ಜ್ವರದಿಂದ 50ಕ್ಕೂ ಹೆಚ್ಚು ಮಂದಿ ದಿಢೀರ್‌ ಆಸ್ಪತ್ರೆಗೆ ದಾಖಲು


Team Udayavani, Jun 11, 2017, 12:46 PM IST

mys6.jpg

ಹುಣಸೂರು: ನಗರ ಶಬ್ಬೀರ್‌ ನಗರ ಸೇರಿದಂತೆ ವಿವಿಧ ಬಡಾವಣೆಯಲ್ಲಿ ಜ್ವರದಿಂದ ಬಳಲುತ್ತಿರುವ 10 ವರ್ಷದೊಳಗಿನ ಮಕ್ಕಳು ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಸಾರ್ವಜನಿಕ  ಆಸ್ಪತ್ರೆಗೆ ದಾಖಲಾಗಿದ್ದು, ನಾಗರಿಕರಲ್ಲಿ ಆತಂಕ ಸೃಷ್ಟಿಯಾಗಿದೆ.

ಕಳೆದ ನಾಲ್ಕು ದಿನಗಳಿಂದ ಹೆಚ್ಚಾಗಿ ಶಬ್ಬೀರ್‌ ನಗರದಲ್ಲಿ ಮಕ್ಕಳು ದೊಡ್ಡವರೆನ್ನದೆ ಜ್ವರ ಕಾಣೀಸಿಕೊಳ್ಳುತಿದೆ. ಹಲವರಿಗೆ ಮೊದಲು ಗಂಟಲು,ಕೈ-ಕಾಲು ನೋವು,ಜ್ವರ ಕಾಣಿಸಿಕೊಂಡಿದ್ದು, ಅಂದಿನಿಂದಲೂ ನಗರದ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ವಾಸಿಯಾಗದ್ದರಿಂದ ಶುಕ್ರವಾರ ಸಂಜೆಯಿಂದ ಶಬ್ಬೀರ್‌ ನಗರದ 10 ವರ್ಷದೊಳಗಿನ ಮಕ್ಕಳು ತಂಡೋಪತಂಡವಾಗಿ ಬಂದು  ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಕ್ಕಳ ಪೈಕಿ ಶಬ್ಬೀರ್‌ ನಗರದ ಉಮ್ಮೆಸಾನಿ,ಪಾತಿಮಾ,ಕುದೇಚುದ್ರುಲ್ಲಾ, ಪಾಜಿಯಾಬಾನು, ಉಮಾಯೂನ್‌,ಕುಲತುನ್‌, ಮುಜಾಮಿಲ್‌ ಷರೀಪ್‌, ನಾಸಿರ್‌ ಷರೀಪ್‌, ಮಹಮದ್‌ ಕೈಪ್‌, ಹಯಾತನಾಬೇಗಂ, ಶೀಪಾನಾ, ಇನ್ನು ಮುಸ್ಲಿಂ ಬ್ಲಾಕ್‌ನ ಮುಬಾರಕ್‌, ರೆಹಮತ್‌ ಮೊಹಲ್ಲಾದ ಉಮ್ಮೆಹಾನಿ,  ಗುರುಪುರದ ಸೂಫಿಯಾ, ನರಸಿಂಹಸ್ವಾಮಿ ತಿಟ್ಟಿನ ವೇಣುಗೋಪಾಲ್‌, ನ್ಯೂ ಮಾರುತಿ ಬಡಾವಣೆಯ ಮೋಹಿತ್‌ ಒಳರೋಗಿಗಳಾಗಿ ದಾಖಲಾಗಿದ್ದರೆ, ಅನೇಕ ಮಂದಿ ದೊಡ್ಡವರೂ ಸಹ ವಿವಿಧ ವಾರ್ಡ್‌ಗಳಲ್ಲಿ ದಾಖಲಾಗಿದ್ದಾರೆ, ಕೆಲವರು ಹೊರ ರೋಗಿಗಳಾಗಿ ಚಿಕಿತ್ಸೆ ಪಡೆರದು ಮನೆಗೆ ತೆರಳಿದ್ದಾರೆ.

