ಮೋದಿ ಕಾರ್ಯಕ್ರಮ ಅದ್ಭುತ: ಧೋರಣೆ ಆತಂಕಕಾರಿ
Team Udayavani, Feb 27, 2018, 12:37 PM IST
ಮೈಸೂರು: ನಾನು ಎಡಪಂಥೀಯನೂ ಅಲ್ಲ. ಬಲ ಪಂಥೀಯನೂ ಅಲ್ಲ. ನಾನೊಬ್ಬ ಮನುಷ್ಯ. ರೈತರಿಗೆ ಬದುಕುವ ಹಕ್ಕು, ಯುವಜನರಿಗೆ ಉದ್ಯೋಗ, ಪ್ರಶ್ನೆ ಮಾಡುವ ಹಕ್ಕು ಬೇಕು. ಅದಕ್ಕಾಗಿ ಪ್ರಶ್ನೆ ಮಾಡುತ್ತಿದ್ದೇನೆ. ಉತ್ತರ ಕೊಡುವ ಬದಲಿಗೆ ನನ್ನ ಚಾರಿತ್ರÂ ಹರಣ ಮಾಡುತ್ತಿದ್ದಾರೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ಹೇಳಿದರು.
ಸೋಮವಾರ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಏರ್ಪಡಿಸಿದ್ದ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಅವರು, ಪತ್ರಕರ್ತೆ ಗೌರಿ ಸಾವು ನನ್ನನ್ನು ಬಹಳ ಡಿಸ್ಟರ್ಬ್ ಮಾಡಿತು. ಹೀಗಾಗಿ ಸಮಾಜದ ಪರವಾಗಿ ನನ್ನ ಅನಿಸಿಕೆ ಹೇಳಬೇಕು ಎಂದು ಆಳುವವರನ್ನು ಪ್ರಶ್ನೆ ಮಾಡಿದರೆ, ಉತ್ತರ ಕೊಡುವ ಬದಲಿಗೆ ಇವರ ಬಗ್ಗಯೇ ಏಕೆ ಮಾತಾಡ್ತೀರಿ ಎಂದು ಮರು ಪ್ರಶ್ನೆ ಹಾಕುತ್ತಿದ್ದಾರೆ. ಜತೆಗೆ ಇಷ್ಟು ದಿನ ಶ್ರೇಷ್ಠ ನಟನಾಗಿದ್ದವನು ಈಗ ನಟನೇ ಅಲ್ಲ ಅನ್ನುವಷ್ಟರ ಮಟ್ಟಕ್ಕೆ ಹೋಗಿದ್ದಾರೆ ಎಂದರು.
ಜಸ್ಟ್ ಆಸ್ಕಿಂಗ್: ನಮ್ಮನ್ನು ಆಳುವವರನ್ನು ಪ್ರಶ್ನೆ ಮಾಡಬೇಕು. ಇದಕ್ಕಾಗಿ ಜಸ್ಟ್ ಆಸ್ಕಿಂಗ್ ಸಂವಾದದ ಪಯಣವನ್ನು ಮೈಸೂರಿನಿಂದ ಆರಂಭಿಸುತ್ತಿದ್ದೇನೆ. ಪ್ರತಿ ಜಿಲ್ಲೆಯಲ್ಲೂ ಈ ರೀತಿಯ ಸಂವಾದ ಮಾಡಿ ಪ್ರಶ್ನೆ ಕೇಳುತ್ತೇನೆ. ಆಳುವವರು ಉತ್ತರ ಕೊಡಬೇಕು. ಬದಲಿಗೆ ಪ್ರಶ್ನೆ ಕೇಳಿದವರನ್ನು ಹತ್ತಿಕ್ಕುವ ಕೆಲಸ ಆಗಬಾರದು. ಉತ್ತರ ಕೊಡಬೇಕಾದ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಹೇಳಿದರು. ನಾನು ಎಡಪಂಥೀಯನೂ ಅಲ್ಲ. ಯಾವುದೇ ಒಂದು ಸಮುದಾಯದ ವಿರುದ್ಧವೂ ಅಲ್ಲ. ಆದರೆ, ನನ್ನ ಬಾಯಿ ಮುಚ್ಚಿಸಲು ನನ್ನ ಹೇಳಿಕೆಗಳನ್ನು ತಿರುಚಲಾಗುತ್ತಿದೆ ಎಂದರು.
