ಅಮ್ಮನ ಕಳೆದುಕೊಂಡು ಅನಾಥವಾದ ಶಕ್ತಿಧಾಮ


Team Udayavani, Jun 1, 2017, 12:51 PM IST

mys5.jpg

ಮೈಸೂರು: ತೀವ್ರ ಅನಾರೋಗ್ಯದಿಂದ ನಿಧನರಾದ ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್‌ ಅವರಿಗೂ ಸಾಂಸ್ಕೃತಿಕ ನಗರಿ ಮೈಸೂರಿಗೂ ಬಿಡಿಸಲಾಗದ ನಂಟು ಹೊಂದಿದ್ದು, ಅವರ ಸಾರಥ್ಯದಲ್ಲಿ ನಡೆಯುತ್ತಿದ್ದ ಶಕ್ತಿಧಾಮದಲ್ಲಿ ಪಾರ್ವತಮ್ಮ ಅವರ ನೆನಪು ಜೀವಂತವಾಗಿದೆ.

ಮೂಲತಃ ಮೈಸೂರು ಜಿಲ್ಲೆಯ ಕೆ.ಆರ್‌.ನಗರ ತಾಲೂಕಿನ ಸಾಲಿಗ್ರಾಮದಲ್ಲಿ ಜನಿಸಿದ್ದ ಪಾರ್ವತಮ್ಮ ರಾಜ್‌ಕುಮಾರ್‌ ಅವರು ಬಾಲ್ಯದಿಂದಲೂ ಮೈಸೂರಿನೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಇದೇ ಒಡನಾಟದಿಂದಲೇ ಸಮಾಜದ ನಿರ್ಗತಿಕ ಹಾಗೂ ಅಶಕ್ತ ಮಹಿಳೆಯರಿಗೆ ಆಶ್ರಯ ಕಲ್ಪಿಸುವ ಉದ್ದೇಶದಿಂದ ಮೈಸೂರಿನಲ್ಲಿ ಹಲವು ವರ್ಷಗಳ ಹಿಂದೆ ಆರಂಭಿಸಿದ್ದ ಶಕ್ತಿಧಾಮದಲ್ಲಿ ನೀರವವîೌನ ಆವರಿಸಿದ್ದು, ಇಲ್ಲಿನ ವಾಸಿಗಳು ತಾಯಿಯನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ.

ಶಕ್ತಿಧಾಮದ ಹಿನ್ನೆಲೆ: ಕಳೆದ ಹಲವು ವರ್ಷದಿಂದ ಸಮಾಜದಲ್ಲಿನ ಅಶಕ್ತ ಮಹಿಳೆಯರಿಗೆ ಆಶ್ರಯ ತಾಣವಾಗಿದ್ದ ಶಕ್ತಿಧಾಮ 1998ರಲ್ಲಿ ಆರಂ¸‌ಗೊಂಡಿತು. 1998ರಲ್ಲಿ ಮೈಸೂರು ನಗರದ ಪೊಲೀಸ್‌ ಆಯುಕ್ತರಾಗಿದ್ದ ಕೆಂಪಯ್ಯ ಅವರು ವೇಶ್ಯಾವಾಟಿಕೆಯಲ್ಲಿ ಸಿಕ್ಕಿ ಬೀಳುವ ಮಹಿಳೆಯರ ಸಂರಕ್ಷಣೆ ಮಾಡುವ ಉದ್ದೇಶದಿಂದ ಪುನರ್‌ವಸತಿ ಕೇಂದ್ರವೊಂದನ್ನು ಆರಂಭಿಸುವ ಚಿಂತನೆ ಮಾಡಿದ್ದರು.

ಕೆಂಪಂ‌ುÂ ಅವರ ಈ ಪ್ರಯತ್ನಕ್ಕೆ ಪ್ರಮುಖವಾಗಿ ವರನಟ ಡಾ.ರಾಜ್‌ಕುಮಾರ್‌ ಕುಟುಂಬ ಸೇರಿದಂತೆ ಇನ್ನಿತರ ದಾನಿಗಳು ಸಹ ಆರ್ಥಿಕ ನೆರವು ನೀಡಿದ್ದರು. ಇದಕ್ಕಾಗಿ ಶಕ್ತಿಧಾಮ ಟ್ರಸ್ಟ್‌ ಮೂಲಕ 2000ನೇ ಸಾಲಿನಲ್ಲಿ ಮಹಿಳೆಯರ ಪುನರ್‌ವಸತಿ ಕೇಂದ್ರ ತೆರೆಯಲಾಯಿತು.