ಈ ಪೈಕಿ ಶಬ್ಬೀರ್‌ ನಗರದ 9 ವರ್ಷದ ಇರ್ಷಾದ್‌ಷರೀಪ್‌ಗೆ  ರಕ್ತದ ಪ್ಲೇಟ್‌ ಲೇಟ್‌ ಕಡಿಮೆಯಾಗಿರುವುದಾಗಿ ವರದಿ ಬಂದಿದೆ ಎಂದು ಆತನ ಪೋಷಕರು ತಿಳಿಸಿದ್ದು, ಇದೇ ಆಸ್ಪತ್ರೆಯಲ್ಲಿ ಎಲ್ಲ ಮಕ್ಕಳಂತೆ ಒಂದೇ ವಾರ್ಡ್‌ನಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಸಿಬ್ಬಂದಿಗಳು ಚಿಕಿತ್ಸೆ ನೀಡಲು ಹರಸಾಹಸ ಪಡುತ್ತಿದ್ದಾರೆ. ಆಸ್ಪತ್ರೆಯಲ್ಲಿ ರಾತ್ರಿ ಕಾರ್ಯನಿರತ ವೈದ್ಯ ಡಾ. ಸಚ್ಚಿದಾನಂದಮೂರ್ತಿ ಒಬ್ಬರೇ ಇದ್ದು, ಇತರೆ ರೋಗಿಗಳು ಹೆಚ್ಚಾಗಿ ಬರುತ್ತಿರುವುದರಿಂದ ಚಿಕಿತ್ಸೆ ಕಷ್ಟವಾಗುತ್ತಿದೆ.

ಬಹುತೇಕರಲ್ಲಿ ಹೆಚ್ಚಾಗಿ ಜ್ವರ,ಕೈಕಾಲು,ಕೀಲು,ಗಂಟಲು ನೋವು ಕಾಣಿಸಿಕೊಳ್ಳುತ್ತಿದ್ದು, ಇದೊಂದು ವೈರಲ್‌ ಫೀವರ್‌(ಜ್ವರ), ಚಿಕೂನ್‌ ಗುನ್ಯಾ ಮಾದರಿ ಜ್ವರ ವಾಗಿರಬಹುದು, ಇಂದು ದಾಖಲಾದವರಲ್ಲಿ ಹೆಚ್ಚು ಜ್ವರದಿಂದ ಬಳಲುತ್ತಿದ್ದಾರೆ. ರಕ್ತದ ಪರೀಕ್ಷೆಯಿಂದಷ್ಟೆ ಯಾವ ಕಾಯಿಲೆ ಎಂದು ಇನ್ನಷ್ಟೆ ತಿಳಿಯಬೇಕಿದೆ ಎಂದು ವೈದ್ಯಾಧಿಕಾರಿ ಡಾ.ಸಚ್ಚಿದಾನಂದಮೂರ್ತಿ ತಿಳಿಸಿದ್ದಾರೆ.

ಜ್ವರ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಶಬ್ಬೀರ್‌ ನಗರದಲ್ಲಿ ಎಲ್ಲ ಮುನ್ನೆಚ್ಚರಿಕೆಯನ್ನು ವಹಿಸಲಾಗಿದ್ದು, ತಾಲೂಕಿನಲ್ಲಿ ಇಬ್ಬರಿಗೆ ಮಾತ್ರ ಡೆಂ à ಜ್ವರ ಇರುವುದು ಖಚಿತಪಟ್ಟಿದೆ.
-ಡಾ. ದೇವತಾಲಕ್ಷ್ಮೀ, ತಾಲೂಕು ಆರೋಗ್ಯಾಧಿಕಾರಿ, ಹುಣಸೂರು.

ಟಾಪ್ ನ್ಯೂಸ್

Oscars 2025: ಆಸ್ಕರ್‌ಗೆ ಎಂಟ್ರಿ ಆಗಿರುವ ʼಲಾಪತಾ ಲೇಡೀಸ್‌ʼ ಚಿತ್ರದ ಟೈಟಲ್‌ ಬದಲಾವಣೆ

Oscars 2025: ಆಸ್ಕರ್‌ಗೆ ಎಂಟ್ರಿ ಆಗಿರುವ ʼಲಾಪತಾ ಲೇಡೀಸ್‌ʼ ಚಿತ್ರದ ಟೈಟಲ್‌ ಬದಲಾವಣೆ

arrested

ED; ಅಕ್ರಮವಾಗಿ ಒಳನುಸುಳಿದ ಇಬ್ಬರು ಬಾಂಗ್ಲಾ ಪ್ರಜೆಗಳು ಸೇರಿ ಮೂವರ ಬಂಧನ

hk-patil

John Michael D’Cunh ಟೀಕೆ;ಜೋಶಿ ತತ್ ಕ್ಷಣ ರಾಜೀನಾಮೆ ನೀಡಲಿ: ಎಚ್.ಕೆ. ಪಾಟೀಲ್

Supreme Court: ಆರೋಪಿ, ಅಪರಾಧಿ ಮನೆಯನ್ನು ನೆಲಸಮ ಮಾಡುವಂತಿಲ್ಲ: ಸುಪ್ರೀಂ ತೀರ್ಪು

Supreme Court: ಆರೋಪಿ, ಅಪರಾಧಿ ಮನೆಯನ್ನು ಏಕಾಏಕಿ ನೆಲಸಮ ಮಾಡುವಂತಿಲ್ಲ: ಸುಪ್ರೀಂ ತೀರ್ಪು

3-belagavi

Belagavi: ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಸ್ಥಾನಕ್ಕೆ ಢವಳೇಶ್ವರ ದಿಢೀರ್ ರಾಜೀನಾಮೆ

