ಚುನಾವಣಾಧಿಕಾರಿಗಳ ಕಣ್ಗಾವಲಿಗೆ ಮೊಬೈಲ್‌ಆ್ಯಪ್
Team Udayavani, Apr 6, 2018, 12:49 PM IST
ಹುಣಸೂರು: ರಾಜ್ಯದಲ್ಲೇ ಪ್ರಥಮ ಬಾರಿಗೆ ಮೊಬೈಲ್‌ಆ್ಯಪ್ ಬಳಸಿ ಚುನಾವಣೆ ಕಾರ್ಯಕ್ಕೆ ನೇಮಕವಾಗಿರುವ ಅಧಿಕಾರಿಗಳ ಮೇಲೆ ಕಣ್ಗಾವಲಿಡಲು ಕ್ಷೇತ್ರದ ಚುನಾವಣಾಧಿಕಾರಿ ಮುಂದಾಗಿದ್ದಾರೆ.
ಸೆಕ್ಟರಲ್ ಮ್ಯಾಜಿಸ್ಟೇಟರ್ ಹಾಗೂ ಪ್ಲೆ„ಯಿಂಗ್ ಸ್ಕ್ವಾಡ್‌ನ ಕಾರ್ಯ ವೈಖರಿಯ ಮೇಲೆ ನಿಗಾ ಇಡಲು ಹುಣಸೂರು ವಿಧಾನಸಭೆ ಕ್ಷೇತ್ರದ ಚುನಾವಣಾಧಿಕಾರಿ ಕೆ.ನಿತೀಶ್, ಚುನಾವಣಾ ತಹಶೀಲ್ದಾರ್ ರಕ್ಷಿತ್ ಈ ಹೊಸ ಪ್ರಯೋಗಕಕ್ಕೆ ಮುಂದಾಗಿದ್ದಾರೆ.
ಹಿಂದೆ ವರದಿಯೇ ಆಧಾರ: ಸೆಕ್ಟರಲ್ ಮ್ಯಾಜಿಸ್ಟೇಟರ್ ಹಾಗೂ ಪೈಯಿಂಗ್ ಸ್ಕ್ವಾಡ್‌ನ ಅಧಿಕಾರಿಗಳು ತಮಗೆ ವಹಿಸಿರುವ ಜವಾಬ್ದಾರಿಯನ್ನು ಹೇಗೆ ನಿರ್ವಹಿಸುತ್ತಿದ್ದಾರೆ, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವಲ್ಲಿ ಇವರ ಕಾರ್ಯವೈಖರಿ ಹೇಗಿದೆ ಎಂಬುದನ್ನು ತಿಳಿಯಲು ಹಿಂದೆ ಅವರು ನೀಡುತ್ತಿದ್ದ ವರದಿಯೇ ಆಧಾರವಾಗಿತ್ತು.
ಇದೀಗ ಆ್ಯಪ್ ಮೂಲಕ ಕಣ್ಗಾವಲು: ಯುವ ಅಧಿಕಾರಿಗಳು ಚುನಾವಣೆ ಕಾರ್ಯವೈಖರಿಯ ಸುಧಾರಣೆಗಾಗಿ ಹೊಸಚಿಂತನೆ ನಡೆಸಿದಾಗ, ಹೊಳೆದದ್ದೇ ಈ ಮೊಬೈಲ್ ಆ್ಯಪ್, ಗೂಗಲ್ ಮೂಲಕ ಲೈಪ್ 360 ಆ್ಯಪ್‌ಡೌನ್‌ಲೋಡ್ ಮಾಡಿಕೊಂಡಿದ್ದು, ಈಗಾಗಲೇ ಸೆಕ್ಟರಲ್ ಮ್ಯಾಜಿಸ್ಟೇಟರ್ ಹಾಗೂ ಪ್ಲೆ„ಯಿಂಗ್ ಸ್ಕ್ವಾಡ್‌ನ ಅಧಿಕಾರಿಗಳ ಮೊಬೈಲ್‌ನಲ್ಲೂ ಈ ಆ್ಯಪ್ ಅಳವಡಿಸಲಾಗಿದೆ.
ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಅಧಿಕಾರಿಗಳ ಚಲನವಲನವನ್ನು ಕಚೇರಿಯಲ್ಲೇ ಕುಳಿತು ವೀಕ್ಷಿಸಬಹುದು. ದೂರು ಬಂದ ವೇಳೆ ಮೊಬೈಲ್ ವಾಹನಗಳಲ್ಲಿರುವ ಅಧಿಕಾರಿಗಳಿಗೆ ಸೂಚನೆ ಹಾಗೂ ಮಾರ್ಗದರ್ಶನ ನೀಡಲು ಸಹಕಾರಿಯಾಗಿದೆ. ಇದು ಅರಣ್ಯ ಇಲಾಖೆ ಈಗಾಗಲೇ ಜಾರಿಗೆ ತಂದಿರುವ ಹೆಜ್ಜೆ, ಗಸ್ತು ಮಾದರಿಯಲ್ಲಿದೆ.