ಆದರೆ ಆರಂ¸‌ದ ದಿನಗಳಲ್ಲಿ ಕೇವಲ ವೇಶ್ಯಾವಾಟಿಕೆ ಜಾಲದಲ್ಲಿ ಸಿಕ್ಕಿಬೀಳುವ ಮಹಿಳೆಯರ ಆಶ್ರಯ ತಾಣವಾಗಿದ್ದ ಶಕ್ತಿಧಾಮದಲ್ಲಿ ದಿನಕಳೆದಂತೆ ನಿರ್ಗತಿಕ ಹಾಗೂ ಕೌಟುಂಬಿಕ ಸಮಸ್ಯೆಗಳಿಂದಾಗಿ ಕುಟುಂಬದಿಂದ ದೂರವಾದ ಮಹಿಳೆಯರಿಗೂ ಆಶ್ರಯ ನೀಡಲಾಗುತ್ತಿತ್ತು. ಅದರಂತೆ ಈವರೆಗೂ ಅಂದಾಜು 4 ಸಾವಿರಕ್ಕೂ ಹೆಚ್ಚು ಮಹಿಳೆಯರು ಶಕ್ತಿಧಾಮದಲ್ಲಿ ಆಶ್ರಯ ಪಡೆದಿದ್ದಾರೆ. ಪ್ರಸ್ತುತ 30 ಮಹಿಳೆಯರು ಶಕ್ತಿಧಾಮದಲ್ಲಿ ಆಶ್ರಯ ಪಡೆಯುತ್ತಿದ್ದಾರೆ.

ಉದ್ಯೋಗ, ವೃತ್ತಿಪರ ತರಬೇತಿ: ನಾನಾ ಕಾರಣಗಳಿಂದಾಗಿ ಸಮಾಜದಿಂದ ದೂರವಾಗಿ ಶಕ್ತಿಧಾಮದಲ್ಲಿ ಆಶ್ರಯ ಪಡೆದಿದ್ದ ಮಹಿಳೆಯರ ಜೀವನ ನಿರ್ವಹಣೆಗೆ ಅನುಕೂಲವನ್ನು ಕಲ್ಪಿಸಲಾಗುತ್ತಿತ್ತು. ಪ್ರಮುಖವಾಗಿ ಇಲ್ಲಿನ ಮಹಿಳೆಯರಿಗೆ ವಸತಿ, ಊಟ ಸೌಲಭ್ಯಗಳೊಂದಿಗೆ ಉದ್ಯೋಗ ತರಬೇತಿ ಜತೆಗೆ ವೃತ್ತಿಪರ ಶಿಕ್ಷಣವನ್ನು ನೀಡಿ ಸಮಾಜದ ಮುಖ್ಯವಾಹಿನಿಗೆ ತರಲು ಸಹಾಯ ಮಾಡಲಾಗುತ್ತಿತ್ತು.

ಇದರ ಲಾ¸‌ಪಡೆದ ಅನೇಕ ಮಹಿಳೆಯರು ಪ್ರಸ್ತುತ ಸಂದ¸‌ìದಲ್ಲಿ ತಮ್ಮ ಸ್ವಂತ ದುಡಿಮೆ ಮೂಲಕ ಸ್ವತಂತ್ರ್ಯವಾಗಿ ಜೀವನ ನಡೆಸುವ ಹಂತಕ್ಕೆ ಬೆಳೆದಿದ್ದಾರೆ. ಇದಲ್ಲದೆ ಶಕ್ತಿಧಾಮದಲ್ಲಿ ಡಾ.ರಾಜ್‌ಕುಮಾರ್‌ ಅವರ ಹೆಸರಿನಲ್ಲಿ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ ಮತ್ತು ನೇತ್ರ ತಪಾಸಣಾ ಶಿಬಿರಗಳನ್ನೂ ನಡೆಸುವ ಮೂಲಕ ಸಮಾಜಸೇವೆ ಚಟುವಟಿಕೆಗಳಲ್ಲೂ ಶಕ್ತಿಧಾಮ ಗುರುತಿಸಿಕೊಂಡಿದೆ. ಇದರ ಜತೆಗೆ ಇತ್ತೀಚಿಗೆ ರಾಜ್ಯದ ನಾನಾ ಕಡೆಗಳ ನಿರ್ಗತಿಕ ಮಕ್ಕಳನ್ನು ಕರೆತಂದು ಅವರಿಗೆ ಊಟ, ವಸತಿ ಜತೆಗೆ ಶಿಕ್ಷಣ ನೀಡುವ ಕಾರ್ಯಕ್ರಮವೊಂದನ್ನು ಸಹ ನಡೆಸಲು

