MUDA CASE: 2 ಪುಟಗಳಲ್ಲಿ 41 ಪ್ರಶ್ನೆ ಮುಂದಿಟ್ಟ ಇ.ಡಿ.; ಅಯುಕ್ತರಿಗೆ ಪ್ರಶ್ನೆಗಳ ಸುರಿಮಳೆ

Team Udayavani, Oct 19, 2024, 12:47 AM IST

MUDA CASE: 2 ಪುಟಗಳಲ್ಲಿ 41 ಪ್ರಶ್ನೆ ಮುಂದಿಟ್ಟ ಇ.ಡಿ.; ಅಯುಕ್ತರಿಗೆ ಪ್ರಶ್ನೆಗಳ ಸುರಿಮಳೆ

ಮೈಸೂರು: ನಿವೇಶನ ಹಗರಣ ಕುರಿತಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಕಚೇರಿ ಮೇಲೆ ದಾಳಿ ಮಾಡಿರುವ ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು ಮುಡಾ ಅಯುಕ್ತ ರಘುನಂದನ್‌ ಅವರಿಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಇಡಿ ಅಧಿಕಾರಿಗಳು 2 ಪುಟಗಳಲ್ಲಿ 41 ಪ್ರಶ್ನೆಗಳನ್ನು ಆಯುಕ್ತರ ಮುಂದಿಟ್ಟು, ಉತ್ತರ ನೀಡುವಂತೆ ಕೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಬದಲಿ ನಿವೇಶನದ ಸುತ್ತಲೇ ಪ್ರಶ್ನೆಗಳು ಗಿರಕಿ ಹೊಡೆದಿದ್ದು, 2004ರಿಂದ 2023ರ ವರೆಗಿನ ಎಲ್ಲ ಮೂಲ ದಾಖಲೆಗಳನ್ನು ನೀಡುವಂತೆ ಕೇಳಲಾಗಿದೆ ಎನ್ನಲಾಗಿದೆ. ದೇವನೂರು ಬಡಾವಣೆ ರಚನೆಗಾಗಿ ಭೂಸ್ವಾದೀನ ಸಂಬಂಧ ಇಡಿ ಅಧಿಕಾರಿಗಳು ಮುಡಾ ಆಯುಕ್ತರಿಗೆ ಕೇಳಿರುವ ಪ್ರಶ್ನೆಗಳು ಇಂತಿವೆ.

– ದೇವನೂರು ಬಡಾವಣೆಯ ಭೂಸ್ವಾದೀನ ಕುರಿತು 18-09-1992ರಂದು ಹೊರಡಿಸಿದ ಸುತ್ತೋಲೆ ನೀಡಬೇಕು. ಭೂಸ್ವಾದೀನಕ್ಕೆ ಯಾವ ರೀತಿಯ ನಿಯಮ ಹಾಗೂ ನಿಬಂಧನೆ ಹೇರಲಾಗಿತ್ತು? 19 ಜನರಿಗೆ ಹಂಚಲಾಗಿರುವ ನಿವೇಶನದ ದಾಖಲೆ ಕೊಡಿ. ಬದಲಿ ನಿವೇಶನದ ಪರಿಹಾರದ ಮೊತ್ತ ಎಷ್ಟು ? ಡಿ ನೋಟಿಫಿಕೇಷನ್‌ ಕುರಿತ ಮೂಲ ದಾಖಲೆ ನೀಡಿ. ಡಿ ನೋಟಿಫಿಕೇಷನ್‌ ಮಾಡಲು ಕಾರಣ ಏನು ? ಅಂದಿನ ಸಭೆಯ ಮೂಲ ದಾಖಲೆ ನೀಡಿ.