ಈ ಹೊಸ ಪರಿಕಲ್ಪನೆಯು ಹುಣಸೂರು ವಿಧಾನಸಭೆ ಕ್ಷೇತ್ರ-212ರಲ್ಲಿ ಚುನಾವಣೆ ಘೋಷಣೆಯ ಮಾರನೇ ದಿನದಿಂದಲೇ ಜಾರಿಗೊಳಿಸಲಾಗಿದ್ದು, ಕುಳಿತಲ್ಲೇ ಮಾಹಿತಿ ಪಡೆಯುತ್ತಿದ್ದೇವೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಜಿಲ್ಲೆಯ ಎಲ್ಲಾ ಕ್ಷೇತ್ರಗಳಿಗೂ ಮೊಬೈಲ್ ಆ್ಯಪ್ ಜಾರಿಗೆ ತರಲು ಸೂಚಿಸಿದ್ದಾರೆ ಎಂದು ಚುನಾವಣಾಧಿಕಾರಿ ಕೆ.ನಿತೀಶ್ ಉದಯವಾಣಿಗೆ ತಿಳಿಸಿದರು.
ನೀತಿ ಸಂಹಿತೆ ಉಲ್ಲಂಘನೆ ದೂರು ನೀಡಿ: ಚುನಾವಣೆ ಹಿನ್ನೆಲೆಯಲ್ಲಿ ಅನಧಿಕೃತ ಸಭೆ, ವಸ್ತುಗಳು, ಹಣ ಹಂಚುವುದು, ಬಾಡೂಟ ಹಾಕಿಸುವುದು, ಅಕ್ರಮ ಕೂಟ, ಟೋಕನ್ ನೀಡಿ ಹೋಟೆಲ್,ಬಾರ್‌ಗಳಿಗೆ ಕಳುಹಿಸುವುದು ಸೇರಿದಂತೆ ಚುನಾವಣೆ ನೀತಿ ಸಂಹಿತೆಯನ್ನು ಉಲ್ಲಂ ಸಿರುವ ಯಾವುದೇ ಪ್ರಕರಣ ಕಂಡುಬಂದಲ್ಲಿ ಸಾರ್ವಜನಿಕರು ಚುನಾವಣಾ ಕಂಟ್ರೋಲ್ ರೂಂ ದೂ.ಸಂ. 08222-252046, ಎ.ಸಿ.ಕಚೇರಿ ದೂ. 08222-252073 ಹಾಗೂ ಚುನಾವಣಾಧಿಕಾರಿ 8628874079 ದೂರು ಸಲ್ಲಿಸಬಹುದೆಂದು ಎಸಿ ಕೋರಿದ್ದಾರೆ.
ಎಲ್ಲಾ ಅಧಿಕಾರಿಗಳು ಅವರವರ ಮೊಬೈಲ್‌ನಲ್ಲಿ ಈ ಆ್ಯಪ್‌ಡೌನ್‌ಲೋಡ್ ಮಾಡಿಕೊಂಡಿದ್ದು, ಸೆಕ್ಟರಲ್ ಮ್ಯಾಜಿಸ್ಟೇಟರ್ ಹಾಗೂ ಪ್ಲೆ„ಯಿಂಗ್ ಸ್ಕ್ವಾಡ್‌ನ ಅಧಿಕಾರಿಗಳಿಗೆ ಪ್ರತ್ಯೇಕ ಆ್ಯಪ್ ನೀಡಲಾಗಿದೆ. ನಿತ್ಯ ಅವರ ಕಾರ್ಯವೈಖರಿಯನ್ನು ಕಚೇರಿಯಲ್ಲೇ ಕುಳಿತು ಗಮನಿಸಲಾಗುತ್ತಿದೆ. ಇದರಿಂದ ಪರಿಣಾಮಕಾರಿ ಕೆಲಸವಾಗುತ್ತಿದೆ.
-ಪ್ರೊಬೇಷನರಿ ಕೆ.ಎ.ಎಸ್. ಅಧಿಕಾರಿ ರಕ್ಷಿತ್.
* ಸಂಪತ್‌ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ
ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Waqf Report: ಅಮಿತ್ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್ ರಿಜಿಜು ಮೂಲಕ ಸಲ್ಲಿಕೆ
Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ
ಮಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ
Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ
Train; ಗೋಮಟೇಶ್ವರ ಎಕ್ಸ್‌ಪ್ರೆಸ್ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.