ಆತಂಕವಾಗುತ್ತೆ: ಕೇಂದ್ರ ಕೌಶಲ್ಯಾಭಿವೃದ್ಧಿ ಮಂತ್ರಿ ಅನಂತಕುಮಾರ್ ಹೆಗಡೆ, ಅಲ್ಪ ಸಂಖ್ಯಾತರು ವಿವಾಹದ ನಂತರ ಕೌಶಲ್ಯಾಭಿವೃದ್ಧಿ ತೋರುತ್ತಾರೆ ಎಂದು ಸೊಂಟದ ಕೆಳಗಿನ ಮಾತುಗಳನ್ನಾಡುತ್ತಾರೆ. ಸಂಸದ ಪ್ರತಾಪ್ ಸಿಂಹ ಕೂಡ ನನ್ನ ಪತ್ನಿ ವಿಚಾರವನ್ನು ಎತ್ತಿ ಸೊಂಟದ ಕೆಳಗಿನ ಭಾಷೆಯಲ್ಲೇ ಮಾತನಾಡುತ್ತಾರೆ. ಇಂಥವರ ಬಗ್ಗೆ ಪ್ರತಿಭಟನೆ ಮಾಡಬೇಕಲ್ವ? ಹಿಂದೂ, ಮುಸ್ಲಿಂ, ಕ್ರೆ„ಸ್ತರು ಅಂಥಲ್ಲ, ಅದರಲ್ಲಿರುವ ಕೆಲ ರಾಕ್ಷಸರು ಕೋಮುವಾದ ಮಾಡುತ್ತಿದ್ದಾರೆ. ಯಾರೇ ಕೋಮುವಾದ ಮಾಡಿದರೂ ತಪ್ಪೇ ಎಂದ ಅವರು ಅನಂತಕುಮಾರ್ ಹೆಗಡೆ ಅಂಥವರು ಬೆಳೆಯಲು ಬಿಡಬಾರದು ಎಂಬುದು ನನ್ನ ಅನಿಸಿಕೆ ಎಂದರು.
ಮೋದಿ ಅವರನ್ನೂ ಮೆಚೆನೆ: ಪ್ರಧಾನಿ ಮೋದಿ ಅವರನ್ನು ವಿರೋಧಿಸಿದರೂ ಅವರ ಕೆಲ ಕಾರ್ಯಕ್ರಮಗಳನ್ನು ಮೆಚ್ಚುತ್ತೇನೆ. ಸ್ವತ್ಛ ಭಾರತ್ ಅದ್ಭುತ ಆಲೋಚನೆ. ಆದರೆ, ಅದಕ್ಕೆ ನೀಡುತ್ತಿರುವ 12 ಸಾವಿರ ರೂಪಾಯಿಗಳಲ್ಲಿ ಶೌಚಾಲಯ ಕಟ್ಟಲಾಗಲ್ಲ. ಜತೆಗೆ ಗ್ರಾಮೀಣ ಪ್ರದೇಶದಲ್ಲಿ ಅವರದೇ ಆದ ಕೆಲ ಸಂಪ್ರದಾಯಗಳು ಬೆಳೆದುಬಂದಿರುತ್ತೆ. ಹೀಗಾಗಿ ಗ್ರಾಮೀಣ ಪ್ರದೇಶದಲ್ಲಿನ ಶೇ.70 ಶೌಚಾಲಯಗಳು ಗೋಡಾನ್‌ಗಳಾಗಿವೆ. ಒಂದು ದೇಶ-ಒಂದು ತೆರಿಗೆ ಅದ್ಭುತ, ಆದರೆ ಕೈಮಗ್ಗದ ಉತ್ಪನ್ನಗಳ ಮೇಲೆ ಶೇ.18 ತೆರಿಗೆ ವಿಧಿಸಿದ್ದು ತಪ್ಪು. ನಾನೊಬ್ಬ ಭಾರತೀಯ ಪ್ರಜೆಯಾಗಿ ಇದನ್ನು ಪ್ರಶ್ನಿಸಿದರೆ, ಮೋದಿಯವರನ್ನು ಟೀಕಿಸುತ್ತಾರೆ ಎನ್ನುತ್ತಾರೆ ನಾನೇನು ಮಾಡಲಿ ಎಂದರು.
ನಲಪಾಡ್ ಹೊಗಲಿದ್ದು ಮುಜುಗರವಾಗಿದೆ: ಶಾಸಕ ಹ್ಯಾರೀಸ್ ಪುತ್ರ ಮೊಹಮ್ಮದ್ ನಲಪಾಡ್ ಪ್ರಕರಣದಿಂದ ನನಗೆ ಮುಜುಗರವಾಗಿದೆ. ಶಾಂತಿನಗರದಲ್ಲಿ ತಮಿಳರು ಸಂಕ್ರಾಂತಿ ಆಚರಣೆಗೆ ಕರೆದಾಗ ಹೋಗಿದ್ದೆ. ಚಿತ್ರದುರ್ಗ ಜಿಲ್ಲೆಯಲ್ಲಿ ನಾನು ದತ್ತು ತೆಗೆದುಕೊಂಡಿರುವ ಗ್ರಾಮದ ಅಭಿವೃದ್ಧಿ ಕೆಲಸಗಳಿಗಾಗಿ ನಲಪಾಡ್, 2 ಲಕ್ಷ ರೂ. ನೀಡಿದ್ದರಿಂದ ಆ ಕ್ಷಣಕ್ಕೆ ನಾನು ಆತನನ್ನು ಹೊಗಳಿದ್ದು ನಿಜ. ಆತ ಇಷ್ಟು ದೊಡ್ಡ ರಾಕ್ಷಸ ಎಂದು ಗೊತ್ತಿರಲಿಲ್ಲ. ಈ ಘಟನೆ ಆದ ನಂತರ ಹೊಗಳಿದ್ದಕ್ಕೆ ವಿಷಾದ ವ್ಯಕ್ತಪಡಿಸಿ, ಘಟನೆಯನ್ನು ಖಂಡಿಸಿದ್ದೇನೆ. ಜತೆಗೆ ಹಣವನ್ನೂ ವಾಪಸ್‌ಕಳುಹಿಸಿದ್ದೇನೆ. ಈ ಪ್ರಕರಣದಿಂದ ನನಗೂ ಜವಾಬ್ದಾರಿ ಇರಬೇಕು ಎಂಬ ಪಾಠ ಕಲಿತಿದ್ದೇನೆ. ಇನ್ನು ಮುಂದೆ ಯಾರನ್ನಾದರೂ ಹೊಗಳಬೇಕಾದರೆ ಪೂರ್ವಾಪರ ತಿಳಿದುಕೊಂಡು ಮಾತನಾಡುತ್ತೇನೆ.