1-eqwqwewe

Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ

arrested

Salman Khan; ಬಾಲಿವುಡ್ ನಟನಿಗೆ ಬೆದರಿಕೆ ಹಾಕಿದ್ದ ಗೀತ ರಚನೆಕಾರ ರಾಯಚೂರಿನಲ್ಲಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಡೋನಾಗೆ ಯೋಗ ಕಲಿಸಿದ್ದ ಅಂತಾರಾಷ್ಟ್ರೀಯ ಯೋಗ ಗುರು ಮೈಸೂರಿನ ಶರತ್‌ ನಿಧನ

ಮಡೋನಾಗೆ ಯೋಗ ಕಲಿಸಿದ್ದ ಅಂತಾರಾಷ್ಟ್ರೀಯ ಯೋಗ ಗುರು ಮೈಸೂರಿನ ಶರತ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Waqf Board Election: ಸಚಿವ ಜಮೀರ್‌ ನೇತೃತ್ವದಲ್ಲಿ ಸಭೆ

Waqf Board Election: ಸಚಿವ ಜಮೀರ್‌ ನೇತೃತ್ವದಲ್ಲಿ ಸಭೆ

ಮುಡಾಗೆ ದೇಸಾಯಿ ಆಯೋಗ ಭೇಟಿ, ದಾಖಲೆಗಳ ಪರಿಶೀಲನೆ: 4 ತಿಂಗಳ ಬಳಿಕ ಮುಡಾ ಕಚೇರಿಗೆ ಆಗಮನಮುಡಾಗೆ ದೇಸಾಯಿ ಆಯೋಗ ಭೇಟಿ, ದಾಖಲೆಗಳ ಪರಿಶೀಲನೆ: 4 ತಿಂಗಳ ಬಳಿಕ ಮುಡಾ ಕಚೇರಿಗೆ ಆಗಮನ

ಮುಡಾಗೆ ದೇಸಾಯಿ ಆಯೋಗ ಭೇಟಿ, ದಾಖಲೆಗಳ ಪರಿಶೀಲನೆ: 4 ತಿಂಗಳ ಬಳಿಕ ಮುಡಾ ಕಚೇರಿಗೆ ಆಗಮನ

Yathindra Siddaramaiah: ನಾವು ಯಾವ ತನಿಖೆಗೂ ಹೆದರಲ್ಲ

Yathindra Siddaramaiah: ನಾವು ಯಾವ ತನಿಖೆಗೂ ಹೆದರಲ್ಲ

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

Oscars 2025: ಆಸ್ಕರ್‌ಗೆ ಎಂಟ್ರಿ ಆಗಿರುವ ʼಲಾಪತಾ ಲೇಡೀಸ್‌ʼ ಚಿತ್ರದ ಟೈಟಲ್‌ ಬದಲಾವಣೆ

Oscars 2025: ಆಸ್ಕರ್‌ಗೆ ಎಂಟ್ರಿ ಆಗಿರುವ ʼಲಾಪತಾ ಲೇಡೀಸ್‌ʼ ಚಿತ್ರದ ಟೈಟಲ್‌ ಬದಲಾವಣೆ

arrested

ED; ಅಕ್ರಮವಾಗಿ ಒಳನುಸುಳಿದ ಇಬ್ಬರು ಬಾಂಗ್ಲಾ ಪ್ರಜೆಗಳು ಸೇರಿ ಮೂವರ ಬಂಧನ

hk-patil

John Michael D’Cunh ಟೀಕೆ;ಜೋಶಿ ತತ್ ಕ್ಷಣ ರಾಜೀನಾಮೆ ನೀಡಲಿ: ಎಚ್.ಕೆ. ಪಾಟೀಲ್

4-udupi

Udupi: ನ. 14-20: ರಾಜ್ಯಮಟ್ಟದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ

Bhairathi Ranagal: ಭೈರತಿಗೆ ಸ್ಯಾಂಡಲ್‌ವುಡ್‌ ಆರತಿ

Bhairathi Ranagal: ಭೈರತಿಗೆ ಸ್ಯಾಂಡಲ್‌ವುಡ್‌ ಆರತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.