ದೇವರಾಜು ಅರಸು ರಾಜಕಾರಣದ ಮೇರು ಪರ್ವತ
Team Udayavani, Aug 21, 2019, 3:00 AM IST
ತಿ.ನರಸೀಪುರ: ರಾಜಕಾರಣದಲ್ಲಿ ಹೊಸದೊಂದು ಛಾಪು ಮೂಡಿಸಿ, ಕಲ್ಯಾಣ ಕಾರ್ಯಕ್ರಮಗಳ ಮೂಲಕ ಕರ್ನಾಟಕವನ್ನು ಮುನ್ನಲೆಗೆ ತಂದಂತಹ ದೇವರಾಜ ಅರಸು ದೇಶ ಕಂಡ ಧೀಮಂತ ರಾಜಕಾರಣಿ ಎಂದು ಶಾಸಕ ಎಂ.ಅಶ್ವಿನ್ ಕುಮಾರ್ ಬಣ್ಣಿಸಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಮ್ಮಿಕೊಂಡಿದ್ದ ದೇವರಾಜ ಅರಸು ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ವಿಧಾನಸಭೆಯ ಪ್ರತಿಯೊಂದು ಅಧಿವೇಶನದ ವಿಚಾರದಲ್ಲಿಯೂ ಪ್ರಸ್ತಾಪಗೊಳ್ಳುವ ಅರಸು ಅವರು ರಾಜಕಾರಣದಲ್ಲಿ ಹಾಸು ಹೊಕ್ಕಿದ್ದಾರೆ. ರಾಜಕಾರಣದ ಮೇರು ಪರ್ವತದಂತ್ತಿದ್ದ ಅರಸು ಆದರ್ಶ ಹಾಗೂ ಚಿಂತನೆಗಳು ಚಿರಕಾಲ ಮಾರ್ಗದರ್ಶನವಾಗಲಿವೆ ಎಂದು ಸ್ಮರಿಸಿದರು.
ನೆರವು ನೀಡಿ: ಭೀಕರ ಪ್ರವಾಹದಿಂದ ರಾಜ್ಯ ಸೇರಿದಂತೆ ತಾಲೂಕು ಕೂಡ ತುತ್ತಾಗಿದ್ದು, ಹೆಚ್ಚಿನ ಹಾನಿಯಾಗಿದೆ. ನೆರೆ ಸಂತ್ರಸ್ತರಿಗೆ ಧೈರ್ಯ ತುಂಬಲು ನಾವೆಲ್ಲರೂ ಕೈ ಜೋಡಿಸಬೇಕು. ತಾಲೂಕಿನಲ್ಲಿ ಕೆಲವು ಸರ್ಕಾರಿ ಕಾರ್ಯಕ್ರಮಗಳನ್ನು ಸರಳವಾಗಿ ಆಚರಣೆ ಮಾಡಲಾಗಿದೆ ಎಂದು ಶಾಸಕರು ತಿಳಿಸಿದರು.
ಭೂ ಒಡೆತನ: ಜಿಪಂ ಸದಸ್ಯ ಮಂಜುನಾಥನ್ ಮಾತನಾಡಿ, ರಾಜ್ಯದಲ್ಲಿ ದೇವರಾಜ ಅರಸು ಮಹತ್ವದ ಭೂ ಸುಧಾರಣೆ ಕಾಯ್ದೆಯನ್ನು ಜಾರಿಗೆ ತಂದಿದ್ದರಿಂದ ಭೂ ರಹಿತ ಸಮುದಾಯಗಳು ಭೂಮಿಯ ಮೇಲಿನ ಒಡೆತನ ಹೊಂದಿದರು. ಕ್ರಾಂತಿಕಾರಿ ಕಾಯ್ದೆಯನ್ನು ಜಾರಿಗೆ ತಂದು ಬಡವರು, ದಲಿತರು ಹಾಗೂ ಹಿಂದುಳಿದ ವರ್ಗಗಳ ಜನರ ಬದುಕಿನಲ್ಲಿ ಸುಧಾರಣೆ ತಂದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷ ಆರ್.ಚಲುವರಾಜು, ಕಸಾಪ ಅಧ್ಯಕ್ಷ ಎಂ.ರಾಜು, ತಾಪಂ ಸದಸ್ಯರಾದ ರಾಮಲಿಂಗಯ್ಯ, ಶಿವಮ್ಮ ಮಹದೇವ, ಎಂ.ಚಂದ್ರಶೇಖರ್, ರತ್ನರಾಜ್, ಕೆಬ್ಬೆ ರಂಗಸ್ವಾಮಿ, ಪುರಸಭೆ ಸದಸ್ಯ ಟಿ.ಎಂ.ನಂಜುಂಡಸ್ವಾಮಿ, ತಹಶೀಲ್ದಾರ್ ಪಿ.ಎನ್.ನಾಗಪ್ರಶಾಂತ್, ತಾಪಂ ಇಒ ಎಂ.ಜರಾಲ್ಡ್ ರಾಜೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸ್ವಾಮಿ, ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಪಿ.ಜಯಕುಮಾರ್, ಸಿಡಿಪಿಒ ಬಿ.ಎನ್.ಬಸವರಾಜು,
ಶಿರಸ್ತೇದಾರ್ ಪ್ರಭುರಾಜ್, ಉದ್ಯೋಗ ಖಾತರಿ ಸಹಾಯಕ ನಿರ್ದೇಶಕ ನಿಂಗಯ್ಯ, ಕೆಪಿಸಿಸಿ ಅಲ್ಪಸಂಖ್ಯಾತರ ಸಂಚಾಲಕ ಬಿ.ಮನ್ಸೂರ್ ಆಲಿ, ಕಸಾಪ ಮಾಜಿ ಅಧ್ಯಕ್ಷ ಕೆ.ಆರ್.ಷಣ್ಮುಖಸ್ವಾಮಿ, ನೌಕರರ ಸಂಘದ ಖಜಾಂಚಿ ವೆಂಕಟಶೆಟ್ಟಿ, ಮುಖಂಡರಾದ ಎಸ್.ಮಹದೇವಶೆಟ್ಟಿ, ಕರೋಹಟ್ಟಿ ಮಹದೇವಯ್ಯ, ತುಂಬಲ ಮಂಜುನಾಥ್, ಭೈರಾಪುರ ಮಹದೇವಮ್ಮ, ಜಯಲಕ್ಷ್ಮೀ, ಜವರಯ್ಯ, ಕಲಿಯೂರು ಸಿದ್ದರಾಜು, ಸಿ.ಪುಟ್ಟಮಲ್ಲಯ್ಯ, ಮಾವಿನಹಳ್ಳಿ ರಾಜೇಶ್, ಸ್ವಾಮಿ ಇತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.