ಆತ್ಮಸ್ಥೈರ್ಯ ನೀಡುತ್ತಿದ್ದರು: ನಿರ್ಗತಿಕ ಮಹಿಳೆಯರ ಆಶ್ರಯ ತಾಣವಾಗಿದ್ದ ಶಕ್ತಿಧಾಮಕ್ಕೆ ಪಾರ್ವತಮ್ಮ ರಾಜ್‌ಕುಮಾರ್‌ ಅವರು ಹಲವು ಸಂದ¸‌ìದಲ್ಲಿ ಬೇಟಿ ನೀಡಿದ್ದರು. ವರನಟ ಡಾ.ರಾಜ್‌ಕುಮಾರ್‌ ಅವರ ಹುಟ್ಟೂರು ಗಾಜನೂರಿಗೆ ತೆರಳುವ ಸಂದ¸‌ì ಸೇರಿದಂತೆ ಹಲವು ಕಾರಣಗಳಿಂದ ಮೈಸೂರಿಗೆ ಆಗಮಿಸಿದ ವೇಳೆ ಶಕ್ತಿಧಾಮಕ್ಕೆ ಬರುತ್ತಿದ್ದ ಪಾರ್ವತಮ್ಮ ಅವರು ಅಲ್ಲಿನ ವಾಸಿಗಳೊಂದಿಗೆ ಬೆರೆಯುತ್ತಿದ್ದರು.

ಅಲ್ಲದೆ ಕೌಟುಂಬಿಕ ಸಮಸ್ಯೆ ಸೇರಿದಂತೆ ಇನ್ನಿತರ ತೊಂದರೆಗಳನ್ನು ಎದುರಿಸುತ್ತಿದ್ದ ಮಹಿಳೆಯರ ಪಾಲಿಗೆ ತಾಯಿ ಸ್ಥಾನದಲ್ಲಿ ನಿಂತು ಬುದ್ದಿ ಮಾತುಗಳನ್ನು ಹೇಳಿ, ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದರು. ಇನ್ನೂ ಸಂಸ್ಥೆಯಲ್ಲಿ ನಡೆಯುತ್ತಿದ್ದ ಕಾಂ‌ುìಕ್ರಮಗಳು, ಸಬೆಗಳಿಗೂ ಸಹ ಕೆಲವೊಮ್ಮೆ ಬಾಗವಹಿಸುತ್ತಿದ್ದ ಪಾರ್ವತಮ್ಮ ಅವರು 8 ತಿಂಗಳ ಹಿಂದೆ ಕೊನೆಯ ಬಾರಿಗೆ ಶಕ್ತಿಧಾಮಕ್ಕೆ ಬೇಟಿ ನೀಡಿದ್ದರು.

ಶಕ್ತಿಧಾಮದಲ್ಲಿ ಸಂತಾಪ: ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್‌ ಅವರ ನಿಧನದ ಹಿನ್ನೆಲೆಯಲ್ಲಿ ನಗರದ ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ಶಕ್ತಿಧಾಮದಲ್ಲಿ ಶ್ರದ್ಧಾಂಜಲಿ ಸಬೆ ನಡೆಸಲಾಯಿತು. ಶಕ್ತಿಧಾಮದ ನಿವಾಸಿಗಳ ಪಾಲಿಗೆ ತಾಯಿಯ ಸ್ಥಾನದಲ್ಲಿದ್ದ ಪಾರ್ವತಮ್ಮ ಅವರ ನಿಧನದಿಂದಾಗಿ ಇಡೀ ಶಕ್ತಿಧಾಮದಲ್ಲಿ ನೀರವವîೌನ ಆವರಿಸಿತ್ತು. ಸಂಸ್ಥೆಯಲ್ಲಿ ನಡೆದ ಶ್ರದ್ಧಾಂಜಲಿ ಸಬೆಯಲ್ಲಿ ಪಾಲ್ಗೊಂಡ ಸಂಸ್ಥೆಯ ಟ್ರಸ್ಟಿಗಳು ಹಾಗೂ ಇನ್ನಿತರರು ಪಾರ್ವತಮ್ಮ ಅವರ ಬಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಸನಮ ಸಲ್ಲಿಸಿದರು.