-ಭೂಸ್ವಾದೀನ ಮಾಡಲು ಅನುಮತಿ ನೀಡಿದವರು ಯಾರು? ನೋಟಿಫಿಕೇಷನ್‌ ಆದ ಭೂಮಿ ಮಾರಾಟ ಮಾಡಲು ಹಾಗೂ ಪರಿಹಾರ ನೀಡಲು ಅವಕಾಶ ಇದೆಯಾ?ಭೂಸ್ವಾದೀನಕ್ಕೊಳಗಾದ ಸರ್ವೇ ನಂ. 462 ಮತ್ತು 464ರ ಸರ್ವೇ ಸ್ಕೆಚ್‌ ಕಾಪಿ ಕೊಡಿ. ನಿವೇಶನ ಪಡೆದ 19 ಜನರ ಹಣ ಪಡೆದುಕೊಳ್ಳಲಾಗಿದೆಯೇ? ಭೂಮಿ ಸಂಬಂಧ ಭೂಮಾಲಕ ದೇವರಾಜು ನೀಡಿದ ಪ್ರತಿಯನ್ನು ಯಾವ ರೀತಿ ಪಡೆದು ಕೊಳ್ಳಲಾಗಿದೆ? ಇತರ ಭೂಮಿಯ ಡಿ ನೋಟಿಫಿಕೇಷನ್‌ ದಾಖಲೆ ಕೊಡಿ. ಭೂಸ್ವಾದೀನ ಪ್ರಕ್ರಿಯೆ ಕುರಿತ ಸಂಪೂರ್ಣ ದಾಖಲೆ ನೀಡಿ.

-ಒತ್ತುವರಿಗೆ ಪರಿಹಾರವಾಗಿ ನೀಡಲಾಗಿರುವ ಬದಲಿ ನಿವೇಶನಗಳನ್ನು ಯಾವ ಮಾನದಂಡದ ಆಧಾರದ ಮೇಲೆ ನೀಡಿದ್ದೀರಿ ?ಒತ್ತುವರಿ ಮಾಡಿಕೊಂಡ ಭೂಮಿಗೆ ಬದಲಿ ನಿವೇಶನ ನೀಡಲು ಅರ್ಜಿ ಸ್ವೀಕರಿಸಲಾಗಿದೆಯೇ? ಯಾರ ಜಾಗ ಒತ್ತುವರಿ ಮಾಡಿಕೊಳ್ಳಲಾಗಿದೆ? ಜಂಟಿ ಸರ್ವೇ, ಸ್ಕೆಚ್‌ ಕಾಪಿ ಕೊಡಿ

– ಜಮೀನಿನ ಜಾಗದಲ್ಲಿ ಮೂಲಸೌಕರ್ಯ ಒದಗಿಸಲಾಗಿದೆಯೇ? ಬದಲಿ ನಿವೇಶನ ಹಂಚಿಕೆಯ ಬಳಿಕ ಪ್ರಸ್ತುತ ಆ ನಿವೇಶನದ ಪರಿಸ್ಥಿತಿ ಏನು? ಒತ್ತುವರಿ ಮಾಡಿಕೊಂಡ ಭೂಮಿಗೆ ಯಾವ ರೀತಿ ಪರಿಹಾರವನ್ನು ನಿಗದಿ ಮಾಡಲಾಯಿತು?

– 2017ರಂದು ನಡೆದ ಮುಡಾ ಸಭೆಯ ಸಂಪೂರ್ಣ ವಿವರ ಹಾಗೂ ನಿರ್ಣಯದ ಶಿಫಾರಸು ಪತ್ರ ನೀಡಿ. ಪಾರ್ವತಿ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ಭೂಮಿ ಹಾಗೂ ನಿವೇಶನಗಳ ಮೂಲ ದಾಖಲೆ ನೀಡಿ. ದಾಖಲೆಯೊಂದಕ್ಕೆ ವೈಟ್ನರ್‌ ಹಾಕಿರುವುದು ಯಾರು ? ಅದರ ಹಿಂದಿನ ಉದ್ದೇಶ ಏನು ? ವೈಟ್ನರ್‌ ಹಾಕಿರುವ ಜಾಗದಲ್ಲಿ ಇದ್ದ ಅಂಶ ಯಾವುದು ಎಂದು ಇಡಿ ಅಧಿಕಾರಿಗಳು ಮಾಹಿತಿ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಟಾಪ್ ನ್ಯೂಸ್

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

‌UP: ಫಸ್ಟ್‌ ನೈಟ್‌ ದಿನ ಬಿಯರ್‌, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!

‌UP: ಫಸ್ಟ್‌ ನೈಟ್‌ ದಿನ ಬಿಯರ್‌, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!

ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ

BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ

BGV-CM-SS

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

Ashok-Vijayendra

Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್‌ ಉತ್ಸವ’ ಮಾಡಲ್ಲ: ಬಿಜೆಪಿ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

9

Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ

8

Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

7(1

Udupi: ಉದ್ಘಾಟನೆ ಕಾಣದ ಸರಕಾರಿ ಕಟ್ಟಡಗಳು

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.