದ ಪ್ರತಾಪಸಿಂಹ ಸುಳ್ಳು ಹೇಳುತ್ತಿದ್ದಾರೆ. ಇಷ್ಟೆಅಲ್ಲ ಎಲ್ಲವನ್ನೂ ನಾನೇ ಮಾಡಿಸಿರೋದು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆಂದು ಛೇಡಿಸಿದರು.

ಅನಿಲ ಪೈಪ್‌ಲೈನ್ ಆಗಲೇಬೇಕು:

ಇದೀಗ ಮೈಸೂರಿನಲ್ಲಿ  ಅಳವಡಿಸುತ್ತಿರುವ ಗ್ಯಾಸ್ ಪೈಪ್‌ಲೈನ್ ಕಾಮಗಾರಿಗೆ ಶಾಸಕರಾದ ನಾಗೇಂದ್ರ, ರಾಮದಾಸ್ ವಿರೋಧ ವ್ಯಕ್ತಪಡಿಸುತ್ತಿರುವುದು ತರವಲ್ಲ, ಜಿಯೋ ಕಂಪನಿಯವರು ರಸ್ತೆ ಅಗೆದಾಗ ಎಲ್ಲಿಗೋಗಿದ್ರು ಇವರೆಲ್ಲಾ. ಇದೊಂದು ಗ್ರಾಹಕರ ಸ್ನೇಹಿ ಯೋಜನೆಯಾಗಿದ್ದು, ಸಾವಿರ ರೂನ ಸಿಲೆಂಡರ್ 500 ರೂಗೆ ಗ್ಯಾಸ್ ದೊರೆಯಲಿದೆ ಇದರಿಂದ ಬಡಜನರಿಗೆ ಅನುಕೂಲವಾಗಲಿದೆ. ಪ್ರತಿಷ್ಟೆ ಬಿಟ್ಟು ಪೈಪ್ ಲೈನ್ ಅಳವಡಿಸಲು ಸಹಕರಿಸಬೇಕು.

ರಸ್ತೆ ಗುಂಡಿ ಬೀಳಲಿದೆ ಎಂಬುದರಲ್ಲಿ ಅರ್ಥವಿಲ್ಲ.  ಗ್ಯಾಸ್‌ಲೈನ್‌ನ್ನು ಸಂಸದ ನಾನೇ ತಂದಿದ್ದೇನೆAದು ಕೊಚ್ಚಿಕೊಳ್ಳುವುದರಲ್ಲಿ ಅರ್ಥವಿಲ್ಲ. ಇದು ಸಂಸದರ ಯೋಜನೆಯಲ್ಲ, ಕೇಂದ್ರದ ಮೋದಿ ಸರಕಾರದ ನಿರಂತರ ಯೋಜನೆಗಳಲ್ಲೊಂದು ಎಂದು ಸಂಸದರ ಕಾಲೆಳೆದರು.

2023 ರ ಚುನಾವಣೆ ಬೊಮ್ಮಾಯಿ ನೇತೃತ್ವ: ಮುಖ್ಯ ಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಯತ್ನಾಳ್ ಮತ್ತಿತರರಿಂದ ಸರಕಾರಕ್ಕೆ ತೊಂದರೆ ಇದೆಯೇ ಎಂಬ ಪ್ರಶ್ನೆಗೆ ಹಾಗೇನೂ ಆಗಲ್ಲ. ಬಸವರಾಜ ಬೊಮ್ಮಯಾಯಿಯವರು ಕೋವಿಡ್-೧೯ ಸಂಕಷ್ಟದಲ್ಲೂ ಸಾಕಷ್ಟು ಅಭಿವೃದ್ದಿಗೆ ಒತ್ತು ನೀಡಿದ್ದಾರೆ. ಬೊಮ್ಮಾಯಿ ನೇತೃತ್ವದ ಸರಕಾರ ಅವಧಿ ಪೂರೈಸಲಿದೆ. 2023 ರ ಚುನಾವಣೆಯೂ ಬೊಮ್ಮಾಯಿಯವರ ನೇತೃತ್ವದಲ್ಲೇ ನಡೆಯಲಿದೆ.

