ಬೆಳಗಾವಿಯ ಸುವರ್ಣಸೌಧವನ್ನು ಕೋವಿಡ್ ಕೇರ್‌ಗೆ ಬಳಸಿಕೊಳ್ಳಿ: ಎಂಎಲ್ ಸಿ ವಿಶ್ವನಾಥ್
Team Udayavani, May 7, 2021, 3:57 PM IST
ಮೈಸೂರು: ಬೆಳಗಾವಿ ಶಾಸಕರ ಒತ್ತಾಯದಂತೆ ಸುವರ್ಣಸೌಧವನ್ನು ಕೋವಿಡ್ ಕೇರ್‌ಗೆ ಬಳಸಿಕೊಳ್ಳಿ. ಸುವರ್ಣ ಸೌಧದಲ್ಲಿ ಎರಡು ಸಾವಿರ ಬೆಡ್ ಹಾಕಬಹುದು. ತಾತ್ಕಾಲಿಕ ಬೆಡ್‌ಗಳ ವ್ಯವಸ್ಥೆ ಮಾಡಿ, ಅಗತ್ಯಬಿದ್ದರೆ ಮುಂದುವರಿಸಿ ಎಂದು ಎಂಎಲ್‌ಸಿ ಹೆಚ್.ವಿಶ್ವನಾಥ್ ಹೇಳಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪೂರ್ಣ ಲಾಕ್‌ಡೌನ್ ಮಾಡುವ ಮುಖ್ಯಮಂತ್ರಿಗಖ ಹೇಳಿಕೆ ಸ್ವಾಗತಾರ್ಹ. ಸಿಎಂ ಹೇಳಿಕೆ ಸಂಪೂರ್ಣ ಜಾರಿಗೆ ತರಬೇಕು. ಭಾರತ ಇಂದು ವಿದೇಶದ ಮಾಧ್ಯಮಗಳ ಮುಂದೆ ಬೆತ್ತಲಾಗಿದೆ. ಕೇಂದ್ರ , ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣದಲ್ಲಿ ವಿಫಲವಾಗಿವೆ ಎಂದು ಟೀಕಿಸಿದರು.
ಖಾಸಗಿ ಆಸ್ಪತ್ರೆಗಳು ಯಾರ ನಿಯಂತ್ರಣದಲ್ಲಿಲ್ಲ.ಆಂಧ್ರ ಪ್ರದೇಶ, ತೆಲಂಗಾಣ ಮಾದರಿಯಲ್ಲಿ ಕೋವಿಡ್ ಚಿಕಿತ್ಸೆ ಕೊಡಬೇಕು. ಸರ್ಕಾರವೇ ಚಿಕಿತ್ಸಾ ದರ ನಿಗದಿ ಮಾಡಬೇಕು. ಸಿಎಂ ಅವರು ಧೈರ್ಯವಾಗಿ ಅಧಿಕಾರಿಗಳಿಗೆ ತಾಕೀತು ಮಾಡಬೇಕು ಎಂದು ಪ್ರಶ್ನೆಯೊಂದಕ್ಕೆ ಹೇಳಿದರು.
ಸಿಎಂಗೆ ಖಂಡತುಂಡವಾಗಿ ಅಧಿಕಾರ ನಡೆಸಿ ಅಂತ ಹೇಳಿದ್ದೆ ತಪ್ಪಾ? ನಾನೊಬ್ಬ ವಿಧುರನಾಗಿ ಧೃತರಾಷ್ರ್ಟನಿಗೆ ಬುದ್ದಿ ಹೇಳಿದ್ದೇನೆ. ಶಕುನಿಗಳನ್ನು, ಮೆಚ್ಚಿಸುವವರನ್ನ ನಂಬಬೇಡಿ. ಬಿಎಸ್‌ವೈ ಪುತ್ರ ವಾತ್ಸಲ್ಯ ಬಿಡಬೇಕು. ಅಂದು ವಿಧುರ ಕುರುಕ್ಷೇತ್ರ ಯುದ್ದ ಬೇಡ ಅಂತ ಹೇಳಿದ್ದ. ವಿಧುರನ ಸ್ಥಾನದಲ್ಲಿನಿಂತು ನಾನು ಮಾತನಾಡಿದ್ದೇನೆ ಎಂದು ವಿಶ್ವನಾಥ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.