ಸಂಕ್ರಾಂತಿಯಿಂದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ
Team Udayavani, Jan 5, 2018, 12:10 PM IST
ಮೈಸೂರು: ಜನವರಿ 14ರಿಂದ ಆರಂಭವಾಗಲಿರುವ ಮೈಸೂರು ರಂಗಾಯಣದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ವಿವಿಧ ಭಾಷೆಗಳ 9 ನಾಟಕಗಳು ಹಾಗೂ ಕನ್ನಡದ 9 ನಾಟಕಗಳು ಮತ್ತು ಆರು ಏಕವ್ಯಕ್ತಿ ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದು ರಂಗಾಯಣ ನಿರ್ದೇಶಕಿ ಭಾಗೀರಥಿಬಾಯಿ ಕದಂ ತಿಳಿಸಿದರು.
ಗುರುವಾರ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಭಿತ್ತಿಚಿತ್ರ ಬಿಡುಗಡೆ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜತೆಗೆ ಜ.14ರಂದೇ ಆರಂಭವಾಗುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರತಿ ದಿನ ಮೂರು ಚಲನಚಿತ್ರಗಳಂತೆ ಜಗತ್ತಿನ ಬೇರೆ ಬೇರೆ ದೇಶ,
ಭಾಷೆಗಳ ಸಾಕ್ಷ್ಯಚಿತ್ರಗಳನ್ನು ಒಳಗೊಂಡಂತೆ ಸುಮಾರು 24 ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ನಾಟಕೋತ್ಸವದಲ್ಲಿ ನಾಟಕ ಪ್ರದರ್ಶನದ ಜತೆಗೆ ವಿಚಾರ ಸಂಕಿರಣ, ಜಾನಪದ ಕಲೆಗಳ ಪ್ರದರ್ಶನ, ಪುಸ್ತಕ ಮೇಳ, ಕರಕುಶಲ ಮೇಳ, ಚಲನಚಿತ್ರೋತ್ಸವ, ಬೀದಿ ನಾಟಕಗಳೂ ಇರಲಿವೆ.
ವಿಷಯ ಮಂಡನೆ: ಈ ವರ್ಷದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವನ್ನು ವಲಸೆ ಶೀರ್ಷಿಕೆಯಡಿ ಸಂಘಟಿಸುತ್ತಿರುವುದರಿಂದ ಜ.20 ಮತ್ತು 21ರಂದು ನಡೆಯಲಿರುವ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ವಿವಿಧ ಸಾಧಕರು, ವಿದ್ವತjನರು, ರಂಗತಜ್ಞರುಗಳು ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ.
ಎಂಟು ದಿನಗಳ ಈ ರಾಷ್ಟ್ರೀಯ ನಾಟಕೋತ್ಸವದಲ್ಲಿ 70 ಮಳಿಗೆಗಳನ್ನು ತೆರೆದು ಪುಸ್ತಕ ಪ್ರದರ್ಶನ ಮತ್ತು ಮಾರಾಟ, ಕರಕುಶಲ ಹಾಗೂ ಗುಡಿ ಕೈಗಾರಿಕೆಗಳ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಜತೆಗೆ ದೇಸಿಯ ಆಹಾರ ಮಳಿಗೆಗಳೂ ಇರಲಿವೆ ಎಂದರು.
ಜಿಲ್ಲಾ ಕಾಲೇಜು ತಂಡಗಳು ಭಾಗಿ: ಇದೇ ಮೊದಲ ಬಾರಿಗೆ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಯುವ ಸಮೂಹವನ್ನು ಆಕರ್ಷಿಸಲು ಜಿಲ್ಲೆಯ ಆಯ್ದ ಕಾಲೇಜುಗಳ ವಿದ್ಯಾರ್ಥಿಗಳ ತಂಡಗಳಿಗೆ ವಿವಿಧ ಜಾನಪದ ಕಲೆಗಳನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸಲಾಗಿದೆ.
ಕಾರ್ನಾಡ್‌ರಿಂದ ಚಾಲನೆ: ಜ.14ರಂದು 5.30ಕ್ಕೆ ಜಾnನಪೀಠ ಪ್ರಶಸ್ತಿ ಪುರಸ್ಕೃತ ನಾಟಕಕಾರ ಡಾ.ಗಿರೀಶ್ ಕಾರ್ನಾಡ್ ಅವರು ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಉಮಾಶ್ರೀ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ನಾಟಕೋತ್ಸವದ ಎಂಟು ದಿನಗಳ ಕಾಲ ಪ್ರತಿ ದಿನ ಭೂಮಿಗೀತ, ಕಿರು ರಂಗ ಮಂದಿರ ಮತ್ತು ಕಲಾಮಂದಿರಗಳಲ್ಲಿ ಪ್ರದರ್ಶನಗೊಳ್ಳುವ ನಾಟಕಗಳಿಗೆ ಹಾಗೂ ಜ.14ರಂದು ಭೂಮಿಗೀತದಲ್ಲಿ ನಡೆಯುವ ತೊಗಲು ಗೊಂಬೆಯಾಟವು ಒಳಗೊಂಡಂತೆ ವನರಂಗದಲ್ಲಿ ಜ.17 ಮತ್ತು 21ರಂದು
ಪ್ರದರ್ಶನಗೊಳ್ಳುವ ನಾಟಕಗಳಿಗೆ ಟಿಕೆಟ್‌ಗಳ ಮುಂಗಡ ಬುಕ್ಕಿಂಗ್ ಅನ್ನು ಆನ್‌ಲೈನ್ ಮತ್ತು ಕಚೇರಿಯಲ್ಲಿ ಪಡೆಯಬಹುದು. ಕಿಂದರಿಜೋಗಿ ವೇದಿಕೆ ಹಾಗೂ ವನರಂಗದ ಕಾರ್ಯಕ್ರಮಗಳಿಗೆ ಪ್ರವೇಶ ಉಚಿತವಿರುತ್ತದೆ. ಪ್ರತಿ ನಾಟಕಗಳಿಗೆ ಟಿಕೆಟ್ ದರ 50ರೂ. ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದರು.
ರಂಗಾಯಣದ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಚೆನ್ನಪ್ಪ, ಬಹುರೂಪಿ ನಾಟಕೋತ್ಸವದ ಸಂಚಾಲಕರಾದ ಮೈಮ್ ರಮೇಶ್, ಕೃಷ್ಣಪ್ರಸಾದ್ ಹಾಜರಿದ್ದರು.
ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವನ್ನು ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಕ್ಯಾಲೆಂಡರ್‌ನಲ್ಲಿ ಪರಿಗಣಿಸುವಂತೆ ಇಲಾಖೆಗೆ ಪತ್ರ ಬರೆಯಲಾಗುವುದು. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಾಟಕ, ಚಲನಚಿತ್ರಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳು ಹೆಚ್ಚಿದರೆ ಇಲ್ಲಿನ ಪ್ರವಾಸೋದ್ಯಮವು ಬೆಳೆಯುತ್ತದೆ.
-ರಂದೀಪ್ ಡಿ., ಜಿಲ್ಲಾಧಿಕಾರಿ
ಈ ವರ್ಷದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವನ್ನು ವಲಸೆ ಶೀರ್ಷಿಕೆಯಡಿ ಸಂಘಟಿಸಲಾಗುತ್ತಿದೆ. ಜಗತ್ತಿನಾದ್ಯಂತ ಮನುಷ್ಯರನ್ನು ಒಳಗೊಂಡಂತೆ ಜೀವರಾಶಿಯ ಸಹಜ ಜೀವನದ ನೆಲೆಗೆ ಬೇರೆ ಬೇರೆ ಆತಂಕಗಳು ಎದುರಾಗುತ್ತಿರುವ ಈ ಸಂದರ್ಭದಲ್ಲಿ ಅನೇಕ ಸಮುದಾಯಗಳು ತಮ್ಮ ಬದುಕಿನ ನೆಲೆ ಕಂಡುಕೊಳ್ಳಲು ಒಂದೆಡೆಯಿಂದ ಮತ್ತೂಂದೆಡೆಗೆ ವಲಸೆ ಹೋಗುವುದು ನಿರಂತರವಾಗಿ ನಡೆಯದೇ ಇರುವ ಈ ಸಂದರ್ಭದಲ್ಲಿ ಬಹುರೂಪಿಯಂತಹ ಉತ್ಸವವೊಂದು ಪ್ರಚಲಿತ ವಿಷಯಗಳಿಗೆ ಸಂವೇದಿಸುವ ಆಶಯದಿಂದ ಬಹುರೂಪಿಗೆ ವಲಸೆ ಶೀರ್ಷಿಕೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
-ಭಾಗೀರಥಿಬಾಯಿ ಕದಂ, ನಿರ್ದೇಶಕರು, ರಂಗಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ
MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?
Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Mysuru: ಜೆಡಿಎಸ್ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.