ಯಾರೇನು ಪತಿವ್ರತಾ ಶಿರೋಮಣಿಗಳಲ್ಲ:

ತಾವು ಹಿಂದೆ 17 ಪಕ್ಷಾಂತರ ಶಾಸಕರ ನೇತೃತ್ವ ವಹಿಸಿದ್ದು, ಇದೀಗ ಮತ್ತೆ ಪಕ್ಷಾಂತರ ಮಾತು ಕೇಳಿ ಬರುತ್ತಿದೆಯಲ್ಲಾ ಎಂಬ ಪ್ರಶ್ನೆಗೆ ಶಾಸಕರು ನಮ್ಮ ಪಕ್ಷ ಸೇರ್ತಾರೆ ಎಂದು ಹೇಳಿಕೆ ನೀಡುವ ರಮೇಶ್ ಜಾರಕಿಹೋಳಿ, ಸಿದ್ದರಾಮಯ್ಯ, ನಮ್ಮ ಬಿಜೆಪಿ ಅಧ್ಯಕ್ಷರು ಸೇರಿದಂತೆ ಪಕ್ಷಾಂತರ ಕುರಿತು ಮಾತನಾಡುತ್ತಿರುವ ಪತೀವ್ರತಾ ಶಿರೋಮಣಿಗಳ ಬಗ್ಗೆ ಶೀಘ್ರದಲ್ಲೇ ಬುತ್ತಿ ಬಿಚ್ಚಿಡಲಿದ್ದೇನೆ ಯಾರೇನು ಪತಿವ್ರತಾಶಿರೋಮಣಿಗಳಾ ಎಂದು ಪಕ್ಷಾಂತರ ಹೇಳಿಕೆ ನೀಡುವವರ ಬಗ್ಗೆ ತೀಷ್ಣವಾಗಿ ಪ್ರತಿಕ್ರಿಯಿಸಿದರು.

ಸುದ್ದಿಗೋಷ್ಟಿಯಲ್ಲಿ ಹುಡಾ ಅಧ್ಯಕ್ಷ ಗಣೇಶ್‌ಕುಮಾರಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷ ಶಿವಕುಮಾರ್ ಇದ್ದರು.

 

ಟಾಪ್ ನ್ಯೂಸ್

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Vimana 2

Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

1-kanna

Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ

1-raga

Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ

ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

Belagavi: ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷ‌ಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷ‌ಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರMUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ

MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ

FIR: ಸ್ನೇಹಮಯಿ ಕೃಷ್ಣ ವಿರುದ್ಧ ಮೈಸೂರಿನಲ್ಲಿ ಎಫ್ಐಆರ್‌

FIR: ಸ್ನೇಹಮಯಿ ಕೃಷ್ಣ ವಿರುದ್ಧ ಮೈಸೂರಿನಲ್ಲಿ ಎಫ್ಐಆರ್‌

CM Siddaramaiah: ಬಂಡೀಪುರದಲ್ಲಿ ರಾತ್ರಿ ಸಂಚಾರದ ಬಗ್ಗೆ ಚರ್ಚೆಯಾಗಿಲ್ಲ

CM Siddaramaiah: ಬಂಡೀಪುರದಲ್ಲಿ ರಾತ್ರಿ ಸಂಚಾರದ ಬಗ್ಗೆ ಚರ್ಚೆಯಾಗಿಲ್ಲ

“ಎಕ್ಸ್‌ ಖಾತೆಯಲ್ಲಿ ಬಂದ ವಿಡಿಯೋ ಧ್ವನಿ ಯಾರದ್ದು’

“ಎಕ್ಸ್‌ ಖಾತೆಯಲ್ಲಿ ಬಂದ ವಿಡಿಯೋ ಧ್ವನಿ ಯಾರದ್ದು’

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

POLICE-5

Malpe: ಜುಗಾರಿ ಅಡ್ಡೆಗೆ ದಾಳಿ, ವಶಕ್ಕೆ

POlice

Malpe: ಜೂಜಾಟ; 12 ಮಂದಿ ಅಂದರ್‌; ಪ್ರಕರಣ ದಾಖಲು

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Vimana 2

Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.