ನೈಜತೆ ಮಾತನಾಡಿದರೆ ಟೀಕೆ ಎದುರಿಸಬೇಕು: ಇತ್ತೀಚಿನ ನನ್ನ ನಡವಳಿಕೆಯಿಂದ ನಮ್ಮ ಮನೆಯಲ್ಲೂ ಕೆಲ ಬದಲಾವಣೆಗಳಾಗಿವೆ. ಈ ಹಿಂದೆ ಅಮ್ಮ ದಿನಕ್ಕೊಮ್ಮೆ ಚರ್ಚ್‌ಗೆ ಹೋಗಿ ಪ್ರಾರ್ಥನೆ ಮಾಡುತ್ತಿದ್ದಳು. ಈಗ ಎರಡು ಬಾರಿ ಹೋಗುತ್ತಿದ್ದಾಳೆ. ನನ್ನ ಹೆಂಡತಿ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸುತ್ತಾಳೆ. ಅಮೆರಿಕಾದಲ್ಲಿರುವ ಮಗಳು ಆಗಾಗ ಕರೆ ಮಾಡಿ ಅಪ್ಪ ಸೇಫಾಗಿದ್ದೀರಾ ಎಂದು ಕೇಳುತ್ತಾಳೆ. ನನ್ನ ಸ್ನೇಹಿತನ ಎಂಟು ವರ್ಷದ ಮಗಳು ಕರೆ ಮಾಡಿ ಅಂಕಲ್, ಮೋದಿ ಅವರ ಬಗ್ಗೆ ಮಾತನಾಡಬೇಡಿ ಎನ್ನುತ್ತಾಳೆ. ಇಲ್ಲಿಯವರೆಗೂ ಹೋಗಿದ್ಯಾ ಈ ಘಟನೆಗಳು ಎಂದು ನನಗೇ ಅನಿಸುತ್ತೆ. ಇತ್ತೀಚಿನ ಈ ಘಟನಾವಳಿಗಳು ಎಷ್ಟೊಂದು ಭಯ ಹುಟ್ಟಿಸಿದೆ. ಆದರೆ, ನೈಜತೆ ಮಾತನಾಡಿದರೆ ಇಷ್ಟೆಲ್ಲ ಎದುರಿಸಬೇಕಾಗುತ್ತದೆ ಎಂದು ಈಗ ಅನಿಸಿದೆ. ಇದೆಲ್ಲ ಬೇಕಿತ್ತು ಅಂತಲೇ ಮಾತನಾಡುತ್ತಿದ್ದೇನೆ.
ಈ ಘಟನೆಗಳಿಂದ ನನ್ನ ಸಿನಿಮಾ ಕೆರಿಯರ್‌ಗೆ ಹೊಡೆತ ಬಿದ್ದಿಲ್ಲ. ಇನ್ನೂ ಒಂದು ವರ್ಷದವರೆಗೆ ನನ್ನ ಡೇಟ್ಸ್ ಇಲ್ಲ. ಕನ್ನಡ, ಹಿಂದಿ, ಮಲಯಾಳಂ ಸೇರಿ ಅನೇಕ ಚಿತ್ರಗಳಲ್ಲಿ ಬ್ಯೂಸಿಯಾಗಿದ್ದೇನೆ. ಇನ್ನೂ 20 ಸ್ಕ್ರಿಫ್ಟ್ಗಳಿಗೆ ನನ್ನ ಡೇಟ್ಸ್ ಕೇಳುತ್ತಿದ್ದಾರೆ. ಆಗಲ್ಲ ಎನ್ನುತ್ತಿದ್ದೇನೆ.
-ಪ್ರಕಾಶ್ ರೈ, ಬಹುಭಾಷಾ ನಟ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ 9 ಗಂಟೆ ವಿಚಾರಣೆ
ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ
MUST WATCH
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ
Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್ ಮದುವೆ?
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.