ಮುಡುಕುತೊರೆ ಮಲ್ಲಿಕಾರ್ಜುನಸ್ವಾಮಿ ಬ್ರಹ್ಮರಥೋತ್ಸವ ವೈಭವ
Team Udayavani, Feb 21, 2021, 1:52 PM IST
ತಿ.ನರಸೀಪುರ: ಹಳೇ ಮೈಸೂರು ಭಾಗದ ಪ್ರಸಿದ್ಧ ಪುಣ್ಯಕ್ಷೇತ್ರವಾದ ಮುಡುಕುತೊರೆಯಲ್ಲಿ ಭ್ರಮರಾಂಬ ಮಲ್ಲಿಕಾರ್ಜುನಸ್ವಾಮಿ ಬ್ರಹ್ಮರಥೋತ್ಸವ ಶನಿವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಪತ್ಯೇಕ ಮೂರು ರಥಗಳಲ್ಲಿ ಗಣೇಶ, ಸುಬ್ರಹ್ಮಣ್ಯ ಹಾಗೂ ಭ್ರಮರಾಂಬಿಕ ಸಮೇತ ಮಲ್ಲಿಕಾರ್ಜುನ ಸ್ವಾಮಿ ಉತ್ಸವ ಮೂರ್ತಿ ಗಳನ್ನು ಪ್ರತಿಷ್ಠಾಪಿಸಿ ಆಗಮಿಕ ಅರ್ಚಕರು ಪೂಜೆ ಕೈಂಕರ್ಯವನ್ನು ನಡೆಸಿದರು.
ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮೂರು ರಥಗಳನ್ನು ರಥದ ಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ರಥಕ್ಕೆ ಹಣ್ಣು-ಜವನವನ್ನು ಎಸೆದು ಧನ್ಯತಾಭಾವ ಮೆರೆದರು. ಹಳೇ ಮೈಸೂರು ಭಾಗದಲ್ಲಿ ಈ ಜಾತ್ರೆಯು ದನಗಳ ಜಾತ್ರೆ ಎಂದು ಪ್ರಸಿದ್ಧಿ ಪಡೆದಿದೆ. ಈ ಜಾತ್ರೆಗೆ ತನ್ನದೇ ಆದ ವೈಶಿಷ್ಟ್ಯ ಹೊಂದಿದ್ದು, ದೊಡ್ಡ ಜಾತ್ರೆ ಎಂದು ಕರೆಯಲಾಗುತ್ತದೆ.
ಮುಡುಕುತೊರೆ ಮಲ್ಲಿಕಾರ್ಜುನಸ್ವಾಮಿ ದೇವಾಲಯವು ತಲಕಾಡಿ ಪಂಚಲಿಂಗಗಳಲ್ಲಿ ಒಂದಾಗಿದ್ದು, ಮೈಸೂರು, ಮಂಡ್ಯ, ಹಾಸನ, ಬೆಂಗಳೂರು ಮತ್ತಿತರರ ಭಾಗಗಲ್ಲಿ ಲಕ್ಷಾಂತರ ಮಂದಿ ಈ ದೇವರಿಗೆ ನಡೆದುಕೊಳ್ಳುವರು. ಸುತ್ತಮುತ್ತಲಿನ ಹತ್ತು ಹಳ್ಳಿಗಳ ಜನರು ಸೇರಿ 17 ದಿನಗಳ ಕಾಲ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸುವರು. ಪ್ರತಿ ವರ್ಷ ಲಕ್ಷಾಂತರ ಭಕ್ತರು ಜಾತ್ರೆಗೆ ಆಗಮಿಸುತ್ತಿದ್ದರು. ಆದರೆ, ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಅಷ್ಟು ಪ್ರಮಾಣದಲ್ಲಿ ಭಕ್ತರು ಇರಲಿಲ್ಲ. ಜೊತೆಗೆ ರಥೋತ್ಸವದ ದಿನದಂದು ರಾಸುಗಳು ಇಲ್ಲದೆ ಇರುವುದು ಜಾತ್ರೆಯ ಅಂದವನ್ನು ಕಡಿಮೆಗೊಳಿಸಿದೆ.
ಹೀಗಾಗಿ ಮುಂದಿನ ವರ್ಷ ರಥೋತ್ಸವಕ್ಕೆಮೂರ್ನಾಲ್ಕು ದಿನಗಳ ಮುನ್ನ ರಾಸುಗಳನ್ನು ಜಾತ್ರೆಗೆ ಕರೆತರುವಂತೆ ಕ್ರಮಕೈಗೊಳ್ಳಬೇಕು
ಕಣ್ಮನ ಸೆಳೆದ ವಸ್ತು ಪ್ರದರ್ಶನಗಳು ;
ಜಾತ್ರೆಯಲ್ಲಿ ವಿವಿಧ ಇಲಾಖೆಗಳಿಂದ ಹಮ್ಮಿಕೊಂಡಿದ್ದ ವಸ್ತುಪ್ರದರ್ಶನಗಳು ಜನರ ಕಣ್ಮನ ಸೆಳೆದವು. ಕೃಷಿ ಇಲಾಖೆಯಿಂದ ಮಿಶ್ರ ಬೇಸಾಯ ಪದ್ಧತಿ, ಸಿರಿಧಾನ್ಯಗಳ ಪ್ರದರ್ಶನ ಮತ್ತು ಉಪಯೋಗ, ರೈತ ವಿಮಾ ಯೋಜನೆಗಳು, ಮಳೆ ಕೊಯ್ಲು, ಜಲಾನಯನ ಪ್ರದೇಶ ಮಣ್ಣು ಮತ್ತು ನೀರಿನ ಸಂರಕ್ಷಣೆ, ಆಧುನಿಕ ಬೇಸಾಯ ಪದ್ಧತಿಗಳ ಮಾಹಿತಿಗಳನ್ನು ಪ್ರದರ್ಶಕ್ಕೆ ಇಡಲಾಗಿತ್ತು. ರೇಷ್ಮೆ ಇಲಾಖೆಯಿಂದ ಹಿಪ್ಪುನೇರಳೆ ಬೇಸಾಯ ಪದ್ಧತಿಗಳು, ರೇಷ್ಮೆ ಹುಳುಗಳು, ಸಾಕಾಣಿಕೆ ಮತ್ತು ರೇಷ್ಮೆ ಕೃಷಿಗೆ ಸರ್ಕಾರದಿಂದ ಸಿಗಬಹುದಾದ ಸವಲತ್ತುಗಳ ಬಗ್ಗೆ ಮಾಹಿತಿ ನೀಡಲಾಗಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.