ಇದಲ್ಲದೆ ಮೈಸೂರು ಕನ್ನಡ ವೇದಿಕೆ ಮತ್ತು ರಾಜಕುಮಾರ ಕನ್ನಡ ಸೇನೆಯ ಪದಾಧಿಕಾರಿಗಳು ಪಾರ್ವತಮ್ಮ ರಾಜ್‌ಕುಮಾರ್‌ ನಿಧಾನಕ್ಕೆ ಸಂತಾಪ ವ್ಯಕ್ತಪಡಿಸಿದರು. ನಗರದ ರಾಜಕುಮಾರ್‌ ಪಾರ್ಕ್‌ನಲ್ಲಿ ಜಮಾಯಿಸಿದ ಪದಾಧಿಕಾರಿಗಳು ನಿರ್ಮಾಪಕಿ ಹಾಗೂ ಡಾ.ರಾಜ್‌ಕುಮಾರ್‌ ಪತ್ನಿ ಪಾರ್ವತಮ್ಮ ರಾಜಕುಮಾರ್‌ ಅವರಿಗೆ ಶ್ರದ್ಧಾಂಜಲಿ  ಅರ್ಪಿಸಿದರು. ಈ ವೇಳೆ ಮೈಸೂರು ಕನ್ನಡ ವೇದಿಕೆಯ ಅಧ್ಯಕ್ಷ ಬಾಲಕೃಷ್ಣ, ಕನ್ನಡ ಸೇನೆಯ ಮಹದೇವಸ್ವಾಮಿ, ಕೆಪಿಸಿಸಿ ಸದಸ್ಯ ರೇವಣ್ಣ, ಅರವಿಂದ ಶರ್ಮಾ, ಜಯರಾಂ ಇನ್ನಿತರರು ಹಾಜರಿದ್ದರು.

ಬೆಳಗ್ಗಿನ ಪ್ರದರ್ಶನ ರದ್ದು: ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್‌ ಅವರ ನಿಧನದ ಹಿನ್ನೆಲೆ ನಗರದ ಬಹುತೇಕ ಚಿತ್ರಮಂದಿರಗಳಲ್ಲಿ ಬುಧವಾರ ಬೆಳಗ್ಗಿನ ಪ್ರದರ್ಶನವನ್ನು ರದ್ದು ಮಾಡಲಾಗಿತ್ತು. ಪ್ರಮುಖವಾಗಿ ನಗರದ ವುಡ್‌ಲ್ಯಾಂಡ್‌, ಶಾಂತಲ, ಗಾಯತ್ರಿ ಚಿತ್ರಮಂದಿರಗಳು ಸೇರಿದಂತೆ ಹಲವು ಚಿತ್ರಮಂದಿರಗಳಲ್ಲಿ ಬೆಳಗಿನ ಪ್ರದರ್ಶನ ರದ್ದುಗೊಳಿಸಿ, ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕಿ ಪಾರ್ವತಮ್ಮ ಅವರಿಗೆ ಗೌರವ ಸಲ್ಲಿಸಲಾಯಿತು.

* ಸಿ.ದಿನೇಶ್‌

ಟಾಪ್ ನ್ಯೂಸ್

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

renukaacharya

BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ

Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್‌ ದಾಖಲೆ ಮುರಿದ ಟೀಂ ಇಂಡಿಯಾ

Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್‌ ದಾಖಲೆ ಮುರಿದ ಟೀಂ ಇಂಡಿಯಾ

BGT: Another shock for Team India; After Virat and Rahul, another batsman is injured

BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್‌, ರಾಹುಲ್‌ ಬಳಿಕ ಮತ್ತೊಬ್ಬ ಬ್ಯಾಟರ್‌ ಗೆ ಗಾಯ

1-ragaaa

PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ

Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ

Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

2-hunsur

Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ

1-amudaa

MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ‌ 9 ಗಂಟೆ ವಿಚಾರಣೆ

ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷ‌ಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷ‌ಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರMUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ

MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

renukaacharya

BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ

Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್‌ ದಾಖಲೆ ಮುರಿದ ಟೀಂ ಇಂಡಿಯಾ

Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್‌ ದಾಖಲೆ ಮುರಿದ ಟೀಂ ಇಂಡಿಯಾ

Kota-Shrinivas

Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.